ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಕ್ರಿಶ್ಚಿಯನ್ ಮುಖ್ಯಮಂತ್ರಿಗಳು

‘ತಮಿಳುನಾಡಿನ ಪ್ರಪ್ರಥಮ ಕ್ರಿಶ್ಚಿಯನ್ ಮುಖ್ಯಮಂತ್ರಿ’ ಎಂದಿದ್ದರೆ ಒಪ್ಪಿಕೊಳ್ಳಬಹು ದಿತ್ತು. ಆದರೆ ಭಾರತದಲ್ಲಿಯೇ, ಕ್ರಿಶ್ಚಿಯನ್ ಸಮುದಾಯದ ನಾಯಕ ರೊಬ್ಬರು ಮುಖ್ಯಮಂತ್ರಿ ಆಗುತ್ತಿರುವುದು ಇದು ಮೊದಲೂ ಅಲ್ಲ, ಎರಡನೆಯದೂ ಅಲ್ಲ. ಈ ಮೊದಲು ಸಾಕಷ್ಟು ಮಂದಿ ಕ್ರಿಶ್ಚಿಯನ್ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ.

Vishweshwar Bhat Column: ಕ್ರಿಶ್ಚಿಯನ್ ಮುಖ್ಯಮಂತ್ರಿಗಳು

-

ಸಂಪಾದಕರ ಸದ್ಯಶೋಧನೆ

ತಮಿಳುನಾಡಿನಲ್ಲಿ ಸಿನಿಮಾ ನಟ ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಆಯ್ಕೆ‌ ಯಾದಾಗ, ಕೆಲವು ಟಿವಿ ನ್ಯೂಸ್ ಚಾನೆಲ್‌ಗಳು ಹಿಂದೆ-ಮುಂದೆ ನೋಡದೇ, ‘ಕ್ರಿಶ್ಚಿಯನ್ ಸಮುದಾಯದವರೊಬ್ಬರು ಭಾರತದಲ್ಲಿ ಮುಖ್ಯಮಂತ್ರಿ ಆಗುತ್ತಿರುವುದು ಇದೇ ಮೊದಲು’ ಎಂಬ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿದರು.

‘ತಮಿಳುನಾಡಿನ ಪ್ರಪ್ರಥಮ ಕ್ರಿಶ್ಚಿಯನ್ ಮುಖ್ಯಮಂತ್ರಿ’ ಎಂದಿದ್ದರೆ ಒಪ್ಪಿಕೊಳ್ಳಬಹು ದಿತ್ತು. ಆದರೆ ಭಾರತದಲ್ಲಿಯೇ, ಕ್ರಿಶ್ಚಿಯನ್ ಸಮುದಾಯದ ನಾಯಕ ರೊಬ್ಬರು ಮುಖ್ಯಮಂತ್ರಿ ಆಗುತ್ತಿರುವುದು ಇದು ಮೊದಲೂ ಅಲ್ಲ, ಎರಡನೆಯದೂ ಅಲ್ಲ. ಈ ಮೊದಲು ಸಾಕಷ್ಟು ಮಂದಿ ಕ್ರಿಶ್ಚಿಯನ್ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ.

ಎ.ಜೆ.ಜಾನ್ (ಅನಪರಂಬಿಲ್ ಜೋಸೆಫ್ ಜಾನ್) ಅವರು ಭಾರತದ ರಾಜಕೀಯ ಇತಿಹಾಸ‌ ದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ನಾಯಕರೆಂದು ಕರೆಯಿಸಿಕೊಂಡವರು. ಅವರು ಕೇರಳದ ಹಳೆಯ ‘ತಿರು-ಕೊಚ್ಚಿ’ (ತಿರುವಾಂಕೂರು -ಕೊಚಿನ್) ರಾಜ್ಯದ ಮುಖ್ಯಮಂತ್ರಿ ಯಾಗಿ ಮತ್ತು ಮದ್ರಾಸ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದು ಅನೇಕರಿಗೆ ಗೊತ್ತಿರಬಹುದು.

ಇದನ್ನೂ ಓದಿ: Vishweshwar Bhat Column: ಜೇವಾಕರ್ ಎಂದರೇನು ?

1952ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳ ನಂತರ, ತಿರು- ಕೊಚ್ಚಿ ರಾಜ್ಯದ (ಇಂದಿನ ಕೇರಳದ ಬಹುಭಾಗ) ಮುಖ್ಯಮಂತ್ರಿಯಾಗಿ ಎ.ಜೆ.ಜಾನ್ ಅಧಿಕಾರ ಸ್ವೀಕರಿಸಿದರು. ಆ ಮೂಲಕ ಅವರು ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಕ್ರಿಶ್ಚಿಯನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದಿನ ರಾಜಕೀಯ ಅಸ್ಥಿರತೆಯಿಂದಾಗಿ ಅವರ ಸರಕಾರವು ದೀರ್ಘಕಾಲ ಉಳಿಯಲಿಲ್ಲ.

1953ರಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಮುಖ್ಯಮಂತ್ರಿ ಸ್ಥಾನದ ನಂತರ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟರು. 1956ರಲ್ಲಿ ಭಾರತದ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಸಮ ಯದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

1957ರಲ್ಲಿ ಅವರನ್ನು ಮದ್ರಾಸ್ (ಈಗಿನ ತಮಿಳುನಾಡು) ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ದುರದೃಷ್ಟವಶಾತ್, ಅಧಿಕಾರದಲ್ಲಿರುವಾಗಲೇ ಅಂದರೆ 1957ರ ಅಕ್ಟೋಬರ್‌ನಲ್ಲಿ ಅವರು ನಿಧನರಾದರು. ಭಾರತದಂಥ ಬಹುಧರ್ಮೀಯ ದೇಶದಲ್ಲಿ ಒಬ್ಬ ಅಲ್ಪಸಂಖ್ಯಾತ ಸಮುದಾಯದ ನಾಯಕ ಮೊದಲ ಬಾರಿಗೆ ರಾಜ್ಯವೊಂದರ ಮುಖ್ಯ ಮಂತ್ರಿಯಾಗಿ ಯಶಸ್ವಿ ಯಾಗಬಹುದು ಎಂಬುದನ್ನು ಅವರು ಆ ದಿನಗಳ ಸಾಬೀತುಪಡಿಸಿ ದರು.

ಭಾರತದ ಎರಡನೇ ಕ್ರಿಶ್ಚಿಯನ್ ಮುಖ್ಯಮಂತ್ರಿ ವಿಲಿಯಂಸನ್ ಎ.ಸಂಗ್ಮಾ. ಇವರು ಮೇಘಾಲಯ ರಾಜ್ಯದ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಆ ರಾಜ್ಯದ ಮೊದಲ ಮುಖ್ಯ ಮಂತ್ರಿ ಕೂಡ ಹೌದು. 1970ರಲ್ಲಿ ಮೇಘಾಲಯ ಸ್ವಾಯತ್ತ ರಾಜ್ಯವಾದಾಗ ಅವರು ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ನಂತರ ಒಟ್ಟು ನಾಲ್ಕು ಬಾರಿ ವಿವಿಧ ಅವಧಿಗಳಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಎ.ಜೆ.ಜಾನ್ 1952ರ ಮುಖ್ಯ ಮಂತ್ರಿಯಾದ ನಂತರ ಸುಮಾರು 18 ವರ್ಷಗಳ ಕಾಲ ಭಾರತದಲ್ಲಿ ಬೇರೆ ಯಾರೂ ಕ್ರಿಶ್ಚಿಯನ್ ಸಮುದಾಯದಿಂದ ಮುಖ್ಯಮಂತ್ರಿಯಾಗಿರಲಿಲ್ಲ. ಭಾರತದ ರಾಜಕೀಯ ಇತಿಹಾಸದಲ್ಲಿ ಕ್ರಿಶ್ಚಿಯನ್ ಸಮುದಾಯದಿಂದ ಬಂದ ಅನೇಕ ನಾಯಕರು ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಮುಖ್ಯವಾಗಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಈ ಸಮುದಾಯದ ಪ್ರಾತಿನಿಧ್ಯ ಹೆಚ್ಚಿದೆ. ಇದುವರೆಗೆ ಭಾರತದಲ್ಲಿ ಮುಖ್ಯಮಂತ್ರಿಯಾದ ಪ್ರಮುಖ ಕ್ರಿಶ್ಚಿಯನ್ ನಾಯಕರೆಂದರೆ, ಕೇರಳದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ ಎ.ಕೆ.ಆಂಟನಿ, ಕೇರಳದ ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ನಡೆಸಿದ ಉಮ್ಮನ್ ಚಾಂಡಿ, ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇ ಖರ ರೆಡ್ಡಿ, ಅನಂತರ ಅವರ ಮಗ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಗೋವಾದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ ವಿಲ್ರೆಡ್ ಡಿಸೋಜಾ, ಗೋವಾದ ಮತ್ತೊಬ್ಬ ಮುಖ್ಯಮಂತ್ರಿ ಲೂಯಿಜಿನ್ ಫಲೇ ರೋ, ಮೇಘಾಲಯದ ಮುಖ್ಯಮಂತ್ರಿಯಾಗಿದ್ದ (ಲೋಕಸಭಾ ಸ್ಪೀಕರ್ ಕೂಡ ಆಗಿದ್ದರು) ಪಿ.ಎ.ಸಂಗ್ಮಾ, ಮೇಘಾಲಯದ ಮುಖ್ಯಮಂತ್ರಿಯಾಗಿದ್ದ ಡಿ.ಡಿ.ಲಪಾಂಗ್, ಸಿಸಿಲ್ ಸಂಗ್ಮಾ, ಮುಕುಲ್ ಸಂಗ್ಮಾ, ಕಾನ್ರಾಡ್ ಸಂಗ್ಮಾ, ನಾಗಾಲ್ಯಾಂಡ್ ಮೊದಲ ಮುಖ್ಯಮಂತ್ರಿ ಪಿ.ಶಿಲು ಆವೋ, ನೆಫಿಯು ರಿಯೋ, ಮಿಜೋರಾಂ ಮೊದಲ ಮುಖ್ಯಮಂತ್ರಿ ಎಲ್.ಚಾ.ಚುಂಗಾ, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಲಲ್ ಥನ್ಹಾವ್ಲ, ಮತ್ತೊಬ್ಬ ಮಾಜಿ ಸಿಎಂ ಜೋರಾಮ್ಥಂಗ ಹಾಗೂ ಲಾಲ್ದುಹೋಮ ಕೂಡ ಈ ಪಟ್ಟಿಯಲ್ಲಿದ್ದಾರೆ. ಚಂದ್ರಶೇಖರ ಜೋಸೆಫ್ ವಿಜಯ್ ಅವರಿಗಿಂತ ಮುಂಚೆ ಇಷ್ಟೆಲ್ಲ ಮಂದಿ ಕ್ರಿಶ್ಚಿಯನ್ ಧರ್ಮದ ನಾಯಕರು ಮುಖ್ಯಮಂತ್ರಿ ಆಗಿದ್ದಾರೆ.