ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಸುಳ್ಳು ಸುಲಭವಾದರೂ, ಸತ್ಯದ ದಾರಿ ಗೌರವದ್ದು

ಸುಳ್ಳು ಸುಲಭವಾದರೂ, ಸತ್ಯದ ದಾರಿ ಗೌರವದ್ದು

ಸತ್ಯವನ್ನು ನುಡಿದ ಆ ಅಪರಾಧಿಯನ್ನು ಕಾರಾಗೃಹದಿಂದ ಮುಕ್ತನನ್ನಾಗಿ ಮಾಡಿ,ತನ್ನ ಅರಮನೆಯ ಉದ್ಯಾನವನದಲ್ಲಿ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಕೊಟ್ಟು ಅಲ್ಲೇ ಇರಿಸಿದ. ನಮ್ಮ ದೈನಂದಿನ ಬದುಕಿನಲ್ಲಿ ಬೆಳಗಿನ ರಾತ್ರಿಯವರೆಗೆ, ನಾನಾ ವಿಷಯಗಳಿಗೆ ನಾನಾ ಪರಿಸ್ಥಿತಿಗಳಲ್ಲಿ ಸಲೀಸಾಗಿ ಹೇಳು ವುದನ್ನು ಸುಳ್ಳು ರೂಢಿ ಮಾಡಿಕೊಂಡಿರುತ್ತೇವೆ.

Roopa Gururaj Column: ಸಾಧನೆ ಎಂದೂ ಅಹಂಕಾರ ಮೂಡಿಸಬಾರದು

ಸಾಧನೆ ಎಂದೂ ಅಹಂಕಾರ ಮೂಡಿಸಬಾರದು

ಚೈತನ್ಯರು, ‘ಏನಾಯಿತು ಗದಾಧರ? ಅದರ ರಚನೆ ಸರಿಯಾಗಿಲ್ಲವೇ? ಅದರಲ್ಲಿ ಏನಾದರೂ ತಪ್ಪಿ ದೆಯೇ?’ ಎಂದು ಕೇಳಿದರು. ಆಗ ಗದಾಧರ, ‘ಗೆಳೆಯ, ನ್ಯಾಯ ಶಾಸ್ತ್ರದಲ್ಲಿ ಇಂತದ್ದೊಂದು ಗ್ರಂಥ ಬರಬಹುದೆಂದು ನನಗೆ ಅನ್ನಿಸಿಯೇ ಇರಲಿಲ್ಲ. ಎಷ್ಟು ಚೆನ್ನಾಗಿದೆ ಎಂದರೆ ಅದನ್ನು ವರ್ಣಿಸಲು ನನ್ನ ಬಳಿ ಪದಗಳಿಲ್ಲ. ನಾನೂ ಕೂಡ ಒಂದು ನ್ಯಾಯಶಾಸ್ತ್ರದ ಗ್ರಂಥ ರಚನೆ ಮಾಡಿದ್ದೇನೆ, ಆದರೆ ಈ ಗ್ರಂಥ ವನ್ನು ನೋಡಿದ ಮೇಲೆ ಅದು, ಸೂರ್ಯನ ಮುಂದಿಟ್ಟ ಒಂದು ಮೇಣದ ಬತ್ತಿಗೆ ಸಮಾನ ವೆನಿಸುತ್ತದೆ.

Roopa Gururaj Column: ಹುಟ್ತಾ ಅಣ್ಣ-ತಮ್ಮಂದಿರು, ಬೆಳೀತಾ ದಾಯಾದಿಗಳು

ಹುಟ್ತಾ ಅಣ್ಣ-ತಮ್ಮಂದಿರು, ಬೆಳೀತಾ ದಾಯಾದಿಗಳು

ಹಣ್ಣು ಬೀಳತೊಡಗಿದಾಗ ಇಬ್ಬರ ನಡುವೆಯೂ ಅದಕ್ಕಾಗಿ ವಾದ-ವಿವಾದ ಶುರುವಾಯಿತು. ಮರದ ಬೇರು ನನ್ನ ಹೊಲದಲ್ಲಿ ಇರುವುದರಿಂದ ಅದು ನನ್ನದೇ ಮರ, ಆ ಹಣ್ಣು-ಕಾಯಿಗಳೆಲ್ಲ ನನಗೆ ಸೇರಿದ್ದು ಎಂದು ಅಣ್ಣ ಹೇಳಿದರೆ, ಅದರ ರೆಂಬೆ-ಕೊಂಬೆ, ನನ್ನ ಪಾಲಿನ ಹೊಲದಲ್ಲಿ ಇರು ವುದರಿಂದ ಹಣ್ಣು-ಕಾಯಿಗಳೆಲ್ಲಾ ನನ್ನವೇ ಎಂಬುದು ತಮ್ಮನ ವಾದ. ಇಬ್ಬರೂ ಜಗಳ ವಾಡಿ ಪ್ರಕರಣ ಕೋರ್ಟ್, ಕಚೇರಿ ತನಕ ಹೋಯಿತು.

Roopa Gururaj Column: ಪ್ರಾಮಾಣಿಕವಾಗಿ ಬದುಕುವುದು ದೊಡ್ಡ ಸಂಸ್ಕಾರ

ಪ್ರಾಮಾಣಿಕವಾಗಿ ಬದುಕುವುದು ದೊಡ್ಡ ಸಂಸ್ಕಾರ

ಒಂದು ದಿನ ಒಬ್ಬ ಹುಡುಗನಿಗೆ ರಾಗಿ ಮುದ್ದೆಯನ್ನು ಮಾಡಿ ಬಡಿಸುವ ಜವಾಬ್ದಾರಿ ಬಿದ್ದಿತ್ತು. ಅವನ ತರಗತಿಯಲ್ಲಿ ಸುಮಾರು ಇಪ್ಪತ್ತೆಂಟು ಜನ ವಿದ್ಯಾರ್ಥಿಗಳಿದ್ದರು. ಆಗ ಆ ಹುಡುಗ ಎಲ್ಲಾ ರಾಗಿ ಹಿಟ್ಟನ್ನು ಸೇರಿಸಿ ಇಪ್ಪತ್ತೆಂಟು ಸಾಧಾರಣ ಗಾತ್ರದ ಉಂಡೆಗಳನ್ನು ಮಾಡಿ ಜೋಡಿಸಿಟ್ಟ. ಅದರಲ್ಲಿ ಒಂದು ಉಂಡೆಯನ್ನು ಮಾತ್ರ ತೆಗೆದುಕೊಂಡು ಅದರಲ್ಲಿ ಎರಡು ಭಾಗ ಮಾಡಿಟ್ಟ, ಅಂದರೆ ಒಟ್ಟು ಇಪ್ಪತ್ತೊಂಬತ್ತು ಮುದ್ದೆಗಳಾಗಿದ್ದವು

Roopa Gururaj Column: ಗೋಕರ್ಣ ಕ್ಷೇತ್ರದ ಮಹಿಮೆ

ಗೋಕರ್ಣ ಕ್ಷೇತ್ರದ ಮಹಿಮೆ

ವಸಿಷ್ಠರು ಬ್ರಹ್ಮರ್ಷಿಗಳಾದ್ದರಿಂದ ಭೋಜನಕ್ಕೆ ಕುಳಿತ ಕೂಡಲೇ ಆ ವಿಷಯ ಅರಿವಿಗೆ ಬಂದು, ಕೋಪ ಗೊಂಡು ರಾಜನಿಗೆ, ‘ನೀನು ಬ್ರಹ್ಮ ರಾಕ್ಷಸನಾಗು’ ಎಂದು ಶಾಪ ಕೊಟ್ಟರು. ತನಗೆ ಗೊತ್ತಿಲ್ಲದ ತಪ್ಪಿಗೆ ವಸಿಷ್ಠರು ಶಾಪ ಕೊಟ್ಟಿದ್ದರಿಂದ, ರಾಜನು ಸಹ ಅವರಿಗೆ ಶಾಪ ಕೊಡಲು ಕೈಯಲ್ಲಿ ನೀರು ತೆಗೆದು ಕೊಂಡನು. ಆ ಸಮಯಕ್ಕೆ ರಾಜನ ಪತ್ನಿ ಅವನನ್ನು ಸಮಾಧಾನ ಮಾಡಿ ಮನಸ್ಸನ್ನು ಬದಲಿಸಿದಳು.

Roopa Gururaj Column: ಭಕ್ತಿ ಒಂದೇ ಅಲ್ಲ ದೇವರಲ್ಲಿ ನಂಬಿಕೆಯೂ ಬೇಕು

ಭಕ್ತಿ ಒಂದೇ ಅಲ್ಲ ದೇವರಲ್ಲಿ ನಂಬಿಕೆಯೂ ಬೇಕು

ಮರುದಿನ ಪರಮೇಶ್ವರನು ತನ್ನ ಲೀಲೆಯಿಂದ ವೃದ್ಧ ಬ್ರಾಹ್ಮಣನಾದನು. ಮೈ ಕೈ ನಡುಗುತ್ತಿದೆ ಹಣ್ಣು ಹಣ್ಣು ಮುದುಕ, ಬಂದವನೇ ಗಂಗೆಯಲ್ಲಿ ಸ್ನಾನಕ್ಕೆ ಇಳಿದು ವಾಲಾಡುತ್ತಾ ಎದುಸಿರು ಬಿಡುತ್ತಾ ಎದ್ದು ಬಿದ್ದು ಒದ್ದಾಡುತ್ತಿದ್ದವನು ಒಮ್ಮೆ ನದಿಯ ಒಂದು ಗುಂಡಿ ಜಾಗದಲ್ಲಿ ಬಿದ್ದನು. ಆ ಗುಂಡಿಯಿಂದ ಕಾಲು ಎತ್ತಲು ಅವನಿಂದ ಆಗಲಿಲ್ಲ. ಪಾರ್ವತಿಯನ್ನು ಕೂಗಿ, ಯಾರನ್ನಾದರೂ ಸಹಾಯಕ್ಕೆ ಕರಿ ಎಂದ. ವಯಸ್ಸಾದ ಮುತ್ತೈದೆಯ ರೂಪದಲ್ಲಿದ್ದ ಪಾರ್ವತಿ ದೀನಳಾಗಿ ಅಲ್ಲಿರುವ ಜನರನ್ನು ಕೂಗಿದಳು

Roopa Gururaj Column: ಎಲ್ಲರನ್ನೂ ಯಾವಾಗಲೂ ವಂಚಿಸಲು ಸಾಧ್ಯವಿಲ್ಲ

ಎಲ್ಲರನ್ನೂ ಯಾವಾಗಲೂ ವಂಚಿಸಲು ಸಾಧ್ಯವಿಲ್ಲ

ಕುರಿಯ ಚರ್ಮವನ್ನು ತೋಳ ಹೊದ್ದುಕೊಂಡಿದ್ದರಿಂದ, ಕುರಿಗಳ ಯಜಮಾನನಿಗೆ ಇದು ತೋಳ ವೆಂದು ಗೊತ್ತಾಗಲಿಲ್ಲ. ತೋಳ ಬಹಳ ಸಂತೋಷದಿಂದ, ರಾತ್ರಿ ಇಡೀ ಕುರಿಗಳನ್ನು ತಿನ್ನಬಹು ದೆಂಬ ಆಸೆಯಿಂದ ಕನಸು ಕಾಣುತ್ತಾ, ಕುರಿಗಳ ಗುಂಪಿನ ಜೊತೆಯಲ್ಲಿ ಹೆಜ್ಜೆ ಹಾಕುತ್ತ, ಕುರಿಗಳ ಕೊಟ್ಟಿಗೆ ಯನ್ನು ಸೇರಿಕೊಂಡಿತು.

Roopa Gururaj Column: ಹಸುವಿನ ಶಾಪಕ್ಕೆ ಈಡಾದ ಮನುಷ್ಯನ ಮಕ್ಕಳು

ಹಸುವಿನ ಶಾಪಕ್ಕೆ ಈಡಾದ ಮನುಷ್ಯನ ಮಕ್ಕಳು

ಆಕೆ ಛೀ ಛೀ ಇಷ್ಟು ಗಲೀಜಾದ ನಿನ್ನ ಕರುವನ್ನು ನಾನು ಮುಟ್ಟಲಾರೆ ನನಗೆ ಅಸಹ್ಯ ಎಂದು ನಿರಾಕರಿಸಿದಳು. ಅಸಹಾಯಕವಾದ ಹಸುವಿಗೆ ಕೋಪ ಬಂದಿತು. ‘ನೀವು ಮನುಷ್ಯರು ಉಪಯೋಗ ಸಿಗುವ ತನಕ ಬಳಸಿಕೊಳ್ಳುತ್ತೀರಿ, ನಿನ್ನ ಮಗು ಹುಟ್ಟಿದ ಕೂಡಲೇ ನಡೆಯುತ್ತದೆ ಅದಕ್ಕೆ ನಿನಗೆ ಇಷ್ಟು ಅಹಂಕಾರ. ನನ್ನ ಕರು ಹುಟ್ಟಿದ ಎಂಟು ತಿಂಗಳಿಗೆ ತನ್ನ ಕಾಲ ಮೇಲೆ ನಿಲ್ಲುತ್ತದೆ

Roopa Gururaj column: ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ರಾಮನೇ ನಾಯಿಯನ್ನು ‘ಯಾಕೆ ಇಂತಹ ಶಿಕ್ಷೆ ಕೊಡಲು ಹೇಳಿದೆ’ ಎಂದು ಕೇಳಿದನು. ನಾಯಿ ವಿವ ರಿಸಿತು, “ನನ್ನ ಹಿಂದಿನ ಜನ್ಮದಲ್ಲಿ, ನಾನು ಅದೇ ಮಠದ ಮುಖ್ಯನಾಗಿದ್ದೆ. ನಾನು ಮೊದಮೊದಲು ನಿಷ್ಠೆಯಿಂದ ನನ್ನ ಕೆಲಸ ಮಾಡುತ್ತಿದ್ದೆ. ನನ್ನ ಕೈಲಾದಷ್ಟು ಸೇವೆಯನ್ನೂ ಮಾಡುತ್ತಿದ್ದೆ. ಆದರೆ ದಿನ ಕಳೆದಂತೆ, ನನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬರ ಹತ್ತಿದವು.

Roopa Gururaj Column: ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು

ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು

ಆತ ತಾನಿದ್ದ ಊರು ಬಿಟ್ಟು ತನ್ನ ಹಿರಿಯ ಮಗನ ಮನೆಯಲ್ಲಿ ಬಂದು ನೆಲೆಸಿದ. ಅವನಿಗೆ ಯಾವ ತೊಂದರೆಯೂ ಆಗದಂತೆ ಮಗ ಸೊಸೆ ಚೆನ್ನಾಗಿ ನೋಡಿಕೊಳ್ಳು ತ್ತಿದ್ದರು. ಒಂದು ಸಲ ಮೂರು ಮಕ್ಕಳೂ ಒಟ್ಟಿಗೆ ಸೇರಿದಾಗ, ಒಬ್ಬ ಮಗ, ಅಪ್ಪಾ ನೀನು ಕಟ್ಟಿಸಿದ ಮನೆ, ಖಾಲಿಯಾಗಿ ಹಾಗೇ ಇದೆ. ಅದನ್ನು ಖಾಲಿಯಾಗಿ ಹಾಗೆಯೇ ಬಿಟ್ಟರೆ, ಅದು ಹಾಳಾಗಿ ಹೋಗು ತ್ತದೆ, ಅದರ ಬದಲು ಅದನ್ನು ಮಾರಿದರೆ ಒಳ್ಳೆಯ ಬೆಲೆ ಸಿಗಬಹುದು ಎಂದರು.

Roopa Gururaj Column: ಮನುಷ್ಯನ ತಲೆ ಬುರುಡೆಗಿರುವ ಬೆಲೆ

ಮನುಷ್ಯನ ತಲೆ ಬುರುಡೆಗಿರುವ ಬೆಲೆ

ಸತ್ತ ಮೇಲೆ ಬೆಲೆ ಇರುವುದು ನಾವು ಮಾಡುವ ಸತ್ಕಾರ್ಯಗಳಿಗೆ, ನಮ್ಮ ಶರೀರಕ್ಕಲ್ಲ. ಹಾಗಿದ್ದಾಗ ಬದುಕಿದ್ದಾಗ ಮತ್ತೊಬ್ಬರಿಗೆ ತಲೆಬಾಗಿಸುವುದರಿಂದ, ಕೈ ಮುಗಿಯುವು ದರಿಂದ, ಅಪ್ಪಿ ಪ್ರೀತಿ ಹಂಚುವು ದರಿಂದ ನಾವು ಎಂದಿಗೂ ಚಿಕ್ಕವರಾಗುವುದಿಲ್ಲ. ಅಹಂಕಾರ ಬಿಟ್ಟಾಗ ಮಾತ್ರ ನಾವು ಮನುಷ್ಯರಾಗಿ ಬದುಕಲು ಅರ್ಹತೆ ಹೊಂದುತ್ತೇವೆ

Roopa Gururaj Column: ಪ್ರಭು ಶ್ರೀರಾಮನ ಆಜ್ಞೆ ಮೀರಿದ ಲಕ್ಷ್ಮಣ

ಪ್ರಭು ಶ್ರೀರಾಮನ ಆಜ್ಞೆ ಮೀರಿದ ಲಕ್ಷ್ಮಣ

ಭಗವಾನ್ ವಿಷ್ಣುವಿನ ಅವತಾರಗಳು ಸಾಮಾನ್ಯ ಮತ್ತು ಸಾವನ್ನು ಮೀರಿ ನಿಂತಿರುತ್ತದೆ. ಭಗವಾನ್ ಶ್ರೀರಾಮನು ಸರಯು ನದಿಯನ್ನು ಪ್ರವೇಶಿಸಿ ಅಲ್ಲಿಂದ ವೈಕುಂಠಕ್ಕೆ ತೆರಳಿದ ನೆಂಬ ಪ್ರತೀತಿಯಿದೆ. ಪದ್ಮ ಪುರಾಣವು ಭಗವಾನ್ ರಾಮನ ಸಾವಿನ ಬಗ್ಗೆ ವಿವರಿಸಲು ಪ್ರಯತ್ನಿಸಿದೆ.

Roopa Gururaj Column: ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ

ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ

ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ. ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣ ನದ್ದು ರಹಸ್ಯ, ನಿಗೂಢ. ರಾಮ ಏಕಪತ್ನಿ ವ್ರತಸ್ಥ. ಕೃಷ್ಣ 16108 ಪತ್ನಿಯರ ವಲ್ಲಭ. ರಾಮ ಮರ್ಯಾದಾ ಪುರುಷೋತ್ತಮ. ಕೃಷ್ಣಲೀಲಾ ಪುರುಷೋತ್ತಮ. ರಾಮನ ಆಗಮನಕ್ಕೆ ವಿಶ್ವವೇ ಕಾತರಿಸಿತ್ತು.

Roopa Gururaj Column: ಮಾಡಿದ ದಾನದ ಬಗ್ಗೆ ಡಂಗುರ ಬೇಡ

ಮಾಡಿದ ದಾನದ ಬಗ್ಗೆ ಡಂಗುರ ಬೇಡ

ಚಿಕ್ಕ ಪ್ರಾಣಿಯಾದ ಮೊಲ ಕೂಡ ತನ್ನ ದಾನಕ್ಕೆ ಬದಲಾಗಿ ಏನನ್ನೂ ಅಪೇಕ್ಷಿಸಲಿಲ್ಲ. ಈ ವಿಷಯ ನಮ್ಮೆಲ್ಲರಿಗೂ ದೊಡ್ಡ ಪಾಠವಾಗಬಹುದಲ್ಲವೇ? ಮಾಡಿದ ಒಂದು ಚಿಕ್ಕ ಸಹಾಯಕ್ಕೆ, ಸಹಾಯ ಪಡೆದವರು ಸದಾ ನಮಗೆ ಚಿರಋಣಿ ಗಳಾಗಿರಬೇಕು ಎಂದು ಅಪೇಕ್ಷೆ ಪಡುತ್ತೇವೆ. ಅವರು ನಮ್ಮಿಂದ ಸಹಾಯ ಪಡೆದ ಮೇಲೆ ಹೇಗೆ ಬೆಳೆದರು ಹೇಗೆ ಉಳಿದರು ಎನ್ನುವ ಕಥೆ ಯನ್ನು ನಾವು ಸಾವಿರ ಸಲ ಹೇಳುತ್ತಾ ಅವರಿಗೂ ಅದನ್ನು ಮರೆಯಲು ಬಿಡದೆ ಸದಾ ದೈಯಕ್ಕೆ ದೂಡುತ್ತೇವೆ.

Roopa Gururaj Column: ಅಪರಿಚಿತರೊಡನೆ ಸ್ನೇಹ ಆಪತ್ತಿಗೆ ಆಹ್ವಾನ

ಅಪರಿಚಿತರೊಡನೆ ಸ್ನೇಹ ಆಪತ್ತಿಗೆ ಆಹ್ವಾನ

ಸೂರ್ಯ ಮುಳುಗುತ್ತಿದ್ದಂತೆ ಜಿಂಕೆಯು ನರಿಯೊಂದಿಗೆ ಚಂಪಕ ಮರದ ಕೆಳಗಿರುವ ತನ್ನ ಮನೆಗೆ ಹಿಂದಿರುಗಿತು. ಮರದ ಮೇಲೆ ಜಿಂಕೆಯ ಸ್ನೇಹಿತ ಕಾಗೆ ವಾಸಿಸುತ್ತಿತ್ತು. ಜಿಂಕೆಯು ನರಿಯನ್ನು ತನ್ನ ಹೊಸ ಸ್ನೇಹಿತ ಎಂದು ಕಾಗೆಗೆ ಪರಿಚಯಿಸಿತು. ಕಾರಣವಿಲ್ಲದೆ ಬರುವ ಅಪರಿಚಿತರನ್ನು ನಂಬುವುದು ಸರಿಯಲ್ಲ ಎಂದು ಕಾಗೆ ಜಿಂಕೆಯನ್ನು ಪಕ್ಕಕ್ಕೆ ಕರೆದು ಹೇಳಿತು.

Roopa Gururaj Column: ಸಾವಿಲ್ಲದ ಮನೆಯ ಸಾಸಿವೆ ಉಂಟೇ ?

ಸಾವಿಲ್ಲದ ಮನೆಯ ಸಾಸಿವೆ ಉಂಟೇ ?

ಆಕೆಗೆ ಬುದ್ಧರ ಮಾತಿನ ಗುಟ್ಟು ಅರಿವಿಗೆ ಬರಲೇ ಇಲ್ಲ. ತಕ್ಷಣ ಅಲ್ಲಿಂದ ಓಡುತ್ತಾ ಪ್ರತಿಯೊಂದು ಮನೆ ಮನೆಗೂ ಹೋಗಿ ಸಾಸಿವೆ ಬೇಡಲಾರಂಭಿಸಿದಳು. ಪ್ರತಿಯೊಂದು ಕುಟುಂಬದಲ್ಲೂ ಬದುಕಿರುವವರಿ ಗಿಂತ ಸತ್ತಿರು ವವರೇ ಜಾಸ್ತಿ. ತಂದೆ ತಾಯಿ, ಅಜ್ಜಿ ತಾತಂದಿರು ಲೆಕ್ಕವಿಲ್ಲದಷ್ಟು ಮಂದಿ ಸತ್ತಿರುವವರು. ಈಕೆ ಸಂಜೆಯ ತನಕ ಮನೆ ಮನೆಗೆ ಹೋಗಿ ಸಾಸಿವೆ ಬೇಡಿದಳು.

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

ಭಗವದ್ಗೀತೆಯ ಸಾರ ತಿಳಿದವರು

ಪಂಡಿತ ಪಟ್ಟು ಹಿಡಿದ. ಗೀತೆ ನನಗೆ ಸರಿಯಾಗಿ ಅರ್ಥವಾಗಿಲ್ಲವೆಂದು ರಾಜ ಜಾರಿಕೊಂಡ. ಪಂಡಿತ ಬಿಡಲಿಲ್ಲ. ತೀರ್ಮಾನಕ್ಕೆ ವಿಂಧ್ಯಾಚಲದ ತಪೋವನದಲ್ಲಿರುವ ಮುನಿ ಬಳಿ ಕರೆದೊಯ್ದ. ಮುನಿಗಳು ‘ನೀನು ರಾಜನಿಗೆ ಗೀತೆ ಕಲಿಸಿದ್ದು ನಿಜವೇ?’ ಎಂದು ಪ್ರಶ್ನಿಸಿದರು. ಪ್ರತಿ ಪದದ ಪ್ರಕೃತಿ ಪ್ರತ್ಯಯ ಭಿನ್ನ ಭಿನ್ನ ಅರ್ಥ ಎಲ್ಲಾ ತಿಳಿಸಿದ್ದೇನೆ ಎಂದ ಪಂಡಿತ.

Roopa Gururaj Column: ಶ್ರೀರಾಮ ರಕ್ಷಾ ಸ್ತ್ರೋತ್ರ ಏಕೆ ಪಠಿಸಬೇಕು ?

ಶ್ರೀರಾಮ ರಕ್ಷಾ ಸ್ತ್ರೋತ್ರ ಏಕೆ ಪಠಿಸಬೇಕು ?

ರಾಮನ ಪ್ರೀತಿಗಾಗಿ ಹಂಬಲಿಸಿ ಲಕ್ಷ್ಮಣ ವನವಾಸಕ್ಕೆ ಹೋದರೆ, ಭರತ ಅಣ್ಣನಿಗೆ ಇಲ್ಲದ ಸುಖ ತನಗೂ ಬೇಡವೆಂದು ನಂದಿ ಗ್ರಾಮದಲ್ಲಿ ಕುಟೀರ ಕಟ್ಟಿಕೊಂಡು ಋಷಿಗಳಂತೆ ಬದುಕಿದ. ಅಣ್ಣಂದಿರ ಮಾತೇ ವೇದ ವಾಕ್ಯ ವೆಂದ ಶತ್ರುಘ್ನ ಭರತನ ಆಣತಿಯಂತೆ ರಾಜ್ಯ ಭಾರ ಮಾಡಿದ. ವನವಾಸಕ್ಕೆ ಹೊರಟ ರಾಮನಿಗೆ ರಥದ ಸಾರಥಿ, ದೋಣಿಯಲ್ಲಿ ಗಂಗಾ ನದಿ ದಾಟಿಸಿದ ಅಂಬಿಗ ‘ಗುಹಾ’ ತನ್ನ ಸರ್ವಸ್ವವನ್ನು ಅರ್ಪಿಸಲು ಮುಂದಾದನು.

Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?

ಸಂತೋಷವಾಗಿರಲು ಏನು ಮಾಡಬೇಕು ?

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಲೌಕಿಕ ಸುಖ ಸಾಧನಗಳು ಎಷ್ಟೇ ಇದ್ದರೂ, ಅವು ಸುಖವನ್ನು, ಶಾಂತಿಯನ್ನೂ ತರಲಾರವು. ಇವಾವುವೂ ಅಗತ್ಯವಾದಷ್ಟು ಮಟ್ಟದಲ್ಲಿ ಇಲ್ಲದಿ ದ್ದರೂ, ಅವರು ಸುಖ ಸಂತೋಷದಿಂದ ಇದ್ದರು. ಹೇಗೆ? ಅವರು ಸದಾ ತಮ್ಮ ಮನಸ್ಸನ್ನು ಅಂಕುಶದಲ್ಲಿ ಇಟ್ಟಿದ್ದರು.

Roopa Gururaj Column: ಭಾಗವತ ಕಥೆಗಳನ್ನು ಏಕೆ ಓದಬೇಕು ?

ಭಾಗವತ ಕಥೆಗಳನ್ನು ಏಕೆ ಓದಬೇಕು ?

ಒಂದು ವೇಳೆ ತಾಯಿ ಪಾರ್ವತಿ ಹೂಗುಟ್ಟದಿದ್ದರೆ ಪರಮೇಶ್ವರನು ಕಥೆ ಹೇಳುವುದನ್ನು ನಿಲ್ಲಿಸಿ ಬಿಡುತ್ತಾನೆ ಎಂದುಕೊಂಡು ಪಾರ್ವತಿಯಂತೆ ಗಿಳಿಯೂ ಸಹ ಶಿವನು ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ ಮಧ್ಯಮಧ್ಯ ಹೂ ಗುಟ್ಟುತ್ತಿತ್ತು. ಶಿವನು ಅಮರಕತೆಯನ್ನು ಹೇಳಿ ಮುಗಿಸಿದನು ಅವನಿಗೆ ಪರಮಾನಂದವಾಗಿತ್ತು.

Roopa Gururaj Column: ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ !

ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ !

ರಾಜನಿಗೆ ಅವನನ್ನು ನೋಡಿ ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ ಆಗ ಸರಿ ಹೋಗಬಹುದು ಎಂದು ಮತ್ತೆ ಋಷಿಯ ಮೊರೆ ಹೋದ. ಆಗ ಋಷಿಗಳು, ‘ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣು ತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ’ ಎಂದು ಹೇಳಿದರು.

Roopa Gururaj Column: ಸದಾ ಧರ್ಮದಲ್ಲಿ ನಡೆದ ಕೌರವ ಸಹೋದರಿ ʼದುಶ್ಯಲಾʼ

ಸದಾ ಧರ್ಮದಲ್ಲಿ ನಡೆದ ಕೌರವ ಸಹೋದರಿ ʼದುಶ್ಯಲಾʼ

ಮಹಾಭಾರತದಲ್ಲಿ ಬರುವ ‘ದುಶ್ಯಲಾ’ ಧೃತರಾಷ್ಟ್ರ ಗಾಂಧಾರಿಯರ 101 ಜನ ಮಕ್ಕಳಲ್ಲಿ ಏಕೈಕ 101ನೇ ಮುದ್ದಿನ ಕುವರಿ. ಮಹಾಭಾರತದ ತೆರೆಮರೆಗೆ ಸರಿದ ಪಾತ್ರಗಳಲ್ಲಿ ಇವಳ ಪಾತ್ರ ವೂ ಒಂದು. ಕೌರವ ಪಾಂಡವರಿಬ್ಬರಿಗೂ ಇವಳು ಏಕೈಕ ಸಹೋದರಿ. ಸುಂದರಿ ದುಶ್ಯಲಾ ಪಿತಾಮಹ ಭೀಷ್ಮರಿಂದ ಸಮರ ಕಲೆಯನ್ನು ಕಲಿತಿದ್ದಳು

Roopa Gururaj Column: ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ

ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ

ಗುರುಗಳು ಶಾಂತವಾಗಿಯೇ ಇದ್ದರು, ಒಂದು ಮಾತನ್ನೂ ಆಡದೆ, ಸ್ವಲ್ಪ ದೂರದಲ್ಲಿ ಒಂದು ಗುಹೆ ಕಾಣುತ್ತಿತ್ತು, ಶಿಷ್ಯನ ಕೈಹಿಡಿದು ಕೊಂಡು ಆ ಗುಹೆಯೊಳಗೆ ನಡೆದು, ಇಬ್ಬರೂ ಅಲ್ಲಿ ಅಡಗಿ ಕುಳಿತರು. ಸ್ವಲ್ಪ ಸಮಯದ ನಂತರ, ಕೊಲೆಗಡುಕರ ಗುಂಪು ಆ ಗುಹೆಯ ಬಾಗಿಲಲ್ಲಿ ಬಂದು ನಿಂತಿತು.

Roopa Gururaj Column: ಒಡಹುಟ್ಟಿದವರು ತಂದೆ ತಾಯಿಯ ಸ್ಥಾನ ತುಂಬಬೇಕು

ಒಡಹುಟ್ಟಿದವರು ತಂದೆ ತಾಯಿಯ ಸ್ಥಾನ ತುಂಬಬೇಕು

ಅಣ್ಣನಿಗೆ ತಂಗಿ ಪರಿಸ್ಥಿತಿ ಅರ್ಥವಾಗುತ್ತದೆ. ನೀರನ್ನು ಕುಡಿದು ಓಹೋ ಈ ಸೋಡಾ ನನಗೆ ಬಹಳ ಇಷ್ಟ ಚೆನ್ನಾಗಿದೆ ಎಂದನು. ಇದನ್ನು ಕೇಳಿದ ಅತ್ತಿಗೆ ತಾಯಿಗೆ ಆಸೆಯಾಯಿತು ಸೋಡಾ ನನಗೂ ಸ್ವಲ್ಪ ಕೊಡು ಎಂದರು. ಅತ್ತಿಗೆ ತಾಯಿಯ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಕೊಂಡಿದ್ದಳು.