ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೆರೆಮನೆಯವರ ಮೇಲಿನ ಕೋಪಕ್ಕೆ ಅಮಾಯಕ ನಾಯಿಮರಿಗಳನ್ನು ಗೋಡೆಗೆ ಅಪ್ಪಳಿಸಿ ಕೊಂದ ಮಹಿಳೆ; ನಾರಿ ಅಲ್ಲ ಹೆಮ್ಮಾರಿ ಎಂದ ನೆಟ್ಟಿಗರು

Viral Video: ನೆರೆಮನೆಯೊಂದಿಗೆ ಜಗಳ ಉಂಟಾಯಿತು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು‌ ಗೋಡೆಗೆ ಎರಡು ನಾಯಿ ಮರಿಗಳನ್ನು ಹೊಡೆದು ಕೊಂದೇ ಬಿಟ್ಟಿದ್ದಾಳೆ.‌ ನೆರೆಮನೆಯವರ ಜತೆಗೆ ವೈಯಕ್ತಿಕ ದ್ವೇಷದ ಕಾರಣದಿಂದ ಅಮಾಯಕ ನಾಯಿಮರಿಗಳನ್ನು ಹತ್ಯೆ ಮಾಡಿದ್ದಾಳೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಯಿ ಮರಿಗಳನ್ನು ಅಮಾನುಷವಾಗಿ ಕೊಂದ ಮಹಿಳೆ: ಭುಗಿಲೆದ್ದ ಆಕ್ರೋಶ

ನಾಯಿಮರಿಗಳನ್ನು ಗೋಡೆಗೆ ಅಪ್ಪಳಿಸಿ ಕೊಂದ ಮಹಿಳೆ -

Profile
Pushpa Kumari Mar 8, 2026 7:03 PM

ಚೆನ್ನೈ, ಮಾ. 8: ತಮಿಳುನಾಡಿನಲ್ಲಿ ಪ್ರಾಣಿ ಹಿಂಸೆಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ನೆರೆಮನೆಯೊಂದಿಗೆ ಜಗಳ ಉಂಟಾಯಿತು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು‌ ಎರಡು ನಾಯಿ ಮರಿಗಳನ್ನು ಹೊಡೆದು ಕೊಂದೇ ಬಿಟ್ಟಿದ್ದಾಳೆ.‌ ನೆರೆಮನೆಯವರ ಜತೆಗೆ ವೈಯಕ್ತಿಕ ದ್ವೇಷದ ಕಾರಣದಿಂದ ಅಮಾಯಕ ನಾಯಿಮರಿಗಳನ್ನು ಹತ್ಯೆ ಮಾಡಿದ್ದಾಳೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು (Viral Video) ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊದ ಆರಂಭದಲ್ಲಿ ಮಹಿಳೆಯೊಬ್ಬಳು ಮನೆಯ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಬಳಿಕ ಅವಳು ಅವಳು ರಿಕ್ಷಾದ ಕೆಳಗಿನಿಂದ ಒಂದು ನಾಯಿಮರಿಯನ್ನು ಎತ್ತಿಕೊಂಡು ಗೋಡೆಗೆ ಬಲವಾಗಿ ಹೊಡೆದಿದ್ದಾಳೆ. ತಕ್ಷಣವೇ ಮತ್ತೊಂದು ಮರಿಯನ್ನು ಹಿಡಿದು ಅದೇ ರೀತಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ನಂತರ ತಾನು ಏನು ಮಾಡಿಲ್ಲ ಎಂಬಂತೆ ಏನೂ ತಿಳಿಯದವಳಂತೆ ಶಾಂತವಾಗಿ ತನ್ನ ಮನೆಗೆ ಮರಳಿದ್ದಾಳೆ.

ವೈರಲ್‌ ವಿಡಿಯೊ ಇಲ್ಲಿದೆ:



ಕೇವಲ ನಾಯಿ ಮರಿಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಲ್ಲದೆ ಉಳಿದ ಎರಡು ನಾಯಿ ಮರಿಗಳನ್ನು ಮರಕ್ಕೆ ನೇಣು ಹಾಕಿರುವ ದೃಶ್ಯವು ಕಂಡು ಬಂದಿದೆ. ಈ ಸಂದರ್ಭದಲ್ಲಿ ಹಲವು ನಾಯಿಮರಿಗಳು ಹತ್ತಿರದಲ್ಲಿ ಅಲೆದಾಡುತ್ತಿರುವುದು ಮತ್ತು ಬೊಗಳುತ್ತಿರುವುದನ್ನು ಕಾಣಬಹುದು. ಪ್ರಾಣಿ ಕಾರ್ಯಕರ್ತ ವಿದಿತ್ ಶರ್ಮಾ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಮುಂದೇನಾಯ್ತು?

ಈ ಘಟನೆ ಕಂಡು ಪ್ರಾಣಿ ರಕ್ಷಣಾ ತಂಡವು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಮಹಿಳೆ ಸುಮಾರು ಒಂದು ಗಂಟೆಗಳ ಕಾಲ ತನ್ನ ಮನೆಯೊಳಗೆ ಅವಿತುಕೊಂಡಿದ್ದಳು. ಸದ್ಯ ಆರೋಪಿ ಮಹಿಳೆ ಮೀನಾಕ್ಷಿ ಮಿಶ್ರಾ ಎಂಬಾಕೆಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಗೊಂದಲದ ದೃಶ್ಯಗಳು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಕ್ರೋಶ ಹುಟ್ಟುಹಾಕಿದ್ದು, ಪ್ರಾಣಿಗಳನ್ನು ಕ್ರೌರ್ಯದಿಂದ ರಕ್ಷಿಸುವ ಕಾನೂನಿನ ಅಡಿಯಲ್ಲಿ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.‌ ಈ ಮಹಿಳೆ ಈ ಹಿಂದೆಯೂ ಇಂತಹ ಕ್ರೂರ ಕೃತ್ಯಗಳನ್ನು ಎಸಗುತ್ತಿದ್ದಳು ಮತ್ತು ಸತ್ತ ನಾಯಿಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಮರಕ್ಕೆ ನೇತುಹಾಕುತ್ತಿದ್ದಳು ಎಂದು ಸ್ಥಳೀಯರು ದೂರಿದ್ದಾರೆ.