RTI Activist banned: 20 ಪ್ರಭಾವಿ ಆರ್‌ಟಿಐ ಕಾರ್ಯಕರ್ತರಿಗೆ ನಿಷೇಧ
ಆರ್‌ಟಿಐ ಇತಿಹಾಸದ ಪ್ರಥಮ ಬಾರಿಗೆ 12ಕ್ಕೂ ಹೆಚ್ಚು ಮಂದಿಯನ್ನು ಮಾಹಿತಿ ಆಯೋಗದಿಂದ ನಿಷೇಧಿಸಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅಂತಹವರು ಆರ್‌ಟಿಐ ಮೂಲಕ ಇನ್ಮುಂದೆ ಅರ್ಜಿ ಸಲ್ಲಿಸು ವಂತಿಲ್ಲ. ಮೇಲ್ಮನವಿಯನ್ನೂ ಹಾಕುವಂತಿಲ್ಲ

ಆರ್‌ಟಿಐ ಇತಿಹಾಸದ ಪ್ರಥಮ ಬಾರಿಗೆ 12ಕ್ಕೂ ಹೆಚ್ಚು ಮಂದಿಯನ್ನು ಮಾಹಿತಿ ಆಯೋಗದಿಂದ ನಿಷೇಧಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ

ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ 8 ಆಯುಕ್ತರ ಹುzಗಳು ಖಾಲಿಯಾಗಿದ್ದರೂ ಸದ್ದಿಲ್ಲದೆ ಅನೇಕ ಸಾಧನೆಗಳು ದಾಖಲಾಗಿವೆ.
ಕಳೆದ ಎರಡು ವರ್ಷಗಳಲ್ಲಿ ಆಯೋಗದಲ್ಲಿ ಸುಮಾರು 6 ಸಾವಿರ ಅರ್ಜಿಗಳ ಇತ್ಯರ್ಥವಾಗಿದ್ದರೆ, ಕಳೆದ ನಾಲ್ಕೇ ದಿನಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥಗೊಳಿಸ ಲಾಗಿದೆ. ಅದರಲ್ಲೂ ಮುಖ್ಯ ಆಯುಕ್ತರ ಒಂದೇ ಪೀಠದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಅರ್ಜಿ ಗಳನ್ನು ವಿಲೇವಾರಿ ಮಾಡಿ ಸಮಸ್ಯೆಗಳಿಗೆ ಒಂದು ಹಂತದ ಪರಿಹಾರ ನೀಡಲಾಗಿದೆ.
ಇದನ್ನೂ ಓದಿ: DK Shivakumar: ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: ಡಿ.ಕೆ. ಶಿವಕುಮಾರ್
ಇದೆಲ್ಲಕ್ಕಿಂತ ಅಚ್ಚರಿ ವಿಚಾರವೆಂದರೆ, ಆರ್‌ಟಿಐ ಇತಿಹಾಸದ ಪ್ರಥಮ ಬಾರಿಗೆ 12ಕ್ಕೂ ಹೆಚ್ಚು ಮಂದಿಯನ್ನು ಮಾಹಿತಿ ಆಯೋಗದಿಂದ ನಿಷೇಧಿಸಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅಂತಹವರು ಆರ್‌ಟಿಐ ಮೂಲಕ ಇನ್ಮುಂದೆ ಅರ್ಜಿ ಸಲ್ಲಿಸುವಂತಿಲ್ಲ. ಮೇಲ್ಮನವಿಯನ್ನೂ ಹಾಕುವಂತಿಲ್ಲ.
ಇದು ಸಾಧ್ಯವಾಗಿದ್ದು ದೇಶದ ಪ್ರಥಮ ಎನ್ನುವಂತೆ ಮುಖ್ಯ ಆಯುಕ್ತರು ನಡೆಸಿದ ಅರ್ಜಿ ವಿಲೇವಾ ರಿಯ ವಿಶೇಷ ಅಭಿಯಾನದ ಪ್ರಯೋಗದಿಂದ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮಾಹಿತಿ ಕೋರಿಕೆಗೆ ಸಂಬಂಧಿಸಿದಂತೆ ಸುಮಾರು 57 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ವಿಲೇವಾರಿ ಮತ್ತು ಇತ್ಯರ್ಥ ಕುಂಟುತ್ತ ಸಾಗಿತ್ತು. ಇದನ್ನು ಮನಗಂಡ ಮುಖ್ಯ ಆಯುಕ್ತ ಡಾ.ಎಚ್.ಸಿ.ಸತ್ಯನ್ ಅವರು ಅರ್ಜಿಗಳ ವಿಲೇವಾರಿಯ ವಿಶೇಷ ಅಭಿಯಾನ ಆರಂಭಿಸಿದ್ದಾರೆ.
ಈ ಮೂಲಕ ದೇಶದಲ್ಲಿರುವ 11 ಮಾಹಿತಿ ಹಕ್ಕು ಆಯೋಗದ ಪೀಠಗಳ ಪೈಕಿ ವಿಶೇಷ ಅಭಿಯಾನ ದೊಂದಿಗೆ ವಿಶೇಷ ಪೀಠ ಸ್ಥಾಪಿಸಿ ಅರ್ಜಿಗಳ ವಿಲೇವಾರಿ ನಡೆಸುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎನ್ನುವಂತಾಗಿದೆ.
ಮಾಹಿತಿ ನೀಡದೆ ಅರ್ಜಿದಾರರನ್ನು ಅಲೆದಾಡಿಸುವ 10 ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿ ಆದೇಶ ಹೊರಡಿಸ ಲಾಗಿದೆ. ಇದರಲ್ಲಿ ಬಿಬಿಎಂಪಿ, ಬಿಡಿಎ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳಿಗೆ ಮಾಹಿತಿ ನೀಡದಿರುವ 30ಕ್ಕೂ ಹೆಚ್ಚು ಪ್ರಕರಣ ಗಳನ್ನು ದಾಖಲಿಸಲಾಗಿದ್ದು, ಕೆಲವರ ವಿರುದ್ಧ ಆರೋಪ ಪಟ್ಟಿಗಳನ್ನೂ ಸಲ್ಲಿಸಲಾಗಿದೆ.
ಹಾಗೆಯೇ ಅನೇಕರು ಸಾರ್ವಜನಿಕ ಹಿತಾಸಕ್ತಿ ಇಲ್ಲದ ಹಾಗೂ ದುರುದ್ಧೇಶ ಪೂರಿತವಾದ ಅರ್ಜಿ ಗಳನ್ನು ಅನಗತ್ಯವಾಗಿ ಸಲ್ಲಿಸಿ ಸರಕಾರದ ಆಡಳಿತ ಯಂತ್ರ ದುರ್ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ಆಯೋಗದ ಕೋರ್ಟ್ ಸಮಯವನ್ನೂ ವ್ಯರ್ಥ ಮಾಡಿದ್ದಾರೆ. ಆಯೋಗ ಅನೇಕ ಅರ್ಜಿದಾರರಿಗೆ ದಂಡ ವಿಧಿಸಿದೆ.
ಜತೆಗೆ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಸಲ್ಲಿಸಿದ್ದ ನೂರಾರು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದರಿಂದ ಆರ್‌ಟಿಐ ದುರ್ಬಳಕೆಗಳ ವಿವಿಧ ಮುಖಗಳು ಬಯಲಾಗುತ್ತಿದ್ದು, ಕಪ್ಪು ಪಟ್ಟಿ ಸೇರುವ ಆರ್‌ಟಿಐ ಅರ್ಜಿದಾರರ ಸಂಖ್ಯೆ 20ಕ್ಕೆ ಏರುವ ಸಾಧ್ಯತೆ ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
57000 ಅರ್ಜಿ ಸಲ್ಲಿಕೆ
ರಾಜ್ಯದಲ್ಲಿ ಮಾಹಿತಿ ಮತ್ತು ಮಾಹಿತಿ ನಿರಾಕರಿಸಿದವರ ವಿರುದ್ಧ ಮೇಲ್ಮನವಿ ಸೇರಿ ಕಳೆದ ಎರಡು ವರ್ಷಗಳಲ್ಲಿ 57000 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 10000 ಅರ್ಜಿಗಳು ನೈಜ ಸಮಸ್ಯೆ ಗಳನ್ನು ಬಿಂಬಿಸುವ ಹಾಗೂ ನಿಜವಾದ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿವೆ. ಆದರೆ ಉಳಿದ 45000ಕ್ಕೂ ಹೆಚ್ಚು ಅರ್ಜಿಗಳು ಬಹುತೇಕ ಆರ್ ಟಿಐ ಕಾರ್ಯಕರ್ತರಿಂದಲೇ ಸಲ್ಲಿಕೆಯಾಗಿರುವ ಅರ್ಜಿಗಳಾಗಿವೆ.
ಅಂದರೆ ಒಬ್ಬರೇ 5 ಸಾವಿರದಿಂದ 10 ಸಾವಿರದವರೆಗೂ ಸಲ್ಲಿಸಿರುವ ಅರ್ಜಿಗಳು ಆಯೋಗದಲ್ಲಿ ಇತ್ಯಾರ್ಥವಾಗದೆ ಉಳಿದಿವೆ. ಹೀಗಾಗಿ ಮಾಹಿತಿ ಆಯೋಗ ಒಬ್ಬರೇ 5 ಸಾವಿರದಿಂದ 10 ಸಾವಿರ ವರೆಗೂ ಸಲ್ಲಿಸಿರುವ ಅರ್ಜಿಗಳನ್ನು ಪ್ರತ್ಯೇಕಗೊಳಿಸಿ ಇತ್ಯರ್ಥಗೊಳಿಸಲು ಸಜ್ಜಾಗಿದೆ. ಹೀಗೆ ಅತಿ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ ಸುಮಾರು 300 ಮಂದಿಯನ್ನು ಗುರುತಿಸಲಾಗಿದ್ದು, ಇವರಲ್ಲಿ ಬಹುತೇಕ ಮಂದಿ ಪ್ರಭಾವಿಗಳಾಗಿದ್ದು, ಅವರ ಹಿಂದೆ ರಾಜಕಾರಣಗಳು, ಅಧಿಕಾರಿಗಳು ಇರಬಹು ದೆಂದೂ ಆಯೋಗ ಶಂಕಿಸಿದೆ. ಏಕೆಂದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸಿರುವ ಅರ್ಜಿಗಳಲ್ಲಿ ದುರುದ್ದೇಶದ ಪ್ರಶ್ನೆಗಳೇ ಹೆಚ್ಚಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವುದನ್ನು ಗುರುತಿಸ ಲಾಗಿದೆ. ಇಂತಹ ಅರ್ಜಿಗಳಿಂದ ಅಧಿಕಾರಿಗಳ ಶೇ.98ರಷ್ಟು ಸಮಯ ವ್ಯರ್ಥ 4 ವಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.
*
ಕಳೆದ ನಾಲ್ಕೇ ದಿನಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ
ಮುಖ್ಯ ಆಯುಕ್ತರ ಒಂದೇ ಪೀಠದಲ್ಲಿ 4 ಸಾವಿರಕ್ಕೂ ಅಧಿಕ ಅರ್ಜಿಗಳ ವಿಲೇವಾರಿ
12ಕ್ಕೂ ಹೆಚ್ಚು ಮಂದಿಯನ್ನು ಮಾಹಿತಿ ಆಯೋಗದಿಂದ ನಿಷೇಧಿಸಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ
ಮಾಹಿತಿ ನೀಡದೆ ಅರ್ಜಿದಾರರನ್ನು ಅಲೆದಾಡಿಸುವ 10 ಸಾವಿರ ಅಧಿಕಾರಿಗಳಿಗೆ ನೋಟಿಸ್