ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕುಂಚದ ಮಾಯೆಯಲ್ಲಿ ಮುಳುಗಿದ ಕಲಾರಸಿಕರು

ಈ ಚಿತ್ರಸಂತೆಯು ಯುವ ಕಲಾವಿದರ ಪ್ರೇರಣಾ ಶಕ್ತಿಯಾಗಿ, ಕಲಾವಿದರ ಮಾರುಕಟ್ಟೆ ವೇದಿಕೆಯಾಗಿ, ಜನರ ಮತ್ತು ಕಲಾವಿದ ಮಧ್ಯ ಸೇತುವೆಯಾಗಿ ಕಾರ್ಯನಿರ್ವಹಿಸಿತು. ಈ ಬಾರಿಯ ಚಿತ್ರಸಂತೆಯನ್ನು ವಿಶೇಷವಾಗಿ ಪರಿಸರ ಸಂಬಂಽತ ಸವಾಲುಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶದಿಂದ ಕಲೆಯ ದೃಷ್ಟಿಕೋನದಿಂದ ಪರಿಸರ ಸಂಬಂಧಿತ ಸವಾಲುಗಳು ಎಂಬ ವಿಷಯಾಧಾರಿತ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು

ವೈಭವ್ ಕೊಳ್ಳಿ ಬೆಂಗಳೂರು

ಎಡೆ ನೋಡಿದರೂ ಪರಿಸರ ಕಾಳಜಿಯ ಬಣ್ಣಚಿತ್ರಗಳು, ಕ್ಷಣಾರ್ಧದಲ್ಲೇ ಚಿತ್ರ ಬಿಡಿಸಿ ಕೊಡುವ ಕಲಾವಿದರು. ರಸ್ತೆಯ ಉದ್ದಗಲಕ್ಕೂ ಕಾಣುವ ವಿವಿಧ ಪ್ರಕಾರದ ಕಲಾಕೃತಿಗಳು. ಕಲಾರಸಿಕರನ್ನು ಒಳಗೊಂಡ ಕಲಾ ಪ್ರದರ್ಶನ. ಈ ದೃಶ್ಯ ಕಂಡಿದ್ದು, ವನಲೋಕ ಫೌಂಡೇಶನ್ ಹಾಗೂ ಕರ್ನಾಟಕ ಚಿತ್ರ ಕಲಾ ಪರಿಷತ್ತು ವತಿಯಿಂದ ಭಾನುವಾರ ಆಯೋಜಿಸಿದ್ದ ಚಿತ್ರಸಂತೆಯಲ್ಲಿ. ಈ ಚಿತ್ರಸಂತೆಯು ಯುವ ಕಲಾವಿದರ ಪ್ರೇರಣಾ ಶಕ್ತಿಯಾಗಿ, ಕಲಾವಿದರ ಮಾರುಕಟ್ಟೆ ವೇದಿಕೆಯಾಗಿ, ಜನರ ಮತ್ತು ಕಲಾವಿದ ಮಧ್ಯ ಸೇತುವೆಯಾಗಿ ಕಾರ್ಯನಿರ್ವಹಿಸಿತು. ಈ ಬಾರಿಯ ಚಿತ್ರಸಂತೆಯನ್ನು ವಿಶೇಷವಾಗಿ ಪರಿಸರ ಸಂಬಂಽತ ಸವಾಲುಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶದಿಂದ ಕಲೆಯ ದೃಷ್ಟಿಕೋನದಿಂದ ಪರಿಸರ ಸಂಬಂಧಿತ ಸವಾಲುಗಳು ಎಂಬ ವಿಷಯಾಧಾರಿತ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಕ್ಷಿಪ್ರೇಮಿ ಸಲೀಮ್ ಅಲಿ, ಕಾಡಿನ ವಿಶ್ವಕೋಶ ಎಂದ ಹೆಸರಾಂತ ತಳಸಿ ಗೌಡ, ವಾಟರ್‌ಮ್ಯಾನ್ ಆಫ್ ಇಂಡಿಯಾ ರಾಜೇಂದ್ರ ಸಿಂಗ್, ಪಾಂಡು ರಂಗ ಹೆಗಡೆ, ಸುಂದರಲಾಲ್ ಬಹುಗುಣ್, ಸಾಲು ಮರದ ತಿಮ್ಮಕ್ಕ, ಅಂಬೇಡ್ಕರ್, ಬುದ್ಧ ಸೇರಿದಂತೆ ಮುಂತಾದವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ‌

ಕರ್ನಾಟಕ ಮಾತ್ರವಲ್ಲದೇ ತಮಿಳನಾಡು, ಪಂಜಾಬ್, ಕೇರಳ, ಆಂಧ್ರಪ್ರದೇಶ್, ಪಶ್ಚಿಮ್ ಬಂಗಾಳ, ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ 22 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶದಿಂದ 1532 ಕಲಾವಿದರ ಕಲಾಕೃತಿಗಳು ಚಿತ್ರಸಂತೆಯಲ್ಲಿ ಪ್ರದರ್ಶಸಿಸಲಾಗಿತ್ತು.

ಇದನ್ನೂ ಓದಿ: Narayana Yaji Column: ಕರ್ಕಿ ಪ್ರಭಾಕರ ಭಂಡಾರಿಯವರ ನಾದ ಮೌನ

ಪ್ರಮುಖವಾಗಿ ಹವಾಮಾನ ಬದಲಾವಣೆ, ನೀರಿನ ಸಮಸ್ಯೆ, ಅರಣ್ಯ ನಾಶ, ಮಾಲಿನ್ಯ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಕಪ್ ಹಿಡಿದಿರುವ ಚಿತ್ರ, ಐಫೆಲ್ ಟವರ್, ಗಣಪತಿ, ಸಿಂಹ, ಹಳ್ಳಿ ಸೊಗಡು, ಜಲಿಕಟ್ಟು, ಕಂಬಳ, ಕಾಂತರ ದೈವ, ಯಕ್ಷಗಾನ, ಸೈಕಲ್ ಸವಾರಿ, ಅಪ್ಪ ಮಗಳ ಬಾಂಧವ್ಯ, ಭತ್ತದ ಪೈರ್ ಕಟ್ ಮಾಡುವ ಕಲಾಕೃತಿ, ನಂದಿ ವಿಕ್ಷಣೆ ಮಾಡುತ್ತಿರುವ ಬಾಲಕಿ, ದಯಾನಿಧಿ ಪರಮಶಿವ, ಪುನೀತ್ ರಾಜಕುಮಾರ್, ಕಾರ್ಟೂನ್ ಚಿತ್ರಗಳು ಹಾಗೂ ವಿವಿಧ ಪ್ರಕಾರದ ಕಲಾಕೃತಿಗಳು ಜನರನ್ನು ತಮ್ಮತ್ತ ಸೆಳೆಯುತ್ತಿದ್ದವು.

ಗಮನ ಸೆಳೆದ ಬರ್ಮಾಟೀಕ್ ಮರದ ಬಾಗಿಲು ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡಲಾ ಗಿದ್ದ ಬರ್ಮಾ ಟೀಕ್ ಮರದ ಬಾಗಿಲು ಜನರ ಗಮನ ಸೆಳೆಯುತ್ತಿತ್ತು. ತಮಿಳುನಾಡಿನ ಮಧುರೈನ ಇಳಂಗೋ ಎಂಬುವವರು ಕಲಾಕೃತಿ ರಚಿಸಲು 2 ರಿಂದ 3 ವರ್ಷಗಳಾಗಿದ್ದು, ಈ ಕಲಾಕೃತಿಗೆ 8 ಲಕ್ಷ ರು. ನಿಗದಿಪಡಿಸಲಾಗಿತ್ತು.

ಒಂದು ಕಾಲದಲ್ಲಿ ಅರಮನೆಗಳು, ದೇವಾಲಯಗಳು ಮತ್ತು ಪಾರಂಪರಿಕ ಕಟ್ಟಡಗಳ ಗೌರವ ಚಿಹ್ನೆಯಾಗಿದ್ದ ಬರ್ಮಾ ಟೀಕ್ ಮರ ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿದೆ. ಇದು ಅತೀ ಹೆಚ್ಚು ಬಾಳಿಕೆ ಬರುವ ಮರಗಳಲ್ಲಿ ಇದು ಕೂಡಾ ಒಂದು.

1500ಕ್ಕೂ ಅಧಿಕ ಮಳಿಗೆಗಳು: ಚಿತ್ರ ಸಂತೆಯಲ್ಲಿ 1500ಕ್ಕೂ ಹೆಚ್ಚು ಮಳಿಗೆಗಳಿದ್ದು, ದೇಶದ 22 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಿಂದ 1600 ಹೆಚ್ಚು ಕಲಾ ವಿದರು ತಾವು ರಚಿಸಿದ ಕಲಾ ಕೃತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಪ್ರತಿಯೊಂದು ಕಲಾಕೃತಿಗಳು ಜನರನ್ನು ತನ್ನತ್ತ ಸೆಳೆಯುವಂತಿದ್ದವು. ಸಾಂಪ್ರದಾಯಕ ಮೈಸೂರು ಶೈಲಿಯ ವುಡ್ ಲೇತ್ ಆರ್ಟ್, ಪಟ್ಟೆ ಚಿತ್ರ, ಕಾಲ್ಪನಿಕ ಆಧಾರಿತ ಚಿತ್ರ, ಕ್ಲೇ ರಿಲೀಫ್, ತೈಲ ಹಾಗೂ ಜಲ ವರ್ಧನಗಳಲ್ಲಿ ರಚಿಸಿದ ಕಲಾ ಕೃತಿಗಳು, ಡೂಡಲ್, ಶಿಲ್ಪ ಕಲಾಕೃತಿಗಳು, ಆಕ್ರಿಲಿಕ್ ಚಿತ್ರ, ಕಾರ್ಟೂನ್ ಚಿತ್ರಗಳು, ಪಾರಂಪರಿಕ ಮತ್ತು ಜಾನಪದ ಕಲೆಗಳ ಚಿತ್ರಗಳು, ರೇಖಾ ಚಿತ್ರಗಳು, ಲೈವ್ ಸ್ಕೆಚ್, ಫೋಟೋಗ್ರಾಫಿಗಳು ಸೇರಿದಂತೆ ಇನ್ನಿತರ ಕಲಾಕೃತಿಗಳ ಪ್ರಕಾರಗಳು ಸಂತೆಯಲ್ಲಿ ಜನರನ್ನು ತನ್ನತ್ತ ಕೈಬಿಸಿ ಕರೆಯುತ್ತಿದ್ದವು.

ಪರಿಸರದ ರಕ್ಷಣೆ ಇಂದಿನ ಅಗತ್ಯ: ಸಿಎಂ ಸಿದ್ದರಾಮಯ್ಯ

ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು, ಸರಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ. ಈ ಬಾರಿಯ ಚಿತ್ರಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯ ವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.

ಮೈಸೂರು ಶೈಲಿಯ ವುಡ್ ಲೇತ್ ಆರ್ಟ್ ವಿಶೇಷವೇನು?

ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಆಡಳಿತಕಾಲವು ಕೇವಲ ರಾಜಕೀಯ ಆಡಳಿತದ ದೃಷ್ಟಿಯಿಂದ ಮಾತ್ರವಲ್ಲ, ಕಲೆ-ಸಂಸ್ಕೃತಿಯ ಪುನರು ಜ್ಜೀವನದ ದೃಷ್ಟಿಯಿಂದಲೂ ಅವಶ್ಯವಾಗಿತ್ತು. ಆ ಕಾಲಘಟ್ಟದಲ್ಲಿ ಹಲವು ಸಾಂಪ್ರ ದಾಯಿಕ ಕಲೆಗಳು ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂಬ ಆತಂಕ ರಾಜನ ಗಮನದಲ್ಲಿ ಇರಿಸಿ ಈ ಕಲೆ ಉಳಿಸಿದ್ದಾರೆ. ಕಲೆ ಉಳಿಯಬೇಕು, ಕಲಾವಿದರಿಗೆ ಬದುಕು ಬೇಕು ಎಂಬ ದೃಷ್ಟಿಯಿಂದ ಕೃಷ್ಣರಾಜ ಒಡೆಯರ್ ಅವರು ಕೇವಲ ಪ್ರೋತ್ಸಾಹಕ್ಕೆ ಸೀಮಿತ ವಾಗದೆ, ಕಲಿಕೆಗೆ ವ್ಯವಸ್ಥಿತ ವೇದಿಕೆ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಂಡರು. ಅದರ ಫಲವಾಗಿ, ಕಲೆ ಕಲಿಯಲು ವಿಶೇಷ ಸಂಸ್ಥೆಗಳು ಹಾಗೂ ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸಲಾಯಿತು. ನಂತರದ ದಿನಗಳಲ್ಲಿ ಇದೇ ಪರಂಪರೆ ಸರಕಾರದ ಕಾಲೇಜುಗಳಲ್ಲಿ ಕಲಿಸಲು ಮುಂದಾಗಿದೆ.

*

ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ.30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇ.20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಸಾಲು ಮರದ ತಿಮ್ಮಕ್ಕನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

2006ರಲ್ಲಿ ಆರಂಭವಾದ ಚಿತ್ರಸಂತೆ ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ಮಹತ್ತರ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ವರ್ಷದಿಂದ ವರ್ಷಕ್ಕೆ ವಿಸ್ತಾರ ಗೊಳ್ಳುತ್ತಿರುವ ಈ ಕಲಾ ಮೇಳ ಇಂದು ರಾಜ್ಯದ ಗಡಿ ಮೀರಿ ದೇಶದ ವಿವಿಧ ಭಾಗಗಳಿಂದ ಕಲಾವಿದರು ಹಾಗೂ ಕಲಾಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಈ ವರ್ಷವೂ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಚಿತ್ರಸಂತೆ ದೇಶದ ಪ್ರಮುಖ ಕಲಾ ಹಬ್ಬಗಳ ಸಾಲಿನಲ್ಲಿ ತನ್ನದೇ ಆದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

-ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ