Amruthadhaare Serial: ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ - ಭೂಮಿ!
Amruthadhaare Serial: ಸದ್ಯ ಪ್ರಸಾರವಾಗುತ್ತಿರುವ ಎಪಿಸೋಡ್ ಪ್ರಕಾರ ಈಗ ಮಿಂಚುವನ್ನು ಕಿಡ್ನಾಪರ್ ಜೊತೆ ಹೋರಾಡಿ, ಮಿಂಚುವಿಗೆ ಯಾವುದೇ ಅಪಾಯ ಆಗದ ಹಾಗೆ ಕರೆದುಕೊಂಡು ಬಂದಿದ್ದಾಳೆ ಭೂಮಿಕಾ. ಆದರೆ ಈಗ ತಮ್ಮ ಮಗಳ ಹುಡುಕಾಟ ಮಾತ್ರ ಮುಂದುವರೆದಿದೆ. ಅಂಗೈಯಲ್ಲಿ ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ – ಭೂಮಿ ಇದ್ದಾರೆ. ನಕಲಿ ತಂದೆಯ ಬಳಿ ಗೌತಮ್ ಮನವಿ ಮಾಡಿಕೊಂಡಿದ್ದಾನೆ.
ಅಮೃತಧಾರೆ ಧಾರಾವಾಹಿ -
ಅಮೃತಧಾರೆ ಧಾರಾವಾಹಿಯಲ್ಲಿ (amruthadhaare serial) ಸದ್ಯ ಪ್ರಸಾರವಾಗುತ್ತಿರುವ ಎಪಿಸೋಡ್ ಪ್ರಕಾರ ಈಗ ಮಿಂಚುವನ್ನು ಕಿಡ್ನಾಪರ್ ಜೊತೆ ಹೋರಾಡಿ, ಮಿಂಚುವಿಗೆ ಯಾವುದೇ ಅಪಾಯ ಆಗದ ಹಾಗೆ ಕರೆದುಕೊಂಡು ಬಂದಿದ್ದಾಳೆ ಭೂಮಿಕಾ (Bhoomika). ಆದರೆ ಈಗ ತಮ್ಮ ಮಗಳ ಹುಡುಕಾಟ ಮಾತ್ರ ಮುಂದುವರೆದಿದೆ. ಅಂಗೈಯಲ್ಲಿ ಪ್ರೀತಿಯಿಂದ ಸಾಕಿದ ಮಗಳು ಮಿಂಚು (Minchu) ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ – ಭೂಮಿ ಇದ್ದಾರೆ. ನಕಲಿ ತಂದೆಯ ಬಳಿ ಗೌತಮ್ ಮನವಿ ಮಾಡಿಕೊಂಡಿದ್ದಾನೆ.
ಗೌತಮ್ ಬೇಸರ
ದುಡ್ಡು ಬೇಕಾ? ಮನೆ ಬೇಕಾ? ಕಾರು ಬೇಕಾ? ಅಂತ ಕೇಳಿದ್ದೆ. ಮಿಂಚುನಾ ಮಾತ್ರ ದೂರ ಮಾಡಬೇಡಿ ಎಂದು ಗೌತಮ್, ನಕಲಿ ತಂದೆ ಬಳಿ ಮನವಿ ಮಾಡಿರೋದಾಗಿ ಭೂಮಿ ಬಳಿ ಹೇಳಿದ್ದಾನೆ. ಮಿಂಚು ವಿಷಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಭಯವಾಗುತ್ತಿದೆ ಎಂದಿದ್ದಾನೆ ಗೌತಮ್. ಮಿಂಚು ನೋಡ್ತಾ ನೋಡ್ತಾ ನಮ್ಮ ಜೀವನದ ಭಾಗ ಆಗಿ ಹೋದಳು. ಅವಳು ಇಲ್ಲದೇ ಇರೋ ಮನೆಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ಹೊರ ಹಾಕಿದ್ದಾನೆ ಗೌತಮ್.
ಇದನ್ನೂ ಓದಿ: Kangana Ranaut: ಬಾಕ್ಸ್ ಆಫೀಸ್ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ; ಕಲೆಕ್ಷನ್ ಎಷ್ಟು?
ಅತ್ತ ಮಿಂಚು ಕೂಡ ನಿದ್ದೆಗಣ್ಣಲ್ಲಿ ಅಪ್ಪ ಅಪ್ಪ ಅಂತ ಕನವರಿಸಿಸೋ ಬಗ್ಗೆ ಅಪ್ಪು ತಂದೆ ತಾಯಿ ಬಳಿ ಹೇಳಿದ್ದಾನೆ. ಒಟ್ಟಾರೆ ಈ ಎಪಿಸೋಡ್ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಇತ್ತೀಚೆಗೆ ಪ್ರಸಾರವಾದ ಪ್ರೊಮೋದಲ್ಲಿ ತೋರಿಸಿದಂತೆ, ಜೆಡಿ ಕಳುಹಿಸಿದ ಫೇಕ್ ಅಪ್ಪ-ಅಮ್ಮ ಮಿಂಚು ನಮ್ಮ ಮಗಳು ಎಂದಿದ್ದಾಳೆ. ಆದರೆ ಗೌತಮ್, ಇಲ್ಲ ಮಿಂಚು ನಮ್ಮದೇ ಮಗಳು, ಬೇಕಾದ್ರೆ DNA ಟೆಸ್ಟ್ ಎಂದು ಸಹ ಹೇಳಿದ್ದಾರೆ.
ಅಣ್ಣಯ್ಯ ಧಾರಾವಾಹಿ ಪಾರು, ಇನ್ನೊಂದು ಅವಳಿ ಮಕ್ಕಳ ಡೆಲಿವರಿ ಮಾಡುವ ಸಮಯದಲ್ಲಿ ಭೂಮಿಕಾ ಮೇಡಂ ನೆನಪು ಮಾಡಿಕೊಳ್ಳುತ್ತಾಳೆ. ಭೂಮಿಕಾ ಮೇಡಂಗೂ ಅವಳಿ ಮಕ್ಕಳಾಗಿತ್ತು, ಆದರೆ ಒಂದು ಮಗು ಕಾಣೆಯಾಗಿತ್ತು,
ಆದರೆ, ಆ ಮಗುವಿನ ಕೈಯಲ್ಲಿ ತ್ರಿಶೂಲದ ಮಚ್ಚೆ ಇತ್ತು ಅನ್ನೋದನ್ನು ನೆನಪಿಸಿಕೊಳ್ಳುತ್ತಾಳೆ. ಮಗುವಿನ ಬಗ್ಗೆ ತಿಳಿಯಲು ಭೂಮಿಕಾಗೆ ಫೋನ್ ಮಾಡುವ ಪಾರು, ಮಗುವಿನ ಬಗ್ಗೆ ವಿಚಾರಿಸುತ್ತಾಳೆ. ಮಗುವಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಭೂಮಿಕಾ ಹೇಳುತ್ತಾಳೆ. ಆ ಸಂದರ್ಭದಲ್ಲಿ ಪಾರು ಮೇಡಂ ಖಂಡಿತವಾಗಿಯೂ ನಿಮ್ಮ ಮಗು ಶೀಘ್ರದಲ್ಲಿ ನಿಮ್ಮ ಕೈ ಸೇರಲಿದೆ ಎನ್ನುತ್ತಾಳೆ
ಕಾಡಿನಲ್ಲಿ ಕಳೆದು ಹೋಗಿದ್ದ ಭೂಮಿಕಾಗೆ ಡೆಲಿವರಿ ಮಾಡಿಸಿದ್ದು ಡಾಕ್ಟರ್ ಕರ್ಣ ಮತ್ತು ಪಾರು. ಹಾಗಾಗಿ ಅವರಿಂದಲೇ ಭೂಮಿಕಾ-ಗೌತಮ್ ಮಗು ಮಿಂಚು ಎನ್ನುವ ವಿಷಯ ರಿವೀಲ್ ಆಗುವ ಎಲ್ಲಾ ಸಾಧ್ಯತೆ. ಇದೆ.
ಇದನ್ನೂ ಓದಿ: Model Arrested: ಕೇರಳ ಮಾಡೆಲ್ ಬ್ಯಾಗ್‌ನಲ್ಲಿ ಡ್ರಗ್ಸ್! ಮುಂಬೈ ಏರ್ಪೋರ್ಟ್‌ನಲ್ಲಿ ಅರೆಸ್ಟ್
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ