Self Harming: ಪರೀಕ್ಷೆಗೆ ಕೆಲವೇ ದಿನ ಮೊದಲು ವಸತಿ ಶಾಲೆಯಲ್ಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ
ಮಂಠಾಳ ಗ್ರಾಮದ ಶರತ್, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ. ನಿನ್ನೆ (ಫೆ.10) ರಾತ್ರಿ ಡೆತ್ ನೋಟ್ ಬರೆದಿಟ್ಟು ಶರತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸ್ಟೆಲ್‌ನಲ್ಲೇ ರಾತ್ರಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ.
ಬೀದರ್ ನಾರಾಯಣಪುರ ನವೋದಯ ಶಾಲೆ -
ಬೀದರ್, ಫೆ.11: ವಸತಿ ಶಾಲೆಯಲ್ಲೇ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ (Student Suicide) ಶರಣಾಗಿರುವ ಘಟನೆ ಬೀದರ್ನಲ್ಲಿ ನಡೆದಿದೆ. ವಿದ್ಯಾರ್ಥಿ ಶರತ್ (16) ಮೃತ ದುರ್ದೈವಿಯಾಗಿದ್ದು, ಈತ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಮಂಠಾಳ ಗ್ರಾಮದ ಶರತ್, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ. ನಿನ್ನೆ (ಫೆ.10) ರಾತ್ರಿ ಡೆತ್ ನೋಟ್ ಬರೆದಿಟ್ಟು ಶರತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸ್ಟೆಲ್‌ನಲ್ಲೇ ರಾತ್ರಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಆಘಾತಗೊಂಡಿದ್ದು, ಹಾಸ್ಟೆಲ್ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
'SORRY ಮಮ್ಮಿ, ಪಾಪ i love you'
ಶರತ್ ನೇಣಿಗೆ ಶರಣಾದ ಜಾಗದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ 'SORRY ಮಮ್ಮಿ, ಪಾಪ i love you' ಎಂದು ಬರೆದಿರುವ ಶರತ್ 'Keep Smile Forever' ಎಂದು ಉಲ್ಲೇಖಿಸಿದ್ದಾನೆ. ಮಗನ ಡೆತ್ ನೋಟ್ ಕಂಡು ತಂದೆ-ತಾಯಿ ಕಣ್ಣೀರು ಹಾಕ್ತಿದ್ದಾರೆ.
ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೆಲವೇ ದಿನಗಳಿರುವ ಸಮಯದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ವಿದ್ಯಾರ್ಥಿ ಶರತ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
Chinnu Pappu: 2 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್ ರೇಶ್ಮಾ ಆತ್ಮಹತ್ಯೆ