ಬಸವರಾಜ ನಾಗಡದಿನ್ನಿ ರಾಯಚೂರು
ವಾಣಿಜ್ಯ ಸಿಲಿಂಡರ್‌ಗೆ ಕೊರತೆ
ಸೌದೆ ಒಲೆ ಬಳಕೆಗೆ ಮುಂದಾದ ಜಿಲ್ಲೆಯ ಹೋಟೆಲ್ ಮಾಲೀಕರು
ಮಧ್ಯಪ್ರಾಚ್ಯ ದೇಶಗಳ ನಡೆಯುತ್ತಿರುವ ಯುದ್ದದ ಪರಿಣಾಮ ನಿಧಾನವಾಗಿ ರಾಯಚೂರಿ ಗೂ ತಟ್ಟುತ್ತಿದೆ. ಯುದ್ದದಿಂದಾ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದ ವಿಶೇಷವಾಗಿ ಹೊಟೇಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಜಿಲ್ಲೆಯಾದ್ಯಂತ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಪೂರೈಕೆ ಸಮಸ್ಯೆಯಿಂದ ಹೋಟೆಲ್ಗಳಲ್ಲಿ ಆರ್ಡರ್‌ಮಾಡಿದ ಕೂಡಲೇ ಸಿದ್ದಪಡಿಸುವಂತ ದೋಸೆ, ಪೂರಿ, ಗೋಬಿ ಮಂಚೂರಿಯಂತ ತಿಂಡಿಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಿಲಿಂಡರ್‌ಸರಿಯಾಗಿ ಪೂರೈಕೆಯಾಗದ ಹಿನ್ನಲೆ ಪರ್ಯಾಯವಾಗಿ ಸೌದೆ ಒಲೆ ಬಳಕೆಗೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಅಮೆರಿಕ, ಇರಾನ್, ಇಸ್ರೇಲ್ ನಡುವಿನ ಸಮರದಿಂದಾಗಿ ವಾಣಿಜ್ಯ ಅನಿಲದ ಸಿಲಿಂಡರ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಹೋಟೆಲ್ಗಳಿಗೆ ಸರಬರಾಜು ಮಾಡುತ್ತಿದ್ದ ಸಿಲಿಂಡರ್ ಕೇಳಿದಷ್ಟು ಸಿಗದೆ, ಒಂದು ಎರಡು ಮಾತ್ರ ಸಿಗುತ್ತಿವೆ.
ಇದರಿಂದಾಗಿ ನಗರದ ಪ್ರಮುಖ ಹೋಟೆಲ್ಗಳಲ್ಲಿ ಈಗಾಗಲೇ ದೋಸೆ,ಉದ್ದಿನ ಒಡೆ, ಬಜ್ಜಿ ಸೇರಿದಂತೆ ಮೊದಲಾದ ಕರಿದ ತಿನ್ನಿಸುಗಳನ್ನು ಮಾಡುವುದನ್ನ ನಿಲ್ಲಿಸಲಾಗಿದೆ. ಮತ್ತೆ ಕೆಲವು ಹೋಟೆಲ್ಗಳಲ್ಲಿ ಇಡೀ ದಿನ ಪೂರೈಕೆ ಮಾಡುತ್ತಿದ್ದ ದೋಸೆ ಅಂತಹ ತಿನ್ನಿಸು ಗಳನ್ನು ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 4 ರಿಂದ 8 ಅವಧಿಗೆ ಸೀಮಿತಗೊಳಿಸಲಾಗಿದೆ.
ಇದನ್ನೂ ಓದಿ: Gas Shortage: ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು
ಉಳಿದಂತೆ ರೈಸ್, ಉಪ್ಪಿಟ್ಟಿನಂತಹ ಒಂದು ಬಾರಿ ಮಾತ್ರ ಬೇಯಿಸುವ ಪದಾರ್ಥಗಳನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಆ ಪದಾರ್ಥಗಳು ಖಾಲಿಯಾದ ತಕ್ಷಣ ಮುಕ್ತಾಯ ಗೊಳಿಸುವು ದಕ್ಕೆ ನಿರ್ಧರಿಸಲಾಗಿದೆ.
ಸೌದೆ ಒಲೆಗೆ ಮುಂದು: ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಹೋಟೆಲ್ ಮಾಲೀಕರು ಸೌದೆ ಒಲೆ ಮೂಲಕ ಕೆಲವು ಆಹಾರಗಳನ್ನು ತಯಾರು ಮಾಡುತ್ತಿದ್ದಾರೆ. ಇಲ್ಲಿನ ಜನತಾ ಹೋಟೆಲ್, ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್ ಸೇರಿದಂತೆ ಹಲವು ಕಡೆಗಳಲ್ಲಿ ಅಡುಗೆ ತಯಾರಿಸಲು ಗ್ಯಾಸ್ ಬದಲಾಗಿ ಭತ್ತದ ತೌಡು ಹಾಗೂ ಹೊಟ್ಟು ಬಳಸಲಾಗುತ್ತಿದೆ. ಆದರೆ ಇದು ತಾತ್ಕಾಲಿಕ ಪರಿಹಾರವೇ ಹೊರತು ಸ್ಥಿರವಲ್ಲ ಎಂಬಂತೆಯಾಗಿದೆ.
ಗ್ಯಾಸ್ ಒಲೆಗಳ ವೇಗಕ್ಕೆ ಹೊಂದಿಕೊಂಡಿರುವ ಅಡುಗೆ ಸಿಬ್ಬಂದಿಗೆ ಗ್ಯಾಸ್ನಿಂದ ಕೆಲಸ ಮಾಡುವುದು ಸವಾಲಾಗಿದೆ. ಟೀ, ಕಾಫಿ, ಪೂರಿ ಹಾಗೂ ದೋಸೆಯಂತಹ ತಿಂಡಿಗಳನ್ನು ಸೌದೆ ಒಲೆಯ ಮೇಲೆ ಸಿದ್ಧಪಡಿಸುವುದು ಕಷ್ಟ ಸಾಧ್ಯವಾಗಿದೆ. ಈಗಾಗಲೇ ಹಲವು ಹೋಟೆಲ್ಗಳಲ್ಲಿ ಪೂರಿ ತಯಾರಿಸುವುದನ್ನು ನಿಲ್ಲಿಸಲಾಗಿದೆ.
ಅನಿಲ ಪೂರೈಕೆ ಹೀಗೆಯೇ ಮುಂದುವರೆದರೆ ಕಾಫಿ-ಟೀ ಕೂಡ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಿಲಿಂಡರ್ ಸಮಸ್ಯೆಯಿಂದ ಶೇ.70ರಷ್ಟು ಅಡುಗೆ ತಯಾರಿಕೆಯನ್ನೇ ಹೋಟೆಲ್ ಮಾಲೀಕರು ನಿಲ್ಲಿಸಿದ್ದಾರೆ.
ಅಡುಗೆ ಎಣ್ಣೆಯ ಬೆಲೆಯೂ ಹೆಚ್ಚಳವಾಗಿದೆ. ಇಡ್ಲಿ ಹಾಗೂ ರೈಸ್ ಪದಾರ್ಥಗಳನ್ನ ಸ್ಟೀಮ್ ಹಾಗೂ ಸೌದೆ ಒಲೆಯ ಮುಖಾಂತರ ತಯಾರಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಹೋಟೆಲ್ಗಳಿದ್ದು, ಕೇಲವರು ಹೋಟೆಲ್ ಅಸೋಸಿಯೇಷನ್ಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದವರು ಮಾಡಿಕೊಂಡಿಲ್ಲ. ಗ್ಯಾಸ್ ಸಿಲಿಂಡರ್ ಈಗಾಗಲೇ ಬುಕ್ ಮಾಡಿದ್ದರೂ, ಸಿಲಿಂಡರ್ ಸರಬರಾಜು ಆಗುತ್ತಿಲ್ಲ, ಇನ್ನೊಂದೆರಡು ದಿನ ಕಳೆದರೆ ತೀವ್ರ ಸಮಸ್ಯೆ ಎದುರಾಗುತ್ತೆ. ಸೌದೆಯೂ ಸಿಗದಿದ್ದರೆ ಹೋಟೆಲ್ ಬಂದ್ ಮಾಡಬೇಕಾಗುತ್ತ ದೆಂದು ಹೋಟೆಲ್ ಮಾಲೀಕರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಎಷ್ಟು ಏಜೆನ್ಸಿಗಳು
ಜಿಲ್ಲೆಯಲ್ಲಿ ಒಂದು ಖಾಸಗಿ ಕಂಪನಿ ಸೇರಿ ಒಟ್ಟು 24 ಅಡುಗೆ ಅನಿಲ ವಿತರಕ ಏಜೆನ್ಸಿಗಳು ಇದ್ದು, ಈ ಪೈಕಿ 6 ಭಾರತ ಗ್ಯಾಸ್, 7 ಹಿಂದೂಸ್ಥಾನ ಗ್ಯಾಸ್ ಮತ್ತು 10 ಇಂಡಿಯನ್ ಗ್ಯಾಸ್ ಏಜೆನ್ಸಿಗಳು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿವೆ. ಆಹಾರ ಇಲಾಖೆಯ ಅಂಕಿ ಸಂಖ್ಯೆಯ ಪ್ರಕಾರ ಗೃಹ ಬಳಕೆಯ 14.2 ಕೆಜಿಯ ಸಿಲಿಂಡರ್ 2670 ಇದ್ದು, ಈ ಪೈಕಿ ಎಚ್ಪಿಸಿಎಲ್ 670, ಡಿಪಿಸಿ 2647, ಐಒಸಿ 5647 ಹಾಗೂ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬಿಪಿಸಿ 526, ಐಒಸಿ 517 ಸೇರಿ ಒಟ್ಟು 11,647 ಸಿಲಿಂಡರ್ ಲಭ್ಯವಿವೆ.
![]()
ವಾಣಿಜ್ಯ ಗ್ಯಾಸ್ ಸಿಲೆಂಡರ್ ಪೂರೈಕೆ ವ್ಯತ್ಯಯವಾಗಿದೆ. ಹತ್ತು ಸಿಲೆಂಡರ್ ಬುಕ್ ಮಾಡಿ ದರೆ, ಕೇವಲ ಒಂದರಿಂದ ಎರಡು ಸಿಲೆಂಡರ್‌ನ್ನ ಕೊಡುತ್ತಿದ್ದಾರೆ. ಪರ್ಯಾಯ ಯಾವುದೇ ವ್ಯವಸ್ಥೆ ಇಲ್ಲ. ಗ್ಯಾಸ್ ಸಿಲೆಂಡರ್ ಅವಲಂಬಿಸಿದ್ದರಿಂದ ಇದೇ ಪರಿಸ್ಥಿತಿ ಮುಂದುವರೆದರೆ ಹೊಟೇಲ್ ಬಂದ್ ಮಾಡುತ್ತೇವೆ.
-ಸದಾನಂದ ಪ್ರಭು, ಪ್ರಭು ವಿಹಾರ ಮಾಲೀಕ