Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್ ಸ್ಲ್ಯಾಬ್ ಇರುವುದೇತಕ್ಕೆ ?!
ಯಾವಾಗ ತೆರಿಗೆ ಪದ್ಧತಿಯಲ್ಲಿ ಗಣನೀಯ ಬದಲಾವಣೆ ಆಗುತ್ತದೆಯೋ, ಆವಾಗ ಮಾರ್ಜಿನಲ್ ರಿಲೀಫ್ ಅನ್ವಯವಾಗುತ್ತದೆ. ಇದರ ಉದ್ದೇಶ ತೆರಿಗೆಯನ್ನು ನ್ಯಾಯಬದ್ಧಗೊಳಿಸುವುದು. ಇಲ್ಲಿ ಹೆಚ್ಚುವರಿ ಆದಾ ಯಕ್ಕೆ ಮಾತ್ರ ತೆರಿಗೆ ಅನ್ವಯ ವಾಗುತ್ತದೆ
ಮನಿ ಮೈಂಡೆಡ್
ಕೇಶವ ಪ್ರಸಾದ್ ಬಿ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಳೆದ ಕೆಲವು ವರ್ಷಗಳಿಂದೀ ಚೆಗೆ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಟೀಕಿಸಲಾಗುತ್ತಿತ್ತು. ಇತ್ತೀಚೆಗೆ ಬಿಗ್ ಬಾಸ್ ಅಭ್ಯರ್ಥಿ 50 ಲಕ್ಷ ರುಪಾಯಿ ಬಹುಮಾನವನ್ನು ಗಳಿಸಿದಾಗ, ಅದರಲ್ಲಿ 15 ಲಕ್ಷ ರುಪಾಯಿ ತೆರಿಗೆ ಕಡಿತವಾಗುವು ದರಿಂದ ನಿರ್ಮಲಾ ಸೀತಾರಾಮನ್ ಅವರೇ ಬಹುಮಾನ ಗೆದ್ದ ಎರಡನೇ ಅಭ್ಯರ್ಥಿ ಎಂದು ಟೀಕಿಸ ಲಾಗಿತ್ತು. ಆದರೆ 2025-26ರ ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ರಾತ್ರೊರಾತ್ರಿ ಚಿತ್ರಣ ಬದಲಾಗಿದೆ. ನಿರ್ಮಲಾ ಸೀತಾರಾಮನ್ ಅವರನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿಗೆ ಹೋಲಿಸಲಾಗಿದೆ. ಮಧ್ಯಮ ವರ್ಗದ ಜನತೆಗೆ ವಾರ್ಷಿಕ 12 ಲಕ್ಷ ರುಪಾಯಿ ತನಕ ಆದಾಯಕ್ಕೆ ತೆರಿಗೆ ಇರುವುದಿಲ್ಲ ಎಂಬ ಘೋಷಣೆ ಸಂಚಲನ ಮೂಡಿಸಿದೆ.
ವೇತನದಾರರಿಗೆ 12.75 ಲಕ್ಷ ರುಪಾಯಿ ತನಕ ಆದಾಯ ತೆರಿಗೆ ಮುಕ್ತವಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಆದಾಯ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರುಪಾಯಿಗಳಿಂದ 12 ಲಕ್ಷ ರುಪಾಯಿ ತನಕ ರಿಬೇಟ್ ಮಿತಿಯನ್ನು ಹೈಜಂಪ್ ಮಾಡಿಸಲಾಗಿದೆ. ಆದ್ದರಿಂದ ಎಲ್ಲೂ ಇದರದ್ದೇ ಸುದ್ದಿ. ಆದರೆ ಸಹಜವಾಗಿ ಹಲವಾರು ಪ್ರಶ್ನೆಗಳೂ, ಗೊಂದಲಗಳೂ ಇವೆ. ಅವುಗಳನ್ನು ಒಂದೊಂದಾಗಿ ಅರ್ಥ ವಾಗುವಂತೆ ಡಿಕೋಡ್ ಮಾಡೋಣ.ಮೊದಲನೆಯದಾಗಿ, ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರುಪಾಯಿ ತನಕ ಆದಾಯ ತೆರಿಗೆ ಇಲ್ಲ ಎಂದ ಮೇಲೆ, 4 ಲಕ್ಷ ರುಪಾಯಿಗಿಂತ ಹೆಚ್ಚಿನ ಆದಾಯಕ್ಕೆ ತೆರಿಗೆಯ ಸ್ಲ್ಯಾಬ್‌ಗಳು ಅನ್ವಯವಾಗುವುದೇಕೆ? 4 ಲಕ್ಷದಿಂದ 8 ಲಕ್ಷದ ತನಕ ಶೇಕಡಾ 5, 6 ಲಕ್ಷ ದಿಂದ 12 ಲಕ್ಷದ ತನಕ ಶೇಕಡಾ 10 ತನಕ ತೆರಿಗೆಯ ಸ್ಲ್ಯಾಬ್ಗಳು ಇರುವುದೇತಕ್ಕೆ? ಎಂಬ ಪ್ರಶ್ನೆ ಕೆಲವರದ್ದು. (ಹೊಸ ತೆರಿಗೆ ಪದ್ಧತಿಯಲ್ಲಿ 16 ಲಕ್ಷದಿಂದ 20 ಲಕ್ಷದ ತನಕ ಶೇಕಡಾ 20 ಮತ್ತು 20 ಲಕ್ಷದಿಂದ 24 ಲಕ್ಷದ ತನಕ ಶೇಕಡಾ 25 ಹಾಗೂ 24 ಲಕ್ಷದ ಮೇಲ್ಪಟ್ಟು ಆದಾಯಕ್ಕೆ ಶೇಕಡಾ 30 ತೆರಿಗೆ ಇದೆ. ಎಲ್ಲರ ಆದಾಯ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ವರ್ಷಕ್ಕೆ 8 ಲಕ್ಷ ಇರಬಹುದು, ಇನ್ನು ಕೆಲವರಿಗೆ 10, 12, 15, 20 ಹೀಗೆ ಬೇರೆ ಬೇರೆ ಸ್ತರದಲ್ಲಿ ಇರಬಹುದು.
ಇದನ್ನೂ ಓದಿ: Keshav Prasad B Column: ವೇದೋಪನಿಷತ್ತುಗಳ ಸ್ವಾರಸ್ಯಗಳು
ಆದ್ದರಿಂದಲೇ 4 ಲಕ್ಷದಿಂದ 24 ಲಕ್ಷದ ತನಕದ ಆದಾಯ ಇರುವವರಿಗೆ ತೆರಿಗೆಯ ಶ್ರೇಣಿಗಳೂ ಭಿನ್ನವಾಗಿದೆ. ಎಲ್ಲರಿಗೂ ಒಂದೇ ರೀತಿಯ ತೆರಿಗೆ ಹಾಕಿದರೆ ನ್ಯಾಯಸಮ್ಮತವಲ್ಲ. ಎರಡನೆಯದಾಗಿ ಹೊಸ ತೆರಿಗೆ ಪದ್ಧತಿಯಲ್ಲಿ ವರ್ಷಕ್ಕೆ 12 ಲಕ್ಷ ರುಪಾಯಿಗಿಂತ ಕಡಿಮೆ ಆದಾಯ ಇರುವವರಿಗೆ, ಟ್ಯಾಕ್ಸ್ ರಿಬೇಟ್ ಅನ್ನು ಘೋಷಿಸಲಾಗಿದೆ. ಈ ಹಿಂದೆ 7 ಲಕ್ಷ ರುಪಾಯಿ ತನಕದ ಆದಾಯಕ್ಕೆ 25000 ರುಪಾಯಿಗಳ ರಿಬೇಟ್ ಇದ್ದುದರಿಂದ ಅಷ್ಟು ಅದಾಯಕ್ಕೆ ತೆರಿಗೆ ಕಟ್ಟಬೇಕಿರುತ್ತಿರಲಿಲ್ಲ.
ಈಗ ರಿಬೇಟ್ಪಡೆಯಲು ಆದಾಯ ಮಿತಿಯನ್ನು 12 ಲಕ್ಷಕ್ಕೆ ವಿಸ್ತರಿಸಿರುವುದರಿಂದ, ಇದಕ್ಕೆ ಅನ್ವಯ ವಾಗುವ 60000 ರುಪಾಯಿಗಳ ಟ್ಯಾಕ್ಸ್ ಅನ್ನು ರಿಬೇಟ್ ಮಾಡಲಾಗಿದೆ. ಹೀಗಾಗಿ ತೆರಿಗೆ ಮುಕ್ತ ವಾಗುತ್ತದೆ. ವೇತನ ಪಡೆಯುವವರಿಗೆ 75 ಸಾವಿರ ರುಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಸಿಗುವುದರಿಂದ 12 ಲಕ್ಷದ 75 ಸಾವಿರ ರುಪಾಯಿ ತನಕ ಆದಾಯ ತೆರಿಗೆ ಮುಕ್ತವಾಗುತ್ತದೆ.
ಹಾಗಾದರೆ ವೇತನ ಪಡೆಯುವವರನ್ನು ಹೊರತುಪಡಿಸಿ, ಉಳಿದವರಿಗೆ 12 ಲಕ್ಷ ರುಪಾಯಿ ದಾಟಿದೊಡನೆ 60000 ರುಪಾಯಿಗಳ ರಿಬೇಟ್ ರದ್ದಾಗುವುದರಿಂದ ಏಕಾಏಕಿ ಭಾರಿ ತೆರಿಗೆಯ ಹೊರೆ ಬೀಳುತ್ತದೆಯೇ ಎಂಬ ಪ್ರಶ್ನೆಯೂ ಸ್ವಾಭಾವಿಕ.ಉದಾಹರಣೆಗೆ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯ 12 ಲಕ್ಷದ ಒಂದು ರುಪಾಯಿ ಇದೆ ಎಂದು ಇಟ್ಟುಕೊಳ್ಳಿ.
ಆಗ ತೆರಿಗೆಯ ರಿಬೇಟ್ ರದ್ದಾಗುವುದರಿಂದ ಆತ ಬರೋಬ್ಬರಿ 60000 ರುಪಾಯಿ ಟ್ಯಾಕ್ಸ್ ಕಟ್ಟ ಬೇಕೇ? ಎಂಬ ಪ್ರಶ್ನೆ ಬರಬಹುದು. ಆದರೆ ಅದು ಹಾಗಾಗುವುದಿಲ್ಲ! ಅಂಥ ವ್ಯಕ್ತಿ ಕೇವಲ 1 ರುಪಾ ಯಿ ಟ್ಯಾಕ್ಸ್ ಕಟ್ಟಿದರೆ ಸಾಕು. ಇದು ಹೇಗೆ ಎನ್ನುತ್ತೀರಾ? ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115 ಆಅಇ ಪ್ರಕಾರ ಮಾರ್ಜಿನಲ್ ರಿಲೀಫ್ ನೀಡಲಾಗುತ್ತದೆ. ಯಾರ ಆದಾಯವು 12 ಲಕ್ಷ ರುಪಾಯಿ ಯಿಂದ 12 ಲಕ್ಷದ 75 ಸಾವಿರ ರುಪಾಯಿ ತನಕ ಇದೆಯೋ, ಅವರಿಗೆ ಅವರಿಗೆ 75000 ರುಪಾಯಿ ತನಕ ಹೆಚ್ಚುವರಿ ಆದಾಯಕ್ಕೆ ಈ ಮಾರ್ಜಿನಲ್ ರಿಲೀಫ್ ಸಿಗುತ್ತದೆ.
12 ಲಕ್ಷದ 75 ಸಾವಿರ ರುಪಾಯಿಗಳ ಮಾರ್ಜಿನ್ ಮಿತಿ ದಾಟಿದ ಬಳಿಕ ಎಂದಿನಂತೆ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ, ತೆರಿಗೆ ಅನ್ವಯವಾಗುತ್ತದೆ. ಮಾರ್ಜಿನಲ್ ರಿಲೀಫ್ ಇರುವುದರಿಂದ ತೆರಿಗೆದಾರರಿಗೆ ಅನ್ಯಾಯವಾಗುವುದಿಲ್ಲ. ಒಬ್ಬ ವ್ಯಕ್ತಿಗೆ 12 ಲಕ್ಷ ರುಪಾಯಿ ಆದಾಯ ಇರುವುದರಿಂದ ತೆರಿಗೆಯೇ ಇರುವುದಿಲ್ಲ, ಮತ್ತೊಬ್ಬರಿಗೆ 12 ಲಕ್ಷದ 1 ರುಪಾಯಿ ಆದಾಯ ಇರುವುದರಿಂದ 60000 ರುಪಾಯಿಗಳ ಟ್ಯಾಕ್ಸ್ ಕಟ್ಟಿ ಎಂಬುದನ್ನು ಯಾರೂ ಒಪ್ಪಿಕೊಳ್ಳಲಾಗದು.
ಹೀಗಾಗಿಯೇ 12 ಲಕ್ಷದ ಬಳಿಕ ಹೆಚ್ಚುವರಿ 75000 ರುಪಾಯಿ ತನಕ ಮಾರ್ಜಿನಲ್ ರಿಲೀಫ್ ಸಿಗುತ್ತದೆ. ಈಗ ಮತ್ತೊಂದು ಉದಾಹರಣೆಯನ್ನು ನೋಡೋಣ. ನಿಮ್ಮ ಅದಾಯ 12 ಲಕ್ಷದ 10000 ರುಪಾಯಿ ಇದೆ ಎಂದಿಟ್ಟುಕೊಳ್ಳಿ. ಮಾರ್ಜಿನಲ್ ರಿಲೀಫ್ ಇರದಿದ್ದರೆ ನೀವು 61500 ರುಪಾಯಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಆದರೆ ರಿಲೀಫ್ ಇರುವುದರಿಂದ ಕೇವಲ 10000 ರುಪಾಯಿ ಟ್ಯಾಕ್ಸ್ ಕಟ್ಟಿದರೆ ಸಾಕು.
ಹೀಗಾಗಿ ಒಂದು ಅಂಶವನ್ನು ಗಮನಿಸಬೇಕು. ಯಾವಾಗ ತೆರಿಗೆ ಪದ್ಧತಿಯಲ್ಲಿ ಗಣನೀಯ ಬದಲಾ ವಣೆ ಆಗುತ್ತದೆಯೋ, ಆವಾಗ ಮಾರ್ಜಿನಲ್ ರಿಲೀಫ್ ಅನ್ವಯವಾಗುತ್ತದೆ. ಇದರ ಉದ್ದೇಶ ತೆರಿಗೆ ಯನ್ನು ನ್ಯಾಯಬದ್ಧಗೊಳಿಸುವುದು. ಇಲ್ಲಿ ಹೆಚ್ಚುವರಿ ಆದಾಯಕ್ಕೆ ಮಾತ್ರ ತೆರಿಗೆ ಅನ್ವಯ ವಾಗುತ್ತದೆ.
ಇಡೀ ಮೊತ್ತಕ್ಕೆ ಅಲ್ಲ ಎಂಬುದನ್ನು ಮರೆಯಬಾರದು. ಮಾರ್ಜಿನಲ್ ರಿಲೀಫ್ ಇದ್ದರೂ, ಆದಾ ಯವು 12 ಲಕ್ಷ ರುಪಾಯಿ ದಾಟಿದ ಬಳಿಕ ಹೆಚ್ಚು ದುಡ್ಡು ತೆರಿಗೆ ರೂಪದಲ್ಲಿ ಹೊರ ಹೋಗುತ್ತದೆ ಎಂದು ವಾದಿಸುವವರೂ ಇದ್ದಾರೆ. ಅದು ನಿಜವೇ? ಅದನ್ನೂ ನೋಡೋಣ. ನೋಡಿ, ನಿಮ್ಮ ವಾರ್ಷಿಕ ಆದಾಯವು 12 ಲಕ್ಷದ ಒಳಗಿದ್ದರೆ, ಈಗಾಗಲೇ ತಿಳಿಸಿರುವಂತೆ ಟ್ಯಾಕ್ಸ್ ಇರುವುದಿಲ್ಲ.
12 ಲಕ್ಷದ 10 ಸಾವಿರ ರುಪಾಯಿ ಇದ್ದರೆ, ಮಾರ್ಜಿನಲ್ ರಿಲೀಫ್ ಇರದಿದ್ದರೆ 61500 ರುಪಾಯಿ ತೆರಿಗೆ ಕಟ್ಟಬೇಕಾಗುತ್ತದೆ. ರಿಲೀಫ್ ಇರುವುದರಿಂದ 10000 ರುಪಾಯಿ ಕಟ್ಟಿದರೆ ಸಾಕಾಗುತ್ತದೆ. 12 ಲಕ್ಷದ 50 ಸಾವಿರ ರುಪಾಯಿ ಆದಾಯವಿದ್ದಾಗ, ಮಾರ್ಜಿನಲ್ ರಿಲೀಫ್ ಇರದಿದ್ದರೆ 67500 ರುಪಾಯಿ ತೆರಿಗೆ ಕಟ್ಟಬೇಕಾಗುತ್ತದೆ.
ಮಾರ್ಜಿನಲ್ ರಿಲೀಫ್ ಅಡಿಯಲ್ಲಿ 50000 ರುಪಾಯಿ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ 12 ಲಕ್ಷದ 70 ಸಾವಿರ ಆದಾಯ ಇದ್ದಾಗ ಮಾತ್ರ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಆಗ ಮಾರ್ಜಿನಲ್ ರಿಲೀಫ್ ಇದ್ದರೂ, 70 ಸಾವಿರ ರುಪಾಯಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ, ರಿಲೀಫ್ನಿಂದ ಪ್ರಯೋಜನ ಇರುವುದನ್ನೂ ಗಮನಿಸಬಹುದು.
ಈ ಸಲ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನತೆಗೆ 12 ಲಕ್ಷದ ತನಕ ಆದಾಯ ತೆರಿಗೆಯಿಂದ ಮುಕ್ತಿ ನೀಡಿರುವುದು ಗಮನಾರ್ಹ ಎನ್ನಿಸಿದೆ. ಅನೇಕ ಮಂದಿ ಇದನ್ನು ನಿರೀಕ್ಷಿಸಿರಲಿಲ್ಲ. ಹೀಗಿದ್ದರೂ, ಸದ್ಯದ ಜಾಗತಿಕ ಮಟ್ಟದ ರಾಜಕೀಯ ಮತ್ತು ಆರ್ಥಿಕತೆಯೆ ಅನಿಶ್ಚಿತತೆಯ ಸವಾಲುಗಳನ್ನು ಎದುರಿಸಲು ತೆರಿಗೆ ಕಡಿತ ಮತ್ತು ರಿಬೇಟ್ನ ಅಗತ್ಯ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ, ಮೆಕ್ಸಿಕೊ ಮತ್ತು ಕೆನಡಾ ವಿರುದ್ಧ ಆಮದು ತೆರಿಗೆಯನ್ನು ಹೆಚ್ಚಿಸಿ ವಾಣಿಜ್ಯ ಸಮರ ಆರಂಭಿಸಿದ್ದಾರೆ.
ಇದರ ಪರಿಣಾಮ ಅಮೆರಿಕವೇ ಏಕಾಂಗಿಯಾಗುತ್ತದೆಯೇ ಅಥವಾ ಜಾಗತಿಕ ಆರ್ಥಿಕತೆಗೆ ಹೊಡೆತ ವಾಗಲಿದೆಯೇ ಎಂದು ಚರ್ಚೆ ನಡೆಯುತ್ತಿದೆ. ಇದನ್ನೆಲ್ಲ ಟ್ರಂಪ್ ತಿಳಿಯದವರೇನಲ್ಲ. ಆದರೆ, ತೆರಿಗೆಯ ಅಸ್ತ್ರವನ್ನು ಬಳಸಿಕೊಂಡು ಹಲವಾರು ದೇಶಗಳ ಜತೆಗೆ ಚೌಕಾಸಿಗೆ ಅವರು ಇಳಿದಿದ್ದಾರೆ. ಹೀಗಾಗಿ ಭಾರತ ಕೂಡ ಜಾಗತಿಕ ಅನಿಶ್ಚಿತತೆಗೆ ಸಜ್ಜಾಗುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಈ ಸಲ ಮಧ್ಯಮ ವರ್ಗದ ಜನತೆಯ ಕೈಯಲ್ಲಿ ತೆರಿಗೆ ಕಡಿತದ ಮೂಲಕ ದುಡ್ಡನ್ನು ಉಳಿಸಿದೆ.
ಇದರಿಂದ ಸರಕಾರಕ್ಕೆ ಸದ್ಯಕ್ಕೆ ಒಂದು ಲಕ್ಷ ಕೋಟಿ ರುಪಾಯಿ ತೆರಿಗೆ ಕಡಿಮೆಯಾದರೂ, ಭವಿಷ್ಯದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವ ಮತ್ತು ಉತ್ಪಾದಕ ಚಟುವಟಿಕೆಗಳು ಸಕ್ರಿಯ ವಾಗುವ ನಿರೀಕ್ಷೆ ಇದೆ. ಇದರಿಂದಲೂ ಸರಕಾರಕ್ಕೆ ತೆರಿಗೆ ಆದಾಯ ಸಿಗಲಿದೆ. ದೇಶದಲ್ಲಿ ತೆರಿಗೆ ಪದ್ಧತಿ ಸರಳವಾಗಬೇಕು ಎಂಬುದು ನಿಜವಾದರೂ, ಅದು ಅಷ್ಟು ಸುಲಭದ ಮಾತಲ್ಲ. ಇದು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತದೆ.
ಸ್ವತಂತ್ರ ಭಾರತದ ಮಹತ್ವದ ಪರೋಕ್ಷ ತೆರಿಗೆ ಸುಧಾರಣೆ ಕ್ರಮವಾಗಿರುವ, ಜಿಎಸ್ಟಿ ಜಾರಿಯಾಗಲೂ ಬರೋಬ್ಬರಿ 20 ವರ್ಷ ಬೇಕಾಯಿತು. ಹಾಗಂತ ನೇರ ತೆರಿಗೆ ಪದ್ದತಿಯಲ್ಲಿ ಸುಧಾರಣೆಯ ಅವಶ್ಯ ಕತೆಯೂ ತೀವ್ರವಾಗಿದೆ. ಏಕೆಂದರೆ ಆದಾಯ ತೆರಿಗೆ ಸಂಗ್ರಹದಲ್ಲಿ ಪ್ರತಿ ವರ್ಷ ಹೆಚ್ಚಳವಾಗು ತ್ತಿದ್ದರೂ, 2024ರ ಏಪ್ರಿಲ್ ವೇಳೆ 43 ಲಕ್ಷ ಕೋಟಿ ರುಪಾಯಿ ಮೌಲ್ಯದ ತೆರಿಗೆ ವಸೂಲಾತಿ ಬಾಕಿ ಇದೆ ಎಂದು ಇಲಾಖೆ ತಿಳಿಸಿತ್ತು.
ದೇಶದಲ್ಲಿ ಬಹುತೇಕ ಮಂದಿ ರೈತರು ಸಣ್ಣ ಮತ್ತು ಮಧ್ಯಮ ವರ್ಗದವರಾಗಿದ್ದರೂ, ಶ್ರೀಮಂತ ರೈತರ ವರ್ಗವೂ ಇದೆ. ಆದರೆ ಅವರಿಗೂ ಆದಾಯ ತೆರಿಗೆ ಇರುವುದಿಲ್ಲ. ಇದು ನ್ಯಾಯಸಮ್ಮತವೇ ಎಂಬ ಪ್ರಶ್ನೆ ಇದೆ. ಅನಿವಾಸಿ ಭಾರತೀಯರು ಘ್ಕೆಐ ಅಕೌಂಟ್‌ನಲ್ಲಿ ಕೋಟ್ಯಂತರ ರುಪಾಯಿ ದುಡ್ಡು ಠೇವಣಿ ಇಟ್ಟರೂ, ಅಸಲಿಗೂ, ಬಡ್ಡಿಗೂ ಅದಕ್ಕೆ ತೆರಿಗೆ ಇರುವುದಿಲ್ಲ. ಹೀಗೆ ಹಲವು ಆಯಾ ಮಗಳಲ್ಲಿ ಸುಧಾರಣೆ ಯಾಗಬೇಕಾಗುತ್ತದೆ.