Kumbhamela at mysore: ಇಂದಿನಿಂದ 13ನೇ ದಕ್ಷಿಣದ ಕುಂಭಮೇಳ
ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆ.12ರಂದು ಪವಿತ್ರ ಕುಂಭ ಸ್ನಾನ ನಡೆಯ ಲಿದೆ. ಅಂದು ಬೆಳಗ್ಗೆ 11ರಿಂದ 11.30 ಮತ್ತು ಮಧ್ಯಾಹ್ನ 1.30 ರಿಂದ 2ಕ್ಕೆ ಮಹೋದಯ ಪುಣ್ಯ ಮಾಘ ಸ್ನಾನ ಮಾಡಲು ಮುಹೂ ರ್ತ ನಿಗದಿ ಮಾಡಲಾಗಿದೆ
![ಇಂದಿನಿಂದ 13ನೇ ದಕ್ಷಿಣದ ಕುಂಭಮೇಳ](https://cdn-vishwavani-prod.hindverse.com/media/original_images/Kumbhamela_at_mysore_ok.jpg)
![Profile](https://vishwavani.news/static/img/user.png)
ಕೆ.ಜೆ.ಲೋಕೇಶ್ ಬಾಬು, ಮೈಸೂರು
ಕಾವೇರಿ, ಕಪಿಲ, ಸ್ಪಟಿಕ ಸರೋವರದ ತ್ರಿವೇಣಿ ಸಂಗಮದಲ್ಲಿ ಸಕಲ ಸಿದ್ದತೆ
ವ್ಯಾಪಕ ಪೊಲೀಸ್ ಬಂದೋಬಸ್ತ್
ಉತ್ತರದ ಪ್ರಯಾಗ್ ರಾಜ್ ನ ಮಹಾಕುಂಭಮೇಳದ ನಡುವೆಯೇ ದಕ್ಷಿಣದ ಮೈಸೂರು ಜಿಲ್ಲೆಯಲ್ಲಿ ನಡೆಯಲಿರುವ 13ನೇ ಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆ.10ರಿಂದ 3 ದಿನಗಳ ಕಾಲ 13ನೇ ಕುಂಭಮೇಳ ಜಿಲ್ಲೆಯ ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋ ವರಗಳು ಸೇರುವ ಟಿ.ನರಸೀ ಪುರದ ತ್ರಿವೇಣಿ ಸಂಗಮದಲ್ಲಿ ನಡೆಯಲಿದ್ದು, ಅದಕ್ಕಾಗಿ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಆರು ವರ್ಷಗಳ ನಂತರ ನಡೆಯುತ್ತಿರುವ ಕುಂಭಮೇಳದಲ್ಲಿ ಅಪಾರ ಭಕ್ತರು ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆ.12ರಂದು ಪವಿತ್ರ ಕುಂಭ ಸ್ನಾನ ನಡೆಯಲಿದೆ. ಅಂದು ಬೆಳಗ್ಗೆ 11ರಿಂದ 11.30 ಮತ್ತು ಮಧ್ಯಾಹ್ನ 1.30 ರಿಂದ 2ಕ್ಕೆ ಮಹೋದಯ ಪುಣ್ಯ ಮಾಘಸ್ನಾನ ಮಾಡಲು ಮುಹೂ ರ್ತ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: Mysore News: ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಗೋಡೆ ಕುಸಿತ; ಅವಶೇಷಗಳಡಿ ಸಿಲುಕಿದ ಕಾರ್ಮಿಕ
6 ಕೋಟಿ ಅನುದಾನ: ಕುಂಭಮೇಳದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ, ಸ್ವಚ್ಛತಾ, ಲೈಟಿಂಗ್ಸ್ ಅಳವಡಿಕೆ ಕಾರ್ಯ ಮಾಡಲಾಗಿದೆ. ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಮುನ್ನೆ ಚ್ಚರಿಕೆ ವಹಿಸಲಾಗಿದೆ. ನದಿ ಪಾತ್ರದ ಹಲವೆಡೆ ಮುಳುಗುತಜ್ಞರನ್ನು ನಿಯೋಜನೆ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸರಕಾರ ಇದಕ್ಕಾಗಿ 6 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.
ಸಿಎಂ ಉಪಸ್ಥಿತಿ: ಫೆ.10ರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸ ಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್.ಸಿ ಮಹದೇವಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಫೆ.11ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದ ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಕೆ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟನೆ ಮಾಡಲಿ ದ್ದಾರೆ. ಫೆ.12ರಂದು ಬೆಳಗ್ಗೆ 12 ಗಂಟೆಗೆ ಧರ್ಮ ಸಭೆಯನ್ನು ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಡಾ.ಎಚ್.ಸಿ ಮಹದೇವಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ.
ಪುಣ್ಯಸ್ನಾನಕ್ಕೆ ಮುಹೂರ್ತ: ಫೆ.12ರಂದು ಮೇಷ ಲಗ್ನ ಪ್ರಾತಃ 11ರಿಂದ 11.30 ಹಾಗೂ ವೃಷಭ ಲಗ್ನ ಮಧ್ಯಾಹ್ನ 1.30 ರಿಂದ 2ಗಂಟೆ ಮುಹೂರ್ತ ಗುರು-ಪುಷ್ಯಯೋಗ ಪುರಪ್ರವೇಶ, ಗಂಗಾರತಿ: ಸಂಜೆ 4 ಘಂಟೆಗೆ ಮಹಾತ್ಮರ ಪುರ ಪ್ರವೇಶ ಮತ್ತು ಉತ್ಸವ, ಸಂಜೆ 6.30 ಕ್ಕೆ ಯಾಗಶಾಲಾ ಪ್ರವೇಶ ಮತ್ತು ಪೂರ್ಣಾಹುತಿ. ರಾತ್ರಿ 7 ಘಂಟೆಗೆ ವಾರಣಾಸಿ ಮಾದರಿಯಂತೆ ನದಿ ಸಂಗಮದಲ್ಲಿ ಗಂಗಾ ಪೂಜೆ ಮತ್ತು ದೀಪಾರತಿ.
ನಾನಾ ಧಾರ್ಮಿಕ ಕಾರ್ಯಕ್ರಮಗಳು: ಫೆ.10ರ ಸೋಮವಾರ ಬೆಳಗ್ಗೆ 6ಕ್ಕೆ ಮಾಘ ಶುದ್ಧ ತ್ರಯೋ ದಶಿ ಪುರ್ನವಸ್ಸು ನಕ್ಷತ್ರ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣ ಹೋಮ, ಅಭಿಷೇಕ, ದೇವತಾರಾಧನೆ, ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮ ಇತ್ಯಾದಿ.
ಫೆ.11ರ ಮಂಗಳವಾರ ಬೆಳಗ್ಗೆ 6ಕ್ಕೆ ಮಾಘಶುದ್ಧ ಚತುರ್ದಶೀ ಪುಷ್ಯ ನಕ್ಷತ್ರದಂದು ನವಗ್ರಹಪೂಜೆ, ಜಪ, ನವಗ್ರಹಹೋಮ, ಪೂರ್ಣಾಹುತಿ ಸಂಜೆ 4ಕ್ಕೆ ಸುದರ್ಶನ ಪೂಜೆ, ಹೋಮ. ಫೆ.12ರ ಬೆಳಗ್ಗೆ 5.30ಕ್ಕೆ ಮಾಘಶುದ್ಧ ವ್ಯಾಸ ಪೂರ್ಣಿಮಾ - ಆಶ್ಲೇಷ ನಕ್ಷತ್ರ ಪುಣ್ಯಾಹ, ಸಪ್ತನದೀತೀರ್ಥಕಲಶ ಪೂೆ, ಹೋಮ, ಕುಂಭಲಗ್ನದಲ್ಲಿ ಪ್ರಾತಃ 5 ರಿಂದ 11ರವರೆಗೆ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ.
ಕುಂಭಮೇಳದಲ್ಲಿ ವಿವಿಧ ಮಠಗಳ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜಯೇಂದ್ರ ಪುರಿಶ್ರೀ, ಗಣಪತಿ ಸಚ್ಚಿದಾನಂದಶ್ರೀ, ಡಾ. ವೀರೇಂದ್ರ ಹೆಗ್ಗಡೆ,ಅಭಿನವ ವಾಗೀಶ ಮಹಾದೇಶಿ ಕರ್‌ಶ್ರೀ , ಶ್ರೀ ರವಿಶಂಕರ್ ಗುರೂಜಿ, ನಿರಂಜ ನಾನಂದಪುರಿಶ್ರೀ, ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀ ಪಾದರು, ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಮಧುಸೂದನಾನಂದಪುರಿಶ್ರೀ, ಸಿದ್ಧಲಿಂಗ ಶಿವಾಚಾರ್ಯಶ್ರೀ ಹಾಗೂ ತಿ. ನರಸೀಪುರ ತಾಲೂಕಿನ ಎಲ್ಲಾ ಮಠಾಧಿಪತಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.