ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RTI Act: ಕಳೆದ 155 ದಿನಗಳಲ್ಲಿ 24 ಸಾವಿರ ಅರ್ಜಿಗಳ ವಿಲೇವಾರಿ : ಆರ್‌ಟಿಐ ಅರ್ಜಿ ಇತ್ಯರ್ಥ: ರಾಜ್ಯಕ್ಕೆ ಮೊದಲ ಸ್ಥಾನ

ರಾಜ್ಯದಲ್ಲಿ ಕಳೆದ 155 ದಿನಗಳ ಅವಧಿಯಲ್ಲಿ ಸುಮಾರು 52 ಸಾವಿರ ಬಾಕಿ ಅರ್ಜಿಗಳ ಪೈಕಿ 24 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 28,601 ಅರ್ಜಿಗಳು ಬಾಕಿ ಉಳಿದಿದ್ದು, ಉಳಿದಿರುವ ಎಲ್ಲ ಅರ್ಜಿಗಳನ್ನೂ ಶೀಘ್ರ ವಾಗಿ ವಿಲೇವಾರಿ ಮಾಡಲು ಆಯೋಗ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 1094 ಪ್ರಕರಣಗಳಿಗೆ ಸಂಬಂಧಿಸಿದಂತೆ 10.66 ಕೋಟಿ ರು. ದಂಡ ವಿಧಿಸಲಾಗಿದ್ದು, ಈ ಪೈಕಿ 3.70 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ

ವೀರೇಶ್ ಎಸ್.ಕೆಂಭಾವಿ ಯಾದಗಿರಿ

ಪದೇ ಪದೆ ಮಾಹಿತಿ ಕೇಳಿದ 6 ಮಂದಿಗೆ ಅರ್ಜಿ ಸಲ್ಲಿಕೆಗೆ ನಿರ್ಬಂಧ

ಬಾಕಿ ಇರುವ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳ ವಿಲೇವಾರಿಯಲ್ಲಿ ಕರ್ನಾಟಕವು ದೇಶದಲ್ಲೇ ದಾಖಲೆ ಪ್ರಮಾಣದ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಮಹೇಶ್ ವಾಳ್ವೆಕರ್ ಹೇಳಿದರು. ಈ ಕುರಿತು ಮಾತನಾಡಿರುವ ಅವರು, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ಪೀಠಗಳನ್ನು ಒಳಗೊಂಡಂತೆ ಬಾಕಿ ಅರ್ಜಿಗಳ ವಿಲೇವಾರಿಯಲ್ಲಿ ಕರ್ನಾಟಕವು ದೇಶದಲ್ಲೇ ಗಮನಾರ್ಹ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ. ‌

ಕಳೆದ 155 ದಿನಗಳಲ್ಲಿ ದಾಖಲೆ ವಿಲೇವಾರಿ: ರಾಜ್ಯದಲ್ಲಿ ಕಳೆದ 155 ದಿನಗಳ ಅವಧಿಯಲ್ಲಿ ಸುಮಾರು 52 ಸಾವಿರ ಬಾಕಿ ಅರ್ಜಿಗಳ ಪೈಕಿ 24 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 28,601 ಅರ್ಜಿಗಳು ಬಾಕಿ ಉಳಿದಿದ್ದು, ಉಳಿದಿರುವ ಎಲ್ಲ ಅರ್ಜಿಗಳನ್ನೂ ಶೀಘ್ರ ವಾಗಿ ವಿಲೇವಾರಿ ಮಾಡಲು ಆಯೋಗ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 1094 ಪ್ರಕರಣಗಳಿಗೆ ಸಂಬಂಧಿಸಿದಂತೆ 10.66 ಕೋಟಿ ರು. ದಂಡ ವಿಧಿಸಲಾಗಿದ್ದು, ಈ ಪೈಕಿ 3.70 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಬಳದಲ್ಲೇ ದಂಡ ಕಡಿತಕ್ಕೆ ಕ್ರಮ: ಅಧಿಕಾರಿಗಳಿಗೆ ವಿಧಿಸಲಾಗುವ ದಂಡವನ್ನು ಅವರ ಸಂಬಳದಲ್ಲಿಯೇ ಕಡಿತ ಮಾಡುವ ಪ್ರಯೋಗವನ್ನೂ ಆಯೋಗ ಕೈಗೊಂಡಿದೆ. ದಂಡ ವಸೂಲಾತಿ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳ ಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: RTI Activist banned: 20 ಪ್ರಭಾವಿ ಆರ್‌ಟಿಐ ಕಾರ್ಯಕರ್ತರಿಗೆ ನಿಷೇಧ

ಪದೇ ಪದೆ ಮಾಹಿತಿ ಕೇಳಿದ 26 ಮಂದಿಗೆ ನಿರ್ಬಂಧ: ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೆ ಮಾಹಿತಿ ಕೋರಿ ಅರ್ಜಿಗಳನ್ನು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 26 ಜನರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ನಿರ್ಬಂಧ ಹೇರಲಾಗಿದೆ. ಈ ಪೈಕಿ ಏಳು ಮಂದಿ ನಿರ್ಬಂಧದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವಾಳ್ವೆಕರ್ ತಿಳಿಸಿದರು.

ಅಧಿಕಾರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಹಾಗೂ ಸಂಬಂಧಿತ ಕಾನೂನುಗಳ ಕುರಿತು ಅರಿವಿನ ಕೊರತೆ ಇರುವ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಅಧಿಕಾರಿ ಗಳಿಗೆ ಅಗತ್ಯ ತರ ಬೇತಿ ನೀಡುವ ಮೂಲಕ ಮಾಹಿತಿ ಅರ್ಜಿ ಗಳಿಗೆ ಸಕಾಲದಲ್ಲಿ ಉತ್ತರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಸೂಚನೆ: ಕಲಬುರಗಿ ಪೀಠದ ರಾಜ್ಯ ಆಯುಕ್ತ ವೆಂಕಟಸಿಂಗ್ ಮಾತನಾಡಿ, ಅರ್ಜಿಗಳು ಹಾಗೂ ಪ್ರಕರಣಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕಲಬುರಗಿ ಪೀಠದ ವ್ಯಾಪ್ತಿಯಲ್ಲಿ ಒಟ್ಟು 5835 ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳ ಲಾಗಿದ್ದು, ಕಳೆದ 155 ದಿನಗಳಲ್ಲಿ 2838 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇದೇ ಅವಧಿಯಲ್ಲಿ 6.48 ಲಕ್ಷ ರು. ದಂಡ ವಿಧಿಸಲಾಗಿದ್ದು, 5.87 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ. ಪ್ರಸ್ತುತ ಕಲಬುರಗಿ ಪೀಠದ ವ್ಯಾಪ್ತಿಯಲ್ಲಿ 7541 ಅರ್ಜಿಗಳು ಬಾಕಿ ಇದ್ದು, ಅವುಗಳ ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

*

52000 ಬಾಕಿ ಅರ್ಜಿ

24000 ವಿಲೇವಾರಿಯಾದ ಅರ್ಜಿ

28601 ಪ್ರಸ್ತುತ ಬಾಕಿ ಅರ್ಜಿ

26 ಜನ ನಿರ್ಬಂಧ

7 ಜನ ಕೋರ್ಟ್ ಮೊರೆ

1094 ಪ್ರಕರಣಕ್ಕೆ ದಂಡ

10.66 ಕೋಟಿ ಒಟ್ಟು ದಂಡ

3.70 ಕೋಟಿ ದಂಡ ವಸೂಲಿ

image

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಕಾಲದಲ್ಲಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಸಮರ್ಪಕ ಮಾಹಿತಿ ನೀಡು ವುದು ಅಽಕಾರಿ ಗಳ ಜವಾಬ್ದಾರಿ. ಬಾಕಿ ಅರ್ಜಿ ಗಳ ವಿಲೇವಾರಿ ಯಲ್ಲಿ ಕರ್ನಾಟಕವು ದೇಶ ದಲ್ಲೇ ಮೊದಲ ಸ್ಥಾನದಲ್ಲಿದೆ.

-ಮಹೇಶ್ ವಾಳ್ವೇಕರ್, ರಾಜ್ಯ ಮಾಹಿತಿ ಆಯುಕ್ತ