Pregnancy: ರಾಜ್ಯದಲ್ಲಿ ನಿಲ್ಲದ ಬಾಣಂತಿಯರ ಸಾವು
ಆರು ತಿಂಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಎರಡಂಕಿ ಗಡಿ ಮುಟ್ಟಿದ್ದು ಶೋಚನೀಯ ಸಂಗತಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಏಪ್ರಿಲ್ ದಿಂದ ಅಕ್ಟೋಬರ್ ವರೆಗೆ
Ashok Nayak
January 1, 2025
ವಿನಾಯಕ ಮಠಪತಿ ಬೆಳಗಾವಿ
6 ತಿಂಗಳ ಅವಧಿಯಲ್ಲಿ ಬರೋಬ್ಬರಿ 32 ಬಾಣಂತಿ, 372 ಶಿಶುಗಳು ಸಾವು
ಇತ್ತೀಚಿಗೆ ರಾಜ್ಯದಲ್ಲಿ ಬಾಣಂತಿಯರ ಸಾವುಪ್ರಕರಣಗಳು ಹೆಚ್ಚುತ್ತಿದ್ದು ಬಳ್ಳಾರಿ ನಂತರ ಬೆಳಗಾವಿಯಲ್ಲಿಯೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಒಂದು ಕಡೆ ಬಾಣಂತಿಯರ ಸಾವು ಪ್ರಕರಣಗಳು ಹೆಚ್ಚುತ್ತಿದ್ದರೆ ಮತ್ತೊಂದೆಡೆ ನವಜಾತ ಶಿಶುಗಳ ಸಾವು ಸಾರ್ವಜನಿಕರ ನಿದ್ದೆಗೆಡಿಸಿದೆ.
ಹೌದು ಕಳೆದ ಆರು ತಿಂಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಎರಡಂಕಿ ಗಡಿ ಮುಟ್ಟಿದ್ದು ಶೋಚನೀಯ ಸಂಗತಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಏಪ್ರಿಲ್ ದಿಂದ ಅಕ್ಟೋಬರ್ ವರೆಗೆ 6 ತಿಂಗಳ ಅವಧಿಯಲ್ಲಿ ಬರೋಬ್ಬರಿ 32 ಬಾಣಂತಿರು ಸಾವನ್ನಪ್ಪಿದ್ದಾರೆ. ರಕ್ತಸ್ರಾವ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇಹೀಗೆ ಹಲವು ಕಾರಣಗಳಿಂದ ಬಾಣಂತಿಯರ ಸಾವಾಗಿದೆ ಎಂದು ವರದಿ ನೀಡಿಲಾಗಿದೆ. ಇದರಲ್ಲಿ ಬಿಮ್ಸ್ ಆಸ್ಪತ್ರೆಯಲ್ಲಿ ಎಂಟು ಜನ ಬಾಣಂತಿಯರು ಮೃತಪಟ್ಟಿದ್ದರೆ ಇನ್ನುಳಿದಂತೆ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ.
ಒಂದು ಕಡೆ ತಾಯಂದಿರ ಮರಣ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ನವಜಾತ ಶಿಶುಗಳ ಮರಣ ಪ್ರಮಾಣವು ಹೆಚ್ಚಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 372 ಶಿಶುಗಳು ಸಾವನ್ನಪ್ಪಿವೆ. ಕೇವಲ ಬಿಮ್ಸ್ ಆಸ್ಪತ್ರೆ ಒಂದರಲ್ಲೇ 172 ಶಿಶುಗಳ ಸಾವಾಗಿದ್ದು, ಇದಕ್ಕೆ ಕಡಿಮೆ ತೂಕ, ಪೌಷ್ಠಿಕಾಂಶ ಕೊರತೆ ಕಾರಣ ಎಂದು ಬಿಮ್ಸ್ ಸರಕಾರಕ್ಕೆ ವರದಿನೀಡಿದೆ. ಸರಕಾರದಿಂದ ಬಾಣಂತಿಯರಿಗೆ ಹಲವಾರು ಯೋಜನೆಗಳನ್ನು ತಂದರು ಮರಣ ಪ್ರಮಾಣ ತಗ್ಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಬಾಣಂತಿಯರ ಸಾವಿನ ಕುರಿತು ವಿರೋಧ ಪಕ್ಷಗಳು ಚರ್ಚೆ ನಡೆಸಿದರೂ ಪರಿಣಾಮಕಾರಿಯಾಗಿ ಈ ಕುರಿತು ನಿರ್ಧಾರ ಪ್ರಕಟವಾಗಿಲ್ಲ.
ಇನ್ನೂ ಬಾಣಂತಿಯರ ಸಾವಿನ ಕುರಿತು ರಾಜ್ಯ ಬಿಜೆಪಿ ಅನೇಕ ಹೋರಾಟಗಳನ್ನು ನಡೆಸುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ತಡೆಗಟ್ಟುವ ಕುರಿತು ಅಧಿಕಾರಿಗಳು ಸಮರ್ಪಕ ಉತ್ತರ ನೀಡದೆಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕೊನೆಯುಸಿರೆಳೆದ ರಾಧಿಕಾಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲಮಟ್ಟಿ ಗ್ರಾಮದ ರಾಧಿಕಾ ಗಡ್ಡಿಹೊಳಿ (೧೯ ) ಮಹಿಳೆ ಮಂಗಳವಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವಣಪ್ಪಿದ್ದಾರೆ. ಕಳೆದ ಭಾನುವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರಾಽಕಾಳನ್ನು ಯಮಕನಮರಡಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆ ಒಂದಕ್ಕೆ ಕರೆದೊಯ್ದಿದ್ದರು, ತಕ್ಷಣ ಹಣ ಹೊಂದಿಸದ ಕಾರಣ ಮರಳಿ ಬಿಮ್ಸ್ ಗೆ ದಾಖಲಿಸಿದ್ದರು ಈ ಸಂದರ್ಭದಲ್ಲಿಗರ್ಭದಲ್ಲಿ ಮಗು ಸಾವಣಪ್ಪಿತ್ತು, ನಂತರ ಬಾಣಂತಿ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲ ಕಾರಿ ಆಗದೆ ಜೋಡಿ ಜೀವಗಳು ಪ್ರಾಣಬಿಟ್ಟಿವೆ.
ಬಿಜೆಪಿಯಿಂದ ಅಭಿಯಾನಸರಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಮತ್ತು ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯ ಬಿಜೆಪಿಯ ಮಹಿಳಾ ಮೋರ್ಚಾ ರಾಜ್ಯಾದ್ಯಂತ ಅಭಿಯಾನವನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿನಿರಂತರವಾಗಿ ಬಾಣಂತಿಯರ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದೆ. ಬೆಳಗಾವಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಮೃತ ಬಾಣಂತಿಯರ ಮನೆಗಳಿಗೆ ತೆರಳಿಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: Vinayaka Mathapathy Column: ಅಟಲ್‌ಜೀ ಹೃದಯ ಗೆದ್ದ ಫಡ್ನವೀಸ್