ಫ್ಲೈಟ್ ಸಿಬ್ಬಂದಿ, ಮಗುವಿನ ಕ್ಯೂಟ್ ವಿಡಿಯೊಗೆ ನೆಟ್ಟಿಗರು ಫಿದಾ
ಕೆಲವು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯ ಅವ್ಯವಸ್ಥೆ, ಫ್ಲೈಟ್ ಕ್ಯಾನ್ಸಲ್ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ಹತಾಶರಾಗಿರುವ ದೃಶ್ಯವೇ ಸದ್ದು ಮಾಡುತ್ತಿದೆ. ಈ ಮಧ್ಯೆ ಮುಂಬೈಯ ಮಹಿಳೆಯೊಬ್ಬರು ಶೇರ್ ಮಾಡಿಕೊಂಡ ವಿಡಿಯೊ ಎಲ್ಲರ ಗಮನ ಸೆಳೆದಿದೆ.