ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಈ ಖಿಲಾಡಿ ಜೋಡಿಯನ್ನು ನೋಡಿದ್ದೀರಾ? ಆಟೋ ಚಾಲಕನ ಹೆಗಲ ಮೇಲೆ ಸವಾರಿ ಮಾಡುವ ಗಿಳಿಯನ್ನು ಸ್ಪರ್ಶಿಸಿ ಖುಷಿಪಟ್ಟ ಗ್ರಾಹಕರು

Viral Video: ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ತಮ್ಮ ಮುದ್ದಿನ ಹಸಿರು ಗಿಳಿಯೊಂದಿಗೆ ಸವಾರಿ ಮಾಡಿದ ದೃಶ್ಯ ಕಂಡು ಬಂದಿದೆ. ಈ ವಿಡಿಯೊವು ಪ್ರಾಣಿಗಳು ಮತ್ತು ಪಕ್ಷಿಗಳು ದೈನಂದಿನ ಜೀವನಕ್ಕೆ ಸರಳ ಸಂತೋಷವನ್ನು ಹೇಗೆ ತರುತ್ತವೆ ಎಂಬುದಕ್ಕೆ ಸಾಕ್ಷಿ ಎನಿಸಿಕೊಂಡಿದೆ.

ಸಾಕುಪ್ರಾಣಿ ಗಿಣಿಯೊಂದಿಗೆ ಆಟೋ ಚಾಲಕನ ಸವಾರಿ

ಆಟೋ ಚಾಲಕನ ಹೆಗಲ ಮೇಲೆ ಸವಾರಿ ಮಾಡಿದ ಗಿಳಿ -

Profile
Pushpa Kumari Mar 5, 2026 7:47 PM

ಬೆಂಗಳೂರು, ಮಾ. 5: ಸಿಲಿಕಾನ್ ಸಿಟಿ ಅಂದಾಗ ನಮಗೆ ಟ್ರಾಫಿಕ್ ಕಿರಿ-ಕಿರಿ, ಹಾರ್ನ್ ಸೌಂಡ್‌ಗಳ ಗದ್ದಲ ನೆನಪಿಗೆ ಬರುತ್ತದೆ. ಆದರೆ ಕೆಲವೊಮ್ಮೆ ಕಂಡು ಬರುವ ಅಪರೂಪದ ದೃಶ್ಯಗಳು ನೆಟ್ಟಿಗರ ಮನ ಗೆಲ್ಲುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಆಟೋ ಚಾಲಕರೊಬ್ಬ ತಮ್ಮ ಮುದ್ದಿನ ಹಸಿರು ಗಿಳಿಯೊಂದಿಗೆ ಸವಾರಿ ಮಾಡಿದ ದೃಶ್ಯ ಕಂಡು ಬಂದಿದೆ. ಈ ವೈರಲ್‌ ವಿಡಿಯೊವು (Viral Video) ಪ್ರಾಣಿಗಳು ಮತ್ತು ಪಕ್ಷಿಗಳು ದೈನಂದಿನ ಜೀವನಕ್ಕೆ ಹೇಗೆ ಸಂತೋಷವನ್ನು ಹೇಗೆ ತರುತ್ತವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಇನ್‌ಸ್ಟಾಗ್ರಾಮ್ ಬಳಕೆದಾರ ಆಕಾಶ್ ಎನ್ನುವವರು ಇದನ್ನು ಪೋಸ್ಟ್ ಮಾಡಿದ್ದಾರೆ. ಚಾಲಕನು ತನ್ನ ಆಟೋದ ಪಕ್ಕದಲ್ಲಿ ಗಿಳಿಯನ್ನು ಕೂರಿಸಿಕೊಂಡು ಸವಾರಿ ಮಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಗಿಳಿ ಚಾಲಕನ ಸೂಚನೆಗಳಿಗೆ ಶಾಂತವಾಗಿ ಪ್ರತಿಕ್ರಿಯೆ ನೀಡುತ್ತದೆ. ಅದು ಸಾಮಾನ್ಯ ಪ್ರಯಾಣಿಕನಂತೆ ಆತನೊಂದಿಗೆ ಪ್ರಯಾಣ ಮಾಡುತ್ತದೆ. ನೆಟ್ಟಿಗರು ಈ ವಿಡಿಯೊವನ್ನು ಬೆಂಗಳೂರಿನ ಅತ್ಯಂತ ಮುದ್ದಾದ ದೃಶ್ಯ ಎಂದು ಬಣ್ಣಿಸಿದ್ದಾರೆ.

ವಿಡಿಯೊ ನೋಡಿ:

ಗಿಳಿಯು ಯಾವುದೇ ಭಯವಿಲ್ಲದೆ, ಚಾಲಕನ ಪಕ್ಕದಲ್ಲೇ ಕುಳಿತು ರಸ್ತೆಯ ದೃಶ್ಯಗಳನ್ನು ಆನಂದಿಸುತ್ತಿರುವುದು ಕಂಡು ಬಂದಿದೆ.‌ ಜತೆಗೆ ಗ್ರಾಹಕರು ಅದನನು ಕುತೂಹಲದಿಂದ ವೀಕಿಸಿ ಮುದ್ದು ಮಾಡಿದ್ದಾರೆ. ವಿಡಿಯೊ ರೆಕಾರ್ಡಿಂಗ್ ಮಾಡಿದ ಆಕಾಶ್ ರಸ್ತೆಯಲ್ಲಿ ಹಾದು ಹೋಗುವಾಗ ಈ ಅಸಾಮಾನ್ಯ ಜೋಡಿಯನ್ನು ಮೊದಲು ಹೇಗೆ ನೋಡಿದೆ ಎಂಬುದನ್ನು ವಿವರಿಸಿದ್ದಾನೆ. ಗಿಳಿಯ ಬಗ್ಗೆ ವಿಚಾರಿಸಿದಾಗ ಚಾಲಕ ನಗುಮುಖದಿಂದಲೇ ಉತ್ತರ ನೀಡಿದ್ದಾರೆ. ಆಕಾಶ್ ಗಿಳಿಯನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಲು ಕೇಳಿದಾಗ, ಚಾಲಕ ಅದಕ್ಕೆ ಅನುಮತಿ ನೀಡಿದ್ದಾರೆ.

ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಮಿಲಿಯನ್ ಗಟ್ಟಲೆ ವಿವ್ಸ್ ಪಡೆದಿದೆ. ನೆಟ್ಟಿಗರೊಬ್ಬರು ಪ್ರಾಣಿ-ಪಕ್ಷಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಬೆಂಗಳೂರಿನ ಕಿಕ್ಕಿರಿದ ಟ್ರಾಫಿಕ್ ನಡುವೆ ಇದೊಂದು ಮನಸ್ಸಿಗೆ ಹರ್ಷ ನೀಡುವ ದೃಶ್ಯ ಎಂದಿದ್ದಾರೆ.