ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಡಿಗೆ ದರ ಕೇಳಿ ನೆಟ್ಟಿಗರೇ ಶಾಕ್; 2BHK ಮನೆಗೆ ತಿಂಗಳಿಗೆ 1ಲಕ್ಷ ಬಾಡಿಗೆ ಪಾವತಿಸುತ್ತಿರುವ ಯುವತಿ!

Viral Video: ಆಧುನಿಕ ಜೀವನಶೈಲಿ, ಸಾರಿಗೆ, ಮೂಲ ಸೌಕರ್ಯ ಹೀಗೆ ಎಲ್ಲ ವ್ಯವಸ್ಥೆ ನಗರ ಪ್ರದೇಶ ದಲ್ಲಿ ಇರುವುದರಿಂದ ದುಬಾರಿಯಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರು, ಮುಂಬೈ ನಂತಹ ಪ್ರದೇಶದಲ್ಲಿ ಜೀವನ ವೆಚ್ಚ ದರವೇ ದುಪ್ಪಟ್ಟು ಆಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಯುವತಿಯರು ತಮ್ಮ ಬಾಡಿಗೆ ಮನೆಯ ವಿಡಿಯೊ ಶೇರ್ ಮಾಡಿದ್ದು ಇದರ ವೆಚ್ಚ ಎಷ್ಟು ಎಂದು ತಿಳಿಸಿದ್ದಾರೆ. ಈ ಬಾಡಿಗೆ ದರವನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ...

ಮುಂಬೈನಲ್ಲಿ 2BHK ಗೆ 1 ಲಕ್ಷ ರೂ. ಬಾಡಿಗೆ ಪಾವತಿಸುವ ಯುವತಿ: ವಿಡಿಯೊ ನೋಡಿ

2BHK ಗೆ 1 ಲಕ್ಷ ರೂ. ಬಾಡಿಗೆ ಪಾವತಿಸುವ ಯುವತಿ -

Profile
Pushpa Kumari Mar 9, 2026 4:28 PM

ಮುಂಬೈ, ಮಾ.9: ಇತ್ತೀಚೆಗೆ ನಗರ ಪ್ರದೇಶದಲ್ಲಿ ಜೀವನ ನಡೆಸಲು ಹೆಚ್ಚಿನವರು ಇಷ್ಟಪಡುತ್ತಾರೆ. ಆಧುನಿಕ ಜೀವನಶೈಲಿ, ಸಾರಿಗೆ, ಮೂಲ ಸೌಕರ್ಯ ಹೀಗೆ ಎಲ್ಲ ವ್ಯವಸ್ಥೆ ನಗರ ಪ್ರದೇಶದಲ್ಲಿ ಇರುವುದರಿಂದ ದುಬಾರಿಯಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರು, ಮುಂಬೈನಂತಹ ಪ್ರದೇಶದಲ್ಲಿ ಜೀವನ ವೆಚ್ಚ ದರವೇ ದುಪ್ಪಟ್ಟು ಆಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಯುವತಿಯರು ತಮ್ಮ ಬಾಡಿಗೆ ಮನೆಯ ವಿಡಿಯೊ ಶೇರ್ (Viral Video) ಮಾಡಿದ್ದು ಇದರ ವೆಚ್ಚ ಎಷ್ಟು ಎಂದು ತಿಳಿಸಿದ್ದಾರೆ. ಈ ಬಾಡಿಗೆ ದರವನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಮುಂಬೈನ ಬಾಡಿಗೆ ಬೆಲೆಗಳು ಆಗಾಗ್ಗೆ ಜನರನ್ನು ಆಶ್ಚರ್ಯ ಗೊಳಿಸುತ್ತವೆ. ಇದೀಗ ಇನ್‌ಸ್ಟಾಗ್ರಾ ಮ್‌ನಲ್ಲಿ ವೈರಲ್ ಆಗಿರುವ ದೃಶ್ಯವು ಮುಂಬೈನ ರಿಯಲ್ ಎಸ್ಟೇಟ್ ದರ ಬಗ್ಗೆ ಚರ್ಚೆ ಯಾಗುವಂತೆ ಮಾಡಿದೆ. ಯುವತಿಯರಿಬ್ಬರು ಮುಂಬೈನ ಪರೆಲ್‌ನಲ್ಲಿರುವ ಸುಮಾರು 700 ಚದರ ಅಡಿ ವಿಸ್ತೀರ್ಣದ 2BHK ಫ್ಲ್ಯಾಟ್‌ಗೆ ತಿಂಗಳಿಗೆ 1 ಲಕ್ಷ ರೂಪಾಯಿ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ.

ವಿಡಿಯೋ ನೋಡಿ:

ಈ ಅಪಾರ್ಟ್ಮೆಂಟ್ ಮುಂಬೈನ ಕೇಂದ್ರ ಭಾಗವಾದ ಪ್ಯಾರೆಲ್‌ನಲ್ಲಿದೆ. ಇದು ಹಲವಾರು ವ್ಯಾಪಾರ ಕೇಂದ್ರಗಳಿಗೆ ಹತ್ತಿರದಲ್ಲಿದೆ. ವಿಡಿಯೊ ಮಾಡುವ ಸಮಯದಲ್ಲಿ, ಯುವತಿಯರು ಮಾಸ್ಟರ್ ಬೆಡ್ ರೂಮ್, ಅಪಾರ್ಟ್ಮೆಂಟ್ ನೋಟ, ವಿಮಾನಗಳು ಟೇಕ್-ಆಫ್ ಆಗುವುದು ಮತ್ತು ಲ್ಯಾಂಡ್ ಆಗುವುದನ್ನು ಹತ್ತಿರದಿಂದ ವೀಕ್ಷಣೆ ಮಾಡಬಹುದು ಎಂದು ತಿಳಿಸಿದ್ದಾರೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಇಬ್ಬರೂ ಯುವತಿಯರು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದು ಅಪಾರ್ಟ್ಮೆಂಟ್‌ನ ಅವರ ನೆಚ್ಚಿನ ಭಾಗ ಹಾಗೂ ಅವರು ತಮ್ಮ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುವ ಸ್ಥಳವೆಂದರೆ ಲಿವಿಂಗ್ ರೂಮ್ ಎಂದು ಹೇಳಿದ್ದಾರೆ‌. ಬಾಡಿಗೆ ಹೆಚ್ಚಾಗಿದ್ದರೂ, ತಾವು ವಾಸಿಸುವ ಸ್ಥಳದಲ್ಲಿ ತೃಪ್ತರಾಗಿದ್ದೇವೆ ಎಂದು ಹೇಳಿದ್ದಾರೆ.

ಈ ವೀಡಿಯೊವನ್ನು ಫೆಬ್ರವರಿ 23 ರಂದು ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೆ 10.3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳನ್ನು ಪಡೆದುಕೊಂಡಿದೆ. ಬಳಕೆದಾರರೊಬ್ಬರು 23 ವರ್ಷ ವಯಸ್ಸಿನವರು ತಿಂಗಳಿಗೆ 1 ಲಕ್ಷ ಬಾಡಿಗೆ ಪಾವತಿ ಮಾಡುತ್ತಾರೆಯೇ? ಎಂದು ಬರೆದಿದ್ದಾರೆ. ಮತ್ತೊಬ್ಬರು ಅತಿಯಾದ ಬಾಡಿಗೆಯಿಂದಾಗಿ ಮುಂಬೈನಲ್ಲಿ ವಾಸಿಸುವುದು ಸಾಮಾನ್ಯ ಜನರಿಗೆ ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.