ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಜ್ಞಾವಂತ ಮತದಾರರಿಗೇ ತಿಳಿವಳಿಕೆ ಕೊರತೆ

ಕರ್ನಾಟಕದ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎಲ್ಲಾ ನಾಲ್ಕು ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ. ಆದರೆ, ಗಮನಿಸಬೇಕಾದ ವಿಚಾರ ಏನಂದರೆ, ಎರಡು ಕ್ಷೇತ್ರದ ಫಲಿತಾಂಶವನ್ನು ಅಸಿಂಧು ಮತಗಳು ನಿರ್ಧರಿಸಿರುವುದು. ಒಟ್ಟು ನಾಲ್ಕು ಕ್ಷೇತ್ರದಲ್ಲಿ 31,708 ಮತಗಳು ಅಸಿಂಧು ಆಗಿವೆ.

ವಿನುತಾ ಹೆಗಡೆ ಶಿರಸಿ

ಕರ್ನಾಟಕದ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎಲ್ಲಾ ನಾಲ್ಕು ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ. ಆದರೆ, ಗಮನಿಸಬೇಕಾದ ವಿಚಾರ ಏನಂದರೆ, ಎರಡು ಕ್ಷೇತ್ರದ ಫಲಿತಾಂಶವನ್ನು ಅಸಿಂಧು ಮತಗಳು ನಿರ್ಧರಿಸಿರುವುದು. ಒಟ್ಟು ನಾಲ್ಕು ಕ್ಷೇತ್ರದಲ್ಲಿ 31,708 ಮತಗಳು ಅಸಿಂಧು ಆಗಿವೆ.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 7,902 ಮತಗಳು ಅಸಿಂಧುಗೊಂಡರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 1857 ಕುಲಗೆಟ್ಟಿವೆ. ಪದವೀಧರ ಮತ್ತು ಪ್ರಜ್ಞಾವಂತರ ಕ್ಷೇತ್ರದಲ್ಲೇ ಈಗಾಗಿರುವುದು ಅಚ್ಚರಿಯ ಸಂಗತಿ. ಶಿಕ್ಷಕರು, ಪದವೀಧರರು ಮತ ಚಲಾಯಿಸುವ ಈ ಚುನಾವಣೆಯಲ್ಲಿ ಅವರಿಂದಲೇ ಎಡವಟ್ಟಾಗಿರುವುದು ಅಚ್ಚರಿಯ ಜತೆ, ಹಲವು ಚರ್ಚೆಗೆ ನಾಂದಿಯೂ ಹಾಡಿದೆ.

ಯಾಕೆಂದರೆ, ಈ ಚುನಾವಣೆಯಲ್ಲಿ ಮತ ಚಲಾಯಿಸಿದ ಹಲವರು, ಸಾರ್ವತ್ರಿಕ ಚುನಾವಣೆಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡಿದವರೂ ಇದ್ದಾರೆ. ವಿಧಾನ ಪರಿಷತ್ ಚುನಾವಣೆಗಳು ಸಾಮಾನ್ಯ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಗಳಿಗಿಂತ ಭಿನ್ನವಾಗಿವೆ.

ಇದನ್ನೂ ಓದಿ: Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ

ಇಲ್ಲಿ ಆದ್ಯತಾ ಮತದಾನ ವ್ಯವಸ್ಥೆ ಹಾಗೂ ಬ್ಯಾಲಟ್ ಪೇಪರ್ ಬಳಸಲಾಗುತ್ತದೆ. ಪದವೀಧರ ಮತದಾರರು ಮಾಡುವ ಪ್ರಮುಖ ತಪ್ಪುಗಳಿಂದಾಗಿ ಮತಗಳು ತಿರಸ್ಕೃತಗೊಳ್ಳುತ್ತವೆ. ಅಂಕಿಗಳ ಬದಲು ‘ಒಂದು’, ‘ಎರಡು’ ಎಂದು ಶಬ್ದಗಳಲ್ಲಿ ಬರೆಯುವುದು, ಅಭ್ಯರ್ಥಿಯ ಹೆಸರಿನ ಮುಂದೆ ಸರಿ ಅಥವಾ ತಪ್ಪು ಗುರುತು ಹಾಕುವುದು, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ 1ನೇ ಆದ್ಯತೆ ನೀಡುವುದು, ಚುನಾವಣಾ ಸಿಬ್ಬಂದಿ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ ಬದಲಿಗೆ ತಮ್ಮ ಸ್ವಂತ ಪೆನ್ ಬಳಸುವುದು ಹಾಗೂ ಮತಪತ್ರದ ಮೇಲೆ ತಮ್ಮ ಹೆಸರು ಅಥವಾ ಸಹಿ ಮಾಡುವುದು ಮತ ರದ್ದಾಗಲು ಮುಖ್ಯ ಕಾರಣಗಳಾಗಿವೆ.

ಈ ತಿರಸ್ಕೃತ ಮತಗಳು ಚುನಾವಣೆಯ ಫಲಿತಾಂಶದ ಮೇಲೂ ದೊಡ್ಡ ಪ್ರಭಾವ ಬೀರಿವೆ. ಪಶ್ಚಿಮ ಪದವೀಧರ ಕ್ಷೇತ್ರದ ಈ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿ ಎಸ್ .ವಿ.ಸಂಕನೂರ ಮತ್ತು ಸಮೀಪದ ಸ್ಪರ್ಧಿ ಮೋಹನ ಲಿಂಬಿಕಾಯಿ ನಡುವಿನ ಗೆಲುವಿನ ಅಂತರ 6738 ಮತಗಳು. ಆದರೆ, ತಿರಸ್ಕೃತಗೊಂಡ ಮತಗಳ ಸಂಖ್ಯೆ 7902. ಅಂದರೆ, ಸೋಲು-ಗೆಲುವಿನ ಅಂತರಕ್ಕಿಂತಲೂ ತಿರಸ್ಕೃತಗೊಂಡ ಮತಗಳ ಸಂಖ್ಯೆಯೇ ಹೆಚ್ಚಾಗಿದೆ.

ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಮಾಡಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪದವೀಧರರು, ಮತದಾನದ ತಾಂತ್ರಿಕ ನಿಯಮಗಳ ಅರಿವಿಲ್ಲದೆ ತಮ್ಮ ಅಮೂಲ್ಯವಾದ ಮತವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಶೇಕಡಾ 100% ಸಾಕ್ಷರರಿರುವ ಪದವೀಧರ ಕ್ಷೇತ್ರದಲ್ಲೇ ಶೇಕಡಾ 13.9% ರಷ್ಟು ಮತಗಳು ತಿರಸ್ಕೃತಗೊಳ್ಳುತ್ತಿರುವುದು ಚುನಾವಣಾ ಜಾಗೃತಿಯ ಕೊರತೆ ಯನ್ನು ಎತ್ತಿ ತೋರಿಸುತ್ತದೆ. ಮುಂಬರುವ ಚುನಾವಣೆಗಳಲ್ಲಾದರೂ ಮತದಾರರು ನಿಯಮ ಗಳನ್ನು ಸರಿಯಾಗಿ ಅರ್ಥೈಸಿಕೊಂಡು ಮತ ಚಲಾಯಿಸಿದರೆ ಮಾತ್ರ ಪ್ರಜಾಪ್ರಭುತ್ವದ ನೈಜ ಆಶಯ ಈಡೇರಲು ಸಾಧ್ಯ.

ಸಾಮಾನ್ಯ ಎಲೆಕ್ಷನ್‌ನಂತೆ ಜಾಗೃತಿ ಮೂಡಿಸಲಿ

ಈ ಸಮಸ್ಯೆಗೆ ಪರಿಹಾರವಾಗಿ ಚುನಾವಣಾ ಆಯೋಗವು ಸಾಮಾನ್ಯ ಎಲೆಕ್ಷನ್‌ಗೆ ನೀಡುವ ಜಾಗೃತಿ ಯಂತೆಯೇ, ಪದವೀಧರ ಕ್ಷೇತ್ರಗಳ ಮತದಾನ ಪ್ರಕ್ರಿಯೆಯ ಬಗ್ಗೆಯೂ ಮಾಧ್ಯಮಗಳ ಮೂಲಕ ಆದ್ಯತಾ ಮತ ಚಲಾಯಿ ಸುವುದು ಹೇಗೆ ಎಂಬುದರ ಮಾದರಿ ವಿಡಿ ಯೋಗಳನ್ನು ಪ್ರಚಾರ ಮಾಡಬೇಕಿದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಸರಿಯಾದ ರೀತಿಯಲ್ಲಿ ನಂಬರ್ 1 ಹಾಕುವುದು ಹೇಗೆ ಎಂಬುದನ್ನು ತಿಳಿಸಿ ಕೊಡಬೇಕು. ಮತದಾನ ಕೇಂದ್ರದ ಹೊರಗೆ ಮತ್ತು ಒಳಗಡೆ ಮತ ಸಿಂಧುಗೊಳಿಸುವುದು ಹೇಗೆ ಎಂಬ ಸ್ಪಷ್ಟ ಬೋರ್ಡ್‌ʼಗಳನ್ನು ದೊಡ್ಡದಾಗಿ ಪ್ರದರ್ಶಿಸುವುದು ಅತ್ಯಂತ ಅಗತ್ಯವಾಗಿದೆ.