ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gas Shortage: ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಮೂರು ದಿನದ ಹಿಂದೆ ಗೆಜೆಟ್ ನೋಟಿಷಿ ಕೇಷನ್ ಹೊರಡಿಸಿದೆ. ಇದರಲ್ಲಿ, ಗೃಹ ಬಳಕೆಗೆ ಪ್ರಥಮ ಆದ್ಯತೆ, ಸಾರಿಗೆ, ರಸ ಗೊಬ್ಬರಗಳಂತಹ ವಲಯಗಳನ್ನು ಎರಡನೇ ಆದ್ಯತೆ ನೀಡಿದೆ. ಆದರೆ ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಕೊನೆಯ ಆದ್ಯತೆ ನೀಡಿದೆ.

ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು

-

Ashok Nayak
Ashok Nayak Mar 13, 2026 9:16 AM

ಅಪರ್ಣಾ ಎ.ಎಸ್.

ವಿದ್ಯುತ್ ಉತ್ಪಾದನಾ ಘಟಕಕ್ಕೆ ಅನಿಲ ಕೊರತೆ

ಕೇಂದ್ರದ ಅಧಿಸೂಚನೆಯಲ್ಲಿ ವಿದ್ಯುತ್ ಉತ್ಪಾದನೆಗಿಲ್ಲ ಆದ್ಯತೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶಾದ್ಯಂತ ಗ್ಯಾಸ್ ಸಮಸ್ಯೆ ಎದುರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಇದೀಗ, ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಉತ್ಪಾ ದನೆಯ ಮೇಲೆ ಪರಿಣಾಮ ಬೀರಲಿದೆಯೇ ಎನ್ನುವ ಆತಂಕ ಶುರುವಾಗಿದೆ.

ವಾಣಿಜ್ಯ ಸಿಲಿಂಡರ್‌ಗಳ ಬಳಕೆಯ ಮೇಲೆ ನಿಯಂತ್ರಣ ಹಾಗೂ ಅಗತ್ಯ ಕ್ಷೇತ್ರಕ್ಕೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಮಾರ್ಗಸೂಚಿಯಲ್ಲಿ ಗೃಹಬಳಕೆ, ಸಾರಿಗೆ, ಪೈಪ್ ಲೈನ್ ಕಾರ್ಯಚರಣೆ, ರಸಗೊಬ್ಬರ ಸ್ಥಾವರಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ವಿದ್ಯುತ್ ಉತ್ಪಾ ದನಾ ವಲಯವನ್ನು ಐದನೇ ಆದ್ಯತಾ ಕ್ಷೇತ್ರವೆಂದು ಗುರುತಿಸಿರುವುದರಿಂದ, ಬೆಂಗಳೂರಿನ ಯಲಹಂಕದಲ್ಲಿ ಸ್ಥಾಪನೆಯಾಗಿರುವ ಅನಿಲ ಆಧಾರಿತ ವಿದ್ಯುತ್ ಉತ್ಪಾ ದನಾ ಘಟಕಕ್ಕೆ ತೀವ್ರ ಸಮಸ್ಯೆಯಾಗುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಮೂರು ದಿನದ ಹಿಂದೆ ಗೆಜೆಟ್ ನೋಟಿಷಿಕೇಷನ್ ಹೊರಡಿಸಿದೆ. ಇದರಲ್ಲಿ, ಗೃಹ ಬಳಕೆಗೆ ಪ್ರಥಮ ಆದ್ಯತೆ, ಸಾರಿಗೆ, ರಸ ಗೊಬ್ಬರಗಳಂತಹ ವಲಯಗಳನ್ನು ಎರಡನೇ ಆದ್ಯತೆ ನೀಡಿದೆ. ಆದರೆ ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಕೊನೆಯ ಆದ್ಯತೆ ನೀಡಿದೆ.

ಇದರಿಂದಾಗಿ, ಯಲಹಂಕದಲ್ಲಿರುವ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ ಅನಿಲ ಪೂರೈಕೆಯನ್ನು ಮೊದಲಿಗೆ ಶೇ.20ರಷ್ಟು ಕಡಿತಗೊಳಿಸಿದ್ದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ, ಗುರುವಾರದಿಂದ ಅನಿಲ ಪೂರೈಕೆ ಸ್ಥಗಿತಗೊಳಿಸಿದೆ. ಇದು ವಿದ್ಯುತ್ ಉತ್ಪಾ ದನೆಯ ಮೇಲೆ ಭಾರಿ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮೊದಲ ಅನಿಲ ಆಧಾರಿತ ಸ್ಥಾವರ: ಯಲಹಂಕದಲ್ಲಿ ಕೆಪಿಸಿಎಲ್ ಸ್ಥಾಪಿಸಿ ರುವ ರಾಜ್ಯದ ಏಕೈಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರವು ನಿತ್ಯ 370 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಸ್ಥಾವರಕ್ಕೆ ಅನಿಲ ಪೂರೈಕೆ ಸ್ಥಗಿತಗೊಂಡಿರುವುದರಿಂದ ಸ್ಥಾವರದ ವಿದ್ಯುತ್ ಉತ್ಪಾದನೆ ಸದ್ಯಕ್ಕೆ ನಿಂತಿದೆ. ಬೇಡಿಕೆ ಅವಧಿಯಲ್ಲಿ ನಿಯಮಿತವಾಗಿ ವಿದ್ಯುತ್ ಪೂರೈಸಲು ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ರಾಜ್ಯ ಸರಕಾರ ಯಲಹಂಕದ ಅನಿಲ ಆಧಾರಿತ ವಿದ್ಯುತ್ ಘಟಕವೂ ಒಂದಾಗಿದ್ದು, ರಾಜಧಾನಿ ಬೆಂಗಳೂರಿಗೆ ವಿದ್ಯುತ್ ಪೂರೈಸಲು ಇದನ್ನು ಸ್ಥಾಪಿಸಲಾಗಿದೆ.

ಇಲ್ಲಿ ಕಳೆದ ಡಿಸೆಂಬರ್ ತಿಂಗಳಿನಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡ ಲಾಗುತ್ತಿದೆ. ಆದರೆ, ಮಧ್ಯಪ್ರಾಚ್ಯ ಯುದ್ದದಿಂದ ತಲೆದೋರಿರುವ ನೈಸರ್ಗಿಕ ಅನಿಲದ ಕೊರತೆ ಈ ವಿದ್ಯುತ್ ಉತ್ಪಾದನೆಗೆ ಪರಿಣಾಮ ಬೀರಿದೆ.

ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯ 355 ದಶಲಕ್ಷ ಯುನಿಟ್ ವಿದ್ಯುತ್ ಬೇಡಿಕೆ ಇದ್ದು, ಅಷ್ಟೇ ಪ್ರಮಾಣದ ವಿದ್ಯುತ್ ಪೂರೈಕೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸದ್ಯದ ಪೀಕ್ ಅವರ್ ವಿದ್ಯುತ್ ಬೇಡಿಕೆ ಆರು ಸಾವಿರ ಮೆಗಾ ವ್ಯಾಟ್ʼಗೇರಿದೆ.

ರಾಜ್ಯದ ಉಷ್ಣ ಮತ್ತು ಜಲ ವಿದ್ಯುತ್ ಸ್ಥಾವರಗಳು, ಸೌರ ಮತ್ತು ಪವನ ವಿದ್ಯುತ್ ಸ್ಥಾವರ ಗಳಲ್ಲಿ ವಿದ್ಯುತ್ ಉತ್ಪಾದನೆ ಜತೆಗೆ ಕೇಂದ್ರ ಗ್ರಿಡ್ ನಿಂದ ವಿದ್ಯುತ್ ಲಭ್ಯವಿದೆ. ಇದಲ್ಲದೆ, ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆಯುವ ಮೂಲಕ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸ ಲಾಗುತ್ತಿದೆ. ‌

ಒಂದು ವೇಳೆ ಯಲಹಂಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ ಅನಿಲ ಪೂರೈಕೆಯ ಕಡಿತ ಇದೇ ರೀತಿ ಮುಂದುವರಿದರೆ, ಮುಂದಿನ ದಿನದಲ್ಲಿ ವಿದ್ಯುತ್ ಪೂರೈಕೆ ಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ?

ಎಲ್‌ಪಿಜಿ ಕೊರತೆ ಬಗೆಹರಿಸುವ ಉದ್ದೇಶದಿಂದ ಕೇಂದ್ರ ಸರಕಾರವು ನಸರ್ಗಿಕ ಇಂಧನ ಹಂಚಿಕೆಯ ಆದ್ಯತಾ ವಲಯಗಳನ್ನು ನಿರ್ಧರಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಗೃಹ ಬಳಕೆಯ ಅನಿಲ ಪೈಪ್‌ಲೈನ್, ಎಲ್‌ಪಿಜಿ, ಸಾರಿಗೆ (ಸಿಎನ್ʼಜಿ), ಅಗತ್ಯ ಪೈಪ್‌ಲೈನ್ ಕಾರ್ಯಾಚರಣೆಗಳು ಮತ್ತು ಇಂಧನ ಅವಶ್ಯಕತೆಗಳನ್ನು ಮೊದಲ ಆದ್ಯತಾ ವಲಯದಲ್ಲಿ ಪರಿಗಣಿಸಲಾಗಿದ್ದು, ಕಳೆದ ಆರು ತಿಂಗಳ ಸರಾಸರಿಯ ಶೇ.100ರಷ್ಟು ಅನಿಲವನ್ನು ನೀಡಬೇಕು.

ಇನ್ನುಳಿದಂತೆ ರಸಗೊಬ್ಬರ ಸ್ಥಾವರಗಳನ್ನು ಎರಡನೇ ಆದ್ಯತಾ ವಲಯವಾಗಿ ಪರಿಗಣಿಸ ಲಾಗಿದ್ದು,ಕಳೆದ ಆರು ತಿಂಗಳ ಸರಾಸರಿಯ ಶೇ.80ಷ್ಟನ್ನು ಒದಗಿಸಬೇಕು ಎಂದು ಹೇಳಲಾ ಗಿದೆ. ಇದರೊಂದಿಗೆ ಚಹಾ ಉದ್ಯಮ ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರನ್ನು ಮೂರನೇ ಆದ್ಯತೆಯಾಗಿ ಮತ್ತು ನಗರ ಅನಿಲ ವಿತರಣಾ ಘಟಕಗಳು ತನ್ನ ಜಾಲಗಳ ಮೂಲ ಅನಿಲ ಸರಬರಾಜು ಮಾಡುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹರನ್ನು 4ನೇ ಆದ್ಯತೆಯಾಗಿ ಪರಿಗಣಿಸಲಾಗಿದೆ. ನಾಲ್ಕನೇ ಆದ್ಯತಾ ವಲಯವಾಗಿ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಮಾಡಿರುವುದರಿಂದ, ಈ ಕ್ಷೇತ್ರಕ್ಕೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ.