ಮುಜಫರಪುರದಲ್ಲಿ ಜನಸುರಾಜ್‌ನ ಡಾ.ಎ.ಕೆ.ದಾಸ್, ಕಾಂಗ್ರೆಸ್‌ನ ವಿಜಯೇಂದ್ರ ಚೌಧುರಿ, ಬಿಜೆಪಿಯ ರಂಜನ್ ಕುಮಾರ್ ಸ್ಪರ್ಧೆ
ಕೇಂದ್ರ ಮಂತ್ರಿ, ಜನಪ್ರಿಯ ನಾಯಕ, ಕರ್ನಾಟಕ ಮೂಲದ ದಿವಂಗತ ಜಾರ್ಜ್ ಫೆರ್ನಾಂಡೀಸ್ ಅವರ ಕರ್ಮಭೂಮಿ ಬಿಹಾರದ ಮುಜಫರಪುರ. ಈ ನಗರದ ಚಕ್ವಾಸು ಲೇನ್ ನಲ್ಲಿರುವ ಚ್ಯಾಪ್ಮನ್ ಸ್ಕೂಲ್ ಎದುರು ಶ್ರೀಹಾಸ್ಪಿಟಲ್ ಆಂಡ್ ಮೆಟರ್ನಿಟಿ ಸೆಂಟರ್ ಎಂಬ ದೊಡ್ಡದಾದ ಖಾಸಗಿ ಅಸ್ಪತ್ರೆಯಿದ್ದು, ಡಾ.ಎ.ಕೆ.ದಾಸ್ ಅವರು ಆಸ್ಪತ್ರೆಯ ಮಾಲೀಕ ಮತ್ತು ಆಡಳಿತ ನಿರ್ದೇಶಕರಾಗಿ ದ್ದಾರೆ.
ಡಾ.ದಾಸ್ ಮುಜಫರಪುರದ ಪ್ರಸಿದ್ಧ ವೈದ್ಯರಾಗಿದ್ದು, ಮನೆಮಾತಾಗಿದ್ದಾರೆ. ಜಿಲ್ಲೆಯ ಗಣ್ಯ ವ್ಯಕ್ತಿ ಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು ಕೂಡ ಚಿಕಿತ್ಸೆಗಾಗಿ ಡಾ.ಎ.ಕೆ.ದಾಸ್ ಬಳಿಯೇ ಬರುತ್ತಾರೆ. ಇಂಥವರಲ್ಲಿ ಮುಜಫರಪುರ ವಿಧಾನಸಭೆ ಶಾಸಕ, ಇಂಡಿ ಒಕ್ಕೂಟದ ಅಭ್ಯರ್ಥಿ, ಕಾಂಗ್ರೆಸ್ಸಿನ ವಿಜಯೇಂದ್ರ ಚೌಧುರಿ ಕೂಡ ಒಬ್ಬರು. ಅವರು ಮುಜಫರಪುರ ವಿಧಾನಸಭೆಯಲ್ಲಿ 1995, 2000, 2005 ಮತ್ತು 2020ರಲ್ಲಿ ಸ್ಪರ್ಧಿಸಿ ಶಾಸಕರಾದವರು.
ಜನತಾದಳ, ಆರ್.ಜೆ.ಡಿ., ಪಕ್ಷೇತರರಾಗಿ ಹಾಗೂ ನಂತರ ಕಾಂಗ್ರೆಸ್ ಸೇರಿ ಈಗ ಪಕ್ಷದ ಪ್ರಮುಖ ಮುಖಂಡರಾಗಿದ್ದಾರೆ. ಡಾ.ಎ.ಕೆ. ದಾಸ್ ಮತ್ತು ವಿಜಯೇಂದ್ರ ಚೌಧುರಿ ಮಧ್ಯೆ ವೈದ್ಯ-ರೋಗಿ ಸಂಬಂಧವಿದೆ. ಆದರೆ ಬಿಹಾರ ಚುನಾವಣಾ ಅಖಾಡದಲ್ಲಿ ಪ್ರಶಾಂತ್ ಕಿಶೋರ್ (ಪಿ.ಕೆ) ಪ್ರವೇಶ ವಾದ ಪರಿಣಾಮ ಮುಜಫರಪುರದಲ್ಲಿ ಡಾಕ್ಟರ್ ಮತ್ತು ಪೇಶೆಂಟ್ ಮಧ್ಯೆಯೇ ಚುನಾವಣಾ ಕದನ ಏರ್ಪಟ್ಟಿದೆ.
ಇದನ್ನೂ ಓದಿ: Bihar Election ground Report from Raghav Sharma Nidle: ಮಹುವಾದಲ್ಲಿ ತೇಜ್ ಪ್ರತಾಪ್ ಬಗ್ಗೆ ಒಲವು
ಸೂಕ್ತ ಅಭ್ಯರ್ಥಿಗಳಿಗಾಗಿ ಶೋಧ ನಡೆಸುತ್ತಿದ್ದ ಜನ ಸುರಾಜ್ ತಂಡ ಡಾ.ದಾಸ್ ಅವರನ್ನು ಸಂಪರ್ಕಿಸಿ, ಪಕ್ಷದಿಂದ ಟಿಕೆಟ್ ನೀಡಿದೆ. ರಾಜಕಾರಣಕ್ಕೆ ಬರುವ ಉದ್ದೇಶವಿರದಿದ್ದರೂ, ಪ್ರಶಾಂತ್ ಕಿಶೋರ್ ತಂಡ ಸಂಪರ್ಕಿಸಿ, ಆಹ್ವಾನ ನೀಡಿದ್ದರಿಂದ ಹೊಸ ಸಾಹಸಕ್ಕೆ ಡಾಕ್ಟರ್ ಕೈ ಹಾಕಿದ್ದಾರೆ.
ಚಿಕಿತ್ಸೆ ಕೊಡುವ ವೈದ್ಯರು ಮತ್ತು ಚಿಕಿತ್ಸೆ ಪಡೆಯುವ ರೋಗಿ ಇಬ್ಬರೂ ಕಣದಲ್ಲಿರುವುದರಿಂದ ಇಬ್ಬರೂ ವೃತ್ತಿ ಘನತೆ ಉಳಿಸಿಕೊಂಡೇ ಪ್ರಚಾರಭಿಯಾನಗಳನ್ನು ನಡೆಸುತ್ತಿದ್ದು, ಜನಸಂಬಂಧಿ ವಿಚಾರಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ. ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡು ವುದು ನಮ್ಮ ಉದ್ದೇಶವೇ ಅಲ್ಲ, ಮತದಾರರ ಜಾತಿ ಮುಖ್ಯವಲ್ಲ, ನಾನು ಚಿಕಿತ್ಸೆ ನೀಡುವಾಗ ಮುಸ್ಲಿಂ, ಹಿಂದು, ಕ್ರಿಶ್ಚಿಯನ್ ಅಥವಾ ಬೇರೆ ಬೇರೆ ಜಾತಿಗಳನ್ನು ನೋಡುವುದಿಲ್ಲ. ಹೀಗಾಗಿ ಮತ ಹಾಕುವಾಗ ನನ್ನ ಜಾತಿ ಯಾವುದು ಎಂಬುದು ಏಕೆ ಮುಖ್ಯವಾಗುತ್ತದೆ ಎಂದು ಡಾ. ದಾಸ್ ‘ವಿಶ್ವವಾಣಿ’ ಜತೆ ಅನಿಸಿಕೆ ಹಂಚಿಕೊಂಡರು. ಮುಜಫರಪುರದ ಹಳೆ ತಲೆಮಾರು ಜಾರ್ಜ್ ಫೆರ್ನಾಂ ಡೀಸ್‌ರನ್ನು ಈಗಲೂ ಸ್ಮರಿಸುತ್ತದೆ ಮತ್ತು ಅಂತಹ ಮಹಾನ್ ನಾಯಕ ಮತ್ತೆ ಬರಲೇ ಇಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಜಾರ್ಜ್ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗ ನಾವು ಸಣ್ಣವರಾಗಿದ್ದೆವು, ನನ್ನ ಪ್ರಚಾರ ದಲ್ಲೂ ಅವರ ಹೆಸರನ್ನು ಬಳಸುತ್ತೇನೆ. ಅವರು ಬದಲಾವಣೆ ಹಾಗೂ ಅಭಿವೃದ್ಧಿಗಾಗಿ ಕೆಲಸ ಮಾಡಿ ಜನಮನ ಗೆದ್ದರು. ನಾನು ಕೂಡ ಅವರಂತೆ ಬದಲಾವಣೆಯನ್ನೇ ಬಯಸುತ್ತಿದ್ದೇನೆ. ಅದನ್ನೇ ಮನದಟ್ಟು ಮಾಡುವ ಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ಡಾ.ದಾಸ್.
 
ಜನ ಸುರಾಜ್ ಪಕ್ಷ ಅಥವಾ ಅಭ್ಯರ್ಥಿಗಳು ಜಾತೀಯ ಅಂಕಗಣಿತದಾಚೆ ಯೋಚಿಸಬೇಕು ಎಂದು ವಾದಿಸಿದರೂ, ಜಾತಿ ಗಣಿತದ ಲೆಕ್ಕಾಚಾರದಲ್ಲೇ ಚುನಾವಣೆ ನಡೆಯುತ್ತದೆ ಎನ್ನುವುದು ವಾಸ್ತವ. ವೈಶ್ಯ ಸಮುದಾಯ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಜಯೇಂದ್ರ ಚೌಧುರಿ ರಜಪೂತ ಸಮುದಾಯದವರಾಗಿದ್ದು, ಅವರ ವೈಯಕ್ತಿಕ ವರ್ಚಸ್ಸು ಕೂಡ ಬಿಗಿಯಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಕ್ಕ ಎಳನೀರು ವ್ಯಾಪಾರಿ ದೇವೇಂದ್ರ ಪ್ರಸಾದ್ ಯಾದವ್ ಮತ್ತು ಆತನ ಸ್ನೇಹಿತ ಹರಿ ಸಹಾನಿ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆ.
ಲೋಕಸಭೆ ಚುನಾವಣೆಗೆ ನಾವು ಮೋದಿಯವರ ಜತೆಗಿದ್ದೇವೆ, ಆದರೆ ಈ ಚುನಾವಣೆಯಲ್ಲಿ ಮುಜ-ರನಗರಕ್ಕೆ ವಿಜಯೇಂದ್ರ ಸಾಬ್ ಬೇಕು ಎನ್ನುವ ಅವರು, ಬಿಹಾರದಲ್ಲಿ ನಿತೀಶ್ ಸರಕಾರ ಬಂದರೆ ಬೇಸರವಿಲ್ಲ, ನಿತೀಶ್ ಜೀ ಕಾಮ್ ಕಿಯಾ ಹೇ ಎಂದೂ ಹೇಳುತ್ತಾರೆ.
ಕಳೆದ ಬಾರಿ ಬಿಜೆಪಿಯಿಂದ ಭೂಮಿಹಾರ್ ಸಮುದಾಯದ ಸರಕಾರದಲ್ಲಿ ಮಾಜಿ ಸಚಿವರೂ ಆಗಿದ್ದ ಸುರೇಶ್ ಶರ್ಮ ಸ್ಪರ್ಧಿಸಿ, ವಿಜಯೇಂದ್ರ ಚೌಧುರಿ ವಿರುದ್ಧ ೬ ಸಾವಿರ ಅಂದಾಜು ಮತ ಗಳಿಂದ ಸೋತಿದ್ದರು, ಆದರೆ ಈ ಬಾರಿ ಬಿಜೆಪಿಯಿಂದ ರಜಪೂತ ಸಮುದಾಯದ ಮುಜಫರನಗರ ಮಾಜಿ ಜಿಲ್ಲಾಧ್ಯಕ್ಷ ರಂಜನ್ ಕುಮಾರ್‌ಗೆ ಟಿಕೆಟ್ ನೀಡಲಾಗಿದೆ. ಡಾ.ಎ.ಕೆ.ದಾಸ್ ಕಾಯಸ್ಥ (ಲಾಲಾ) ಸಮುದಾಯಕ್ಕೆ ಸೇರಿರುವುದರಿಂದ ಮೂವರೂ ಮೇಲ್ಜಾತಿಯವರು ಎಂಬುದು ಗಮನಾರ್ಹ.
ಜಾರ್ಜ್ ಇದ್ದ ಮನೆಯಲ್ಲಿ ಚರ್ಚೆ
ಜಾರ್ಜ್ ಫೆರ್ನಾಂಡೀಸ್ ಸಂಸದರಾಗಿದ್ದಾಗ ಮುಜಫರಪುರದ ಅವರ ಅತ್ಯಾಪ್ತ ಸ್ನೇಹಿತರಾಗಿದ್ದ ಕಮಲೇಶ್ವರ್ ಸಿನ್ಹಾ ಮನೆಯಲ್ಲೇ ವಾಸ್ತವ್ಯವಿರುತ್ತಿದ್ದರು. ಕ್ಷೇತ್ರದಲ್ಲಿ ತಮಗಾಗಿ ಪ್ರತ್ಯೇಕ ಮನೆ ಯನ್ನೇ ಅವರು ಮಾಡಿಕೊಂಡಿರಲಿಲ್ಲ. ಕ್ಷೇತ್ರದ ಚುನಾವಣೆ ಹಾಗೂ ಜಾತಿ ರಾಜಕಾರಣದ ಬಗ್ಗೆ ‘ವಿಶ್ವವಾಣಿ’ ಜತೆ ಮಾತನಾಡಿದ ಜಾರ್ಜ್ ವಿಶ್ವಾಸಿಗಳಲ್ಲಿ ಒಬ್ಬರಾಗಿದ್ದ ಧನಂಜಯ್ ಶ್ರೀವಾಸ್ತವ್, ಜನ ಸುರಾಜ್ ಪಕ್ಷದ ಡಾ.ದಾಸ್ ಕಾಯಸ್ಥ ಸಮುದಾಯವರಾಗಿದ್ದರೂ, ಅವರು ಕರ್ಣ ಕಾಯಸ್ಥ ಎಂಬ ಉಪಜಾತಿಗೆ ಸೇರಿದ್ದಾರೆ. ಆ ಉಪಜಾತಿಯ ಸಂಖ್ಯೆ ಇಲ್ಲಿ ಬಹಳ ಕಡಿಮೆ. ಅವರು ವೋಟ್ ಕಟ್ ಮಾಡಬಹುದು, ಆದರೆ ದೊಡ್ಡ ಪರಿಣಾಮ ಬೀರುತ್ತಾರೆ ಎಂದು ಅನಿಸುವುದಿಲ್ಲ. ಎನ್‌ಡಿಎಫ್ ಇಂಡಿ ಮಧ್ಯೆ ಇಲ್ಲಿ ಜಬರ್ದಸ್ತ್ ಫೈಟ್ ಎಂದು ವಿವರಿಸಿದರು.
ಸಿಟಿ ಪಾರ್ಕ್‌ನಲ್ಲಿ ಪ್ರತಿಮೆ
ಮುಜ-ರನಗರದ ಸಿಟಿ ಉದ್ಯಾನದಲ್ಲಿ ಜಾರ್ಜ್ ಫೆರ್ನಾಂಡೀಸ್ ಅವರ ನೆನಪಿಗಾಗಿಯೇ ಅವರ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. 2019ರಲ್ಲಿ ಅಂದಿನ ಉಪ ಮುಖ್ಯಮಂತ್ರಿ, ಬಿಜೆಪಿ ಸುಶೀಲ್ ಕುಮಾರ್ ಮೋದಿ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದರು. ಈ ಪ್ರತಿಮೆಯ ಎಡಭಾಗದಲ್ಲಿ ಕಾಲೇಜು ಬ್ಯಾಗ್ ಹಾಕಿ ಕೊಂಡಿದ್ದ ಸ್ಥಳೀಯ ಯುವಕ-ಯುವತಿ ಜೋಡಿಯೊಂದು ಆಪ್ತ ಮಾತು ಕತೆಯಲ್ಲಿ ತಲ್ಲೀನವಾಗಿತ್ತು. ಪ್ರತಿಮೆ ಎದುರು ನನ್ನೊಂದೊಂದು ಫೋಟೋ ತೆಗೆದ ಆ ಯುವಕ ನಲ್ಲಿ ‘ಇವರು ಯಾರು ಗೊತ್ತಾ?’ ಎಂದು ಕೇಳಿದೆ. ‘ನಹೀ ಸರ್, ಕೋಯಿ ಫ್ರೀಡಂ ಫೈಟರ್ ಹೇ ಕ್ಯಾ?’ ಎಂದು ನನ್ನಲ್ಲೇ ಕೇಳಿದ. ‘ಇಲ್ಲಿ ಬರೆದಿದ್ದಾರೆ, ಇಬ್ಬರೂ ಓದಿ..’ ಎನ್ನುತ್ತಾ ನಾನು ಮುಂದಕ್ಕೆ ಹೆಜ್ಜೆ ಹಾಕಿದೆ.
ದುಡ್ಡು ಕೇಳುತ್ತಿದ್ದೀರಾ?
‘ಡಾಕ್ಟರ್, ನಿಮ್ಮನ್ನು ಭೇಟಿಯಾಗಬೇಕು. ನಾನು ಚುನಾವಣೆ ವರದಿಗಾಗಿ ಬೆಂಗಳೂರಿನಿಂದ ಬಂದಿದ್ದೇನೆ’ ಎಂದು ಜನಸುರಾಜ್ ಪಕ್ಷದ ಡಾ.ಎ.ಕೆ.ದಾಸ್ ಅವರಿಗೆ ನಾನು ಫೋನ್ ಮಾಡಿದೆ. ‘ಹೌದಾ.. ? ನಾನು ಪ್ರಚಾರದಲ್ಲಿ ಬ್ಯುಸಿಯಾಗಿದ್ದೇನೆ. ಆದರೆ ನೀವು ದುಡ್ಡಿಗಾಗಿ ಇದನ್ನು ಮಾಡು ತ್ತಿದ್ದೀರಾ? ನನ್ನಿಂದ ಹಣ ನಿರೀಕ್ಷೆ ಮಾಡುತ್ತಿದ್ದೀರಾ?’ ಎಂದು ಡಾಕ್ಟರ್ ಕೇಳಿದ್ದಕ್ಕೆ ಅಚ್ಚರಿ ಗೊಂಡು, ‘ನಾನ್ಯಾಕೆ ದುಡ್ಡಿಗಾಗಿ ಮಾಡಬೇಕು? ಜನರಿಗೆ ಮಾಹಿತಿ ನೀಡಲು, ನಮ್ಮ ಸಂಸ್ಥೆಯಿಂದ ಖರ್ಚು ಮಾಡಿ, ಚುನಾವಣೆ ವರದಿಗಾಗಿ ಬಂದಿದ್ದೇನೆ’ ಎಂದು ಉತ್ತರಿಸಿದೆ. ‘ಪ್ಲೀಸ್, ತಪ್ಪು ತಿಳಿಯ ಬೇಡಿ. ಇಲ್ಲಿ ಯೂಟ್ಯೂಬರ್ಸ್, ಟಿವಿ ಮೀಡಿಯಾ, ಕೆಲ ಪತ್ರಿಕೆಯವರು ವರದಿ ಮಾಡುತ್ತೇವೆ ಎನ್ನುತ್ತಾ ನಿತ್ಯವೂ ಹಣ ಕೇಳುತ್ತಿದ್ದಾರೆ. ನಾನು ರೋಸಿ ಹೋಗಿದ್ದೇನೆ. ಹಾಗಾಗಿ ಕೇಳಿದೆಯಷ್ಟೇ’ ಎಂದು ರಾತ್ರಿ 8.30ಕ್ಕೆ ಭೇಟಿಗೆ ಸಮಯ ನೀಡಿದರು. ರಾತ್ರಿ ೧೦.೩೦ರ ವೇಳೆಗೆ ಸಿಕ್ಕ ಡಾಕ್ಟರ್, ರಾತ್ರಿ 11.40ಕ್ಕೆ ಮಾತುಕತೆ ಮುಗಿಸಿ, ಇನ್ನೊಂದು ಮೀಟಿಂಗ್ ಇದೆ ಎಂದು ನಗರದ ಲ್ಯಾಂಡ್ ಮಾರ್ಕ್ ಹೊಟೇಲ್‌ನಿಂದ ಹೊರ ನಡೆದರು.
*
ಜಂಗಲ್‌ರಾಜ್ ಎಲ್ಲಿ ಮುಗಿದಿದೆ? ಇಲ್ಲಿ ಹಾಡಹಗಲು ಈಗಲೂ ಹತ್ಯೆಗಳಾಗುತ್ತಿವೆ. ಬೆಲೆಏರಿಕೆ ಯಿಂದ ಬಡವ ಹೈರಾಣಾಗಿದ್ದಾನೆ. ಲಾಲೂ ಅಧಿಕಾರದಲ್ಲಿದ್ದಾಗ ಇಷ್ಟೊಂದು ಹಣದುಬ್ಬರ ಇರಲಿಲ್ಲ, ಬಿಹಾರಕ್ಕೆ ತೇಜಸ್ವಿಯೇ ಬೇಕು. ನಾವು ಮೊದಲು, ಈಗ, ನಾಳೆ ಎಂದೆಂದಿಗೂ ಲಾಲ್ಟೇನ್ ಗೇ (ಆರ್.ಜೆ.ಡಿ.) ವೋಟು ಹಾಕುವವವರು.
-ವಿನೋದ್ ಬಾಬಾ ತಿವಾರಿ,
ಬಿರೇಂದರ್ ರಾಮ್