ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಯಾರು ಈ ಸದಾನಂದನ್‌ ಮಾಸ್ಟರ್‌ ?

‘ದೇಶೀಯ ಅಧ್ಯಾಪಕ ವಾರ್ತಾ’ ಪತ್ರಿಕೆಯ ಸಂಪಾದಕರೂ ಅವರೇ. ಸದಾನಂದನ್ ಮಾಸ್ಟರ್ ಹೆಸರನ್ನು ಕೇಳಿದಾಗ ಕೇರಳದ ಜನರಿಗೆ ಮೊದಲು ನೆನಪಾಗುವುದು 32 ವರ್ಷಗಳ ಹಿಂದೆ (1994ರ ಜನವರಿ 25) ನಡೆದ ಆ ಅಮಾನುಷ ಘಟನೆ. ಅಂದು ಸಂಜೆ ಅವರು ಕೆಲಸ ಮುಗಿಸಿ ಮನೆಗೆ ಹಿಂದಿ ರುಗುತ್ತಿದ್ದಾಗ, ಕಮ್ಯುನಿಸ್ಟ್ ಪಕ್ಷದ (ಸಿಪಿಎಂ) ಕಾರ್ಯಕರ್ತರೆನ್ನಲಾದ ಗುಂಪೊಂದು ಅವರ ಮೇಲೆ ಭೀಕರ ದಾಳಿ ನಡೆಸಿತು. ‌

ಸಂಪಾದಕರ ಸದ್ಯಶೋಧನೆ

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುತ್ತಾ ಮಾತಾಡುವಾಗ, ಸದನದಲ್ಲಿದ್ದ ಸಿ.ಸದಾನಂದನ್ ಮಾಸ್ಟರ್ ಬಗ್ಗೆ ಪ್ರಸ್ತಾಪಿಸಿದಾಗ, ಇಡೀ ಸದನ ಅವರೆಡೆಗೆ ಕುತೂಹಲದಿಂದ ನೋಡಿತು. ಸದಸ್ಯರೊಬ್ಬರ ಬಗ್ಗೆ ಪ್ರಧಾನಿಯವರು ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.

ಹಾಗಾದರೆ, ಸಿ.ಸದಾನಂದನ್ ಮಾಸ್ಟರ್ ಯಾರು? ಅವರು ಕೇರಳದ ಕಣ್ಣೂರು ಜಿಲ್ಲೆಯ ಮಟ್ಟ ನ್ನೂರು ಮೂಲದವರು. ವೃತ್ತಿಯಲ್ಲಿ ಅವರು ಒಬ್ಬ ಶಾಲಾ ಶಿಕ್ಷಕರು. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಚಿಕ್ಕಂದಿನಿಂದಲೇ ರಾಷ್ಟ್ರೀಯ ವಿಚಾರಧಾರೆ ಗಳಿಂದ ಪ್ರೇರಿತರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ (RSS) ಗುರುತಿಸಿಕೊಂಡವರು.

ಕಣ್ಣೂರಿನಂಥ ಕಮ್ಯುನಿ ಪ್ರಾಬಲ್ಯವಿರುವ ಮತ್ತು ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಆರೆಸ್ಸೆಸ್ ಸಂಘಟನೆಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಕೇರಳದ ರಾಷ್ಟ್ರೀಯ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿರುವ ಸದಾನಂದನ್ ಮಾಸ್ಟರ್, ಶಿಕ್ಷಕರ ಅಭ್ಯುದಯ ಕ್ಕಾಗಿ ಅಹರ್ನಿಶಿ ದುಡಿದವರು.

ಇದನ್ನೂ ಓದಿ: Vishweshwar Bhat Column: ಬುಲೆಟ್‌ ಅನ್ನು ಕಚ್ಚಬಹುದಾ ?

‘ದೇಶೀಯ ಅಧ್ಯಾಪಕ ವಾರ್ತಾ’ ಪತ್ರಿಕೆಯ ಸಂಪಾದಕರೂ ಅವರೇ. ಸದಾನಂದನ್ ಮಾಸ್ಟರ್ ಹೆಸರನ್ನು ಕೇಳಿದಾಗ ಕೇರಳದ ಜನರಿಗೆ ಮೊದಲು ನೆನಪಾಗುವುದು 32 ವರ್ಷಗಳ ಹಿಂದೆ (1994ರ ಜನವರಿ 25) ನಡೆದ ಆ ಅಮಾನುಷ ಘಟನೆ. ಅಂದು ಸಂಜೆ ಅವರು ಕೆಲಸ ಮುಗಿಸಿ ಮನೆಗೆ ಹಿಂದಿ ರುಗುತ್ತಿದ್ದಾಗ, ಕಮ್ಯುನಿಸ್ಟ್ ಪಕ್ಷದ (ಸಿಪಿಎಂ) ಕಾರ್ಯಕರ್ತರೆನ್ನಲಾದ ಗುಂಪೊಂದು ಅವರ ಮೇಲೆ ಭೀಕರ ದಾಳಿ ನಡೆಸಿತು. ‌

ಆ ದಾಳಿ ಕೇವಲ ಕೊಲ್ಲುವ ಉದ್ದೇಶವನ್ನಷ್ಟೇ ಹೊಂದಿರಲಿಲ್ಲ, ಬದಲಿಗೆ ಅವರನ್ನು ಜೀವಚ್ಛವ ವನ್ನಾಗಿ ಮಾಡುವ ಕ್ರೂರ ಉದ್ದೇಶವನ್ನು ಹೊಂದಿತ್ತು. ದುಷ್ಕರ್ಮಿಗಳು ಸದಾನಂದನ್ ಮಾಸ್ಟರ್ ಅವರ ಎರಡೂ ಕಾಲುಗಳನ್ನು ಮೊಣಕಾಲಿಗಿಂತ ಕೆಳಗೆ ಜಜ್ಜಿ ಹಾಕಿದ್ದರು. ಇಡೀ ಕೇರಳ ರಾಜ್ಯ ವನ್ನು ಬೆಚ್ಚಿಬೀಳಿಸಿದ ಈ ಘಟನೆಯು ಕಣ್ಣೂರಿನ ರಾಜಕೀಯ ಹಿಂಸಾಚಾರದ ಅತಿ ಕ್ರೂರ ಮುಖ ಗಳಲ್ಲಿ ಒಂದಾಗಿ ಇಂದಿಗೂ ಇತಿಹಾಸದಲ್ಲಿ ಉಳಿದಿದೆ.

ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೂ, ಸಾವಿನ ಅಂಚಿನಿಂದ ಮರಳಿದ ಸದಾನಂದನ್ ಅವರು ಎಂದೂ ಧೃತಿಗೆಡಲಿಲ್ಲ. ಹಾಗೆ ತಮ್ಮ ಸಿದ್ಧಾಂತದ ಮೇಲಿನ ನಂಬಿಕೆಯನ್ನು ಅವರು ಕೈಬಿಡಲಿಲ್ಲ. ಕಾಲುಗಳನ್ನು ಕಳೆದುಕೊಂಡ ನಂತರದ ಜೀವನ ಯಾರಿಗಾದರೂ ನರಕಸದೃಶ ವಾಗುವುದು ಸಹಜ.

ಆದರೆ ಸದಾನಂದನ್ ಮಾಸ್ಟರ್ ಕೃತಕ ಕಾಲುಗಳನ್ನು ಅಳವಡಿಸಿಕೊಂಡರು. ಏಳುತ್ತಾ, ಬೀಳುತ್ತಾ ನಡೆಯುವ ಪುಟ್ಟ ಮಗುವಿನಂತೆ ನಡೆಯುವುದನ್ನು ಅಭ್ಯಾಸ ಮಾಡಲಾರಂಭಿಸಿದರು. ಅವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ, ಭರವಸೆ ಕಳೆದುಕೊಂಡು, ಮನೆಯಲ್ಲಿ ಅಸಹಾಯಕರಾಗಿ ಬಿದ್ದಿರುತ್ತಿದ್ದರು. ಆದರೆ ಅವರು ಯಾರ ಸಹಾಯವಿಲ್ಲದೇ ನಡೆಯುವುದನ್ನು ಕಲಿತರು.

ವೀಲ್ ಚೇರ್ ಅಥವಾ ಇತರರ ಸಹಾಯಕ್ಕೆ ಕಾಯದೇ ಮತ್ತೆ ಸಕ್ರಿಯರಾದರು. ಅಷ್ಟೇ ಅಲ್ಲ, ದಾಳಿಯ ನಂತರ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದರು. ತಮ್ಮ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಧೈರ್ಯದ ಪಾಠವನ್ನೂ ಕಲಿಸಿದರು. ಅವರ ಮೇಲೆ ನಡೆದ ಹ ಅವರನ್ನು ದುರ್ಬಲ ಗೊಳಿಸುವ ಬದಲು ಇನ್ನಷ್ಟು ಗಟ್ಟಿಯಾಗಿಸಿತು. ಅವರು ಸಂಘ ಪರಿವಾರದ ವಿವಿಧ ಜವಾಬ್ದಾರಿ ಗಳನ್ನು ನಿರ್ವಹಿಸಲಾರಂಭಿಸಿದರು.

ಸದಾನಂದನ್ ಮಾಸ್ಟರ್ ಅವರು ಸಂಘಟನೆಯಲ್ಲಿ ಮಾತ್ರವಲ್ಲದೇ, ಚುನಾವಣಾ ರಾಜಕೀಯ ದಲ್ಲೂ ಸಕ್ರಿಯರಾದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಅವರು ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು, ಏಕೆಂದರೆ ಅವರ ಎದುರಾಳಿಗಳು ದಾಳಿ ಮಾಡಿದವರೇ ಆಗಿದ್ದರು. ಅವರ ಚುನಾವಣಾ ಪ್ರಚಾರವು ಯಾವುದೇ ಸೇಡಿನ ಅಥವಾ ದ್ವೇಷದ ಭಾಷಣಗಳಿಂದ ಕೂಡಿರಲಿಲ್ಲ.

ಬದಲಿಗೆ, ‘ಕಣ್ಣೂರಿನಲ್ಲಿ ರಾಜಕೀಯ ಹಿಂಸಾಚಾರ ಕೊನೆಯಾಗಬೇಕು’ ಎಂಬ ಶಾಂತಿ ಮಂತ್ರವನ್ನೇ ಅವರು ಜಪಿಸಿದರು. ಆದರೆ ಚುನಾವಣಾ ರಾಜಕಾರಣದಲ್ಲಿ ಅವರು ಸೋತು ಹೋದರು. ಹಾಗೆ 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅವರು ಪರಾಭವ ಹೊಂದಿದರು.

ನಂತರ 2025ರಲ್ಲಿ ಅವರನ್ನು ರಾಷ್ಟ್ರಪತಿಯವರು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿದರು. ಸದಾನಂದನ್ ಕಾಲೇಜು ದಿನಗಳಲ್ಲಿ ಸಿಪಿಎಂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರ ಮನೆಯಲ್ಲಿ ಎಲ್ಲರೂ ಕಮ್ಯುನಿಸ್ಟ್ ವಿಚಾರಧಾರೆಗಳಿಂದ ಪ್ರಭಾವಿತರಾದವರೇ. ನಂತರ ವೈಚಾರಿಕ ಭಿನ್ನಾಭಿಪ್ರಾಯದಿಂದ ಕಮ್ಯುನಿಸ್ಟ್ ಕ್ಯಾಂಪ್ ತೊರೆದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ಸೇರಿದರು.

ಕಣ್ಣೂರಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದಲೇ ಜನಪ್ರಿಯರಾದರು. ತಮ್ಮ ಕಾಲುಗಳನ್ನು ಕತ್ತರಿಸಿದವರ ಮೇಲೆ ದ್ವೇಷ ಸಾಧಿಸುವ ಬದಲು, ಪ್ರಜಾಪ್ರಭುತ್ವದ ಹಾದಿಯಲ್ಲಿ ಬದಲಾವಣೆ ತರಲು ಅವರು ಶ್ರಮಿಸಿ ದರು.

ಸದಾನಂದನ್ ಮಾಸ್ಟರ್ ಅವರು ಇಂದಿಗೂ ಕೇರಳದ ರಾಜಕೀಯ ವಲಯದಲ್ಲಿ ದೈತ್ಯಶಕ್ತಿಯಾಗಿ ಉಳಿದಿದ್ದಾರೆ. ಅವರು ಕೇವಲ ಒಂದು ಪಕ್ಷದ ನಾಯಕರಲ್ಲ, ಬದಲಿಗೆ ಹಿಂಸೆಯ ವಿರುದ್ಧದ ಅಹಿಂಸಾತ್ಮಕ ಪ್ರತಿರೋಧದ ಸಂಕೇತ.

ವಿಶ್ವೇಶ್ವರ ಭಟ್‌

View all posts by this author