ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Balehonnur News: ಯುವ ಪೀಳಿಗೆಯನ್ನು ಮರಳಿ ಕಾಫಿ ಕೖಷಿಯತ್ತ ಕರೆ ತನ್ನಿ, ಜೆನ್ ಜೀ ಪೀಳಿಗೆಗೆ ತಕ್ಕಂತೆ ಮಾರುಕಟ್ಟೆ ರೂಪಿಸಿ: ಕಾಫಿ ತಜ್ಞರ ಕರೆ

ಆರ್ಥಿಕತೆಯ ಬಲದೊಂದಿಗೆ ಕಾಫಿ ಕ್ಷೇತ್ರಕ್ಕೆ ಆಧುನಿಕ ರೀತಿಯ ತಂತ್ರಜ್ಞಾವದ ಪರಿಚಯ ಹೆಚ್ಚಾಗ ಬೇಕಾಗಿದೆ. ಸುಸ್ಥಿರ ಮಾರುಕಟ್ಟೆಯತ್ತ ಬೆಲೆಗಾರರ ಚಿತ್ತ ಹೆಚ್ಚಾಗಬೇಕಾಗಿದೆ ಎಂದು ನುಡಿದ ಚಂಗಪ್ಪ, ಜೆನ್ ಜೀ ಕಾಲಘಟ್ಟದಲ್ಲಿರುವ ಈ ದಿನಗಳಲ್ಲಿ ಪರಿಸರ ಸ್ನೇಹಿ ಕಾಫಿಯನ್ನು ಹಚ್ಚು ಪ್ರಚುರಪಡಿಸಬೇಕು. ಜೆನ್ ಜೀ ಪೀಳಿಗೆಯ ಮನಸ್ಥಿತಿಗೆ ತಕ್ಕಂತೆ ಕಾಫಿಯನ್ನು ಮಾರುಟ್ಟೆಗೆ ಬಿಡುಗಡೆಗೊಳಿಸಬೇಕಾಗಿದೆ

ಅನಿಲ್ ಹೆಚ್.ಟಿ.  

ಬಾಳೆಹೊನ್ನೂರು: ಯುವಪೀಳಿಗೆಯನ್ನು ಮತ್ತೆ ಕಾಫಿ ಕೖಷಿಯಲ್ಲಿ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಹಿರಿಯರು ಚಿಂತನೆ ಹರಿಸಬೇಕು. ಜೆನ್ ಜೀ ಪೀಳಿಗೆಗೆ ಆಸಕ್ತಿದಾಯಕವಾದ ಕಾಫಿಯ ವೈವಿಧ್ಯತೆ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಬೇಕು. ಕಾಫಿ ಮಂಡಳಿಯ ಗುರಿಯಾಗಿರುವ ವಾರ್ಷಿಕ 7 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ಪ್ರತೀಯೋರ್ವ ಬೆಳೆಗಾರರು ತನ್ನ ಕೊಡುಗೆ ನೀಡಬೇಕು.. ಎಂದು ಕಾಫಿ ಕ್ಷೇತ್ರದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಬಾಳೆಹೊನ್ನೂರಿನಲ್ಲಿರುವ ರಾಷ್ಟ್ರೀಯ ಕಾಫಿ ಸಂಶೋಧನಾ  ಕೇಂದ್ರದ ಶತಮಾನೋತ್ಸವ ಸಮಾರಂಭದ ಎರಡನೇ ದಿನ ನಡೆದ ವಿವಿಧ ವಿಚಾರಗೋಷ್ಟಿಗಳಲ್ಲಿ ವಿಷಯ ತಜ್ಞರು ಕಾಫಿ ಕೖಷಿ ಭವಿಷ್ಯದ ಬಗೆಗೆ ವಿಚಾರಧಾರೆಗನ್ನು ಹಂಚಿಕೊಂಡರು.

ಇದನ್ನೂ ಓದಿ: CCRI: ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

ಬೆಂಗಳೂರು ಕೖಷಿ ವಿಶ್ವವಿದ್ಯಾಲಯದ ನಿವೖತ್ತ ಉಪಕುಲಪತಿ ಡಾ.ಪಿ.ಸಿ.ಚಂಗಪ್ಪ ಮಾತನಾಡಿ, ಕಾಫಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿವೆ. ಈ ಬದಲಾವಣೆಗೆ ತಕ್ಕಂತೆಯೇ ಕೖಷಿಕರೂ ಮನಸ್ಥಿತಿಯನ್ನು ಬದಲಿಸಿಕೊಂಡು ನವವಿಧಾನದ ಕೖಷಿಗೆ ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದರು. ವಿಯೆಟ್ನಾಂನಂತೆ ಭಾರತ ಕೂಡ ರೋಬಸ್ಟಾ ತಳಿಗೆ ಆದ್ಯತೆ ನೀಡಬೇಕೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ ಚಂಗಪ,  ಆಂತರಿಕ ಬಳಕೆ ನಿರೀಕ್ಷಿತ ವೇಗದಲ್ಲಿ ಅಲ್ಲವಾದರೂ ನಿಧಾನಗತಿಯಲ್ಲಿ ಹೆಚ್ಚಾಗುತ್ತಿರುವುದು ಆಶಾದಾಯಕ ವಾಗಿದೆ ಎಂದರು.  

ಆರ್ಥಿಕತೆಯ ಬಲದೊಂದಿಗೆ ಕಾಫಿ ಕ್ಷೇತ್ರಕ್ಕೆ ಆಧುನಿಕ ರೀತಿಯ ತಂತ್ರಜ್ಞಾವದ ಪರಿಚಯ ಹೆಚ್ಚಾಗ ಬೇಕಾಗಿದೆ. ಸುಸ್ಥಿರ ಮಾರುಕಟ್ಟೆಯತ್ತ ಬೆಲೆಗಾರರ ಚಿತ್ತ ಹೆಚ್ಚಾಗಬೇಕಾಗಿದೆ ಎಂದು ನುಡಿದ ಚಂಗಪ್ಪ, ಜೆನ್ ಜೀ ಕಾಲಘಟ್ಟದಲ್ಲಿರುವ ಈ ದಿನಗಳಲ್ಲಿ ಪರಿಸರ ಸ್ನೇಹಿ ಕಾಫಿಯನ್ನು ಹಚ್ಚು ಪ್ರಚುರಪಡಿಸಬೇಕು. ಜೆನ್ ಜೀ ಪೀಳಿಗೆಯ ಮನಸ್ಥಿತಿಗೆ ತಕ್ಕಂತೆ ಕಾಫಿಯನ್ನು ಮಾರುಟ್ಟೆಗೆ ಬಿಡುಗಡೆ ಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.

EXPO2 ok

ಕಾರ್ಮಿಕರ ಕೊರತೆ ತೀವ್ರವಾಗುತ್ತಿರುವ ಈ ದಿನಗಳಲ್ಲಿ ಕಾಮಿ೯ಕರ ಅಗತ್ಯತೆಯನ್ನೂ ಪೂರೈಸು ವತ್ತ ಬೆಳೆಗಾರ ಸಮುದಾಯ ಮನಸ್ಸು ಮಾಡಬೇಕೆಂದು ಕಿವಿಮಾತು ಹೇಳಿದ ಪಿ.ಎ.ಚಂಗಪ್ಪ, ಕಾಮಿ೯ಕರ ಬಳಕೆಗೆ ಸುಲಭಸಾಧ್ಯವಾದ ಯಂತ್ರೋಪಕರಣಗಳನ್ನು ನೀಡುವಿಕೆ. ಸಮಾನ ವೇತನ ಶ್ರೇಣಿ ಕೂಡ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೂ ಕಾಫಿ ಬೆಳೆಗಾರರು ತೊಡಗಿಸಿಕೊಳ್ಳುವ ಮೂಲಕ ಪರ್ಯಾಯ ಆದಾಯ ಗಳಿಸಲು ಕಾಲ ಪಕ್ವವಾಗಿದೆ ಎಂದು ನುಡಿದ ಡಾ.ಚಂಗಪ್ಪ, ಪ್ರತೀ ಕಾಫಿ ತೋಟವನ್ನೂ ಬ್ರಾಂಡಿಂಗ್ ಮಾಡಿಕೊಂಡು ಪ್ರಚಾರ ಮಾಡಬಹುದು ಎಂಬ ಸಲಹೆ ನೀಡಿದರು.

ವಿಶ್ವದ 8 ಹಾಟ್ ಸ್ಪಾಟ್ ಗಳಲ್ಲಿ ಗುರುತಿಸಿಕೊಂಡಿರುವ ಪಶ್ಚಿಮಘಟ್ಟದಲ್ಲಿರುವ ಕೊಡಗು, ಚಿಕ್ಕಮಗಳೂರು ಕಾಫಿ ಬೆಳೆಗಾರರು ಇಲ್ಲಿನ ಜೀವವೈವಿಧ್ಯಮಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೊಣೆಗಾರಿಕೆ ಹೊಂದಿದ್ದಾರೆ ಎಂದರಲ್ಲದೇ,  ಇದರ ಸದ್ವಬಳೆಕೆಗೆ ಬೆಳೆಗಾರರು ಮುಂದಾ ಗಬೇಕೆಂದು ನುಡಿದರು.

DR P.G.CHANGAPPA ok

ಕೊಲಂಬಿಯಾ ಕಾಫಿ ಫೇಡರೇಷನ್ ನಿರ್ದೇಶಕ ಇಯಾನ್ ಎಸ್ತಬೆನ್ ಮಾತನಾಡಿ, ಕಾಫಿ ಕೇವಲ ಕೖಷಿ ಮಾತ್ರವಾಗಿರದೇ ಅದು ಕೋಟ್ಯಾಂತರ ಜನರ ಜೀವನಾಡಿಯೂ ಆಗಿದೆ. ಜಗತ್ತಿನಾದ್ಯಂತ ಜಾರಿಗೆ ಬರುತ್ತಿರುವ ಹೊಸ ಕಾನೂನು ನಿಯಮಾವಳಿಗಳು ಕಾಫಿ ಕೖಷಿಕರನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಇಂಥ ಸಮಸ್ಯೆಗಳ ಸವಾಲುಗಳನ್ನು ಎದುರಿಸಲು ವಿಶ್ವವ್ಯಾಪಿ ಕಾಫಿ ಸಂಘಟನೆಗಳು ಒಗ್ಗೂಡಬೇಕಾದ ಅನಿವಾಯ೯ತೆ ಇದೆ ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಡಾ.ಎನ್.ಕೆ.ಪ್ರದೀಪ್ ಅಧಿಕ ಕಾಫಿ ಉತ್ಪಾದನೆಗೆ ತಂತ್ರಗಳು ವಿಚಾರದ ಬಗ್ಗೆ  ಮಾತನಾಡಿ, ಯುವಕರನ್ನು ಮರಳಿ ಕಾಫಿ ಕೖಷಿಯತ್ತ ಸೆಳೆಯಲೇ ಬೇಕು. ಕಾಫಿಯೊಂದಿಗೆ ಅಡಕೆ, ಏಲಕ್ಕಿ, ಕರಿಮೆಣಸು, ಬಾಳೆಯಂಥ ಪರ್ಯಾಯ ಬೆಳೆ, ಹಣ್ಣಿನ ಬೆಳೆಗಳನ್ನು ನೆಡುವ ಮೂಲಕ ಯುವ ಪೀಳಿಗೆಗೆ ಕೖಷಿಯಲ್ಲಿ ಇರುವ ಆದಾಯದ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ಸಲಹೆ ನೀಡಿದರು.

ಹೊಣೆಯರಿತು ಕಾಫಿ ತೋಟಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವ ಮೂಲಕ ಸುಸ್ಥಿರ ಕೖಷಿಗೆ ಮಹತ್ವದ ಕೊಡುಗೆ ನೀಡಬೇಕು ಎಂದು ಪ್ರದೀಪ್ ಹೇಳಿದರು. ನವೀಕೖತ ಕಾಫಿ ಕೖಷಿ ಪರಿಚಿತವಾದ ತೋಟಗಳಲ್ಲಿ ಇತರ ಬೆಳೆಗಾರರಿಗೆ ಮಾಸಿಕ ತರಬೇತಿ ನೀಡುವ ಮೂಲಕ ಹೆಚ್ಚಿನವರು ಇಂಥ ಕೖಷಿ ವಿಧಾನ ಬಳಸಲು ನೆರವಾಗಬೇಕೆಂದೂ ಅವರು ಕರೆ ನೀಡಿದರು.

ವೈನಾಡು ಕಾಫಿ ಬೆಳೆಗಾರರ ಸಂಘದ ನಿದೇ೯ಶಕ  ನಾಯಕಂಡ  ಮಧುಬೋಪಯ್ಯ ಮಾತನಾಡಿ, ಮಾತೖ ಸಸಿಯನ್ನು ಆಯ್ಕೆ ಮಾಡುವಾಗ ನಿರ್ಲಕ್ಷ್ಯ ಧೋರಣೆ ಬೇಡ.  ಅಧಿಕ ಇಳುವರಿ ನೀಡುವ ಸಸಿಯನ್ನು ತೋಟದಲ್ಲಿ ಗುರುತಿಸುವಂತೆಯೇ ಆಕರ್ಷಕವಾಗಿದ್ದರೂ ಇಳುವರಿ ಕಡಿಮೆ ನೀಡುವ ಸಸಿಗಳನ್ನು ತೋಟದಿಂದ ಮುಕ್ತಗೊಳಿಸುವತ್ತ ಕೖಷಿಕರು ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಉಪಾಸಿ ಮಾಜಿ ಅಧ್ಯಕ್ಷ ಏರ್ಕಾಡ್ ನ ವಿಜಯನ್ ರಾಜೇಶ್ ಮಾತನಾಡಿ, 200 ವರ್ಷಗಳ ಇತಿಹಾಸ ಹೊಂದಿರುವ ಕಾಫಿ ಅನೇಕ ಜೀವವೈವಿಧ್ಯತೆಗಳಿಗೆ ಆಶ್ರಯ ನೀಡಿರುವುದು ಕಾಫಿಯನ್ನು ಬೆಳೆ ಯುವ ಪ್ರತಿಯೋರ್ವರೂ ಗರ್ವ ಪಡಬೇಕಾದ ವಿಚಾರವಾಗಿದೆ ಎಂದು ಶ್ಲಾಘಿಸಿದರು.

ತಮಿಳುನಾಡು ಮೂಲದ ಬೆಳೆಗಾರ ಶೇಖರ್ ನಾಗರಾಜನ್ ಮಾತನಾಡಿ, ನೆರಳಾಶ್ರಿತ ಬೆಳೆಯಾಗಿ ರುವ ಕಾಫಿಗೆ ನೆರಳು ನೀಡುವಲ್ಲಿ ನಿಲ೯ಕ್ಷ್ಯ ವಹಿಸಬೇಡಿ. ಇದರಿಂದ ಪರಿಸರದ ಮೇಲೆ ಅಗಾಧ ಪರಿಣಾಮ ಬೀರಲಿದೆ. ನೀರು ಸಿಂಪಡಿಸಿ  ತಂಪಾದ ಭೂಮಿಯಲ್ಲಿ ಬೆಳೆಯುವ ಕಾಫಿಯ ತೋಟ ಗಳಲ್ಲಿ ಹಸಿರು ನಾಶದಿಂದ ಪ್ರಾಕೖತ್ತಿಕ ಅಸಮತೋಲನ ಹೆಚ್ಚಾಗುವುದು ಖಂಡಿತಾ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಡಾ.ಹೆಚ್.ಟಿ. ಮೋಹನ್ ಕುಮಾರ್ ವಿಚಾರ ಗೋಷ್ಟಿ ನಿರ್ವಹಿಸಿ ಮಾತನಾಡಿ, ಕಾಫಿ ಕೖಷಿ ಭೂಮಿಯಲ್ಲಿ ಅಂತರಬೆಳೆಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ. ಕಾಫಿ ಜತೆ ಇತರ ಎರಡು ಪರ್ಯಾಯ ಬೆಳೆಗಳನ್ನು ಬೆಳೆಸಲು ಖಂಡಿತಾ ಸಾಧ್ಯವಿದೆ ಎಂದು ಭರವಸೆ ನುಡಿಯಾಡಿದರು.

ಆಂತರಿಕವಾಗಿಯೂ ಭಾರತೀಯ ಕಾಫಿಗೆ ಉಜ್ವಲ ಭವಿಷ್ಯ - ಕೆ.ಕೆ. ವಿಶ್ವನಾಥ್
ಸಾವಯವ ದೖಡೀಕರಣ ಮತ್ತು ಕಾಫಿ ಭವಿಷ್ಯದ ವಿಚಾರಗೋಷ್ಟಿಯಲ್ಲಿ ಮಾತನಾಡಿದ ಬಯೋಟಾ ಸಂಸ್ಥೆಯ ಮುಖ್ಯಕಾಯ೯ನಿವ೯ಹಣಾದಿಕಾರಿ ಮಡಿಕೇರಿಯ ಕೆ.ಕೆ.ವಿಶ್ವನಾಥ್,  ಕಾಫಿ ಲೋಕದಲ್ಲಿ  ಈವರೆಗೆ  ಉತ್ಪಾದನೆ, ಇನ್ ಸ್ಟಾಂಟ್ ಕಾಫಿ ಹಾಗೂ  ಕೆಫೆ ಸಂಸ್ಕೖತಿ, ಸ್ಪೆಷಾಲಿಟಿ ಕಾಫಿ ಮತ್ತು ವಾಣಿಜ್ಯ ಉತ್ಪಾದನೆಗಳೆಂಬ ನಾಲ್ಕು ಅಲೆಗಳು ಕಂಡುಬಂದಿದೆ. ಎಲ್ಲಾ ಸವಾಲುಗಳನ್ನೂ ಕಾಫಿ ಉದ್ಯಮ ಮೆಟ್ಟಿನಿಂತು ಸಬಲಗೊಳ್ಳುತ್ತಾ ಸಾಗಿಬಂದಿದೆ ಎಂದರು. ಕೆಲವೇ ವರ್ಷಗಳ ಹಿಂದೆ ಭಾರತದಲ್ಲಿ ಶೇ 80 ರಷ್ಟು ಅರೇಬಿಕಾ, ಶೇ 20 ರಷ್ಟು ರೋಬಸ್ಟಾ ಬೆಳೆ ಎಂದಿದ್ದ ಅಂಕಿ ಈಗ ಬದಲಾಗಿದ್ದು ಶೇ. 80 ರಷ್ಟು ರೋಬಸ್ಟಾ, ಶೇ. 20 ರಷ್ಟು ಅರೇಬಿಕಾ ಉತ್ಪಾದನೆಯಾಗಿದೆ. ಆಂತರಿಕ ವಾಗಿ ಕಾಫಿ ಕೆಫೆ ಸಂಸ್ಕೖತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಖಂಡಿತ ವಾಗಿಯೂ ಆಂತರಿಕವಾಗಿಯೂ ಭಾರತದ ಕಾಫಿಗೆ ಸುವಣ೯ ದಿನಗಳು ಕಂಡುಬರಲಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಕಾಫಿಗೆ ಎಲ್ಲಿಯವರೆಗೂ ಬೆಳೆಗಾರರು ಆದ್ಯತೆ ನೀಡುತ್ತಾರೆಯೋ ಅಲ್ಲಿಯವರೆಗೂ ಕಾಫಿ ಭವಿಷ್ಯಕ್ಕೆ ಸಮಸ್ಯೆಯಿಲ್ಲ ಎಂದೂ ವಿಶ್ವನಾಥ್ ಈ ಸಂದರ್ಭ ಕಿವಿಮಾತು ಹೇಳಿದರು.

ಲೆವಿಸ್ಟಾ ಕಾಫಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹೀಬ್ ಸಿಂಗ್ ಮಾತನಾಡಿ, ಹಿಂದಿನ ಕಾಲ ಬದಲಾಗಿದ್ದು, ಬೇರೆ ಯಾವುದೇ ಪೇಯಕ್ಕೂ ಇಲ್ಲದ ಭಾವನಾತ್ಮಕ ಬೆಸುಗೆಯನ್ನು ಭಾರತೀಯರು ಕಾಫಿಯೊಂದಿಗೆ ಹೊಂದಿರುವುದರಿಂದಾಗಿಯೇ ಕಾಫಿಗೆ ಮಾರುಕಟ್ಟೆ ಕುಸಿಯುವ ಸಾಧ್ಯತೆ ಎಂದಿಗೂ ಇಲ್ಲ. ಈಗಿನ ಯುವಪೀಳಿಗೆ ಸಾಕಷ್ಟು ಚಿಂತನೆಯೊಂದಿಗೆ ವೇಗದ ದಿನಗಳನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಲೋಕವೂ ವೇಗ ಪಡೆದುಕೊಂಡು ಬದಲಾಗುತ್ತಿರುವ ಪೀಳಿಗೆಗೆ ತಕ್ಕಂಥ ಕಾಫಿಯನ್ನು ವೈವಿಧ್ಯಮಯವಾಗಿ ಉತ್ಪಾದಿಸಲು ಮುಂದಾಗಲೇಬೇಕಾಗಿದೆ ಎಂದರು.

ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವ ಇಂದಿನ ಯುವಪೀಳಿಗೆಯು, ತಮ್ಮ ವಯಸ್ಸು ಸಣ್ಣದಾಗಿ ಕಾಣಬೇಕು ಮತ್ತು ಆರೋಗ್ಯವಂತರಿರಬೇಕು ಎಂದು ಬಯಸುವ ಮನಸ್ಸುಳ್ಳವರಾಗಿದ್ದು ಇಂಥ ಅಂಶಗಳು ಕಾಫಿಯಲ್ಲಿರುವುದರಿಂದ ಕಾಫಿಗೆ ಉಜ್ವಲ ಭವಿಷ್ಯವಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮೈಸೂರಿನ ಕೊಡಗು ಅಗ್ರಿಟೆಕ್ ಸಂಸ್ಥೆಯ ಮುಖ್ಯಸ್ಥೆ ಡಾ.ಚೈತ್ರಾ ನಾರಾಯಣನ್ ಮಾತನಾಡಿ, ಸಾಂಪ್ರದಾಯಿಕ ಕೖಷಿ ಪದ್ದತಿಗೆ ಹಲವಾರು ವಷ೯ಗಳ ಹಿಂದೆಯೇ ಕೖಷಿಕರು ತಿಲಾಂಜಲಿ ಇರಿಸಿದ ಪರಿಣಾಮವಾಗಿಯೇ ಮಣ್ಣಿನ ಫಲವತ್ತೆಯೂ ನಾಶವಾಗುತ್ತಾ ಹೋಯಿತು. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು 11 ವಷ೯ಗಳ ಹಿಂದೆ ಕಾಫಿ ಕೖಷಿಗೆ ಪರಿಚಯಿಸಿದ ಕಾಫಿ ಕ್ಯಾಪ್ಯೂಲ್ ಗಳು ಕಾಫಿ ಕೖಷಿ ಮಣ್ಣಿಗೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದ್ದು  ವಿದೇಶಗಳಲ್ಲಿಯೂ ಬೇಡಿಕೆ ಪಡೆದು ಕೊಂಡಿದೆ ಎಂದು ಮಾಹಿತಿ ನೀಡಿದರು.

ಸೋಮವಾರಪೇಟೆಯ ಸಾವಯವ ಪ್ರಗತಿಪರ ಕೖಷಿಕ ಕಲಿಸ್ತಾ ಡಿಸಿಲ್ವಾ ಮಾತನಾಡಿ,  ನಿಸರ್ಗದಲ್ಲಿ ದೊರಕುವ ನೈಟ್ರೋಜನ್ 1 ಎಕ್ರೆ ಕಾಫಿ ತೋಟದಲ್ಲಿ 60 ರಿಂದ 70 ಸಾವಿರ ಟನ್ ದೊರಕುತ್ತದೆ. ಮಣ್ಣಿನಡಿಯಲ್ಲಿ 9 ಇಂಚು ಅಡಿಯಲ್ಲಿ 15 ಸಾವಿರ ಕೆಜಿಗಳಷ್ಟು ನಿಸಗ೯ದತ್ತವಾದ ಪೋಟಾಷಿಯಂ ಇದೆ. ಇದನ್ನು ಕೖಷಿಕರು ಸ್ಮರಿಸಿಕೊಂಡು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಮಾರುಕಟ್ಟೆ ಯಲ್ಲಿ ದೊರಕುವ ವಿವಿಧ ರಾಸಾಯನಿಕಗಳಿಗೆ ಬಲಿಯಾಗಿ ಕಾಫಿ ಉತ್ಪಾದನೆ ಹೆಚ್ಚು ಮಾಡುವ ಆಸೆಯಲ್ಲಿ ತನ್ನ ಭೂಮಿಯ ಫಲವತ್ತತೆಯನ್ನು ಶಾಶ್ವತವಾಗಿ ಕಡಮೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಎರಡನೇ ದಿನದ ವಿವಿಧ ಗೋಷ್ಟಿಯಲ್ಲಿ  ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೖಂದ, ಹಾಸನ ಅರಣ್ಯ ಮಹಾವಿದ್ಯಾಲಯದ  ನಿವೖತ್ತ ಡೀನ್ ಡಾ.ದೇವಕುಮಾರ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ  ಪುಲಿಯಂಡ ಪವನ್ ಮೊಣ್ಣಪ್ಪ, ಪ್ರೇಮಾ‌ ಭಾಟಿಯಾ, ಎಂ.ಪಿ. ಅಶೋಕ್ ಕುಮಾರ್, ಕುರಿಯನ್ ಜೋಸೇಫ್, ಸೇರಿದಂತೆ ಕಾಫಿ ರಂಗದ ಖ್ಯಾತನಾಮರು ಹಾಜರಿದ್ದು ವಿವಿಧ ಮಾಹಿತಿ ನೀಡಿದರು.

*

ಆಗದು ಎಂದು ಕೈ ಕಟ್ಟಿ ಕುಳಿತರೆ ಕಾಫಿ ತೋಟ ನಿವ೯ಹಣೆ ನಡೆಯದು ಮುಂದೆ..!!
....
ರಾಜ್ಯದ ಹೆಸರಾಂತ ಕಾಫಿ ಕೖಷಿ ತಜ್ಞ ಡಾ.ಹೆಚ್.ಎಸ್. ಧಮ೯ರಾಜ್ ಸವಿವರವಾಗಿ ಕಾಫಿ ಕೖಷಿಕರಿಗೆ ನೀಡಿರುವ ಕೖಷಿ ಮಂತ್ರ, ತಂತ್ರಗಳ ಮುಖ್ಯಾಂಶಗಳು.
- ಕಾಪಿ ಜತೆ ಈಗ  ಅದಿಕ ವರಮಾನ ನೀಡುತ್ತಿರುವ ಏಲಕ್ಕಿಗೆ ಕೖಷಿಕರು ಮತ್ತೆ ಆದ್ಯತೆ ನೀಡಿದ್ದೇ ಆದಲ್ಲಿ ಬಂಪರ್ ಆದಾಯ ಖಂಡಿತ. ಏಲಕ್ಕಿಯ ವೈಭವದ ದಿನಗಳತ್ತ ಕೖಷಿಕರು ಮನಸ್ಸು ಮಾಡಲೇಬೇಕು.
-   ಉತ್ತಮ ತಳಿ, ಮಣ್ಮಿನ ಫಲವತ್ತತೆ,, ಉತ್ತಮ ನೀರು ಸಿಂಪಡಿಸುವಿಕೆ,  ಆರೋಗ್ಯವತ ಸಸಿಗಳು ವಿಶೇಷ ಪೋಷಕಾಂಶಗಳಿಂದಾಗಿ ಉತ್ತಮ ಕಾಫಿ ಕೖಷಿ ಖಂಡಿತಾ ಸಾಧ್ಯವಿದೆ.
-  ಕಾಫಿಗೆ ತಗುಲಿರುವ ಬೋರರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಕಡಿವಾಣ ಹಾಕಬೇಕಾದಲ್ಲಿ.. ನೆರಳಿನ ನಿವ೯ಹಣೆ  ಮತ್ತು ಸಸಿಯಲ್ಲಿನ ಚಿಗುರಿನ ನಿವ೯ಹಣೆ ಅತೀ  ಮುಖ್ಯವಾಗಲಿದೆ.
-   ಕಾಫಿಗೆ ಉತ್ತಮ ಬೆಲೆ ಲಭಿಸಿರುವುದು ವಾಸ್ತವ. ಆದರೆ ಇದೇ ಬೆಲೆ ಪ್ರತೀ ವಷ೯ ದೊದಕುವ ವಿಶ್ವಾಸ ಯಾರಲ್ಲಿಯೂ ಇಲ್ಲ. ಹೀಗಿರುವಾಗ ಬೆಲೆ ಇರುವ ಸಂದಭ೯ದಲ್ಲಿಯೇ ಕಾಫಿಯ ತೋಟಗಳಲ್ಲಿ ಪಯಾ೯ಯ ಬೆಳೆಗೆ ಕೖಷಿಕರು ಮಂದಾಗಬೇಕು. ಮುಖ್ಯವಾಗಿ ಬೇಡಿಕೆ ಇರುವ ಸಂಬಾರ ಬೆಳೆಗಳತ್ತ ಮನಸ್ಸು ಮಾಡಬೇಕು.
-  ಪ್ರತೀ ಕೖಷಿಕರು ತನ್ನ ತೋಟದ ಮಣ್ಣಿನ ಬಗ್ಗೆ ತಿಳಿದುಕೊಳ್ಳಿ. ತನ್ನ ತೋಟದ ಮಣ್ಣಿಗೆ ಸರಿಹೊಂದುವ ಸಸಿಯನ್ನೇ ಬೆಳೆಯಿರಿ. ಮಣ್ಣಿನ ಆರೋಗ್ಯವೇ ಸರಿಯಿಲ್ಲದ ಮೇಲೆ ಕಾಫಿ ಸಸಿಯ ಆರೋಗ್ಯ ಯಾವ ರೀತಿಯಲ್ಲಿ ಉತ್ತಮವಾಗಿರಲು ಸಾಧ್ಯ?
-  ಭೂಮಿಗೆ ಹೊದಿಕೆಯಂತೆ ಕಾಫಿ ತೋಟಗಳಲ್ಲಿ ತರಗಲೆಗಳು ಇರಲೇಬೇಕು. ಈ ತರಗಲೆಗಳೇ ಸೂಕ್ಷ್ಯ ಜೀವಿಗಳ ಉಗಮಕ್ಕೆ ಕಾರಣವಾಗಲಿದೆ. ಈ ಅಂಶವೇ ಕಾಪಿ ಸಸಿಗಳ ಪೋಷಕಾಂಶಗಳಾಗಿದೆ.
- ಕಳೆ ನಾಶಕವನ್ನು ಭೂಮಿಗೆ ಸಿಂಪಡಿಸುವುದಿಲ್ಲ ಎಂದು ಪ್ರತೀಯೋರ್ವರು ಪ್ರತಿಜ್ಞೆ ಮಾಡಲೇ ಬೇಕು. ಕಳೆ ನಾಶ ಮಾಡುವ ಬದಲಿಗೆ ಕಳೆ ನಿಯಂತ್ರಣ ಮಾಡುವತ್ತ ಕೖಷಿಕರು ಗಮನ ನೀಡಲೇ ಬೇಕು.. ಕಳೆ ಹೆಚ್ಚಾಗಿ ಬರುತ್ತಿದ್ದರೆ ನಿಮ್ಮ ತೋಟದ ಮಣ್ಣಿನ ಆರೋಗ್ಯ ಉತ್ತಮವಾಗಿದೆ ಎಂದೇ ಅರ್ಥ.

-  ಕಾಫಿ ಮಂಡಳಿ ನೀಡುವ ಅಂಗಾಂಶ ಗಿಡಗಳನ್ನು ನೆಡುವುದು ಸೂಕ್ತ ಆಯ್ಕೆ. ನರ್ಸರಿ ಯಿಂದ ಸಸಿ ಖರೀದಿಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ. ಮುಖ್ಯವಾಗಿ ಪ್ರತೀ ಕೖಷಿಕನೂ ಸ್ವಂತ ನಸ೯ರಿ ರೂಪಿಸಿಕೊಳ್ಳುವುದು ಉತ್ತಮ ವಿಧಾನ.

- ಸಣ್ಣ ಗಿಡಗಳ ಆಯ್ಕೆ ಸಮಥ೯ನೀಯವಲ್ಲ. 12 ಇಂಚು ಉದ್ದ, 6 ಇಂಚು ಅಗಲದ ಬುಟ್ಟಿಯಲ್ಲಿ ರುವ ಸಸಿಗಳನ್ನು ನೆಡುವುದು ಅತ್ಯುತ್ತಮ ಆಯ್ಕೆ.
-  ಕಾಫಿಗೆ ತಗುಲುವ ರೋಗಗಳು, ಕೀಟಭಾದೆಗಳ ಬಗ್ಗೆ ಸಕಾಲಿಕವಾಗಿ ಮಾಹಿತಿ ಪಡೆದು ಕೊಳ್ಳುತ್ತಿರಬೇಕು. ಮುಂಜಾಗ್ರತೆ ವಹಿಸಿದ್ದೇ ಆದಲ್ಲಿ ಕಾಫಿ ಸಸಿಗಳನ್ನು ರೋಗ, ಕೀಟ ಮುಕ್ತಗೊಳಿಸಿ ನಿಶ್ಚಿಂತೆ ಯಿಂದಿರಬಹುದು.

-  ಕಾಫಿ ಕೖಷಿಕನಿಗೆ ತಾಳ್ಮೆ ಅತೀ ಮುಖ್ಯ. ಎಲ್ಲವೂ ಸಾಧ್ಯ ಎಂಬುದು ಮನಸ್ಸಿನಲ್ಲಿರಬೇಕು. ಆಗುವುದಿಲ್ಲ ಎಂದು ಕೈಕಟ್ಟಿಕುಳಿತರೆ ಯಾವುದೇ ಕೖಷಿಕನಿಗೂ ತೋಟ ನಿರ್ವಹಣೆ ಮಾಡಲಾಗದು. ಆಗದುಎಂದು ಕೈಕಟ್ಟಿ ಕುಳಿತರೆ ಕಾಫಿ ತೋಟ ಮಾಡಲಾಗದು.

- ನಿಮ್ಮ ತೋಟದ ನಿಮ್ಮದೇ ಮಣ್ಣನ್ನು ಪ್ರೀತಿಸಿ...ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ  ಉತ್ತಮ ಇಳುವರಿ ಲಭಿಸಿ ಉತ್ತಮ ಆದಾಯ ಖಂಡಿತಾ. ಆ ಮೂಲಕ ಕೖಷಿಕನ ಆರೋಗ್ಯ ವೂ ಉತ್ತಮ ವಾಗಿರುತ್ತದೆ. ಅರ್ಥಾತ್ ಮಣ್ಣಿನ ಆರೋಗ್ಯದಲ್ಲಿಯೇ ಕೖಷಿಕನ ಆರೋಗ್ಯವೂ ಅವಲಂಬಿತವಾಗಿದೆ ಎಂಬುದನ್ನು ಮರೆಯದಿರಿ !!....  

*
ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ 180 ಪ್ರದರ್ಶನ ಮಳಿಗೆಗಳು ಭಾನುವಾರ ಜನಮನ ಸೆಳೆದವು. ಎರಡನೇ ದಿನದಂದು ಸಾವಿರಾರು ಕೖಷಿ ಕರು ಆಗಮಿಸಿದ್ದರು. ಮಳಿಗೆಗಳು ಜನರಿಂದ ಕಿಕ್ಕಿರಿದಿದ್ದವು. ಬಾಳೆಹೊನ್ನೂರಿನ ಕಾಫಿ ಸಂಶೋ ಧನಾ ಕೇಂದ್ರದಿಂದ ಹೊಸತಳಿಗಳು, ಕಂದ್ರದ ಸಂಶೋಧನೆಗಳು, ಕಾಪಿ ಮತ್ತು ಜೇನು ಕೖಷಿ ಸಂಬಂಧಿತ ಮಳಿಗೆಗಳಲ್ಲಿ  ಯುವ ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುತ್ತಿದ್ದರು.

*

ಅಂತೆಯೇ ಎರಡೂ ಸಬಾಂಗಣದಲ್ಲಿ ನಡೆದ 8 ವಿಚಾರಗೋಷ್ಟಿಗಳೂ ಕಾಫಿ ಕೖಷಿ ಆಸಕ್ತರಿಂದ ಕಿಕ್ಕಿರಿದಿತ್ತು. ಸಮಯ ಮೀರುತ್ತಿದ್ದರೂ ಕೖಷಿಕರು ಆಸಕ್ತಿಯಿಂದ ಗೋಷ್ಟಿಗಳಲ್ಲಿನ ಮಾಹಿತಿ ಆಲಿಸಿದರು. ಎರಡನೇ ಸಭಾಂಗಣದಲ್ಲಿ ಆಸನಗಳು ಭರ್ತಿಯಾದ ಹಿನ್ನಲೆಯಲ್ಲಿ ಹಲವರು ನಿಂತು ಕೊಂಡೇ ವಿಚಾರಗೋಷ್ಟಿಯನ್ನು ಆಲಿಸಿದ್ದು ಕಂಡುಬಂತು