National Girl Child Day: ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು
‘ಒಂದು ಗಂಡು ಮಗುವಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತೆ, ಆದರೆ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೇ ಶಿಕ್ಷಣ ನೀಡಿದಂತೆ.‘ ಈ ಮಾತು ಹೆಣ್ಣು ಮಗುವಿನ ಮಹತ್ವವನ್ನು ಸಾರುತ್ತದೆ. ಪ್ರತಿ ವರ್ಷ ಜ.24ರಂದು ಭಾರತದಾದ್ಯಂತ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ" ವನ್ನು ಆಚರಿಸಲಾಗುತ್ತದೆ.
-
ವಿನುತಾ ಹೆಗಡೆ, ಶಿರಸಿ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಇಂದು
ನಾರಿಯರಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬದ ಪ್ರಗತಿಗೆ ಮುನ್ನುಡಿ
‘ಒಂದು ಗಂಡು ಮಗುವಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತೆ, ಆದರೆ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೇ ಶಿಕ್ಷಣ ನೀಡಿದಂತೆ.‘ ಈ ಮಾತು ಹೆಣ್ಣು ಮಗುವಿನ ಮಹತ್ವವನ್ನು ಸಾರುತ್ತದೆ. ಪ್ರತಿ ವರ್ಷ ಜ.24ರಂದು ಭಾರತದಾದ್ಯಂತ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ" ವನ್ನು ಆಚರಿಸಲಾಗುತ್ತದೆ.
ಇದು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಿಗೆ ಹೆಣ್ಣು ಮಕ್ಕಳ ಹಕ್ಕುಗಳನ್ನು ಗೌರ ವಿಸುವ ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಸ್ಥಾನಮಾನ ನೀಡುವ ದಿಸೆಯಲ್ಲಿ ಒಂದು ಎಚ್ಚರಿಕೆಯ ಕರೆ.
ಆಚರಣೆಯ ಹಿನ್ನೆಲೆ ಮತ್ತು ಉದ್ದೇಶ: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2008ರಲ್ಲಿ ಈ ದಿನಾಚರಣೆಯನ್ನು ಜಾರಿಗೆ ತಂದಿತು. ಸಮಾಜ ದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಲಿಂಗ ತಾರತಮ್ಯವನ್ನು ಹೋಗಲಾಡಿಸುವುದು, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಬಾಲ್ಯ ವಿವಾಹದಂತಹ ಪಿಡುಗುಗಳನ್ನು ನಿರ್ಮೂಲನೆ ಮಾಡುವುದು ಈ ದಿನದ ಪ್ರಮುಖ ಗುರಿಯಾಗಿದೆ.
ಇದನ್ನೂ ಓದಿ: Women's Entrepreneurs Day: ಮಹಿಳಾ ಉದ್ಯಮಿಗಳಿಗೆ ಗುಡ್ ನ್ಯೂಸ್; ಸರ್ಕಾರದಿಂದ ತ್ವರಿತ ಸಾಲ ಸೌಲಭ್ಯ
ನಾವೇಕೆ ಹೆಣ್ಣು ಮಕ್ಕಳನ್ನು ಸಬಲೀಕರಿಸಬೇಕು?
ಶಿಕ್ಷಣದ ಹಕ್ಕು: ಇಂದಿಗೂ ಅನೇಕ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ಬಿಡುತ್ತಿದ್ದಾರೆ. ಶಿಕ್ಷಣವು ಹೆಣ್ಣು ಮಗುವಿಗೆ ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವತಂತ್ರವನ್ನು ನೀಡುತ್ತದೆ.
ಆರೋಗ್ಯ ಮತ್ತು ಪೌಷ್ಟಿಕಾಂಶ: ಬೆಳೆಯುವ ಹಂತದಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯ ಒದಗಿಸುವುದು ಸದೃಢ ಸಮಾಜದ ನಿರ್ಮಾಣಕ್ಕೆ ಅಡಿಪಾಯ.
ಸಮಾನ ಅವಕಾಶ: ವಿಜ್ಞಾನ, ಕ್ರೀಡೆ, ರಾಜಕೀಯ ಅಥವಾ ರಕ್ಷಣೆ - ಇಂದು ಹೆಣ್ಣು ಮಕ್ಕಳು ಮುಟ್ಟದ ಶಿಖರವಿಲ್ಲ. ಅವರಿಗೆ ಸರಿಯಾದ ವೇದಿಕೆ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ.
‘ಹೆಣ್ಣು ಮಗುವು ಉಳಿಯಲಿ, ಬೆಳೆಯಲಿ ಮತ್ತು ಕಲಿಯಲಿ‘ ಸಮಾಜದ ಜವಾಬ್ದಾರಿ ಕೇವಲ ಸರಕಾರಿ ಯೋಜನೆಗಳಿಂದ ಬದಲಾವಣೆ ಸಾಧ್ಯವಿಲ್ಲ.
ಬದಲಾವಣೆ ನಮ್ಮ ಮನೆಯಿಂದಲೇ ಶುರುವಾಗಬೇಕು. ಹೆಣ್ಣು ಮಗು ಹುಟ್ಟಿದಾಗ ಸಂಭ್ರ ಮಿಸುವ ಮನಸ್ಥಿತಿ ಬೆಳೆಯಬೇಕು. ಅವಳ ಕನಸುಗಳಿಗೆ ರೆಕ್ಕೆ ನೀಡುವ ಪೋಷಕರು ಮತ್ತು ಅವಳನ್ನು ಗೌರವದಿಂದ ಕಾಣುವ ಸಮಾಜ ಇಂದು ಅತ್ಯಗತ್ಯವಾಗಿದೆ.
ಹೆಣ್ಣು ಮಗು ಮನೆಯ ಬೆಳಗುವ ದೀಪವಿದ್ದಂತೆ. ಅವಳಿಗೆ ತಾರತಮ್ಯದ ಬೇಲಿ ಹಾಕದೆ, ಪ್ರೀತಿ ಮತ್ತು ಪ್ರೋತ್ಸಾಹದ ನೀರೆರೆದರೆ ಅವಳು ಇಡೀ ಜಗತ್ತನ್ನೇ ಬೆಳಗಬಲ್ಲಳು. ಈ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ನಾವೆಲ್ಲರೂ ಪಣತೊಡೋಣ: "ಹೆಣ್ಣು ಮಗು ವನ್ನು ರಕ್ಷಿಸೋಣ, ಅವಳನ್ನು ಓದಿಸೋಣ ಮತ್ತು ಸಬಲಳನ್ನಾಗಿ ಮಾಡೋಣ.
"ರಾಜ್ಯದ ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ತೆಯಾದ ದೊಡ್ಡ ಮಟ್ಟದ ಭ್ರೂಣ ಹತ್ಯೆ ಜಾಲದ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ಇರುವ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದೆ.
ಕಾನೂನು ಕ್ರಮ: ಜಿಲ್ಲೆಯಲ್ಲಿ ಅನಧಿಕೃತ ಸ್ಕ್ಯಾನಿಂಗ್ ಸೆಂಟರ್ಗಳು ಅಥವಾ ಪೋರ್ಟ ಬಲ್ ಸ್ಕ್ಯಾನಿಂಗ್ ಯಂತ್ರಗಳ ಬಳಕೆ ಕಂಡುಬಂದಲ್ಲಿ ಅಂತಹವರ ವಿರುದ್ಧ ಪಿಸಿಪಿ ಎನಡಿಟಿ ಕಾಯಿದೆಯಡಿ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.
*
ಸರಕಾರದ ಹೊಸ ಕ್ರಮ
ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಘೋಷಿಸಿದಂತೆ, ಪ್ರತಿ ಜಿಲ್ಲೆಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಭ್ರೂಣ ಲಿಂಗ ಪತ್ತೆ ಮಾಡುವವರ ಬಗ್ಗೆ ಮಾಹಿತಿ ನೀಡುವವರಿಗೆ ನೀಡುವ ಬಹುಮಾನ ಮೊತ್ತವನ್ನು 50000 ನಿಂದ 1 ಲಕ್ಷ ರು.ಗೆ ಏರಿಸಲಾಗಿದೆ.
ಲಿಂಗ ಅನುಪಾತದ ಆತಂಕ
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಏರು ಪೇರಾಗುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಲಿಂಗ ಅನುಪಾತವನ್ನು ಸಮತೋಲನದಲ್ಲಿಡಲು "ಬೇಟಿ ಬಚಾವೋ, ಬೇಟಿ ಪಢಾವೋ" ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.