ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೇಲ್ನೋಟಕ್ಕೆ ಪುಸ್ತಕ ಮಾರಾಟ; ಹಿಂಬಾಗಿಲಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿ: ಬೆಳಗಾವಿ, ಉತ್ತರ ಕನ್ನಡದ 13 ಶಂಕಿತರ ಬಂಧನ

ಅಕ್ರಮ ಶಸ್ತ್ರಾಸ್ತ್ರ ತಯಾರಿಸುತ್ತಿದ್ದ ಆರೋಪದಲ್ಲಿ ಕರ್ನಾಟಕ ಪೊಲೀಸರು ಪುಸ್ತಕ ಮಾರಾಟಗಾರನೊಬ್ಬ ಸೇರಿದಂತೆ ಒಟ್ಟು 13 ಶಂಕಿತರನ್ನು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಂದೂಕು ಸರಬರಾಜು ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಶಸ್ತ್ರಾಸ್ತ್ರ ತಯಾರಿ: 13 ಮಂದಿಯ ಬಂಧನ

ಸಂಗ್ರಹ ಚಿತ್ರ -

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ (illegal weapon) ತಯಾರಿಸುತ್ತಿದ್ದ ಆರೋಪದಲ್ಲಿ 13 ಮಂದಿಯನ್ನು ಬಂಧಿಸಲಾಗಿದ್ದು, ಇವರಿಂದ ಅಪಾರ ಪ್ರಮಾಣ ದೇಶೀಯ ನಿರ್ಮಿತ ಪಿಸ್ತೂಲ್‌ಗಳು, ಮದ್ದುಗುಂಡುಗಳಿಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಜಿಲ್ಲೆಯ (Belagavi district) ಖಾನಾಪುರ (khanapur) ತಾಲೂಕಿನ ಕಟಗಲಿ ಗ್ರಾಮದಿಂದ ಕಾರ್ಯನಿರ್ವಹಿಸುತ್ತಿದ್ದ ಬಂದೂಕು ಸರಬರಾಜು ಜಾಲವನ್ನು ಭೇದಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಪುಸ್ತಕ ಮಳಿಗೆ ನಡೆಸುತ್ತಿದ್ದ ವ್ಯಕ್ತಿ ಸೇರಿದಂತೆ ಹದಿಮೂರು ಮಂದಿಯನ್ನು ಬಂಧಿಸಿದ್ದಾರೆ.

ಅಕ್ರಮ ದೇಶೀಯ ನಿರ್ಮಿತ ಪಿಸ್ತೂಲ್ ತಯಾರಿ ಮತ್ತು ಸರಬರಾಜು ಜಾಲವನ್ನು ಭೇದಿಸಿರುವ ಪೊಲೀಸರು ಒಂಬತ್ತು ದೇಶೀಯ ನಿರ್ಮಿತ ಪಿಸ್ತೂಲ್‌ಗಳು, ದೊಡ್ಡ ಪ್ರಮಾಣದ ಬಂದೂಕು ಘಟಕಗಳು, ಮದ್ದುಗುಂಡುಗಳಿಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

“ಮಾನ್ವಿ ಹೊರಗಡೆ ಇರು”: ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಗಳ ಸುರಕ್ಷತೆಗಾಗಿ ಪತ್ರ ಬರೆದ ಅಪ್ಪ; ದೇಶವನ್ನೇ ಭಾವುಕವಾಗಿಸಿದ ಆ ಸಂದೇಶದಲ್ಲಿ ಏನಿದೆ?

ಪ್ರಕರಣಕ್ಕೆ ಸಂಬಂಧಿಸಿ ಕಟಗಲಿ ಗ್ರಾಮದ ಮಾರುತಿ ಸುತಾರ್ ನನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈತ 2024ರಿಂದ ತನ್ನ ಮನೆಯಲ್ಲಿ ದೇಶೀಯ ನಿರ್ಮಿತ ಪಿಸ್ತೂಲ್‌ಗಳನ್ನು ತಯಾರಿಸುತ್ತಿದ್ದನು. ಆತನ ಮನೆಯಿಂದ ಒಂದು ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ.

ಸಿಂಗಲ್-ಲೋಡೆಡ್ ಮತ್ತು ಡಬಲ್-ಲೋಡೆಡ್ ದೇಶೀಯ ನಿರ್ಮಿತ ಪಿಸ್ತೂಲ್‌ಗಳನ್ನು ತಯಾರಿಸುತ್ತಿದ್ದ ಆರೋಪಿ ಮಾರುತಿ ಸುತಾರ್, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಮಾರಾಟ ಮಾಡಲಾದ ಎಂಟು ಪಿಸ್ತೂಲ್‌ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.


https://www.instagram.com/reel/DY9k2ePJVas/?utm_source=ig_web_copy_link&igsh=NTc4MTIwNjQ2YQ==

ಖಾನಾಪುರ ತಾಲೂಕಿನಲ್ಲಿ 2024ರಲ್ಲಿ ದಾಖಲಾದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ವೇಳೆ ಅಕ್ರಮ ಶಸ್ತ್ರಾಸ್ತ್ರ ತಯಾರಿ ಜಾಲವನ್ನು ಪೊಲೀಸರು ಭೇದಿಸಿದರು.

ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಗೆ ಹಣಕಾಸು ಒದಗಿಸಿರುವ ಮರಿಯಪ್ಪ ನಾಯಕ್, ಬಂದೂಕು ತಯಾರಿಸಲು ವಿವಿಧ ವಸ್ತುಗಳನ್ನು ಪೂರೈಸಿರುವ ಉತ್ತರ ಕನ್ನಡದ ಜೋಯಿಡಾದಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿಶ್ವನಾಥ್ ದೇಸಾಯಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿ ಮಾರುತಿ ಸುತಾರ್, ಸೋಮನಾಥ್ ಚೌಗಲೆ, ಸಂತೋಷ್ ನಾಯಕ್, ಮಾರುತಿ ಗುಡದ್ಯಾಗೋಳ್, ಬಾಲು ನಾಯಕ್, ಲಕ್ಷ್ಮಣ್ ಗುಜನಾಲ್, ಬಸವರಾಜ್ ಸಲೋಟಗಿ, ಬಸವಂತ್ ಯರಮಲ್ಕರ್ ಲಕ್ಷ್ಮಣ್ ಗುರವ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 21 ಗನ್ ಟ್ರಿಗ್ಗರ್‌ಗಳು, ಐದು ಹೆಡ್‌ಗಳು, 15 ಗನ್ ನಿಪ್ಪಲ್‌ಗಳು, ಒಂದು ಸೀಲಿಂಗ್ ವೆಲ್ಡ್ ಘಟಕ, 34 ಗನ್ ಪೌಡರ್ ಪ್ಯಾಕೆಟ್‌ಗಳು, 499 ಸೀಸದ ಗುಂಡುಗಳು, 420 ಕ್ಯಾಪ್‌ಗಳು ಮತ್ತು 48 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲು ಎಸೆದ ಉದ್ರಿಕ್ತ ಗುಂಪು

ಬಂದೂಕು ತಯಾರಿಸಲು ಬೇಕಾದ ವಸ್ತುಗಳನ್ನು ಬೆಳಗಾವಿಯ ಖಂಜರ್ ಗಲ್ಲಿ ಪ್ರದೇಶದಿಂದ ಪಡೆಯಲಾಗಿದೆ. ಈ ಅಂಗಡಿ ಅಧಿಕೃತವಾಗಿ 2021ರಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಅನಧಿಕೃತ ಮಾರಾಟ ನಡೆಸುತ್ತಿದ್ದ ಆರೋಪದ ಮೇಲೆ ಅಂಗಡಿ ಮಾಲೀಕ ವಿಜಯ್ ಅಂಗೋಲ್ಕರ್ ನನ್ನು ಕೂಡ ಆರೋಪಿಯಾಗಿ ಗುರುತಿಸಿರುವುದಾಗಿ ಖಾನಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.