ಆಡಳಿತ ವೈಫಲ್ಯ, ಒಳಜಗಳ ಮರೆಮಾಚಲು ಜಾತಿ ಸಮೀಕ್ಷೆ ನಾಟಕ: ಜೋಶಿ
Pralhad Joshi: ಜಾತಿ ಸಮೀಕ್ಷೆ ಹೆಸರಲ್ಲಿ ರಾಜ್ಯದಲ್ಲಿರುವ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ರಾಜ್ಯದಲ್ಲೆಲ್ಲೂ ಅಭಿವೃದ್ಧಿ ಕಾಮಗಾರಿ-ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದಲ್ಲಿ ಗುಂಡಿ ಮುಚ್ಚಲೂ ಹಣವಿಲ್ಲ. ಅಂಥದ್ದರಿಲ್ಲಿ ಜಾತಿ ಸಮೀಕ್ಷೆಗೆಂದು ಹಣ ವ್ಯಯಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.