Drishyam 3 OTT: ಮೋಹನ್‌ಲಾಲ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್; ಸ್ಟ್ರೀಮಿಂಗ್ ಯಾವಾಗಿನಿಂದ?
Drishyam 3 OTT: ದೃಶ್ಯಂ (2013) ಮತ್ತು ದೃಶ್ಯಂ 2 (2021) ಭಾರತಾದ್ಯಂತ ಹಿಟ್ ಆಗಿದ್ದವು ಮತ್ತು ಹಿಂದಿ, ಸಿಂಹಳ, ಮ್ಯಾಂಡರಿನ್ ಮತ್ತು ಕೊರಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್ ಮಾಡಲ್ಪಟ್ಟವು. ಇನ್ನು ಜಾರ್ಜ್‌ಕುಟ್ಟಿಯ ಈ ಮೈಂಡ್ ಗೇಮ್‌ನ ನೀವು ಕನ್ನಡದಲ್ಲಿಯೂ ಕೂಡ ನೋಡಬಹುದು. ತಮಿಳು, ತೆಲುಗು ಮತ್ತು ಕನ್ನಡಕ್ಕೆ ಈ ಚಿತ್ರವನ್ನು ಡಬ್ ಮಾಡಲಾಗಿದೆ.ಅಂದ್ಹಾಗೇ ''ದೃಶ್ಯಂ 3'' ಜಾರ್ಜ್ ಕುಟ್ಟಿಯ ಕೊನೆ ಆಟ ಎಂದು ಹೇಳಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ''ದೃಶ್ಯಂ 4'' ಬಂದರೂ ಬರಬಹುದು. ಇದೀಗ ದೃಶ್ಯಂ 3 ಸಿನಿಮಾ ಒಟಿಟಿ (Cinema OTT) ಜಗತ್ತಿಗೆ ಕಾಲಿಡುತ್ತಿದೆ. ಸ್ಟ್ರೀಮಿಂಗ್ ಎಲ್ಲಿ? ಯಾವಾಗಿನಿಂದ?
ದೃಶ್ಯಂ 3 ಸಿನಿಮಾ -
ಜೀತು ಜೋಸೆಫ್ ಅವರ ಮೋಹನ್ ಲಾಲ್ (Mohan Lal) ಅಭಿನಯದ ದೃಶ್ಯಂ 3 (Drishaym 3) ಚಿತ್ರ ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ ₹ 200 ಕೋಟಿ ಗಳಿಸಿತು. ಇದೀಗ ಸಿನಿಮಾ ಒಟಿಟಿ (Cinema OTT) ಜಗತ್ತಿಗೆ ಕಾಲಿಡುತ್ತಿದೆ. ಸ್ಟ್ರೀಮಿಂಗ್ ಎಲ್ಲಿ? ಯಾವಾಗಿನಿಂದ?
ದೃಶ್ಯಂ 3 ಸ್ಟ್ರೀಮಿಂಗ್ ಎಲ್ಲಿ?
ಶನಿವಾರ ಜೂನ್ 18 ರಿಂದ ಪ್ರೈಮ್ ವಿಡಿಯೋದಲ್ಲಿ ದೃಶ್ಯಂ 3 ಸ್ಟ್ರೀಮಿಂಗ್ ಆಗುತ್ತಿದೆ. ಬಿಡುಗಡೆಯಾದ ಒಂದು ತಿಂಗಳೊಳಗೆ OTT ಯಲ್ಲಿ ಬಿಡುಗಡೆಯಾಗಲಿದೆ.
ದೃಶ್ಯಂ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಥ್ರಿಲ್ಲರ್-ಡ್ರಾಮಾ ಫ್ರಾಂಚೈಸಿಗಳಲ್ಲಿ ಒಂದಾಗಿದ್ದು, ನಿರೂಪಣೆ, ಆಕರ್ಷಕ ಅಭಿನಯಗಳಿಗೆ ಹೆಸರುವಾಸಿಯಾಗಿದೆ. ಜೀತು ಜೋಸೆಫ್ ಬರೆದು ನಿರ್ದೇಶಿಸಿದ್ದಾರೆ, ಪೆನ್ ಸ್ಟುಡಿಯೋಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಿದ್ದಾರೆ ಮತ್ತು ಆಂಥೋನಿ ಪೆರುಂಬವೂರ್, ಆಶೀರ್ವಾದ್ ಸಿನಿಮಾಸ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: Divyashree Sullia: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ನಟಿ; 'ಕೃಷ್ಣ ರುಕ್ಕು' ಸೀರಿಯಲ್ ನಟಿಯ ಹೋರಾಟದ ಕಥೆ ಇದು
ದೃಶ್ಯಂ (2013) ಮತ್ತು ದೃಶ್ಯಂ 2 (2021) ಭಾರತಾದ್ಯಂತ ಹಿಟ್ ಆಗಿದ್ದವು ಮತ್ತು ಹಿಂದಿ, ಸಿಂಹಳ, ಮ್ಯಾಂಡರಿನ್ ಮತ್ತು ಕೊರಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್ ಮಾಡಲ್ಪಟ್ಟವು.
ಇನ್ನು ಜಾರ್ಜ್‌ಕುಟ್ಟಿಯ ಈ ಮೈಂಡ್ ಗೇಮ್‌ನ ನೀವು ಕನ್ನಡದಲ್ಲಿಯೂ ಕೂಡ ನೋಡಬಹುದು. ತಮಿಳು, ತೆಲುಗು ಮತ್ತು ಕನ್ನಡಕ್ಕೆ ಈ ಚಿತ್ರವನ್ನು ಡಬ್ ಮಾಡಲಾಗಿದೆ.ಅಂದ್ಹಾಗೇ ''ದೃಶ್ಯಂ 3'' ಜಾರ್ಜ್ ಕುಟ್ಟಿಯ ಕೊನೆ ಆಟ ಎಂದು ಹೇಳಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ''ದೃಶ್ಯಂ 4'' ಬಂದರೂ ಬರಬಹುದು. ಆ ಸಾಧ್ಯತೆ ಇದೆ. ಖುದ್ದು ನಿರ್ದೇಶಕ ಜೀತು ಜೋಸೆಫ್ ಈ ಸುಳಿವು ನೀಡಿದ್ಧಾರೆ. ಆದರೆ, ಇದೇ ವೇಳೆ ಸದ್ಯಕ್ಕಂತೂ ಇದೇ ಕೊನೆಯದ್ದು ಎಂದು ಕೂಡ ಹೇಳಿದ್ಧಾರೆ.
ಜಾರ್ಜ್ ಕುಟ್ಟಿ ಓರ್ವ ಸಾಮಾನ್ಯ ವ್ಯಕ್ತಿ. ನಾಲ್ಕನೇ ತರಗತಿಯವರೆಗೆ ಮಾತ್ರ ಓದಿದ್ದಾನೆ. ಸಿನಿಮಾಗಳನ್ನು ಪ್ರೀತಿಸುತ್ತಾನೆ. ಹಳ್ಳಿಗಾಡಿನ ಈ ವ್ಯಕ್ತಿ ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸುವವರಿಂದ ರಕ್ಷಿಸುತ್ತಾನೆ. ಇದೇ ಚಿತ್ರದ ಕಥೆ. ಇದನ್ನು 3 ಭಾಗಗಳಲ್ಲಿ ಕಾಣಬಹುದು.
Georgekutty and family awaits you ✨#Drishyam3OnPrime, June 18@mohanlal @jeethu4ever @antonypbvr @KumarMangat @jayantilalgada @AbhishekPathakk @aashirvadcine @PanoramaMovies @PenMovies @Rajeshmenon1969 pic.twitter.com/prBrniI6eN
— prime video IN (@PrimeVideoIN) June 13, 2026
ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೋಹನ್‌ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಕ್, ಮುರಳಿ ಗೋಪಿ, ಕೆ.ಬಿ.ಗಣೇಶ್ ಕುಮಾರ್, ಇರ್ಷಾದ್ ಅಲಿ, ಶಾಂತಿ ಮಾಯಾದೇವಿ, ವೀಣಾ ನಂದಕುಮಾರ್, ದಿನೇಶ್ ಪ್ರಭಾಕರ್ ಮತ್ತು ಶ್ರೀಕಾಂತ್ ಮುರಳಿ ನಟಿಸಿದ್ದಾರೆ.
ಇದನ್ನೂ ಓದಿ: Radhika Pandit: ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್; ಸ್ಪೆಷಲ್ ವಿಡಿಯೋದಲ್ಲಿದೆ ಈ ಹಾಡು!
ಇತ್ತೀಚೆಗಷ್ಟೇ ಅಜಯ್ ದೇವ್ಗನ್ ನಟನೆಯ ಹಿಂದಿ ದೃಶ್ಯಂ 3ರ ಅಪ್ಡೇಟ್ ಕೂಡಾ ಹೊರಬಿದ್ದಿದೆ. ಹೌದು, ಪ್ರಕಾಶ್ ರಾಜ್ ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.