ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದ್ರಾವಿಡ ಭಾಷಾ ಅನುವಾದಕರ ಸಂಘದ ಅನುವಾದ ಪ್ರಶಸ್ತಿಗೆ ಅರ್ಜಿ ಆಹ್ವಾನ

ದ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ಅನುವಾದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳಿಂದ ತೆಲುಗು ಭಾಷೆಗೆ ಅನುವಾದಗೊಂಡ ಕಾದಂಬರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುತ್ತದೆ.

ದ್ರಾವಿಡ ಭಾಷಾ ಅನುವಾದಕರ ಸಂಘದ ಅನುವಾದ ಪ್ರಶಸ್ತಿಗೆ ಅರ್ಜಿ ಆಹ್ವಾನ

-

Profile
Siddalinga Swamy May 27, 2026 7:06 PM

ಬೆಂಗಳೂರು, ಮೇ 27: ದ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ಅನುವಾದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳಿಂದ ತೆಲುಗು ಭಾಷೆಗೆ ಅನುವಾದಗೊಂಡ ಕಾದಂಬರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುತ್ತದೆ. ಅನುವಾದಿತ ಕಾದಂಬರಿ 2024 ಮತ್ತು 2025ನೇ ಸಾಲಿನಲ್ಲಿ ಪ್ರಕಟಗೊಂಡಿರಬೇಕು.

ಅನುವಾದಿತ ಕಾದಂಬರಿಯ ಮೂರು ಪ್ರತಿಗಳನ್ನು ಜೂನ್ 30ರೊಳಗೆ ಅಧ್ಯಕ್ಷರು, ಡಿ.ಬಿ.ಟಿ.ಎ., ಶ್ರೀ ಭೈರವೇಶ್ವರ ನಿಲಯ, ಬ್ರಹ್ಮಕುಮಾರಿ ಸಮಾಜ ಹತ್ತಿರ, ಹೆಚ್. ಪಿ. ಗ್ಯಾಸ್ ಲೇನ್, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್‌ಫೀಲ್ಡ್, ಬೆಂಗಳೂರು – 560066 ವಿಳಾಸಕ್ಕೆ ಕಳುಹಿಸಬೇಕು.‌

ಬೆಂಗಳೂರಿನಲ್ಲಿ ಮೇ 31ರಂದು ಪರಮ್ ಕಲ್ಚರ್ ವತಿಯಿಂದ 'ಕಲಾ ಸಂವಾದ 5' ಕಾರ್ಯಕ್ರಮ

ಪ್ರಶಸ್ತಿಯು ₹11,111 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಂಘದ ಐದನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ. 2025ರಲ್ಲಿ ಕನ್ನಡ ಅನುವಾದ ಮತ್ತು 2024ರಲ್ಲಿ ತಮಿಳು ಅನುವಾದಕ್ಕೆ ಪ್ರಶಸ್ತಿ ನೀಡಲಾಗಿದೆ. 2027ರಲ್ಲಿ ಮಲಯಾಳಂ ಅನುವಾದಕ್ಕೆ ಪ್ರಶಸ್ತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9901041889, 8147212724 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.