ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

H‌ari Paraak Column: ಹದ್ದಿನ ಕಣ್ಣು ನೋಡಬೇಕಾದ್ದು- ಜಟಾಯು ಫೈಟ್

ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದ, ಸಿನಿಮಾ ರಂಗದಲ್ಲಿ ಇನ್ನೂ ಲವಲವಿಕೆಯಿಂದಲೇ ಓಡಾಡಿ ಕೊಂಡಿದ್ದ ಶಿವರಾಂ, ಮನೆಯಲ್ಲಿ ದೇವರ ಪೂಜೆ ಮಾಡುವಾಗ ಜಾರಿ ಬಿದ್ದು, ತಲೆಗೆ ಏಟು ಬಿದ್ದು ಆಕಸ್ಮಿಕವಾಗಿ ನಿಧನರಾದ ಸುದ್ದಿ ಸಿನಿಪ್ರೇಮಿಗಳಲ್ಲಿ ಬೇಸರ ಮೂಡಿಸಿತ್ತು. ಶಿವರಾಂ ಜನಪ್ರಿಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪೋಷಕ ಪಾತ್ರಗಳ ಮಿಂಚಿದ್ದರಿಂದ ಅವರಿಗೆ ಸ್ಟಾರ್‌ಗಳಿಗೆ ಸಿಕ್ಕಷ್ಟು ಬೆಲೆ ಸಿಗಲಿಲ್ಲ ಅನ್ನೋದು ಸತ್ಯ. ಅದರ ಬಗ್ಗೆ ಅವರಿಗೆ ಅಸಮಾಧಾನ ಇತ್ತು ಅನ್ಸುತ್ತೆ.

ತುಂಟರಗಾಳಿ

ಸಿನಿಗನ್ನಡ

ಡಿಸೆಂಬರ್ ಬಂತು ಅಂದ್ರೆ ಕೆಲ ಪತ್ರಕರ್ತರಿಗೆ ನಟ ಶಿವರಾಂ ನೆನಪಾಗುತ್ತಾರೆ. ಕೆಲವರು ಅವರನ್ನ ಶರಪಂಜರ ಶಿವರಾಂ ಅಂತಾರೆ, ಕೆಲವರು ಶುಭಮಂಗಳ ಶಿವರಾಂ ಅಂತಾರೆ, ಇನ್ನು ಕೆಲವರು ನಾಗರಹಾವು ಶಿವರಾಂ ಅಂತಾರೆ. ನಾಗರಹಾವು ಚಿತ್ರದ ಶಿವರಾಂ ಅವರ ಮಾತಿನ ಶೈಲಿಯ ಹೇಳೋದಾದ್ರೆ, ಇದು ಹಿರಿಯ ನಟ ಶಿವರಾಂ ಅವರ ‘ಸ್ಪೆಷಾಲಿಟಿ’.

ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದ, ಸಿನಿಮಾ ರಂಗದಲ್ಲಿ ಇನ್ನೂ ಲವಲವಿಕೆಯಿಂದಲೇ ಓಡಾಡಿ ಕೊಂಡಿದ್ದ ಶಿವರಾಂ, ಮನೆಯಲ್ಲಿ ದೇವರ ಪೂಜೆ ಮಾಡುವಾಗ ಜಾರಿ ಬಿದ್ದು, ತಲೆಗೆ ಏಟು ಬಿದ್ದು ಆಕಸ್ಮಿಕವಾಗಿ ನಿಧನರಾದ ಸುದ್ದಿ ಸಿನಿಪ್ರೇಮಿಗಳಲ್ಲಿ ಬೇಸರ ಮೂಡಿಸಿತ್ತು. ಶಿವರಾಂ ಜನಪ್ರಿಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪೋಷಕ ಪಾತ್ರಗಳ ಮಿಂಚಿದ್ದರಿಂದ ಅವರಿಗೆ ಸ್ಟಾರ್‌ಗಳಿಗೆ ಸಿಕ್ಕಷ್ಟು ಬೆಲೆ ಸಿಗಲಿಲ್ಲ ಅನ್ನೋದು ಸತ್ಯ. ಅದರ ಬಗ್ಗೆ ಅವರಿಗೆ ಅಸಮಾಧಾನ ಇತ್ತು ಅನ್ಸುತ್ತೆ.

ಅದಕ್ಕೇ ಡಿಸೆಂಬರ್ ಬಂತು ಅಂದ್ರೆ ಜನವರಿ 28ಕ್ಕೆ ಇರುವ ಅವರ ಹುಟ್ಟುಹಬ್ಬವನ್ನು ಆತ್ಮೀಯ ಪತ್ರಕರ್ತರಿಗೆ ಜ್ಞಾಪಿಸಿ, ದಯವಿಟ್ಟು ನಿಮ್ಮ ಪತ್ರಿಕೆಯ ಜನ್ಮದಿನ ಕಾಲಂನಲ್ಲಿ ಹಾಕಿ ಅಂತ ಕೇಳುತ್ತಿದ್ದರು. ಸ್ಟಾರುಗಳ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಧೂಂಧಾಂ ಅಂತ ಆಚರಿಸಿದರೆ, ಇಂತಹ ಪೋಷಕ ನಟರಿಗೆ ಎಷ್ಟೇ ಜನ ಅಭಿಮಾನಿಗಳಿದ್ದರೂ ಅವರ ಹುಟ್ಟುಹಬ್ಬ ಯಾವಾಗ ಅನ್ನೋದೇ ಬಹುತೇಕರಿಗೆ ಗೊತ್ತಿರೊಲ್ಲ.

ಆದರೆ, ತುಂಬು ಜೀವನ ನಡೆಸಿ, ಅತ್ಯುತ್ತಮ ಕಲಾವಿದ ಎಂದು ಸಾಕಷ್ಟು ಬಾರಿ ನಿರೂಪಿಸಿರುವ ಎಲ್ಲರ ಪ್ರೀತಿಯ ಶಿವರಾಮಣ್ಣ ತಮ್ಮ ಹುಟ್ಟುಹಬ್ಬ ಹತ್ತಿರ ಇರೋ ಸಮಯದ ತೀರಿಕೊಂಡಿದ್ದರು. ಈಗ ಪ್ರತಿ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಜನ್ಮದಿನ ಕಾಲಂನಲ್ಲಿ ನನ್ನ ಫೋಟೋ ಹಾಕಿ ಅಂತ ಕೇಳೋಕೆ ಅವರಿಲ್ಲ. ಆದರೆ ಅವರು ಈಗೆಲ್ಲ ಜನ್ಮದಿನ ಕಾಲಂ ಅಷ್ಟೇ ಅಲ್ಲ, ಪುಣ್ಯ ತಿಥಿ ಕಾಲಂನಲ್ಲೂ ಕಾಣಿಸುತ್ತಾರೆ ಅನ್ನೋದು ಬೇಸರದ ಸಂಗತಿ.

ಇದನ್ನೂ ಓದಿ: H‌ari Paraak Column: ಆಡಿಸಿ ನೋಡು ಬೀಳಿಸಿ ನೋಡು ಉರುಈ ಹೋಗದು- ಸಿರಾಜ್

ಲೂಸ್‌ ಟಾಕ್-ಸಿನಿ ಪ್ರೇಕ್ಷಕ

ಏನ್ ಏನ್ ಸಾರ್, ರಾಮಾಯಣ ನೋಡಿದ್ರಾ, ಹೆಂಗಿದೆ?

- ಅಯ್ಯೋ, ಮ್ಯಾಟ್ನಿ ಎಲ್ಲಾ ರಾಮಾಯಣ ನೋಡಿ, ಫಸ್ಟ್ ಶೋನಲ್ಲಿ ಏನಾದ್ರೂ ಚೇಂಜಸ್ ಇತ್ತಾ ಅಂತ ಕೇಳಿದ ಹಂಗಾಯ್ತು?

ಅದ್ಸರಿ, ಆದ್ರೂ ಗ್ರಾಫಿಕ್ಸ್ ರಾಮಾಯಣ ಹೆಂಗಿತ್ತು?

- ಅಯ್ಯೋ, ಅದು ರಾಮಾಯಣ ಅರಿ ಬರೀ ರಾವಣಾಯಣ. ಇನ್ನೂ ರಾಮ ರಾವಣ ಮೀಟೇ ಆಗಿಲ್ಲ.

ಯಾಕ್ರೀ ಎಲ್ಲರೂ ಅಷ್ಟು ಖುಷಿಯಾಗಿ ನೋಡ್ತಿದ್ದಾರೆ,. ನೀವ್ಯಾಕೆ ನೀರಸವಾಗಿ ಮಾತಾಡ್ತಾ ಇದ್ದೀರಾ?

- ಮತ್ತೇನ್ರಿ, ಅದೇ ಹಳೇ ಕಥೆ ಒಂದ್ ಹೊಸ ಟ್ವಿಸ್ಟೂ ಇಲ್ಲ.

ರೀ ಸ್ವಾಮಿ, ರಾಮಾಯಣ ಕಥೇಲಿ ನಿಮಗೆ ಹೊಸ ಟ್ವಿಸ್ಟ್ ಬೇಕಿತ್ತಾ. ಕಮರ್ಷಿಯಲ್ ಸಿನಿಮಾಗಳನ್ನ ನೋಡಿ ಹಾಳಾಗಿ ಹೋಗಿದ್ದೀರಾ ನೀವು.

- ಮತ್ತೆ, ರಾಮನ ಎಂಟ್ರಿ ಸೀನಲ್ಲೂ ಅಬ್ಬರ ಇಲ್ಲ, ಇಂಟರ್ವಲ್ ಬ್ಯಾಂಗ್ ಇಲ್ಲ, ಅದ್ದೂರಿ ಕ್ಲೈಮ್ಯಾಕ್ಸ್ ಇಲ್ಲ. ಏನ್ ಸಿನಿಮಾನೋ ಏನೋ...

ಹೋಗ್ಲಿ, ಜಟಾಯು ಫೈಟ್ ಹೇಗಿತ್ತು?

- ಹದ್ದಿನ ಕಣ್ಣಿಟ್ಟು ನೋಡಿದೆ. ಇಷ್ಟ ಆಯ್ತು.

(ಕಾಲ್ಪನಿಕ ಸಂದರ್ಶನ)

Shivram ok

ನೆಟ್‌ ಪಿಕ್ಸ್

ಖೇಮು ಹೆಂಡತಿಗೆ ಗಿಳಿ ತಗೋಬೇಕು ಅಂತ ಆಸೆ ಆಯ್ತು. ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೇಳಿದಾಗ ಅವರೂ ಕೂಡ ಹೌದು ಅಮ್ಮ ಗಿಳಿ ತರೋಣ ಆದ್ರೆ ಅಪ್ಪಂಗೆ ಹೇಳೋದ್ ಬೇಡ, ಸರ್ಪ್ರೈಸ್ ಕೊಡೋಣ ಅಂತ ಡಿಸೈಡ್ ಮಾಡಿದ್ರು. ಕೊನೆಗೆ, ಮಾಮೂಲಿ ಗಿಳಿ ಬೇಡ, ಮಾತಾಡೋ ಗಿಳಿ ತಗೊಂಡ್ ಬರೋದು ಅಂತಾಯ್ತು. ಸರಿ, ಮಕ್ಕಳಿಬ್ಬರು ಕಾಲೇಜಿಗೆ ಹೋದಾಗ, ಗಿಳಿ ತರೋಕೆ ಅಂತ ಖೇಮು ಹೆಂಡತಿ ಹೋದ್ಳು. ಅಲ್ಲಿ ಗಿಳಿಗಳ ಅಂಗಡಿಯಲ್ಲಿ ಹತ್ತಾರು ಗಿಳಿಗಳನ್ನ ಪಂಜರದಲ್ಲಿ ಹಾಕಿ ಇಟ್ಟಿದ್ರು. ಖೇಮುಶ್ರೀ ಎಲ್ಲಾ ಗಿಳಿಗಳನ್ನೂ ನೋಡಿದಳು. ಕೆಲವು ಮಾತಾಡೋ ಗಿಳಿಗಳು ಸರಿಯಾಗಿ ಮಾತಾಡ್ತಾನೇ ಇರಲಿಲ್ಲ. ಖೇಮುಶ್ರೀಗೆ ಯಾಕೋ ಆ ಗಿಳಿಗಳು ಮಾತಾಡೋ ಶೈಲಿ ಇಷ್ಟ ಆಗಲಿಲ್ಲ. ಅಂಗಡಿ ಓನರ್‌ನ ಕರೆದು ಇಷ್ಟೇನಾ ಇರೋದು ಅಂತ ಕೇಳಿದ್ಳು. ಅದಕ್ಕೆ ಆತ ಹೌದು ಮೇಡಂ ಅಂದ. ಅಲ್ಲಿ ಮೂಲೆಯಲ್ಲಿ ಒಂದು ಗಿಳಿಯನ್ನು ಒಂಟಿಯಾಗಿ ನೇತು ಹಾಕಲಾಗಿತ್ತು. ಅದರ ಬಗ್ಗೆ ಕೇಳಿದಾಗ ಅಂಗಡಿ ಓನರ್, ಬೇಡ ಮೇಡಂ, ಅದು ಮೊದಲು ವೇಶ್ಯಾವಾಟಿಕೆಯಲ್ಲಿದ್ದ ಗಿಳಿ, ಅಲ್ಲಿ ಹೋಗಿ ಬರೋರನ್ನ ನೋಡಿ ಪೋಲಿ ಮಾತಾಡೋದ್ ಕಲಿತಿದೆ. ನಿಮಗೆ ಸರಿ ಹೋಗಲ್ಲ ಅಂದ. ಆದರೂ ಖೇಮುಶ್ರೀ ಅದರ ಹತ್ರ ಹೋಗಿ, ಹಾಯ್ ಅಂದ್ಳು. ಆ ಗಿಳಿ, ಹಾಯ್, ವಾಟ್ ಎ ಫಿಗರ್, ವಯಸ್ಸಾದ್ರೂ ಬಾಡಿ ಶೇಪ್ ಚೆನ್ನಾಗಿ ಮೈನ್ಟೇನ್ ಮಾಡಿದ್ದೀಯ ಅಂತು. ಖೇಮುಶ್ರೀಗೆ ಒಂಥರಾ ಖುಷಿ ಆಯ್ತು. ಸರಿ ನಂಗೆ ಇದೇ ಇರ್ಲಿ ಇದಕ್ಕೆ ನಾನು ಒಳ್ಳೆ ಮಾತು ಕಲಿಸ್ತೀನಿ ಅಂತ ಅದನ್ನೇ ಕೊಂಡುಕೊಂಡಳು. ಮನೆಗೆ ತಗೊಂಡು ಹೋದಳು. ಕಾಲೇಜಿಗೆ ಹೋಗಿದ್ದ ಇಬ್ಬರೂ ಹೆಣ್ಣಮಕ್ಕಳು ಮನೆಗೆ ಬಂದರು. ಖೇಮುಶ್ರೀ ಅವರಿಗೆ ಗಿಳಿ ತೋರಿಸಿದಳು. ಅವರನ್ನು ನೋಡಿದ ಗಿಳಿ, ಓ ಇನ್ನೂ ಎರಡ್ ಫಿಗರ್ ಸಾಕ್ಕೊಂಡಿದ್ದೀಯ ಅಂತು. ಮಕ್ಕಳಿಗೆ ಇರುಸು ಮುರುಸಾದ್ರೂ ಹೋಗ್ಲಿ ಬಿಡು, ಸರಿ ಹೋಗುತ್ತೆ ಅಂತ ಸುಮ್ಮನಾದ್ರು. ಸಂಜೆ ಖೇಮು ಮನೆಗೆ ಬಂದ. ಗಂಡನಿಗೆ ಸರ್ಪ್ರೈಸ್ ಅಂತ ಗಿಳಿ ತೋರಿಸಿದ್ರು ಖೇಮುಶ್ರೀ ಮತ್ತು ಮಕ್ಕಳು. ಖೇಮುವನ್ನು ನೋಡಿದ ಗಿಳಿ ಅಂತು ಅರೇ, ಮಿಸ್ಟರ್ ಖೇಮು ನೀವೇನಿಲ್ಲಿ?

ಲೈನ್‌ ಮ್ಯಾನ್

ಇಬ್ಬರು ಸಮಾನ ದುಃಖಿಗಳು ಅನುಭವಿಸೋ ನೋವು ‌

- ಜಾಯಿಂಟ್ ಪೈನ್

ಗ್ಯಾಸ್ ಪ್ರಾಬ್ಲಂ

ಸೋಮು- ‘ಎಲ್‌ಪಿಜಿ ರೇಟ್ ಜಾಸ್ತಿ ಆಗಿದೆಯಂತೆ’

ಖೇಮು- ‘ಹೋಗ್ಲಿ, ಬಿಡೋ.. ಅದು ಹುಡುಗೀರ್ ಪ್ರಾಬ್ಲಮ. ನಾವ್ಯಾಕ್ ತಲೆ ಕೆಡಿಸ್ಕೊಬೇಕು?’

ಸೋಮು- ‘ಲೋ, ಗ್ಯಾಸ್ ರೇಟ್ ಬರೀ ಹುಡುಗೀರ್ ಪ್ರಾಬ್ಲಮ್ ಹೆಂಗೋ ಆಗುತ್ತೆ?’

ಖೇಮು- ‘ಓಹ್, ಗ್ಯಾಸ್ ರೇಟಾ? ನಾನೆಲ್ಲೋ Ladies PG ಬಗ್ಗೆ ಹೇಳ್ತಿದೀಯಾ ಅಂದ್ಕೊಂಡೆ’

ಮೊಟ್ಟೆ ಮಾತು

ಸ್ಕೂಲಲ್ಲಿ ಮಕ್ಕಳಿಗೆ ಕೊಡೋ ಆಹಾರದಲ್ಲಿ ಮೊಟ್ಟೆ ಇರಬಾರದು ಅನ್ನೋದು

- ‘ಎಗ್ಗಿಲ್ಲದ’ ಮಾತು.

ಮೊಟ್ಟೆ ನಮ್ಮ ಸಂಸ್ಕೃತಿ ಹಾಳು ಮಾಡುತ್ತೆ ಅನ್ನೋ ಮೂಢನಂಬಿಕೆ

- ‘ಅಂಡ’ ಶ್ರದ್ಧೆ

ಮಕ್ಕಳಿಗೆ ಮೊಟ್ಟೆ ಕೊಡಬಾರದು ಅನ್ನೋದು ಅವರ ಸಣ್ಣ ಬುದ್ಧಿಗೆ

- ‘ಎಗ್’ಸಾಂಪಲ್

ಕುಡುಕರ ಕಷ್ಟ

- ಕುಡಿದು ಸ್ವಲ್ಪ ಜಾಸ್ತಿ ಮಾತಾಡಿದ್ರೆ,

ಫುಲ್ ಟೈಟ್ ಆಗಿ ಸಿಕ್ಕಾಪಟ್ಟೆ ಮಾತಾಡ್ತಿದ್ದಾನೆ ಅಂತಾರೆ. ಹಂಗಂತ, ಇವ್ರ್ ಸಾವಾಸನೇ ಬೇಡ ಅಂತ ಸುಮ್ನೆ ಸೈಲೆಂಟ್ ಆಗಿ ಕೂತ್ಕೊಂಡ್ರೆ, ಅಣ್ಣ ಫುಲ್ ಚಿತ್ತಾಗವ್ನೆ, ಮಾತೇ ಬರ್ತಿಲ್ಲ ಅಂತಾರೆ. ಅವ್ನು - ಮಗಾ, ಅವ್ಳು ನನ್ ಪ್ರಪೋಸಲ್ ರಿಜೆಕ್ಟ್ ಮಾಡಿಬಿಟ್ಲು. ಹೇಗಾದ್ರೂ ಹೆಲ್ಪ್ ಮಾಡೋ ಇವ್ನು - ಸಾರಿ, ನಿಮ್ಮಿಬ್ಬರ ‘ಇಂಟರ್ನಲ್ ಅ-ರ್ಸ್’ನಲ್ಲಿ ನಾನು ತಲೆ ಹಾಕಲ್ಲ. ಕಾಂಟ್ರವರ್ಸಿ ಆಗ್ಬಿಡುತ್ತೆ.

‘ಒಳ್ಳೆ’ ’ಟೀ’ ಮಾಡೋನು ನಮ್ಮ ದೇಶದ ’ಆಸ್ತಿ’.

- Proper-tea

‘ಲಿವಿಂಗ್ ಟುಗೆದರ್ ’ನಲ್ಲಿರೋ ಸ್ನೇಹಿತರನ್ನು ನೋಡಿ ನಾನೂ ಮದ್ವೆ ಆಗಲ್ಲ ಅಂತ ಡಿಸೈಡ್ ಮಾಡೋದು

- ಸಹ‘ವಾಸ’ ದೋಷ

ಕಟಿಂಗ್ ಶಾಪ್‌ನಲ್ಲಿ ನೆಲದ ಮೇಲೆ ಬಿದ್ದ ಕತ್ತರಿಸಿದ ಕೂದಲ ರಾಶಿ

- ಕೂದಲ ಸಂಗಮ

ಹರಿ ಪರಾಕ್‌

View all posts by this author