ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

4 ತಿಂಗಳಲಿ 725 ಬಾಲ ಗರ್ಭಿಣಿಯರು!

ಸರಕಾರದ ಮಾಹಿತಿಯ ಪ್ರಕಾರ, ಒಟ್ಟು ಪ್ರಕರಣಗಳ ಪೈಕಿ 521 ಪ್ರಕರಣಗಳು 17 ವರ್ಷದ ಬಾಲಕಿ ಯರಿಗೆ ಸಂಬಂಧಿಸಿವೆ. 14 ವರ್ಷದ ಬಾಲಕಿಯರ 21 ಪ್ರಕರಣಗಳು, 15 ವರ್ಷದ ಬಾಲಕಿಯರ 56 ಪ್ರಕರಣ ಗಳು, 16 ವರ್ಷದ ಬಾಲಕಿಯರ 127 ಪ್ರಕರಣಗಳು, 17 ವರ್ಷದ ಬಾಲಕಿಯರ 521 ಪ್ರಕರಣ ಗಳು ಏಪ್ರಿಲ್‌ನಿಂದ ಜುಲೈ ವರೆಗೆ ದಾಖಲಾಗಿವೆ.

ವೈಭವ ಸಿ.ಕೊಳ್ಳಿ

ರಾಯಚೂರಿನಲ್ಲಿ ಅತಿ ಹೆಚ್ಚು ಪ್ರಕರಣ: 17 ವರ್ಷದ ಬಾಲಕಿಯರ 521 ಪ್ರಕರಣ ದಾಖಲು

ಕರ್ನಾಟಕದಲ್ಲಿ ಕಿಶೋರಿಯರ ಗರ್ಭ ಧಾರಣೆ ಪ್ರಕರಣಗಳ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಳಿಕೆಯಾಗಿ ದ್ದರೂ, ಪ್ರಸಕ್ತ ಸಾಲಿನ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ 14ರಿಂದ 17 ವರ್ಷ ದೊಳಗಿನ 725 ಬಾಲಕಿಯರು ಗರ್ಭಿಣಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 2026ರ ಏಪ್ರಿಲ್‌ನಿಂದ ಜುಲೈವರೆಗೆ ದಾಖಲಾಗಿರುವ ಈ ಪ್ರಕರಣಗಳ ಪೈಕಿ 17 ವರ್ಷದ ಬಾಲಕಿಯರ ಸಂಖ್ಯೆಯೇ ಅತ್ಯಧಿಕವಾಗಿದೆ.

ಸರಕಾರದ ಮಾಹಿತಿಯ ಪ್ರಕಾರ, ಒಟ್ಟು ಪ್ರಕರಣಗಳ ಪೈಕಿ 521 ಪ್ರಕರಣಗಳು 17 ವರ್ಷದ ಬಾಲಕಿ ಯರಿಗೆ ಸಂಬಂಧಿಸಿವೆ. 14 ವರ್ಷದ ಬಾಲಕಿಯರ 21 ಪ್ರಕರಣಗಳು, 15 ವರ್ಷದ ಬಾಲಕಿಯರ 56 ಪ್ರಕರಣ ಗಳು, 16 ವರ್ಷದ ಬಾಲಕಿಯರ 127 ಪ್ರಕರಣಗಳು, 17 ವರ್ಷದ ಬಾಲಕಿಯರ 521 ಪ್ರಕರಣಗಳು ಏಪ್ರಿಲ್‌ನಿಂದ ಜುಲೈ ವರೆಗೆ ದಾಖಲಾಗಿವೆ. ಈ ಅಂಕಿಅಂಶಗಳು ಕಿಶೋರಿಯರ ಆರೋಗ್ಯ, ಸುರಕ್ಷತೆ ಹಾಗೂ ಶಿಕ್ಷಣದ ಬಗ್ಗೆ ಮತ್ತಷ್ಟು ಪರಿಣಾಮಕಾರಿ ಕ್ರಮಗಳ ಅಗತ್ಯ ಎತ್ತಿ ತೋರಿಸಿವೆ.

ಇದನ್ನೂ ಓದಿ: Pregnancy: ರಾಜ್ಯದಲ್ಲಿ ನಿಲ್ಲದ ಬಾಣಂತಿಯರ ಸಾವು

ರಾಯಚೂರಿನಲ್ಲಿ 100 ಪ್ರಕರಣ: ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದಾಗ ರಾಯಚೂರು ಜಿಲ್ಲೆ ಯಲ್ಲಿ 100 ಪ್ರಕರಣ ಗಳು ದಾಖಲಾಗಿದ್ದು, ರಾಜ್ಯದ ಅತಿ ಹೆಚ್ಚು ಪ್ರಕರಣಗಳು ವರದಿ ಯಾಗಿರುವ ಜಿಲ್ಲೆಯಾಗಿದೆ. 14 ವರ್ಷದ ಬಾಲಕಿಯರ ಗರ್ಭಧಾರಣೆ ಪ್ರಕರಣಗಳನ್ನು ಪ್ರತ್ಯೇಕವಾಗಿ ಗಮನಿಸಿದಾಗ ಹಾಸನ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಈ ವಯೋಮಾನದ ವಿಭಾಗದಲ್ಲಿ ಇದು ರಾಜ್ಯದ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಳಿಕೆ: ಕರ್ನಾಟಕದಲ್ಲಿ ಕಿಶೋರಿಯರ ಗರ್ಭ ಧಾರಣೆ ಪ್ರಕರಣಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. 2024- 25ನೇ ಸಾಲಿನಲ್ಲಿ 4579 ಪ್ರಕರಣಗಳು ವರದಿಯಾಗಿದ್ದರೆ, 2025-26ನೇ ಸಾಲಿನಲ್ಲಿ 3307 ಪ್ರಕರಣಗಳು ದಾಖಲಾಗಿವೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದರೂ ಪ್ರಸಕ್ತ ಸಾಲಿನ ಮೊದಲ ನಾಲ್ಕು ತಿಂಗಳ 725 ಪ್ರಕರಣಗಳು ದಾಖಲಾಗಿರುವುದು ಸಮಸ್ಯೆ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ ಎಂಬುದನ್ನು ತೋರಿಸುತ್ತದೆ. ವಿಶೇಷವಾಗಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣ ಗಳು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆಯ ದೃಷ್ಟಿಯಿಂದ ಗಂಭೀರ ಕಾಳಜಿಗೆ ಕಾರಣವಾಗಿವೆ.

ಬಾಲ್ಯ ವಿವಾಹ ತಡೆಗೆ ಜಾಗೃತಿ ಕಾರ್ಯಕ್ರಮ ಬಾಲ್ಯ ವಿವಾಹ ತಡೆಗಟ್ಟಲು ರಾಜ್ಯಾದ್ಯಂತ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು. ಈ ಸಮಸ್ಯೆಕೇವಲ ಒಂದು ಪ್ರದೇಶಕ್ಕೆ ಸೀಮಿತ ವಾಗಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾಹಿತಿ ಸಂಗ್ರಹಿಸಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

ವಿಶೇಷವಾಗಿ ಗಡಿ ಪ್ರದೇಶಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಿಎಂ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಪ್ರಮುಖರುಕಿರು ವಿಡಿಯೊ ಸಂದೇಶಗಳ ಮೂಲಕ ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆ ಕುರಿತು ಅರಿವು ಮೂಡಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾನವ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದರು.

image

ಶಾಲೆ ಹಾಗೂ ಕಾಲೇಜುಗಳು ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಗಸ್ತು ಜತೆಗೆ ಶಾಲೆ,ಕಾಲೇಜುಗಳ ಸುತ್ತ ಮುತ್ತಲಿನ ಉದ್ಯಾನಗಳು, ಬಸ್ ನಿಲ್ದಾಣಗಳು ಸೇರಿದಂತೆ ವಿದ್ಯಾರ್ಥಿಗಳು ಸೇರುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ನಿಗಾ ಇರಿಸುವ ವ್ಯವಸ್ಥೆ ಮಾಡಲಾಗುವುದು. ಈ ಪ್ರಕರಣಗಳಿಗೆ ಬಾಲ್ಯ ವಿವಾಹ ಒಂದೇ ಕಾರಣವಿಲ್ಲ. ಮಕ್ಕಳ ಅರಿವಿನ ಕೊರತೆ, ಸಾಮಾಜಿಕ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣ.

-ಸಂತೋಷ್ ಕುಮಾರ್ ರಾಜ್ಯ ಮಾನವ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ
image

ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರು ವುದು ಕಳವಳಕಾರಿ ಸಂಗತಿ. ಪೋಷಕರು ವಯೋಮಿತಿಗೂ ಮುನ್ನ ಮಕ್ಕಳಿಗೆ ಬಾಲ್ಯ ವಿವಾಹಕ್ಕೆ ಅವಕಾಶ ನೀಡು ವುದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಗ್ರಾಮ ಪಂಚಾಯತ್ ಹಾಗೂ ನಗರ ಆಡಳಿತಗಳಲ್ಲಿ ಜಾರಿಯಲ್ಲಿ ರುವ ಮಹಿಳಾ ಮತ್ತು ಮಕ್ಕಳ ರಕ್ಷಣಾಕಾವಲು ಸಮಿತಿಗಳು ನಿಯಮಿತವಾಗಿ ಸಭೆಗಳು ನಡೆಸುವ ಮೂಲಕ ಇಂತಹ ಅನಿಷ್ಟ ಪದ್ದತಿಯನ್ನು ಬೇರು ಸಮೇತ ನಿರ್ಣಾಮ ಮಾಡಬೇಕು.

- ಶಶಿಧರ ಕೋಸಂಬೆ ನಿಕಟಪೂರ್ವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ