ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಲಕ್ಷ್ಮಣ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ?

ತಮ್ಮ ವೃತ್ತಿಜೀವನದ ಉತ್ತರಾರ್ಧದಲ್ಲಿ ಅವರು ರಾಜಕಾರಣಿಗಳ ವ್ಯಂಗ್ಯಚಿತ್ರ ಗಳನ್ನು ಬಿಡಿಸುವ ಬಗ್ಗೆ ಒಂದು ವಿಶಿಷ್ಟ ಮತ್ತು ತುಸು ಬೇಸರದ ಮಾತನ್ನಾಡಿದ್ದರು. ‘ರಾಜಕಾರಣಿಗಳು ತಾವೇ ಸ್ವತಃ ಕಾರ್ಟೂನ್‌ಗಳಂತೆ ವರ್ತಿಸಲು ಶುರುಮಾಡಿದ ಮೇಲೆ, ನಾನು ಅವರ ವ್ಯಂಗ್ಯಚಿತ್ರ ಬಿಡಿಸುವುದನ್ನು ನಿಲ್ಲಿಸಿದೆ’ ಎಂಬುದು ಅವರ ಮಾರ್ಮಿಕ ನುಡಿಯಾಗಿತ್ತು.

ಸಂಪಾದಕರ ಸದ್ಯಶೋಧನೆ

ಖ್ಯಾತ ಕಾರ್ಟೂನಿಸ್ಟ್ ಆರ್.ಕೆ.ಲಕ್ಷ್ಮಣ್ ಅವರು ಭಾರತೀಯ ರಾಜಕಾರಣದ ನಾಡಿಮಿಡಿತ‌ ವನ್ನು ಅರಿತಿದ್ದವರು. ದಶಕಗಳ ಕಾಲ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಮುಖಪುಟ ದಲ್ಲಿ ’You Said It’ ಅಂಕಣದ ಮೂಲಕ ಸಾಮಾನ್ಯ ಮನುಷ್ಯನ ಧ್ವನಿಯಾಗಿದ್ದರು.

ಆದರೆ, ತಮ್ಮ ವೃತ್ತಿಜೀವನದ ಉತ್ತರಾರ್ಧದಲ್ಲಿ ಅವರು ರಾಜಕಾರಣಿಗಳ ವ್ಯಂಗ್ಯಚಿತ್ರ ಗಳನ್ನು ಬಿಡಿಸುವ ಬಗ್ಗೆ ಒಂದು ವಿಶಿಷ್ಟ ಮತ್ತು ತುಸು ಬೇಸರದ ಮಾತನ್ನಾಡಿದ್ದರು. ‘ರಾಜಕಾರಣಿಗಳು ತಾವೇ ಸ್ವತಃ ಕಾರ್ಟೂನ್‌ಗಳಂತೆ ವರ್ತಿಸಲು ಶುರುಮಾಡಿದ ಮೇಲೆ, ನಾನು ಅವರ ವ್ಯಂಗ್ಯಚಿತ್ರ ಬಿಡಿಸುವುದನ್ನು ನಿಲ್ಲಿಸಿದೆ’ ಎಂಬುದು ಅವರ ಮಾರ್ಮಿಕ ನುಡಿಯಾಗಿತ್ತು.

ಲಕ್ಷ ಣ್ ಪ್ರಕಾರ, ವ್ಯಂಗ್ಯಚಿತ್ರ ಕಲೆ ಎಂಬುದು ವ್ಯಕ್ತಿಯೊಬ್ಬನ ಗುಣಲಕ್ಷಣಗಳನ್ನು ಅಥವಾ ನಡೆವಳಿಕೆಯನ್ನು ಉತ್ಪ್ರೇಕ್ಷಿಸಿ, ತೋರಿಸುವ ಕಲೆ. ಒಬ್ಬ ರಾಜಕಾರಣಿ ಗಂಭೀರವಾಗಿರು ವಾಗ ಅವರಲ್ಲಿರುವ ಸಣ್ಣಪುಟ್ಟ ವಿಚಿತ್ರಗಳನ್ನು ಹೆಕ್ಕಿ ತೆಗೆದು ಚಿತ್ರಿಸುವುದು ವ್ಯಂಗ್ಯ ಚಿತ್ರಕಾರನ ಜಾಣ್ಮೆ. ಆದರೆ, ರಾಜಕಾರಣಿಗಳ ಮಾತು, ಕೃತಿ ಮತ್ತು ನಡವಳಿಕೆಗಳೇ ಎಷ್ಟು ಹಾಸ್ಯಾಸ್ಪದವಾಗಿವೆ ಎಂದರೆ, ಅವುಗಳನ್ನು ಮತ್ತಷ್ಟು ಉತ್ಪ್ರೇಕ್ಷಿಸಲು ವ್ಯಂಗ್ಯಚಿತ್ರಕಾರ ನಿಗೆ ಜಾಗವೇ ಇಲ್ಲದಂತಾಗಿದೆ. ಅಂದರೆ, ವಾಸ್ತವವೇ ವ್ಯಂಗ್ಯಕ್ಕಿಂತ ಮಿಗಿಲಾಗಿ ಬೆಳೆದಿದೆ ಎಂಬುದು ಅವರ ಆತಂಕವಾಗಿತ್ತು.

ಇದನ್ನೂ ಓದಿ: Vishweshwar Bhat Column: ಕ್ರಿಶ್ಚಿಯನ್ ಮುಖ್ಯಮಂತ್ರಿಗಳು

ರಾಜಕೀಯ ಕ್ಷೇತ್ರವು ಹಿಂದೆ ಒಂದು ಘನತೆಯನ್ನು ಹೊಂದಿತ್ತು. ನೆಹರು, ಶಾಸ್ತ್ರಿ ಅಥವಾ ಇಂದಿರಾ ಗಾಂಧಿಯವರ ಕಾಲದಲ್ಲಿ ರಾಜಕಾರಣಿಗಳು ಒಂದು ತತ್ವಕ್ಕೆ ಬದ್ಧರಾಗಿದ್ದರು. ಆಗ ಅವರ ನೀತಿಗಳನ್ನು ಟೀಕಿಸಲು ಕಾರ್ಟೂನ್‌ಗಳು ಪ್ರಬಲ ಅಸ್ತ್ರವಾಗಿದ್ದವು. ಜವಾಹರ ಲಾಲ್ ನೆಹರು ಅವರಂತೂ ಲಕ್ಷ ಣ್ ಅವರ ಕಾರ್ಟೂನ್‌ಗಳನ್ನು ನೋಡಿ ಆನಂದಿಸು ತ್ತಿದ್ದರು ಮತ್ತು ‘ನನ್ನನ್ನು ಬಿಡಬೇಡಿ, ಇನ್ನೂ ಚೆನ್ನಾಗಿ ಟೀಕಿಸಿ’ ಎಂದು ಪ್ರೋತ್ಸಾಹಿಸು ತ್ತಿದ್ದರು.

ಆದರೆ ಕಾಲಾನಂತರದಲ್ಲಿ ರಾಜಕೀಯದ ಗುಣಮಟ್ಟ ಕುಸಿಯಿತು. ಸಂಸತ್ತಿನಲ್ಲಿ ನಡೆಯು ವ ಗದ್ದಲಗಳು, ರಾಜಕಾರಣಿಗಳ ಹಗುರವಾದ ಹೇಳಿಕೆಗಳು ತಾವಾಗಿಯೇ ಪ್ರಹಸನ ಗಳಂತಾದವು. ಒಬ್ಬ ಕಾರ್ಟೂನಿಸ್ಟ್‌ಗೆ ಸೃಜನಶೀಲತೆ ಮುಖ್ಯ. ಆದರೆ ಸಮಾಜದಲ್ಲಿ ಅಥವಾ ರಾಜಕೀಯದಲ್ಲಿ ಸಂಭವಿಸುವ ಘಟನೆಗಳು ಈಗಾಗಲೇ ‘ಕ್ಯಾರಿಕೇಚರ್’ ರೂಪದಲ್ಲಿದ್ದರೆ, ಅಲ್ಲಿ ಕಲೆಗೆ ಮಿತಿಯಿರುತ್ತದೆ.

ಆರ್.ಕೆ.ಲಕ್ಷ್ಮಣ್ ಅವರು ಗಮನಿಸಿದಂತೆ, ರಾಜಕಾರಣಿಗಳು ಅಽಕಾರಕ್ಕಾಗಿ ಪಕ್ಷಾಂತರ ಮಾಡುವುದು, ಸದನದಲ್ಲಿ ವರ್ತಿಸುವ ರೀತಿ ಮತ್ತು ಸಾರ್ವಜನಿಕವಾಗಿ ನೀಡುವ ತರ್ಕ ಹೀನ ಹೇಳಿಕೆಗಳು ಜನರಲ್ಲಿ ನಗು ಉಕ್ಕಿಸುತ್ತಿದ್ದವು. ಈ ‘ಜೀವಂತ ಕಾರ್ಟೂನ್’ಗಳ ಮುಂದೆ ಪೆನ್ನಿನಿಂದ ಬಿಡಿಸುವ ಚಿತ್ರಗಳು ಮಸುಕಾಗತೊಡಗಿದವು.

ಲಕ್ಷ್ಮಣ್ ಈ ಹೇಳಿಕೆಯ ಹಿಂದೆ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ಹತಾಶೆಯೂ ಇತ್ತು. ವ್ಯಂಗ್ಯಚಿತ್ರ ಎಂಬುದು ಕೇವಲ ನಗಿಸುವುದಲ್ಲ, ಅದು ವ್ಯವಸ್ಥೆಯನ್ನು ತಿದ್ದುವ ಕನ್ನಡಿ ಯಾಗಬೇಕು. ಆದರೆ ಕನ್ನಡಿ ತೋರಿಸಿದರೂ ಬದಲಾಗದ ಅಥವಾ ಕನ್ನಡಿಯನ್ನೇ ಹಾಸ್ಯ ಮಾಡುವಂಥ ಸ್ಥಿತಿ ನಿರ್ಮಾಣವಾದಾಗ ಕಲಾವಿದನಿಗೆ ನಿರಾಸಕ್ತಿಯುಂಟಾಗುವುದು ಸಹಜ.

ರಾಜಕಾರಣಿಗಳು ತಮ್ಮ ಘನತೆಯನ್ನು ಕಳೆದುಕೊಂಡು ಕೇವಲ ಪ್ರಚಾರಕ್ಕಾಗಿ ಹಾಸ್ಯಾ ಸ್ಪದವಾಗಿ ವರ್ತಿಸುವುದು ಪ್ರಜಾಪ್ರಭುತ್ವದ ದುರಂತ ಎಂದು ಅವರು ಭಾವಿಸಿದ್ದರು. ಲಕ್ಷ್ಮಣ್ ಅವರ ‘ಕಾಮನ್ ಮ್ಯಾನ್’ ಸದಾ ಮೌನವಾಗಿರುತ್ತಿದ್ದ. ಆತ ಎಲ್ಲವನ್ನೂ ಗಮನಿಸುವ ಪ್ರೇಕ್ಷಕ ಮಾತ್ರ. ರಾಜಕಾರಣಿಗಳು ಕಾರ್ಟೂನ್ʼಗಳಾದಾಗ ಈ ಸಾಮಾನ್ಯ ಮನುಷ್ಯನ ಸ್ಥಿತಿ ಗಂಭೀರವಾಯಿತು.

ಸಮಾಜದಲ್ಲಿ ಗಂಭೀರ ಚರ್ಚೆಯಾಗಬೇಕಾದ ವಿಷಯಗಳು ಹಾಸ್ಯದ ವಸ್ತುವಾದಾಗ, ದೇಶದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದ ಲಕ್ಷ್ಮಣ್ ಅವರಿಗೆ ಕಾರ್ಟೂನ್ ಬಿಡಿಸುವುದು ಕೇವಲ ವೃತ್ತಿಯಾಗಿ ಉಳಿಯಲಿಲ್ಲ. ಅದು ಅರ್ಥಹೀನವೆನಿಸಲು ಶುರುವಾಯಿತು. ಕಾರ್ಟೂನ್ ಎನ್ನುವುದು ಬುದ್ಧಿವಂತರ ಆಟ. ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಅದರಲ್ಲಿರುವ ಟೀಕೆಯನ್ನು ಸ್ವೀಕರಿಸಲು ಕನಿಷ್ಠ ಮಟ್ಟದ ಬೌದ್ಧಿಕ ಪ್ರೌಢಿಮೆ ಬೇಕು.

ಆದರೆ ರಾಜಕೀಯ ಅತಿರೇಕಕ್ಕೆ ಹೋದಾಗ, ಅಲ್ಲಿ ತರ್ಕಕ್ಕಿಂತ ಅಸಂಬದ್ಧತೆಯೇ ಜಾಸ್ತಿ ಯಾದಾಗ ವ್ಯಂಗ್ಯಚಿತ್ರಕಾರ ಸೋಲುತ್ತಾನೆ. ‘ರಾಜಕಾರಣಿಗಳು ತಾವೇ ಕಾರ್ಟೂನ್ ಆದರು’ ಎಂಬ ಮಾತಿನ ಅರ್ಥ, ರಾಜಕೀಯದಲ್ಲಿ ಗಾಂಭೀರ್ಯ ನಾಪತ್ತೆಯಾಗಿದೆ ಮತ್ತು ಅದು ಕೇವಲ ಒಂದು ಪ್ರದರ್ಶನ ಕಲೆಯಾಗಿ ಬದಲಾಗಿದೆ ಎಂಬುದು.

ಲಕ್ಷ್ಮಣ್ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸ ಲಿಲ್ಲ. ಅವರ ಟೀಕೆಗಳು ಯಾವಾಗಲೂ ವ್ಯವಸ್ಥೆಯ ಲೋಪದೋಷಗಳ ಮೇಲೆ ಇರು ತ್ತಿದ್ದವು. ಆದರೆ ರಾಜಕಾರಣದಲ್ಲಿ ವ್ಯಕ್ತಿತ್ವಗಳೇ ಹಾಸ್ಯಾಸ್ಪದವಾಗಿ ಮಾರ್ಪಟ್ಟಾಗ, ಅವರಿಗೆ ವಿಷಯಗಳ ಕೊರತೆಗಿಂತ ಹೆಚ್ಚಾಗಿ ‘ಗುಣಮಟ್ಟದ’ ವಿಷಯಗಳ ಕೊರತೆ ಕಾಡಿತು. ಅತಿರೇಕವೇ ವಾಸ್ತವವಾದಾಗ, ಉತ್ಪ್ರೇಕ್ಷೆಗೆ ಅರ್ಥವಿರುವುದಿಲ್ಲ ಎಂಬುದು ಅವರ ಸಿದ್ಧಾಂತವಾಗಿತ್ತು.

ವಿಶ್ವೇಶ್ವರ ಭಟ್‌

View all posts by this author