ಹೊನ್ನೇಸರದ ಪಿಎಂಶ್ರೀ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 22 ಜನ ಶಿಕ್ಷಕರು !
ಹಳ್ಳಿಯ ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬರೋಬ್ಬರಿ 22 ಶಿಕ್ಷಕರು ಕರ್ತವ್ಯ ಮಾಡುತ್ತಿದ್ದಾರೆ. ಆ 22 ಶಿಕ್ಷಕರ ಪೈಕಿ 19 ಜನರು ಮಹಿಳಾ ಶಿಕ್ಷಕರು ಎನ್ನುವುದು ಮತ್ತೊಂದು ವಿಶೇಷ. ಹೀಗೆ 19 ಶಿಕ್ಷಕಿಯರನ್ನು ಮೂರು ಪುರುಷ ಶಿಕ್ಷಕರನ್ನು ಹೊಂದಿರುವ ಅಪರೂಪದ ಶಾಲೆಯೇ ಹೆಗ್ಗೋಡಿನ ಹೊನ್ನೇಸರ ಪಿಎಂಶ್ರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆ.
-
ರಮೇಶ್ ಹೆಗಡೆ ಗುಂಡೂಮನೆ
ಹೆಗ್ಗೋಡಿನ ಈ ಶಾಲೆ ಕನ್ನಡ, ಇಂಗ್ಲಿಷ್ ಎರಡೂ ಮಾಧ್ಯಮ ಒಳಗೊಂಡಿದೆ
ಎಲ್ ಕೆಜಿಯಿಂದ 8ನೇ ತರಗತಿವರೆಗೆ ಶಿಕ್ಷಣ
ಬರೀ ಶಿಕ್ಷಕಿಯರ ಸಂಖ್ಯೆ 19
ಸಾಗರ : ಸರಕಾರಿ ಶಾಲೆ ಎಂದರೆ ಶಿಕ್ಷಕರ ಕೊರತೆ ಎನ್ನುವ ಮಾತು ಯಾವಾಗಲೂ ಮಾಮೂಲು ಆದರೆ ಇಲ್ಲೊಂದು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಖ್ಯೆ ಎಷ್ಟಿದೆ ಎಂದು ಕೇಳಿದರೆ ನಿಜಕ್ಕೂ ನೀವು ಅಚ್ಚರಿಪಡುತ್ತೀರಿ, ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಇಷ್ಟೊಂದು ಶಿಕ್ಷಕರು ಇದ್ದಿರುವುದು ಹೌದಾ ಎಂದು ಹುಬ್ಬೇರಿಸುತ್ತೀರಿ.
ಆದರೆ ಖಂಡಿತವಾಗಿಯೂ ಹೌದು. ಹಳ್ಳಿಯ ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬರೋಬ್ಬರಿ 22 ಶಿಕ್ಷಕರು ಕರ್ತವ್ಯ ಮಾಡುತ್ತಿದ್ದಾರೆ. ಆ 22 ಶಿಕ್ಷಕರ ಪೈಕಿ 19 ಜನರು ಮಹಿಳಾ ಶಿಕ್ಷಕರು ಎನ್ನುವುದು ಮತ್ತೊಂದು ವಿಶೇಷ. ಹೀಗೆ 19 ಶಿಕ್ಷಕಿಯರನ್ನು ಮೂರು ಪುರುಷ ಶಿಕ್ಷಕರನ್ನು ಹೊಂದಿರುವ ಅಪರೂಪದ ಶಾಲೆಯೇ ಹೆಗ್ಗೋಡಿನ ಹೊನ್ನೇಸರ ಪಿಎಂಶ್ರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆ.
ಇದಕ್ಕೆ ಕಾರಣವೂ ಇದೆ ಸರಕಾರಿ ಶಾಲೆಯಲ್ಲಿಯೂ ಅತ್ಯಾಧುನಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ವಿಧಾನವನ್ನು ಒಳಗೊಂಡಿರುವ ಮತ್ತು ಅನ್ವೇಷಣೆ ಕೇಂದ್ರಿತ ಕಲಿಕಾ ವಿಧಾನ ತಂದಿರುವ ಕೇಂದ್ರ ಸರಕಾರ ಇದಕ್ಕಾಗಿ ಇಡೀ ಭಾರತ ದೇಶದಲ್ಲಿ 14500 ಪಿಎಂಶ್ರೀ ಶಾಲೆಯನ್ನು ರೂಪುಗೊಳಿಸಿದೆ ಅದರಲ್ಲಿ ಸಾಗರ ತಾಲೂಕಿನ ಹೊನ್ನೇಸರ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೂಡ ಒಂದು.
ಪ್ರಧಾನ ಮಂತ್ರಿ ಸ್ಕೂಲ್ ಫಾರ್‌ರೈಸಿಂಗ್ ಇಂಡಿಯಾ ಯೋಜನೆಯು ಪಿಎಂಶ್ರೀ ಹೆಸರಿನಲ್ಲಿ 2022ರ ಸೆಪ್ಟೆಂಬರ್ನಲ್ಲಿಯೇ ಜಾರಿ ಬಂದಿದೆ. ಹಂತಹಂತವಾಗಿ ಪ್ರಗತಿ ಹೊಂದುತ್ತಿರುವ ಈ ಶಾಲೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮವನ್ನು ಒಳಗೊಂಡಿದೆ. ಎಲ್ಕೆಜಿಯಿಂದ ಆರಂಭಗೊಂಡು 8 ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದೆ. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಇಲ್ಲ ಎನ್ನುವ ಕೊರಗು ಇಲ್ಲದಂತೆ ಇಲ್ಲಿ ಎಲ್ಕೆಜಿಯಿಂದಲೂ ಇಂಗ್ಲಿಷ್ ಮಾಧ್ಯಮದ ಬೋಧನೆ ನಡೆಯುತ್ತಿದ್ದು ಸುಮಾರು 250 ವಿದ್ಯಾರ್ಥಿಗಳವರೆಗೆ ಮಕ್ಕಳಿದ್ದಾರೆ.
ಇದನ್ನೂ ಓದಿ: Surendra Pai Column: ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು
ಒಬ್ಬರು ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರು 12, ಪೂರ್ವ ಪ್ರಾಥಮಿಕ ತರಗತಿಯ ಶಿಕ್ಷಕರು ಮೂರು, ಯೋಗ,ಕಂಪ್ಯೂಟರ್,ಕರಾಟೆ,ನೃತ್ಯ, ಚಿತ್ರಕಲೆ, ಸ್ಪೋಕನ್ ಇಂಗ್ಲಿಷ್ಗೆ ತಲಾ ಒಬ್ಬರಂತೆ
ಒಟ್ಟು 22 ಶಿಕ್ಷಕರನ್ನು ಒಳಗೊಂಡ ಈ ಶಾಲೆ ಬಹುಶ: ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಶಿಕ್ಷಕ ರನ್ನು ಒಳಗೊಂಡ ಪ್ರಾಥಮಿಕ ಶಾಲೆ.
ಇನ್ನೊಂದು ವಿಶೇಷ ಎಂದರೆ ಇಲ್ಲಿರುವ ಶಿಕ್ಷಕರಲ್ಲಿ ಬಹುತೇಕರು ಅತ್ಯುನ್ನತ ಶಿಕ್ಷಣ ಹೊಂದಿರು ವವರು, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಗಳಿಸಿದವರು. 2024-25 ರ ಶೈಕ್ಷಣಿಕ ಯೋಜನೆ ಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕೊಟ್ಟ ಹೆಗ್ಗಳಿಕೆ ಈ ಎಲ್ಲ ಶಿಕ್ಷಕರಿಗಿದೆ.
ಹೀಗೆ ಪ್ರಾಥಮಿಕ ಶಾಲೆಯಲ್ಲಿ ಕೊರತೆ ಇಲ್ಲದೆ ಶಿಕ್ಷಕರಿರುವ ಸಾಗರದ ಏಕೈಕ ಶಾಲೆ ಎನ್ನಬಹುದು. ಪ್ರಮಿಳಾ ಸಾಮ್ರಾಜ್ಯ: ಸಾದಾರಣವಾಗಿ ಶಿಕ್ಷಕಿಯರೇ ಇರುವ ಶಾಲೆಗಳಲ್ಲಿ ಪರಸ್ಪರ ಹೊಂದಾ ಣಿಕೆಯ ಕೊರತೆ ಇರಲಿದೆ ಎನ್ನುವ ಮಾತುಗಳಿದೆ. ಸಾಗರ ತಾಲೂಕಿನಲ್ಲಿಯೇ ಕೆಲ ಶಾಲೆಗಳು ಇದಕ್ಕೆ ಉದಾಹರಣೆಯೂ ಆಗಿದೆ. ಅಲ್ಲದೆ ಇಲಾಖೆಗೆ ತಲೆ ನೋವು ತಂದಿದ್ದು ಇದೆ. ಆದರೆ ಈ ಶಾಲೆ ಯಲ್ಲಿರುವ 19 ಶಿಕ್ಷಕಿಯರ ಒಗ್ಗಟ್ಟು, ಕಾರ್ಯದ ಹಂಚಿಕೆ ಮಾದರಿಯಾಗಿದೆ ಹಾಗೂ ಶಿಕ್ಷಕರೊಂದಿಗೆ ಸಮನ್ವಯದಿಂದ ಕಾರ್ಯ ಮಾಡುತ್ತಿರುವುದು ಹಿರಿಮೆ. ಈ ಪ್ರಮಿಳಾ ಸಾಮ್ರಾಜ್ಯದ ತಂಡದ ನಾಯಕಿ ಎಂದರೆ ಮುಖ್ಯ ಶಿಕ್ಷಕಿ ಎಲ್ಲರೊಂದಿಗೆ ಹೊಂದಾಣಿಕೆಯಲ್ಲಿ ಶಾಲೆ ನಡೆಸುತ್ತಿರುವುದು ಮತ್ತು ಹಿರಿಯ ಶಿಕ್ಷಕರು ಕಿರಿಯ ಶಿಕ್ಷಕರು ಎಲ್ಲರೂ ಒಮ್ಮನಸ್ಸಿನಿಂದ ಕೆಲಸ ಮಾಡುತ್ತಿರುವುದು ಈ ಶಾಲೆ ಶೈಕ್ಷಣಿಕ ವಿಷಯದಲ್ಲಿ ಮಾದರಿಯಾಗಿ ಕಂಡು ಬರುತ್ತಿದೆ. ಇನ್ನು ಉತ್ತಮ ಶಾಲಾ ಸಮಿತಿ ಸಹಕರಿಸುವ ಪೋಷಕ ವೃಂದ ಕೂಡ ಇಲ್ಲಿಯ ವಿಶೇಷ.
*
ಈ ಶಾಲೆಗೆ ಶಿಕ್ಷಕರ ಕೊರತೆಯೇ ಇಲ್ಲ
2024-25ರ ಶೈಕ್ಷಣಿಕ ಯೋಜನೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿ ಗಳನ್ನು ಕೊಟ್ಟ ಹೆಗ್ಗಳಿಕೆ ಈ ಎಲ್ಲ ಶಿಕ್ಷಕರಿಗಿದೆ. ಹೀಗೆ ಪ್ರಾಥಮಿಕ ಶಾಲೆಯಲ್ಲಿ ಕೊರತೆ ಇಲ್ಲದೆ ಶಿಕ್ಷಕರಿರುವ ಸಾಗರದ ಏಕೈಕ ಶಾಲೆ ಎನ್ನಬಹುದು.