ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

ಕಾರ್ಪೊರೇಟ್ ವೃತ್ತಿಯಲ್ಲಿ ಮ್ಯಾನೇಜರ್ ತನ್ನ ಕೆಳಗಿನವರಿಗೆ, ಕೆಳಗಿನವರು ಮ್ಯಾನೇಜರ್‌ಗೆ ಫೀಡ್‌ ಬ್ಯಾಕ್ ಕೇಳುವುದು-ಕೊಡುವುದು ವಾರ್ಷಿಕ ಪರಿಪಾಠ. ಈ ‘ಅಭಿಪ್ರಾಯ’ದ್ದೊಂದು ಪೀಕಲಾಟವಿದೆ. ಅಭಿಪ್ರಾಯವನ್ನು ಎಲ್ಲರೂ ಕೇಳುತ್ತಾರೆ, ಅಭಿಪ್ರಾಯವೇನೆಂಬ ಪ್ರಶ್ನೆಯನ್ನು ಎಲ್ಲರೂ ಎದುರಿಸುತ್ತಾರೆ. ಆದರೆ ಬಹುತೇಕರು ನಿಜವಾದ ಅಭಿಪ್ರಾಯ ಬಯಸಿರುವುದಿಲ್ಲ.

ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

-

ಶಿಶಿರಕಾಲ

shishirh@gmail.com

ನಿಮ್ಮ ಅಭಿಪ್ರಾಯವೇನು?’ ಇದು ನನಗೆ ನಿತ್ಯ ನಿರಂತರ ಎದುರಾಗುವ ಪ್ರಶ್ನೆ. ಭರತನಾಟ್ಯ, ಯಕ್ಷಗಾನ, ನಾಟಕ, ಹಾಡು ಇತ್ಯಾದಿಯನ್ನು ವೇದಿಕೆಯಲ್ಲಿ ನೇರವೇರಿಸಿ ಬಂದವರು ಕಂಡಾಕ್ಷಣ ‘ಹೇಗಾಯಿತು?’ ಎಂದು ಅಭಿಪ್ರಾಯ ಕೇಳುತ್ತಾರೆ. ಭಾಷಣ ಮುಗಿಸಿ ವೇದಿಕೆಯಲ್ಲಿ ಪಕ್ಕಕ್ಕೆ ಕೂತವರು ‘ಭಾಷಣ ಹೇಗಾಯಿತು?’ ಎಂದು ಬೆವರು ಒರೆಸಿಕೊಳ್ಳುತ್ತ, ಪಿಸುಮಾತಿನಲ್ಲಿ ಕೇಳುತ್ತಾರೆ.

ವೃತ್ತಿಯಲ್ಲಿ- ಪ್ರೆಸೆಂಟೇಶನ್ಮುಗಿಸಿ ಬಂದ ಸಹೋದ್ಯೋಗಿಗಳು, ‘ಪ್ರಸ್ತುತ ಪಡಿಸಿದ್ದು ಹೇಗಾಯ್ತು’ ಎಂದು ಕೇಳುತ್ತಾರೆ. ಮಗಳು ತನ್ನ ಹೊಸ ಹೇರ್ ಸ್ಟೈಲ್, ಹೆಂಡತಿ ಉಟ್ಟ ಹೊಸ ಸೀರೆ, ಅಮ್ಮ ತಾನು ‌ಮಾಡಿದ ಅಡುಗೆ ಹೀಗೆ ಎಲ್ಲರೂ ‘ಹೇಗಿದೆ?’ ಎಂದು ಕೇಳುತ್ತಲೇ ಇರುತ್ತಾರೆ. ಕೆಲವು ಸ್ನೇಹಿತ ಬರಹಗಾರರು ತಾವು ಬರೆದ ಪುಸ್ತಕದ ಕಾಪಿ/ಪಿಡಿಎಫ್ ಕಳುಹಿಸಿ ಓದಿ ಅಭಿಪ್ರಾಯ ಕೇಳುತ್ತಾರೆ. ‌

ಕಾರ್ಪೊರೇಟ್ ವೃತ್ತಿಯಲ್ಲಿ ಮ್ಯಾನೇಜರ್ ತನ್ನ ಕೆಳಗಿನವರಿಗೆ, ಕೆಳಗಿನವರು ಮ್ಯಾನೇಜರ್‌ಗೆ ಫೀಡ್‌ ಬ್ಯಾಕ್ ಕೇಳುವುದು-ಕೊಡುವುದು ವಾರ್ಷಿಕ ಪರಿಪಾಠ. ಈ ‘ಅಭಿಪ್ರಾಯ’ದ್ದೊಂದು ಪೀಕಲಾಟವಿದೆ. ಅಭಿಪ್ರಾಯವನ್ನು ಎಲ್ಲರೂ ಕೇಳುತ್ತಾರೆ, ಅಭಿಪ್ರಾಯವೇನೆಂಬ ಪ್ರಶ್ನೆಯನ್ನು ಎಲ್ಲರೂ ಎದುರಿಸು ತ್ತಾರೆ. ಆದರೆ ಬಹುತೇಕರು ನಿಜವಾದ ಅಭಿಪ್ರಾಯ ಬಯಸಿರುವುದಿಲ್ಲ.

ಕೆಲವು ಅಕ್ಷರ ಸ್ನೇಹಿತರು ಆಗೀಗ ತಾವು ಬರೆದ, ಪ್ರಕಟವಾದ ಲೇಖನವನ್ನು ಇಮೇಲ್‌ನಲ್ಲಿ ಕಳುಹಿಸಿ ಪ್ರತಿಕ್ರಿಯೆಯನ್ನು ಕೇಳುತ್ತಾರೆ. ನಾನು ಇತ್ತೀಚೆಗೆ ಒಂದು ಪ್ರಯೋಗ ಮಾಡಿದೆ. ಇಂಥ ಕೆಲವಕ್ಕೆ ಪ್ರತಿಕ್ರಿಯಿಸುವಾಗ ಅತ್ಯಂತ ಕ್ರಿಟಿಕ್- ನೇರಾನೇರ ವಿಮರ್ಶಿಸಿ ಪ್ರತಿಕ್ರಿಯಿಸಿದೆ. ಇನ್ನು ಕೆಲವರ ಲೇಖನಗಳಲ್ಲಿ ಒಳ್ಳೆಯದಷ್ಟನ್ನೇ ಕಂಡು ‘ಬಹಳ ಒಳ್ಳೆಯದಾಗಿದೆ’ ಎಂದಷ್ಟೇ ಹೇಳಿದೆ.

ಇದನ್ನೂ ಓದಿ: Shishir Hegde Column: ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್‌ ಆಟ ?‌

ನಾನು ಯಾರೆಲ್ಲರಲ್ಲಿ ನೇರ ವಿಮರ್ಶೆ ಮಾಡಿದೆನೋ, ಅವರಲ್ಲಿ ಅನೇಕರು ನನ್ನ ಪ್ರತಿಕ್ರಿಯೆಗೆ ಮರು ಉತ್ತರಿಸಲಿಲ್ಲ, ಅಥವಾ ‘ಧನ್ಯವಾದ’ ಎಂದು ಹೇಳಿ ಮುಗಿಸಿ ಬಿಟ್ಟರು. ಅವರ ಜತೆ ಪತ್ರಸಂಬಂಧ ಬೆಳೆಯಲಿಲ್ಲ. ನಾನು ಅವರಿಗೆ ಕೊಟ್ಟ ಅಭಿಪ್ರಾಯ ಪ್ರಾಮಾಣಿಕವಾಗಿಯೇ ಇತ್ತು. ಆದರೆ ಮತ್ತೆ ಅವರಿಂದ ಅಭಿಪ್ರಾಯ ಕೇಳಿ ಇನ್ನೊಂದು ಕೋರಿಕೆ ಬರಲೇ ಇಲ್ಲ. ಆದರೆ ಯಾರ‍್ಯಾರಲ್ಲಿ ಒಳ್ಳೆಯ ದಾಗಿದೆ ಎಂದೇನೋ ಅವರೆಲ್ಲ ಉದ್ದುದ್ದದ ಮರು ಉತ್ತರ ಕೊಟ್ಟು ‘ಧನ್ಯವಾದ’ ಎಂದರು.

ಅವರ ಇಮೇಲ್ ನಲ್ಲಿ ಖುಷಿಯ ಭಾವ ಎದ್ದು ಕಾಣಿಸುತ್ತಿತ್ತು. ಇದೊಂದು ಉದಾಹರಣೆ ಅಷ್ಟೆ. ಅಸಲಿಗೆ, ಅಭಿಪ್ರಾಯ ಕೇಳುವವರು, ಅಭಿಪ್ರಾಯಿಸುವವರಲ್ಲಿ ಪ್ರಾಮಾಣಿಕತೆಯನ್ನೇ ಬಯಸು ವುದು. ಆದರೆ ಅದು ಹಿತಕರವಾಗಿದ್ದರಷ್ಟೇ ಖುಷಿಪಡುತ್ತಾರೆ. ಅಹಿತ, ನೇರ, ಅದರನೋ ಒಂದು ತಪ್ಪನ್ನು ಗ್ರಹಿಸಿ ಹೇಳಿದರೆ ಅದನ್ನು ಕೇಳಿಸಿಕೊಳ್ಳಲು ತಯಾರಿರುವುದಿಲ್ಲ.

ಉದ್ದೇಶ ಪ್ರಾಮಾಣಿಕವಾದರೂ, ಅವರ ಔನ್ನತ್ಯವನ್ನು ಬಯಸಿಯೇ ಹೇಳಿದರೂ ಅದು ಅವರಿಗೆ ಸಹ್ಯವಾಗುವುದಿಲ್ಲ. ಬಹುತೇಕರು ಅಂಥ ಅಭಿಪ್ರಾಯ ಕೇಳುತ್ತಿದ್ದಂತೆ ತಮ್ಮನ್ನು ತಾವು ರಕ್ಷಿಸಿ ಕೊಳ್ಳಲು, ಡಿಫೆಂಡ್ ಮಾಡಿಕೊಳ್ಳಲು ಆರಂಭಿಸಿ ಬಿಡುತ್ತಾರೆ. ‘ನಾನು ಇಂತಿಂಥ ಕಾರಣಕ್ಕೆ ಹೀಗೆ ಮಾಡಿದೆ, ಹೀಗಾಯ್ತು’ ಎನುತ್ತಾರೆ. ಅಥವಾ ಅವರಿವರ ಕಾರಣ ಕೊಟ್ಟು ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸಲು ಮುಂದಾಗುತ್ತಾರೆ. ಇಲ್ಲವೇ, ‘ಇವತ್ತು ನನಗೆ ನೆಗಡಿಯಾಗಿತ್ತು, ಮೊನ್ನೆ ಜ್ವರ ಬಂದಿತ್ತು, ಮಳೆ ಜಾಸ್ತಿಯಿತ್ತು’ ಎಂಬಿತ್ಯಾದಿ ನಮ್ಮ ನಿಯಂತ್ರಣದಲ್ಲಿರದಿದ್ದನ್ನು ಕಾರಣವಾಗಿ ಕೊಡುತ್ತಾರೆ.

S Hegde

ಅಭಿಪ್ರಾಯ ಕೇಳುವವರು ಹೊಗಳಿಕೆಯನ್ನೇ ಬಯಸುವುದೋ ಅಥವಾ ಅವರು ಬಯಸುವುದು ಪ್ರಾಮಾಣಿಕ ಅಭಿಪ್ರಾಯವೋ ಎಂಬುದನ್ನು ತಿಳಿಯುವುದೇ ದೊಡ್ಡ ಸವಾಲಿನ ಕೆಲಸ. ಈ ಕಾರಣಕ್ಕೇ ಇರಬೇಕು ಬಹುತೇಕರು, ಯಾರೇ ಅವರಲ್ಲಿ ಅಭಿಪ್ರಾಯ ಕೇಳಿದರೂ ‘ತುಂಬಾ ಚೆನ್ನಾ ಗಿದೆ, ಸರಿಯಾಗಿದೆ, ಉತ್ತಮವಾಗಿದೆ’ ಎಂದಷ್ಟೇ ಹೇಳಿ ಸುಮ್ಮನಾಗಿ ಬಿಡುತ್ತಾರೆ.

ಏನೋ ಒಂದು ಟೀಕಿಸುವುದು, ಎದುರಿನವನು ಅದನ್ನು ಡಿಫೆಂಡ್ ಮಾಡಿಕೊಳ್ಳುವುದು, ‘ನಾನು ಈ ಕಾರಣಕ್ಕೆ ಈ ಅಭಿಪ್ರಾಯ ಕೊಟ್ಟೆ’ ಎಂದು ವಿವರಿಸುವುದು ಇವೆಲ್ಲ ಯಾರಿಗೆ ಬೇಕು? ಕಿರಿಕಿರಿ. ಹಾಗಾಗಿ, ‘ಚೆನ್ನಾಗಿತ್ತು’, ‘ಅದ್ಭುತವಾಗಿತ್ತು’ ಎಂದುಬಿಟ್ಟರೆ ಯಾವ ರಗಳೆ-ರಂಪಾಟಗಳಿಲ್ಲ. ಈ ರೀತಿಯ ಅಭಿಪ್ರಾಯದಿಂದ ಕೇಳಿದವರಿಗೆ ಸಂತೋಷ ವಾಗುವುದೇನೋ ನಿಜ, ಆದರೆ ಅದಕ್ಕೆ ಕಿಮ್ಮತ್ತಿಲ್ಲ.

ಕೆಲವೊಮ್ಮೆ ‘ಕೆಸುವಿನ ಎಲೆಯ ಮೇಲೆ ನೀರು ಜಾರಿದಂತೆ’ ಬರುವ ಇಂಥ ನಯವಾದ ಅಭಿಪ್ರಾಯ ಗಳು ನಮ್ಮನ್ನು ದಾರಿ ತಪ್ಪಿಸಬಹುದು. ಇನ್ನಷ್ಟು ಅಧೋಗತಿಗೆ ತೆಗೆದುಕೊಂಡು ಹೋಗಬಹುದು. ಅದೆಷ್ಟೋ ಜನರು ಇಂಥ ಹೊಗಳುವಿಕೆಯನ್ನೇ ನಂಬಿ ಅವರ ಹವ್ಯಾಸ ಇತ್ಯಾದಿಯ ಬಗ್ಗೆ ಏನೇನೋ ಕಲ್ಪಿಸಿಕೊಂಡು ಬಿಟ್ಟಿರುತ್ತಾರೆ.

ಆಮೇಲೆ ಸಿಕ್ಕಸಿಕ್ಕವರ ತಲೆಯನ್ನೆಲ್ಲ ತಿನ್ನಲು ಆರಂಭಿಸುವುದು ಹೀಗೆ. ಅದೇಕೆ ನಮಗೆ ಅಭಿಪ್ರಾಯ ವನ್ನು ಯಥಾವತ್ತು ಸ್ವೀಕರಿಸಲಿಕ್ಕೆ ಸಾಧ್ಯವಾಗುವುದಿಲ್ಲ? ನಾವು ಏನೇ ಮಾಡಲಿ, ಹೊಸ ಪ್ರಯತ್ನ ದಲ್ಲಿ ತೊಡಗಲಿ, ಇನ್ನೊಬ್ಬರ ಅಭಿಪ್ರಾಯ, ಫೀಡ್‌ಬ್ಯಾಕ್ ನಮ್ಮ ಬೆಳವಣಿಗೆಗೆ ಬಹಳ ಮುಖ್ಯ. ಇದು ಎಲ್ಲರಿಗೂ ಗೊತ್ತಿರುವ ಹರಕು ಪುರಾಣ, ಎಲ್ಲರೂ ಹೇಳುವ ಸಂಗತಿ. ಆದರೆ ಎಲ್ಲಾ ರೀತಿಯ ಪ್ರತಿಕ್ರಿಯೆಯನ್ನು ಜೀರ್ಣಿಸಿಕೊಳ್ಳುವುದು ನಮಗೇಕೆ ಅಷ್ಟು ಕಷ್ಟ? ಮನಃಶಾಸ್ತ್ರದಲ್ಲಿ ನಮ್ಮ ಮಿದುಳಿನ ಒಂದು ವ್ಯವಸ್ಥೆಯ ಉಲ್ಲೇಖವಿದೆ.

Self-relevance system - ಸ್ವಯಂ ಪ್ರಸ್ತುತತೆಯ ವ್ಯವಸ್ಥೆ. ನಮ್ಮ ಪ್ರಸ್ತುತತೆಯನ್ನು ನಿಭಾಯಿಸುವ ಈ ವ್ಯವಸ್ಥೆ ಇರುವುದು ಮಿದುಳಿನ ಅಮಿಗ್ಡೆಲ ಭಾಗದಲ್ಲಿ. ಅದನ್ನು ವಿಜ್ಞಾನಿಗಳು ಪಿನ್‌ ಪಾಯಿಂಟ್ ಮಾಡಿದ್ದಾರೆ.

ನೀವು ಸಂತೆಯಲ್ಲಿ, ಮದುವೆಮನೆಯ ಗದ್ದಲದಲ್ಲಿದ್ದಾಗಲೂ ಯಾರೋ ನಿಮ್ಮ ಹೆಸರನ್ನು ಕರೆದರೆ ತಕ್ಷಣ ಅದು ನಿಮ್ಮ ಗ್ರಹಿಕೆಗೆ ಬರುವುದು ಈ ಭಾಗದ, ವ್ಯವಸ್ಥೆಯ ಜಾಗೃತಾವಸ್ಥೆಯಿಂದ. ನಮ್ಮ ಇಂದ್ರಿಯಗಳು ಗ್ರಹಿಸುವ ಬೆಳಕು, ಶಬ್ದ, ಸ್ಪರ್ಶ, ರುಚಿ, ವಾಸನೆ ಇತ್ಯಾದಿಗಳಲ್ಲಿ ಯಾವುದು ನಮಗೆ ಮುಖ್ಯ, ಯಾವುದನ್ನು ಗ್ರಹಿಸಬೇಕು, ಯಾವುದನ್ನು ಅಲಕ್ಷಿಸಬೇಕು ಎನ್ನುವುದನ್ನೆಲ್ಲ ಲೆಕ್ಕ ಹಾಕು ವುದು ಈ ವ್ಯವಸ್ಥೆ. ಒಟ್ಟಾರೆ ಅಹಂ- ನಮ್ಮ ಅಸ್ತಿತ್ವದ ನಿರಂತರ ಗ್ರಹಿಕೆ ಈ ವ್ಯವಸ್ಥೆಯ ಕೆಲಸ. ಅದು ಮಾನಸಿಕವಾಗಿಯೂ ಹೌದು. ‘ಅಹಂ’ ಇದೇ ವ್ಯವಸ್ಥೆಯ ಸೃಷ್ಟಿ. ಹಾಗಾಗಿ, ‘ಅಹಂ’ ಅನ್ನು ಪ್ರಶ್ನಿಸುವ ಟೀಕೆ ಎದುರಾದಾಗ ಕೂಡ ಅದೇ ವ್ಯವಸ್ಥೆ ಜಾಗೃತವಾಗುತ್ತದೆ.

‘ಈ ಟೀಕೆ ನನ್ನ ಬಗ್ಗೆಯೇ? ಇದು ನನ್ನನ್ನು ಉಳಿದವರೆದುರು ಸಣ್ಣವನನ್ನಾಗಿಸುತ್ತಿದೆಯೇ?’ ಎಂಬ ಪ್ರಶ್ನೆಗಳನ್ನು ಎದುರಿಟ್ಟು ವಿಶ್ಲೇಷಿಸುತ್ತದೆ. ಈ ವಿಶ್ಲೇಷಣೆಯ ಉಪೋತ್ಪತ್ತಿಯೇ ‘ಭಯ’. ಮಿದುಳು ಟೀಕೆಯನ್ನು ಈ ಕಾರಣಕ್ಕೆ ಭಯದಿಂದಲೇ ಎದುರಿಸುವುದು. ಮತ್ತು ಟೀಕೆ ಎದುರಾದಾಗ ಅದರ ಕಾರಣ, ಹಿನ್ನೆಲೆ ಯಾವುದೂ ಗ್ರಹಿಕೆಗೆ ಬಾರದೆ ಅದೊಂದು ಅಪಾಯ ಎಂಬಂತೆ ವರ್ತಿಸುವುದು, ಪ್ರತಿಕ್ರಿಯಿಸುವುದು. ಇದು ದೊಡ್ಡ ದೊಡ್ಡ ವಿಷಯಗಳಲ್ಲೂ ಹೌದು, ಸಣ್ಣ ಪುಟ್ಟ ‘ಇವತ್ತಿನ ಅಡುಗೆಗೆ ಉಪ್ಪು ಹೆಚ್ಚಾಗಿದೆ’ ಎಂಬ ಚಿಲ್ಲರೆ ಟೀಕೆಗಳಲ್ಲೂ ಹೌದು.

ಯಾರು ಏನೇ ಪ್ರತಿಕ್ರಿಯಿಸಲಿ, ವಸ್ತು-ವಿಷಯ ನಾವಾದಾಗ ನಮ್ಮೆದುರಿಗಿರುವುದು ಮೂರು ಆಯ್ಕೆಗಳು. ಮೊದಲನೆಯದು- ಅವರ ಟೀಕೆಯನ್ನು ಹಿಂದೆ ಮುಂದೆ ವಿಚಾರ ಮಾಡದೆ, ಹೇಳಿದ ವರು ದೊಡ್ಡವರು, ತಿಳಿದವರು ಎಂದು ಶರಣಾಗಿ ಒಪ್ಪಿಬಿಡುವುದು. ಎರಡನೆಯದು- ಟೀಕೆ ಯನ್ನು ಪೂರ್ತಿ ಏನೆಂದು ಕೇಳದೆ, ಅದರ ಹಿನ್ನೆಲೆಯನ್ನು, ಪ್ರಯೋಜನವನ್ನು ಗ್ರಹಿಸದೆ ಟೀಕೆಯನ್ನು ಒಂದರ ನಂತರ ಇನ್ನೊಂದರಂತೆ ಲೆಕ್ಕವಿಟ್ಟು ಅಲ್ಲಗಳೆಯುವುದು, ಅಥವಾ ಅದಕ್ಕೊಂದಿಷ್ಟು ಬಾಹ್ಯ ಕಾರಣಗಳನ್ನು ಕೊಡುವುದು.

ಮೂರನೆಯದು- ಕೇಳಿ ಒಂದು ಕ್ಷಣ ಆ ಬಗ್ಗೆ ಯೋಚಿಸುವುದು. ಕೆಲವು ಕ್ಷಣ ಉಸಿರು ತೆಗೆದು ಕೊಳ್ಳುವುದು. ಸಮಚಿತ್ತದಿಂದ, ‘ಇದು ಸತ್ಯವೇ? ಸತ್ಯವಾದರೆ ನನಗೇನು ಲಾಭ? ನಾನೇನು ಪಡೆಯ ಬಹುದು?’ ಎಂದು ವಿಚಾರ ಮಾಡುವುದು. ಟೀಕೆ ಮಾಡುವವರು, ಅವರ ವಿಧಾನ, ಮಾಡುವ ರೀತಿ, ತೀಕ್ಷ್ಣತೆ, ನೇರವಂತಿಕೆ, ಪರೋಕ್ಷತೆ ಇವೆಲ್ಲವನ್ನು ಮೀರಿ ವ್ಯಕ್ತಿಗತ ಬೆಳವಣಿಗೆಗೆ ಏನು ಪ್ರಯೋಜನ ಎಂದು ಸಮಚಿತ್ತದಿಂದ ಗ್ರಹಿಸುವುದು. ಈ ಮೂರನೆಯದನ್ನು ಅಭ್ಯಾಸ ಮಾಡಿಕೊಂಡರೆ ಯಾವುದೇ ಟೀಕೆ ಅ-ಸಹ್ಯವೆನಿಸುವುದಿಲ್ಲ.

ಟೀಕೆ ಬಂದಷ್ಟು ಖುಷಿಕೊಡುತ್ತದೆ. ಟೀಕೆ ಕ್ರಮೇಣ ನಮ್ಮನ್ನು ಬೆಳೆಸುತ್ತದೆ. ಮಿಥಿಲೆಯ ರಾಜ ಜನಕ ಸಮರ್ಥ ಆಡಳಿತಗಾರ. ಅಷ್ಟೇ ಅಲ್ಲ, ಅವನೊಬ್ಬ ತತ್ವಜ್ಞಾನಿಯಾಗಿದ್ದ, ಎಲ್ಲಾ ಶಾಸ್ತ್ರ-ಪುರಾಣ ಗಳನ್ನು ಬಲ್ಲವನಾಗಿದ್ದ. ಜನಕ ಒಮ್ಮೆ ತನ್ನ ಅರಮನೆಯಲ್ಲಿ ಪುರಾಣ, ವೇದ, ಅಧ್ಯಾತ್ಮಗಳ ಮೇಲೆ ಚರ್ಚಾಸ್ಪರ್ಧೆಯನ್ನು ಇಟ್ಟುಕೊಂಡ. ಗೆದ್ದವರಿಗೆ ಚಿನ್ನ-ವಜ್ರಗಳ ಭಾರಿ ಬಹುಮಾನ. ಜನಕನ ಆಸ್ಥಾನದ ಮಹಾಜ್ಞಾನಿ ‘ಬಂಡಿ’ ಎಂಬುವವನ ಜತೆ ‘ಕಹೋಲ’ ಎಂಬ ಇನ್ನೊಬ್ಬ ಮಹಾಜ್ಞಾನಿ ಯ ವಾದ-ಚರ್ಚೆ ಆರಂಭವಾಯಿತು.

ಮುಂಜಾನೆಯೇ ಆರಂಭವಾದ ಚರ್ಚೆ ಮಧ್ಯಾಹ್ನವಾದರೂ ಮುಂದುವರಿದಿತ್ತು. ಕಹೋಲ ಸೋಲುತ್ತಿದ್ದ, ಬಂಡಿ ಗೆಲ್ಲುತ್ತಿದ್ದ. ಈ ಸುದ್ದಿ ಮಿಥಿಲೆಯಲ್ಲಿ ಹರಡಿತು ಮತ್ತು ಕಹೋಲನ ಹನ್ನೆರಡು ವರ್ಷದ ಮಗ ಅಷ್ಟಾವಕ್ರನಿಗೂ ತಿಳಿಯಿತು. ಇದನ್ನು ಕೇಳಿದ ಅಷ್ಟಾವಕ್ರ ಅರಮನೆ ಯತ್ತ ಬಂದ ಮತ್ತು ಚರ್ಚೆ ನಡೆಯುತ್ತಿದ್ದ ವೇದಿಕೆಯತ್ತ ನಡೆದು ಬಂದ.

ಅಷ್ಟಾವಕ್ರ- ಆತನ ಹೆಸರೇ ಹೇಳುವಂತೆ ಅಕರಾಳ ವಿಕರಾಳ ದೇಹ. ಆತನ ದೇಹದಲ್ಲಿ ಎಂಟು ಕಡೆ ವಕ್ರತೆ. ವಿರೂಪ, ಕೈ ಕಾಲಿನ ಗಂಟುಗಳು. ಅವನು ಅರಮನೆಯ ಸಭೆಯೊಳಗೆ ನಡೆದು ಬರುತ್ತಿದ್ದಂತೆ, ಅವನ ಕುಂಟು ಹಾವಭಾವ, ವಿಚಿತ್ರವೆನಿಸುವ ನಡಿಗೆ ಕಂಡು ಅಲ್ಲಿ ನೆರೆದಿದ್ದ ಎಲ್ಲರೂ ನಕ್ಕರು. ಜನಕ ಕೂಡ ಅವನನ್ನು ಕಂಡು ನಕ್ಕ.

ಅಷ್ಟಾವಕ್ರ ಇದ್ದದ್ದೇ ಹಾಗೆ. ಹೀಗೆ ಎಲ್ಲರೂ ನಗುತ್ತಿದ್ದಂತೆ ಅಷ್ಟಾವಕ್ರ ಕೂಡ ಅವರ ಜತೆ ದೊಡ್ಡಕ್ಕೆ ನಗಲಾರಂಭಿಸಿದ. ಸ್ವಲ್ಪ ಸಮಯದ ನಂತರ ಸಭೆ ಶಾಂತವಾಯಿತು. ಜನಕನು ಅಷ್ಟಾವಕ್ರನತ್ತ ನೋಡುತ್ತ ಅವನ ಪರಿಚಯ ಮಾಡಿಕೊಂಡ. “ಅಷ್ಟಾವಕ್ರ, ನೀನು ನಡೆದುಬಂದದ್ದು ಕಂಡು ಎಲ್ಲರೂ ನಕ್ಕರು, ನಾನು ಕೂಡ ನಿನ್ನನ್ನು ನೋಡಿ ನಕ್ಕೆ. ಆದರೆ ನೀನೇಕೆ ಅಷ್ಟು ನಗೆಯಾಡಿದ್ದು?" ಎಂದು ಜನಕ ಕೇಳಿದ.

ಅಷ್ಟಾವಕ್ರ ಅತ್ಯಂತ ನೇರ ನುಡಿಯ ವ್ಯಕ್ತಿ. “ಮಹಾರಾಜಾ, ನೀನು ಚರ್ಮಗಾರರನ್ನಿಟ್ಟುಕೊಂಡು ಸತ್ಯಾನ್ವೇಷಣೆಗೆ ಹೊರಟಿದ್ದೀಯ! ಹಾಗಾಗಿ ನಾನು ಕೂಡ ನಕ್ಕೆ. ನನಗೆ ಇಲ್ಲಿ ಯಾರೂ ವಿದ್ವತ್ ಜನ ಕಾಣಿಸುತ್ತಿಲ್ಲ. ಎಲ್ಲರೂ ನನ್ನ ಚರ್ಮ, ದೇಹವನ್ನಷ್ಟೇ ನೋಡುತ್ತಿದ್ದಾರೆ.

ಒಬ್ಬ ಚರ್ಮದ ಕೆಲಸ ಮಾಡುವವನು ಚರ್ಮವನ್ನು ನೋಡುವುದರಲ್ಲಿ ಅರ್ಥವಿದೆ. ಆದರೆ ವಿದ್ವತ್ ಜನರು ಕೂಡ ಚರ್ಮವನ್ನೇ ನೋಡುತ್ತಾರೆ, ನನ್ನೊಳಗಿನ ವ್ಯಕ್ತಿತ್ವವನ್ನು ನೋಡುವುದಿಲ್ಲ ಎಂದಾದರೆ ಇವರಿಗೂ, ಚರ್ಮದ ಕೆಲಸ ಮಾಡುವವರಿಗೂ ವ್ಯತ್ಯಾಸ ಏನುಳಿಯಿತು?". ಆ ಹನ್ನೆರಡು ವರ್ಷದ ಅಷ್ಟಾವಕ್ರನ ಮಾತನ್ನು ಕೇಳಿ ಜನಕ ಮತ್ತು ಎಲ್ಲ ಸಭಾಸದರು ತಲೆತಗ್ಗಿಸಿ ದರು.

ಜನಕ ಹೆಚ್ಚಿನ ಮಾತನಾಡದೆ ಅಷ್ಟಾವಕ್ರನನ್ನು ಆ ದಿನ ಬೀಳ್ಕೊಟ್ಟ. ಜನಕ ಆ ಪೋರನ ಟೀಕೆ ಯನ್ನು ಇನ್ನಷ್ಟು ಯೋಚಿಸಿದ. ಏಕಾಂತದಲ್ಲಿ ಯೋಚಿಸುತ್ತಿದ್ದಂತೆ ಆತನಿಗೆ ಅಷ್ಟಾವಕ್ರ ಹೇಳಿದ ಮಾತುಗಳು ಸತ್ಯವೆನಿಸಿದವು. ಅಷ್ಟಾವಕ್ರನ ಮಾತುಗಳು ಅವನನ್ನು ರಾತ್ರಿಯಿಡೀ ಕಾಡಿದವು. ಜನಕ ಮಾರನೆಯ ದಿನ ಕುದುರೆಯ ಮೇಲೆ ಮಿಥಿಲೆಯಲ್ಲಿ ಓಡಾಡುವಾಗ ಅಷ್ಟಾವಕ್ರ ಮತ್ತೆ ಅವನಿಗೆ ಕಾಣಿಸಿದ. ಕಾಣಿಸಿದ್ದೇ ತಡ, ತಾನು ಮಹಾರಾಜನೆಂದು ಎಣಿಸದೆ ಹನ್ನೆರಡು ವರ್ಷದ ಅಷ್ಟಾವಕ್ರನ ಕಾಲಿಗೆರಗಿದ. ಅಷ್ಟೇ ಅಲ್ಲ, ಅಷ್ಟಾವಕ್ರನನ್ನು ತನ್ನ ಆಸ್ಥಾನಕ್ಕೆ ಕರೆದುಕೊಂಡು ಬಂದ.

ಅವನ ಜ್ಞಾನ ಕಂಡು ತನ್ನ ಪ್ರಶ್ನೆಗಳನ್ನು ಅವನ ಮುಂದಿಟ್ಟ. ಅಷ್ಟಾವಕ್ರ ಅದಕ್ಕುತ್ತರಿಸಿದ. ಜನಕ-ಅಷ್ಟಾವಕ್ರರ ನಡುವೆ ನಡೆಯುವ ಸಂಭಾಷಣೆಯೇ ‘ಅಷ್ಟಾವಕ್ರಗೀತ’. ಇದು ಅದ್ವೈತ ವೇದಾಂತದ ಮಹೋನ್ನತ ಕೃತಿ. ಬಹುಶಃ ಜನಕ ಮಹಾರಾಜನ ಜಾಗದಲ್ಲಿ ಇನ್ನು ಯಾರೇ ಇದ್ದಿದ್ದರೂ ಅಷ್ಟಾವಕ್ರನ ವರ್ತನೆಯನ್ನು ಸಹಿಸುತ್ತಿರಲಿಲ್ಲ. ಜ್ಞಾನಿಗಳೇ ತುಂಬಿದ ಸಭೆಯನ್ನು ಚರ್ಮಗಾರ ರೆನ್ನುವುದು!

ಅದು ಕೂಡ ಮಹಾರಾಜನನ್ನೂ ಸೇರಿಸಿ! ಇಷ್ಟು ನೇರವಾದ ಟೀಕೆ! ಆದರೆ ಜನಕ ಆತುರಗೆಡಲಿಲ್ಲ. ಟೀಕೆಯನ್ನು ವಿವೇಚಿಸಲು ಸಮಯ ತೆಗೆದುಕೊಂಡ. ಸೂಕ್ಷ್ಮವನ್ನು ಗ್ರಹಿಸಿದ. ಟೀಕಿಸಿದ್ದು ಹನ್ನೆರಡು ವರ್ಷದ ಬಾಲಕ ಎಂದು ಅವಮಾನಗೊಳ್ಳಲಿಲ್ಲ.

‘ಕೈಕಾಲು ನೆಟ್ಟಗಿಲ್ಲದವನ ಅಧಿಕಪ್ರಸಂಗತನ’ ಎಂದು ಸಿಟ್ಟಿಗೇಳಲಿಲ್ಲ. ಬದಲಿಗೆ ಟೀಕೆಯ ಹಿಂದೆ ಇರುವ ಉದ್ದೇಶ, ವ್ಯಕ್ತಿತ್ವ ಮತ್ತು eನವನ್ನು ಗ್ರಹಿಸಿದ. ಅದೆಲ್ಲದರ ಪರಿಣಾಮವಾಗಿ ಮನುಕುಲಕ್ಕೆ ಅಷ್ಟಾವಕ್ರಗೀತೆಯಂಥ ಅನರ್ಘ್ಯ ರತ್ನ ಸಿಕ್ಕಿತು. ಒಂದು ವೇಳೆ ಜನಕ ಸಿಟ್ಟಿಗೆದ್ದು ಅಷ್ಟಾವಕ್ರನನ್ನು ಕಾರಾಗೃಹಕ್ಕೆ ಅಟ್ಟಿಬಿಟ್ಟಿದ್ದರೆ!

ಟೀಕೆ ಹಾಗೆಯೇ. ದೊಡ್ಡವರಿಂದಲೂ ಬರಬಹುದು, ಚಿಕ್ಕವರಿಂದಲೂ ಬರಬಹುದು. ಟೀಕಿಸು ವವರು ನಾವು ಶ್ರೇಣೀಕರಿಸುವ ಯಾವೊಂದು ವಿಷಯದಲ್ಲಿ ಮೇಲಿರಬಹುದು-ಕೆಳಗಿರಬಹುದು. ಅವರು ದೊಡ್ಡ ವ್ಯಕ್ತಿಯೇ ಆಗಿರಬಹುದು ಅಥವಾ ಯಾರೋ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾಗಿರಬಹುದು. ಟೀಕೆಯೂ ಅಷ್ಟಾವಕ್ರನಂತೆ ವಕ್ರವಕ್ರವಾಗಿ ಅಥವಾ ನೇರವಾಗಿ ಬರಬಹುದು.

ಹಾನಿಯನ್ನು ಬಯಸಿ ಟೀಕಿಸುವವರು ಇಲ್ಲವೆಂದಲ್ಲ. ಅಂಥ ಟೀಕಾಕಾರರಿಗೆ ಉದಾಸೀನವೇ ಮದ್ದು. ದ್ವೇಷದ ಟೀಕೆಗಳು ವಿರಳ- ಸತ್ಕಾರಣಕ್ಕೆ ಬರುವ ಟೀಕೆಗಳೇ ಜಾಸ್ತಿ. ಆದರೆ ನಾವು ಬರುವ ಟೀಕೆಯನ್ನೆಲ್ಲ ದುರುದ್ದೇಶವೆಂಬ ತಕ್ಕಡಿಯಲ್ಲಿ ಹಾಕಿಯೇ ತೂಗಿ ಪರೀಕ್ಷಿಸುವುದು. ಅಲ್ಲಿಯೇ ನಮ್ಮ ದಿಕ್ಕು ತಪ್ಪುವುದು. ಇನ್ನು, ಬಹುತೇಕ ಟೀಕೆಗಳು ಯಾವುದೋ ಒಂದು ವಿಚಾರಕ್ಕಷ್ಟೇ ಸೀಮಿತವಾಗಿರುತ್ತವೆ. ಆದರೆ ಅದನ್ನು ನಮ್ಮ ವ್ಯಕ್ತಿತ್ವದ ಮೇಲಿನ ಟೀಕೆ ಎಂದು ತೀರಾ ವೈಯಕ್ತಿಕ ವಾಗಿ ತೆಗೆದುಕೊಂಡರೆ, ತಪ್ಪಾಗಿ ಗ್ರಹಿಸಿದರೆ ಅದರಿಂದ ನಷ್ಟ.

ಮಾನಸಿಕ ಕಿರಿಕಿರಿ, ಟೀಕೆಗಳು ನಮ್ಮನ್ನು ಇನ್ನಷ್ಟು ಕುಗ್ಗಿಸಿಬಿಡುತ್ತವೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಚಿಕ್ಕದೊಂದು ಟೀಕೆಗೆ ಸಿಟ್ಟಿಗೆದ್ದುಬಿಡುತ್ತಾರೆ. ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳು ಜಾಲತಾಣಗಳಲ್ಲಿ ಕಾಲು ಕೆರೆದು ಜಗಳಕ್ಕೆ ನಿಲ್ಲುವುದು ಆಗೀಗ ಕಾಣಿಸುತ್ತದೆ. ಟೀಕಿಸಿದ್ದಕ್ಕೆ ಕೊಲೆಯಾದ ನಿದರ್ಶನಗಳಿವೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್‌ಗಳು ಮಾಡಿದ ಟೀಕೆಗಳನ್ನು ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ.

ಸಿನಿಮಾ ನಟರು ಟೀಕೆಯನ್ನು ಎದುರಿಸಲಾಗದೆ ಖಿನ್ನತೆಗೊಳಗಾದದ್ದಿದೆ. ಅವರೆಲ್ಲರೂ ಟೀಕೆ ಯನ್ನು ಬಳಸಿಕೊಳ್ಳುವುದರಲ್ಲಿ, ಗ್ರಹಿಸುವುದರಲ್ಲಿ ಸೋತವರು. ಆದರೆ ಟೀಕೆಯನ್ನೇ ಮೆಟ್ಟಿಲು ಮಾಡಿಕೊಂಡು ಮೇಲೆ ಹತ್ತಿದ ಅದೆಷ್ಟೋ ಸಾಧಕರಿದ್ದಾರೆ ‘ಅಷ್ಟಾವಕ್ರ’ ತನ್ನ ತಾಯಿಯ ಗರ್ಭ ದಲ್ಲಿರುವಾಗ ತಂದೆ ‘ಕಹೋಲ’ ಹೇಳಿದ ಶಾಸ್ತ್ರ ವಿವರಣೆಯನ್ನು ಕೇಳಿಸಿಕೊಂಡು ‘ಅದು ತಪ್ಪು’ ಎಂದು ಹೇಳಿದನಂತೆ.

ಆ ನೇರ ಟೀಕೆಗೆ ತಂದೆ ಕಹೋಲ ಸಿಟ್ಟಿಗೆದ್ದು ನೀನು ‘ಅಷ್ಟ’ ವಕ್ರ- ಎಂಟು ಕಡೆ ವಕ್ರವಾಗಿ ಹುಟ್ಟು ಎಂದು ಶಾಪ ಕೊಟ್ಟನಂತೆ. ಹಾಗಾಗಿ ಅಷ್ಟಾವಕ್ರ ಆ ರೀತಿ ವಿರೂಪವಾಗಿ ಹುಟ್ಟಿದ ಎಂಬುದು ಇನ್ನೊಂದು ಕಥೆ. ಟೀಕೆಯನ್ನು ಸ್ವೀಕರಿಸಲು ಕಹೋಲನಂತೆ ಕೇವನೆ ರೆಯ ರಾಷ್ಟ್ರಗಳಲ್ಲಿ ಉಂಟಾ ಗಿರುವ ಅರಾಜಕತೆಯ ಕಿಚ್ಚನ್ನು ಭಾರತದಲ್ಲೂ ಹಬ್ಬಿಸುವ ಷಡ್ಯಂತ್ರವನ್ನು ಮೋದಿ ವಿರೋಧಿ ಗಳು ಹೂಡಿದ್ದಾರಾ? ಎಂಬ ಅನುಮಾನ ಕಾಡುತ್ತಿದೆ.

ಭಾರತದ ನೆರೆಹೊರೆಯಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ ‘ಭಾರತೀಯರು ಅದೆಷ್ಟು ಅದೃಷ್ಟವಂತರು’ ಎಂದು ಹೆಮ್ಮೆ ಪಡಬೇಕಾಗಿತ್ತು. ಆದರೆ, ಹಿಂಸೆ, ಗಲಭೆ, ದೊಂಬಿಯಿಂದ ನಲುಗಿಹೋದ ಆ ದೇಶಗಳ ದುರ್ಭರ ಪರಿಸ್ಥಿತಿ ನಮಗೂ ಬರಲಿ ಎಂದು ಆಶಿಸುತ್ತಿದ್ದಾರೆ ವಿಕೃತ ಮನಸ್ಸಿನ ಕಾಂಗ್ರೆಸ್ ನಾಯಕರು. ಇವರ ಜತೆಗೆ ಸಾಮಾಜಿಕ ಜಾಲತಾಣದ ‘ಕಾಗದದ ಹುಲಿಗಳು’ ಕೂಡ ತಲೆಯೆತ್ತಿವೆ.

ರಾಜಕೀಯ ಅಸ್ಥಿರತೆ, ಅಧಿಕಾರಸ್ಥರ ಸ್ಥಾನಪಲ್ಲಟ/ಪದಚ್ಯುತಿ, ಆರ್ಥಿಕ ಕ್ಷೋಭೆ, ಮತಾಂಧತೆಯ ಅಟ್ಟಹಾಸ, ವ್ಯಾಪಕ ಹಿಂಸಾಚಾರ ಹೀಗೆ ಒಂದಲ್ಲಾ ಒಂದು ಬಾಧೆಯಿಂದ ನಮ್ಮ ನೆರೆಯ ಬಹುತೇಕ ರಾಷ್ಟ್ರಗಳು ಬಳಲಿ ಹೋಗಿವೆ. ಪ್ರಭುತ್ವದ ವಿರುದ್ಧದ ಬಂಡಾಯದ ದನಿಯು ಹಿಂಸೆಗೆ ತಿರುಗಿ, ಸಾರ್ವಜನಿಕ ಸ್ವತ್ತುಗಳು ಲೂಟಿಯಾಗಿ, ಸಾವಿರಾರು ಕೋಟಿ ಹಣ ಕರಗಿ ಹೋಗಿ, ನೂರಾರು ಜನರ ಸಾವುಗಳಾಗಿ ಹೋರಾಟವು ದಿಕ್ಕುತಪ್ಪಿತು, ಆ ದೇಶಗಳನ್ನು 25 ವರ್ಷದಷ್ಟು ಹಿಂದಕ್ಕೆ ಕೊಂಡೊಯ್ದಿತು.

ಸರಕಾರಗಳು ತಪತಪನೆ ಉದುರಿದವು. ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ ದೇಶಗಳ ಪ್ರಧಾನಿ/ಅಧ್ಯಕ್ಷರು ಜೀವ ಉಳಿಸಿಕೊಳ್ಳಲು ರಾತ್ರೋರಾತ್ರಿ ದೇಶ ತೊರೆದು ಪರದೇಶಗಳಲ್ಲಿ ಆಶ್ರಯ ಪಡೆಯು ವಂತಾದರೆ, ಪಾಕ್ ಮತ್ತು ಮ್ಯಾನ್ಮಾರ್ ಪ್ರಧಾನಿಗಳು ಸೆರೆಮನೆ ಸೇರಿದ್ದಾರೆ.

20 ವರ್ಷಗಳಿಂದ ನೆಲೆಯೂರಿದ್ದ ಅಮೆರಿಕದ ಸೇನೆಯು ಅಫ್ಘಾನಿಸ್ತಾನದಿಂದ ನಿರ್ಗಮಿಸಲು ಮುಂದಾಗುತ್ತಿದ್ದಂತೆ, ಆಫ್ಘಾನ್ ಸರಕಾರದ ವಿರುದ್ಧ ತಾಲಿಬಾನ್ ಯುದ್ಧವನ್ನು ಘೋಷಿಸಿತು. ಅಮೆರಿಕದ ಸೇನೆಯ ನೆರವಿಲ್ಲದೆ ಆಫ್ಘನ್ ಸೈನ್ಯವು ತಾಲಿಬಾನಿಗಳಿಗೆ ಸುಲಭದ ತುತ್ತಾಯಿತು. ಅಧ್ಯಕ್ಷ ಅಶ್ರಫ್ ಘನಿ ಯುಎಇಗೆ ಪರಾರಿಯಾದರು.‌

ಆಫ್ಘಾನಿಸ್ತಾನವು ಮತ್ತೊಮ್ಮೆ ಕಟ್ಟರ್ ಮುಸ್ಲಿಂ ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿ ಸಿಲುಕಿತು. ಮ್ಯಾನ್ಮಾರ್‌ನಲ್ಲಿ 2020ರಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದ ಅಂಗ್ ಸಾನ್ ಸೂಕಿಯವರ ವಿರುದ್ಧ 2021ರಲ್ಲಿ ನಡೆದ ಮಿಲಿಟರಿ ಕ್ಷಿಪ್ರಕ್ರಾಂತಿಯಿಂದಾಗಿ ಸರಕಾರವು ಸೇನೆಯ ತೆಕ್ಕೆಗೆ ಹೋಯಿತು. ಸೇನಾಡಳಿತವು ಪ್ರಧಾನಿ ಅಂಗ್ ಸಾನ್ ಸೂಕಿಯವರನ್ನು ಸೆರೆಮನೆಗೆ ದೂಡಿತು.

2016ರಿಂದ ನಡೆಯುತ್ತಿದ್ದ ಜನಾಂಗೀಯ ದಂಗೆಗೆ ರೋಹಿಂಗ್ಯಾ ಮುಸ್ಲಿಮರು ಗುರಿಯಾಗಿದ್ದಾರೆ. ಈ ರೋಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿ ನಿರಾಶ್ರಿತರಾಗಿ, ಭಾರತಕ್ಕೆ ಬಂದು ನೆಲೆಸಿ ನಮಗೆ ದೊಡ್ಡ ತಲೆನೋವಾಗಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆಯು ಅನಿಶ್ಚಿತವಾಗಿದ್ದು, ಅಧಿಕಾರ ಪಲ್ಲಟವು ಸರ್ವೇಸಾಮಾನ್ಯ ಸಂಗತಿಯಾಗಿಬಿಟ್ಟಿದೆ.

ಪಾಕಿಸ್ತಾನದ ಡಿಎನ್ ಎಯಲ್ಲಿ ದ್ವೇಷದ ರಾಜಕೀಯ ಬೆರೆತುಹೋಗಿದೆ. ಒಂದು ಕಾಲಕ್ಕೆ ಮೆರೆಯು ತ್ತಿದ್ದ ಜಿಯಾ-ಉಲ್ -ಹಕ್ ಅವರು, ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ನ್ಯಾಯಾಲಯದ ಮೂಲಕ ನೇಣುಗಂಬಕ್ಕೆ ಕಳುಹಿಸಿದರು. ಇವರ ಪರಸ್ಪರ ದ್ವೇಷದ ಭೀಕರತೆ ಯನ್ನು ನೆನೆದರೆ ಮೈ ‘ಜುಂ’ ಎನ್ನುತ್ತದೆ. ಇನ್ನು, 2022ರಲ್ಲಿ ಅಂದಿನ ಪ್ರಧಾನಿ ಇಮ್ರಾನ್ ಖಾನ್‌ ರನ್ನು ಕೆಳಗಿಳಿಸಿ ಜೈಲಿಗೆ ಅಟ್ಟಲಾಯಿತು.

ಇಮ್ರಾನ್‌ರು ಹೊರಗೇ ಬರಲಾಗದಷ್ಟು ಮೊಕದ್ದಮೆಗಳನ್ನು ಅವರ ಮೇಲೆ ಹಾಕಲಾಗಿದೆ. ಬಲೂಚಿ ವಿಮೋಚನಾ ಹೋರಾಟಗಾರರು ಮತ್ತು ಪಾಕಿಸ್ತಾನದ ಸೇನೆಯ ನಡುವಿನ ಸಂಘರ್ಷ ಮತ್ತು ಸಾವು-ನೋವು ದಿನನಿತ್ಯದ ಸುದ್ದಿಯಾಗಿಬಿಟ್ಟಿದೆ. ಒಟ್ಟಿನಲ್ಲಿ ಅರಾಜಕತೆಯಿಂದಾಗಿ ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗಿದೆ.

2022ರಲ್ಲಿ ಶ್ರೀಲಂಕಾ ದೇಶವು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತು. ವಿದೇಶಿ ವಿನಿಮಯ ಖಾಲಿ ಯಾಗಿ, ಇಂಧನ ಖರೀದಿಸಲೂ ಹಣವಿಲ್ಲದಂತಾಯಿತು. ಅಂದಿನ ರಾಷ್ಟ್ರಾಧ್ಯಕ್ಷ ಗೊಟಬಯ ರಾಜಪಕ್ಸೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಶುರುವಾಯಿತು. ನಾಗರಿಕರ ಉಗ್ರ ಪ್ರತಿಭಟನೆಗೆ ಬೆದರಿದ ಸಚಿವ ಸಂಪುಟದ 26 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜನಾಕ್ರೋಶವು ರಾಜಕೀಯ ನಾಯಕತ್ವದ ವಿರುದ್ಧ ತಿರುಗಿತು, ಪ್ರತಿಭಟನೆ ಹಿಂಸಾರೂಪವನ್ನು ತಳೆಯಿತು. ಪರಿಸ್ಥಿತಿ ವಿಕೋಪಕ್ಕೆ ತಲುಪಿದಾಗ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆಯಿತ್ತು, ಪ್ರಾಣ ಉಳಿದರೆ ಸಾಕೆಂದು ಮಾಲ್ಡೀವ್ಸ್‌ಗೆ ಪರಾರಿಯಾದರು. 2024ರಲ್ಲಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ಸರಕಾರದ ಮೀಸಲಾತಿ ನೀತಿಯ ವಿರುದ್ಧ ಶುರುವಾದ ವಿದ್ಯಾರ್ಥಿಗಳ ಪ್ರತಿಭಟ ನೆಯು ಹಿಂಸೆಗೆ ತಿರುಗಿತು.

ಸರಕಾರದ ವಿರುದ್ಧ ಜನರು ದಂಗೆಯೆದ್ದರು. ನೂರಾರು ಜನರ ಸಾವು ಸಂಭವಿಸಿ ಬಾಂಗ್ಲಾದೇಶ ಹೊತ್ತಿ ಉರಿಯಿತು. ದೌರ್ಭಾಗ್ಯದ ಸಂಗತಿಯೆಂದರೆ, ಆಡಳಿತಾರೂಢರ ವಿರುದ್ಧದ ಪ್ರತಿಭಟನೆಯು ಮೂಲಭೂತವಾದಿಗಳ ಹಿಡಿತಕ್ಕೆ ಸಿಕ್ಕಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮನೆ-ಮಂದಿರಗಳ ಮೇಲೆ ದಾಳಿಗಳಾದವು.

ಸಾವಿರಾರು ಹಿಂದೂಗಳು ಅಸಹಾಯಕರಾಗಿ ನಾನಾ ಸಂಕಟವನ್ನು ಅನುಭವಿಸಬೇಕಾಗಿ ಬಂತು. ಜನಾಕ್ರೋಶಕ್ಕೆ ಮಣಿದ ಪ್ರಧಾನಿ ಶೇಖ್ ಹಸೀನಾರು ದೇಶವನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆಯಬೇಕಾಗಿ ಬಂತು. ನೇಪಾಳದ ‘ಜೆನ್-ಝೆಡ್’ ಪೀಳಿಗೆಯ ಯುವಜನರು, ಅಧಿಕಾರಸ್ಥರ ಭ್ರಷ್ಟಾಚಾರ, ಅವರಿಂದ ಸೃಷ್ಟಿಯಾದ ವ್ಯಾಪಕ ನಿರುದ್ಯೋಗ ಸಮಸ್ಯೆಯಿಂದ ಬಳಲಿ ಬೆಂಡಾಗಿ ದ್ದರು.

ಅಲ್ಲಿನ ಸರಕಾರವು ಯುವಜನರ ಭಾವನೆಯನ್ನು ಕಡೆಗಣಿಸಿ, ಅವರ ದನಿಯನ್ನು ಅಡಗಿಸಲು ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿತು. ಇದರಿಂದಾಗಿ ಯುವಜನರ ಸಹನೆಯ ಕಟ್ಟೆಯೊಡೆದು, ಅವರು ಬೀದಿಗಿಳಿದು ಅತ್ಯುಗ್ರವಾಗಿ ಪ್ರತಿಭಟಿಸಿದರು. ಪ್ರತಿಭಟನೆಯು ನಿಯಂತ್ರಣ ವನ್ನು ಕಳೆದುಕೊಂಡ ಕಾರಣದಿಂದಾಗಿ ಮಾಜಿ ಉಪಪ್ರಧಾನಿಗಳ ಪತ್ನಿಯ ಜೀವಂತ ದಹನ ವಾಯಿತು.

ಹಣಕಾಸು ಸಚಿವರನ್ನು ಅಟ್ಟಾಡಿಸಿಕೊಂಡು ಹೊಡೆಯಲಾಯಿತು. ಸಂಸತ್ ಭವನ ಮತ್ತು ಸರ್ವೋಚ್ಚ ನ್ಯಾಯಾಲಯದ ಕಟ್ಟಡಗಳು ಅಗ್ನಿಗಾಹುತಿಯಾದವು. ಎರಡು ದಿನಗಳ ಹೋರಾಟವು ನೇಪಾಳದ ಇತಿಹಾಸವನ್ನೇ ಬದಲಿಸಿ ಬಿಟ್ಟಿತು. ತತ್ಪರಿಣಾಮವಾಗಿ, ಪ್ರಧಾನಿ ಕೆ.ಪಿ.ಓಲಿ ಅವರು ದೇಶವನ್ನು ತೊರೆದು ಪರಾರಿಯಾಗುವಂಥ ಪರಿಸ್ಥಿತಿ ಸೃಷ್ಟಿಯಾಯಿತು.

ಇದು ಪ್ರಸಕ್ತ ವರ್ಷದಲ್ಲಿ ನೇಪಾಳದಲ್ಲಾದ ಬೆಳವಣಿಗೆ. ಒಟ್ಟಿನಲ್ಲಿ, ಭಾರತದ ನೆರೆಹೊರೆ ದೇಶಗಳಲ್ಲಿ ಪದೇಪದೆ ರಾಜಕೀಯ ಅಸ್ಥಿರತೆ ಸಂಭವಿಸುತ್ತಿರುವುದು ದುರ್ದೈವದ ಸಂಗತಿ. ಭಾರತದ ಮೇಲೂ ಇದರ ಪ್ರಭಾವ ಉಂಟಾಗುತ್ತಿದೆ. ಅಕ್ರಮ ವಲಸಿಗರು ಪರಿಸ್ಥಿತಿಯ ದುರ್ಲಾಭ ಪಡೆದು, ಗಡಿದಾಟಿ ಬಂದು, ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿದ್ದಾರೆ.

ಹೀಗೆ ಅಕ್ರಮವಾಗಿ ನುಸುಳಿ ಬಂದವರಿಗೆ ಆಶ್ರಯ ನೀಡುವವರು ನಮ್ಮಲ್ಲಿ ಸಾಕಷ್ಟಿದ್ದಾರೆ. ವೋಟಿಗೋಸ್ಕರ ಅವರಿಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಕೊಡಿಸಲು ಕೆಲವು ರಾಜಕೀಯ ಪಕ್ಷಗಳು ಪೈಪೋಟಿಗೆ ನಿಂತಿರುವುದು ಕಟುಸತ್ಯ. ಮತದಾನದ ಮೂಲಕ ನಮ್ಮ ಹಕ್ಕು ಚಲಾಯಿಸಿ, ಅಧಿಕಾರಸ್ಥರ ಭ್ರಷ್ಟಾಚಾರ, ಸ್ವಜನಪಕ್ಷಪಾತಗಳನ್ನು ಕಿತ್ತೊಗೆದು, ಸರ್ವಾಧಿಕಾರಿ ಆಡಳಿತಗಳನ್ನು ಬದಲಾಯಿಸುವ ಸುಸಂಸ್ಕೃತಿಯ ನಾಡು ನಮ್ಮದು.

1977ರಲ್ಲಿ, ಇಂದಿರಾ ಗಾಂಧಿಯವರ ದಮನಕಾರಿ ಸರಕಾರವನ್ನು ಮತದಾನದ ಮೂಲಕ ಗುಡಿಸಿ ಬಿಸಾಡಲಾಯಿತು. ಆದರೆ ಅದೇ ಜನರು 1980ರಲ್ಲಿ, ದೇಶದ ಹಿತವನ್ನು ಕಡೆಗಣಿಸಿ ಕಚ್ಚಾಟದಲ್ಲಿ ತೊಡಗಿ ರಾಜಕೀಯ ಅಸ್ಥಿರತೆಯನ್ನು ಹುಟ್ಟುಹಾಕಿದ್ದ ಜನತಾಪಾರ್ಟಿಯ ಸರಕಾರವನ್ನು ಕಿತ್ತೆಸೆದು, ತಾವೇ ದೂರ ತಳ್ಳಿದ್ದ ಇಂದಿರಾ ಗಾಂಧಿಯವರನ್ನು ಮತ್ತೆ ಅಧಿಕಾರಕ್ಕೆ ತಂದರು.

2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿತ್ತು, ಭಯೋತ್ಪಾದಕರ ಉಪಟಳವನ್ನು ನಿಯಂತ್ರಿಸಲು ಸೋತಿತ್ತು. ವಸೂಲಾಗದ ಸಾಲದ ಪ್ರಮಾಣವು ಮೇರೆ ಮೀರಿ, ಆರ್ಥಿಕ ಸಂಕಟ ತೀವ್ರವಾಗಿ, ಬ್ಯಾಂಕಿಂಗ್ ವ್ಯವಸ್ಥೆಯು ಕುಸಿಯುವ ಹಂತಕ್ಕೆ ತಲುಪಿದಾಗ, 2014ರ ಲೋಕಸಭಾ ಚುನಾವಣೆಯಲ್ಲಿ ಜನರು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವನ್ನು ಅಽಕಾರಕ್ಕೆ ತಂದರು.

ಕಾಂಗ್ರೆಸ್ಸಿಗರು ಮತ್ತು ‘ಮೋದಿ-ವಿರೋಧಿ’ ಶಕ್ತಿಗಳು, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಯನ್ನು ಮಣಿಸಲು ಹರಸಾಹಸಪಟ್ಟು ಅಕ್ಷರಶಃ ದಿಕ್ಕೆಟ್ಟವರಾಗಿದ್ದಾರೆ. ಅವರು ಉರುಳಿಸಿದ ದಾಳಗಳು ಅವರಿಗೇ ಉರುಳಾಗಿ ಪರಿಣಮಿಸಿವೆ. ಮೋದಿಯವರನ್ನು ಕಟ್ಟಿಹಾಕಲು ಹೂಡಿದ ತಂತ್ರಗಾರಿಕೆಗಳೇ ಮೋದಿಯವರನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ. ಯಾವುದೇ ಕುತಂತ್ರ, ಷಡ್ಯಂತ್ರಗಳು ಮೋದಿಯವರ ಸರಕಾರವನ್ನು ಅಲುಗಾಡಿಸಲು ವಿಫಲವಾಗಿವೆ.

ಹೀಗಾಗಿ ‘ಮೋದಿ-ವಿರೋಧಿ’ ಶಕ್ತಿಗಳು ಮಣಿಸುವ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಇದೀಗ ಅವರು ಮೋದಿ ಯವರ ವಿರುದ್ಧ ಮತ್ತೊಂದು ತಂತ್ರಗಾರಿಕೆಯನ್ನು ಹೆಣೆದಿದ್ದಾರೆ. ಭ್ರಷ್ಟಾಚಾರ, ದುರಾ ಡಳಿತ ಮುಂತಾದ ಕಾರಣಗಳಿಂದಾಗಿ ನೆರೆರಾಷ್ಟ್ರಗಳಲ್ಲಿ ಅಲ್ಲಿನ ಜನರು ಸರಕಾರದ ವಿರುದ್ಧ ಬಂಡಾಯವೆದ್ದರೆ, ಇವರು ಕೂಡಲೇ ಮುಗಿಬಿದ್ದು ‘ಮುಂದಿನ ಸರದಿ ಭಾರತದ್ದು’ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ ಅಪಪ್ರಚಾರ ಮಾಡಿ, ಬಂಡಾಯವೇಳಲು ಜನರನ್ನು ಪ್ರಚೋದಿ ಸುವ ಅಪಾಯಕಾರಿ ಚಟುವಟಿಕೆಗೆ ಮುಂದಾಗಿದ್ದಾರೆ. ಲ eನವಿದ್ದರಷ್ಟೇ ಸಾಲದು, ಜನಕನಂತೆ ಪ್ರೌಢತೆ- ಮೆಚ್ಯುರಿಟಿ ಬೆಳೆಸಿಕೊಳ್ಳಬೇಕು.