ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜ್ಞಾನ ದೇಗುಲಕ್ಕೆ ಪುನಃ ಮರಳಿದ 2616 ಚಿಣ್ಣರು

ಸಮಗ್ರ ಶಿಕ್ಷಣ ಕರ್ನಾಟಕದಡಿ, 2021-22ರಿಂದ 2025-26ರವರೆಗೆ ನಡೆಸಿದ ವಿಶೇಷ ದಾಖಲಾತಿ ಹಾಗೂ ಗುರುತಿಸುವಿಕೆ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಮಕ್ಕಳ ಮನೆಗಳಿಗೆ ತೆರಳಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ.

ದೇವೇಂದ್ರ ಜಾಡಿ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಶಾಲೆ ಬಿಟ್ಟಿದ್ದ 3065 ಮಕ್ಕಳು

ಇಲಾಖೆ ಶ್ರಮದಿಂದ ಶಿಕ್ಷಣದ ಮುಖ್ಯವಾಹಿನಿಗೆ ಬಂದ ಶೇ.85ರಷ್ಟು ಮಕ್ಕಳು

ಬಡತನ, ಕುಟುಂಬದ ಆರ್ಥಿಕ ಸಂಕಷ್ಟ, ವಲಸೆ, ಬಾಲಕಾರ್ಮಿಕತೆ ಸೇರಿದಂತೆ ವಿವಿಧ ಕಾರಣ ಗಳಿಂದ ಶಾಲೆಯಿಂದ ದೂರವಾಗಿದ್ದ ಮಕ್ಕಳ ಬದುಕಿಗೆ ಶಿಕ್ಷಣದ ಬೆಳಕು ಮರಳಿ ತರುವಲ್ಲಿ ಕಲಬುರಗಿ ಜಿಲ್ಲೆಯ ಶಿಕ್ಷಣ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಶಿಕ್ಷಣದಿಂದ ಹೊರಗುಳಿದ 3065 ಮಕ್ಕಳನ್ನು ಗುರುತಿಸಿ, ಈ ಪೈಕಿ 2616 ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಲಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕದಡಿ, 2021-22ರಿಂದ 2025-26ರವರೆಗೆ ನಡೆಸಿದ ವಿಶೇಷ ದಾಖಲಾತಿ ಹಾಗೂ ಗುರುತಿಸುವಿಕೆ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಮಕ್ಕಳ ಮನೆಗಳಿಗೆ ತೆರಳಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಇದರ ಪರಿಣಾಮವಾಗಿ ಒಟ್ಟು ಗುರುತಿಸಲಾದ ಮಕ್ಕಳಲ್ಲಿ ಶೇ.85ರಷ್ಟು ಮಕ್ಕಳು ಶಿಕ್ಷಣದ ಮುಖ್ಯ ವಾಹಿನಿಗೆ ಮರಳಿದ್ದಾರೆ.

ಕೋವಿಡ್ ನಂತರ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ತರಗತಿಗೆ ಕರೆ ತರುವುದು ಇಲಾಖೆಗೆ ದೊಡ್ಡ ಸವಾಲಾಗಿತ್ತು. ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣದಿಂದ ದೂರವಾಗಿದ್ದರೆ, ನಂತರದ ವರ್ಷಗಳಲ್ಲಿ ಈ ಪ್ರಮಾಣ ಗಣನೀಯವಾಗಿ ಇಳಿಕೆ ಯಾಗಿದೆ.

ಇದನ್ನೂ ಓದಿ: Kalaburagi Breaking: ಕಪನೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‌ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಸಂಗ್ರಹ: ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ

2021-22ರಲ್ಲಿ 836 ಮಕ್ಕಳು ಗುರುತಿಸಲ್ಪಟ್ಟಿದ್ದರೆ, 2024-25ರಲ್ಲಿ ಈ ಸಂಖ್ಯೆ 340ಕ್ಕೆ ಇಳಿದಿತ್ತು. ಆದರೆ 2025-26ರಲ್ಲಿ ಮತ್ತೆ 908 ಮಕ್ಕಳು ಗುರುತಿಸಲ್ಪಟ್ಟಿರುವುದು ಶಾಲೆಯಿಂದ ಹೊರಗುಳಿಯು ವಿಕೆಯ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂಬುದನ್ನು ತೋರಿಸಿದೆ. ಆರ್ಥಿಕ ಸಂಕಷ್ಟದ ಜತೆಗೆ ವಲಸೆ ಕುಟುಂಬಗಳ ಮ ಕ್ಕಳ ಶಿಕ್ಷಣ ನಿರಂತರತೆಯೂ ಇಲಾಖೆಗೆ ಸವಾಲಾಗಿದೆ.

ಕೆಲವು ಮಕ್ಕಳು ಮೇಲ್ತರಗತಿಗಳಿಗೆ ಸಾಗುವ ಹಂತದಲ್ಲಿ ಶಾಲೆ ತೊರೆಯುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಲು ಇಲಾಖೆ ಮುಂದಾಗಿದೆ. ಶಾಲೆಗೆ ದಾಖಲಿಸುವುದಷ್ಟೇ ಅಲ್ಲದೆ, ಮರಳಿ ಶಾಲೆ ತೊರೆಯದಂತೆ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಹಾಜರಾತಿ ಮೇಲೆ ನಿರಂತರ ಮೇಲ್ವಿಚಾರಣೆ ನಡೆಸುವುದು ಮುಂದಿನ ಗುರಿಯಾಗಿದೆ. ಇನ್ನೂ ಶಿಕ್ಷಣದ ಮುಖ್ಯವಾಹಿನಿಗೆ ಸೇರದಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲಾ ವ್ಯಾಪ್ತಿಗೆ ತರುವ ಕಾರ್ಯವೂ ಮುಂದುವರಿಯಲಿದೆ.

Kalaburagi kids_om

ಚಿತ್ತಾಪುರದಲ್ಲಿ ಅತಿ ಹೆಚ್ಚು ಶಾಲೆ ಬಿಟ್ಟವರು ಗೃಹ ಸಚಿವರ ಸ್ವಕ್ಷೇತ್ರ ಚಿತ್ತಾಪುರ ತಾಲೂಕಿನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಲೆಯಿಂದ ಹೊರಗು ಳಿದ ಮಕ್ಕಳು ಪತ್ತೆಯಾಗಿದ್ದಾರೆ. ಇಲ್ಲಿ 1556 ಮಕ್ಕಳು ಗುರುತಿಸಲ್ಪಟ್ಟಿದ್ದು, 1365 ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲಾಗಿದೆ.

ಕಲಬುರಗಿ ಉತ್ತರದಲ್ಲಿ 466ರಲ್ಲಿ 412, ಆಳಂದದಲ್ಲಿ 279ಲ್ಲಿ 207, ಚಿಂಚೋಳಿಯಲ್ಲಿ 248ರಲ್ಲಿ 216 ಹಾಗೂ ಕಲಬುರಗಿ ದಕ್ಷಿಣದಲ್ಲಿ 208ರಲ್ಲಿ 172 ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ತರಲಾಗಿದೆ. ಅಫಜಲಪುರದಲ್ಲಿ 84ರಲ್ಲಿ 65, ಜೇವರ್ಗಿಯಲ್ಲಿ 89ರಲ್ಲಿ 69 ಹಾಗೂ ಸೇಡಂನಲ್ಲಿ 135ರಲ್ಲಿ 110 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ.

image

ಶಿಕ್ಷಣದಿಂದ ದೂರವಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಮಾತ್ರವಲ್ಲ, ಅವರು ಮುಂದಿನ ದಿನಗಳಲ್ಲಿಯೂ ಶಾಲೆಯಲ್ಲೇ ಉಳಿದು ನಿರಂತರವಾಗಿ ವಿದ್ಯಾಭ್ಯಾಸ ಮಾಡುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. ಇನ್ನೂ ಶಿಕ್ಷಣದ ಮುಖ್ಯವಾಹಿನಿಗೆ ಸೇರದ ಮಕ್ಕಳನ್ನು ಗುರುತಿಸಿ ಶಾಲಾ ವ್ಯಾಪ್ತಿಗೆ ಒಳಪಡಿಸಲಾಗುವುದು.

-ಇಕ್ರಂ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ
image

ಮೇಲ್ತರಗತಿಗಳಿಗೆ ಸಾಗುವ ಹಂತದಲ್ಲಿ ಕೆಲ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯು ತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಮಕ್ಕಳನ್ನು ಗುರುತಿಸಿ ಮತ್ತೆ ಶಿಕ್ಷಣದ ಮುಖ್ಯ ವಾಹಿನಿಗೆ ತರಲು ನಿರಂತರ ಜಾಗೃತಿ ಅಭಿ ಯಾನ ನಡೆಸಲಾಗುತ್ತಿದೆ. ಪೋಷಕರು, ಶಿಕ್ಷಕ ರು ಹಾಗೂ ಸಮುದಾ ಯದ ಸಹಕಾರ ದಿಂದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರೆಯು ವಂತೆ ಇಲಾಖೆ ಗಮನ ಹರಿಸುತ್ತಿದೆ.

- ಶಂಕ್ರಮ್ಮ ಢವಳಗಿ, ಡಿಡಿಪಿಐ, ಕಲಬುರಗಿ