ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಧ್ಯಾತ್ಮದ ಪೀಠದಿಂದ ಶಿಕ್ಷಣದ ಪಥದವರೆಗೆ : ಅಪ್ಪನವರ ಬದುಕು, ಜ್ಞಾನ ದಾಸೋಹದ ಬೆಳಕು

ಕೆಲವರು ಒಂದು ಸಂಸ್ಥೆಯನ್ನು ಕಟ್ಟುತ್ತಾರೆ, ಕೆಲವರು ಒಂದು ಪೀಳಿಗೆಯನ್ನು ಕಟ್ಟುತ್ತಾರೆ. ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪ ಅವರು ಎರಡನ್ನೂ ಮಾಡಿದ ಅಪರೂಪದ ಮಹನೀಯರು. ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿ ಆಧ್ಯಾತ್ಮಿಕ ಪರಂಪರೆಯನ್ನು ಮುನ್ನಡೆಸಿದ ಅವರು, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದತನಕ್ಕೆ ಸವಾಲೆಸೆದು ಶಿಕ್ಷಣವನ್ನೇ ಸಾಮಾಜಿಕ ಬದಲಾವಣೆ ಯ ಸಾಧನವನ್ನಾಗಿ ರೂಪಿಸಿದರು.

ದೇವೇಂದ್ರ ಜಾಡಿ ಕಲಬುರಗಿ

ಜ್ಞಾನದ ಜ್ಯೋತಿಯಾದ ಡಾ.ಅಪ್ಪ

ತ್ರಿವಿಧ ದಾಸೋಹದಿಂದ ಸಾವಿರಾರು ಬದುಕುಗಳಿಗೆ ಬೆಳಕಾದ ಅಪರೂಪದ ಪೀಠಾಧಿಪತಿ

ಕೆಲವರು ಒಂದು ಸಂಸ್ಥೆಯನ್ನು ಕಟ್ಟುತ್ತಾರೆ, ಕೆಲವರು ಒಂದು ಪೀಳಿಗೆಯನ್ನು ಕಟ್ಟುತ್ತಾರೆ. ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪ ಅವರು ಎರಡನ್ನೂ ಮಾಡಿದ ಅಪರೂಪದ ಮಹನೀಯರು. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿ ಆಧ್ಯಾತ್ಮಿಕ ಪರಂಪರೆಯನ್ನು ಮುನ್ನಡೆಸಿದ ಅವರು, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದತನಕ್ಕೆ ಸವಾಲೆಸೆದು ಶಿಕ್ಷಣವನ್ನೇ ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿ ರೂಪಿಸಿದರು. ಅವರ ಬದುಕಿನಲ್ಲಿ ಆಧ್ಯಾತ್ಮ, ಜ್ಞಾನ, ದಾಸೋಹ ಮತ್ತು ಮಾನವೀಯತೆ ಒಂದೇ ನದಿಯ ನಾಲ್ಕು ದಡಗಳಂತಿದ್ದವು.

ಪೀಠದ ಶಕ್ತಿ, ಜ್ಞಾನದ ದೃಷ್ಟಿ: ಸಾಹಿತ್ಯ ಮತ್ತು ತತ್ವಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಡಾ. ಅಪ್ಪ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದರು. ವೀರಶೈವ ತತ್ವಶಾಸ್ತ್ರಕ್ಕೂ ಉನ್ನತ ಶಿಕ್ಷಣದಲ್ಲಿ ಸ್ಥಾನ ದೊರಕಬೇಕು ಎಂಬ ಅವರ ಚಿಂತನೆ ಬಳಿಕ ಸಾಕಾರಗೊಂಡಿತು. ‘ಷಟಸ್ಥಲ ಸಿದ್ಧಾಂತ’ ಹಾಗೂ ‘ಮಹಾದಾಸೋಹ ಸೂತ್ರ’ದಂತಹ ಕೃತಿಗಳ ಮೂಲಕ ಆಧ್ಯಾತ್ಮಿಕ ಚಿಂತನೆಗೆ ಸಾಹಿತ್ಯದ ಸ್ಪರ್ಶ ನೀಡಿದರು. ಜ್ಞಾನವನ್ನು ಕೆಲವರ ಸ್ವತ್ತಾಗಿಸದೆ ಜನರ ಬದುಕಿಗೆ ತಲುಪಿಸಬೇಕು ಎಂಬುದು ಅವರ ನಂಬಿಕೆಯಾಗಿತ್ತು.

ಹಿಂದುಳಿದ ನೆಲಕ್ಕೆ ಶಿಕ್ಷಣದ ಬಲ: ನಿಜಾಮರ ಆಡಳಿತದ ಬಳಿಕವೂ ಶೈಕ್ಷಣಿಕವಾಗಿ ಹಿಂದುಳಿ ದಿದ್ದ ಹೈದರಾಬಾದ್ ಕರ್ನಾಟಕದ ಚಿತ್ರಣ ಬದಲಿಸುವುದು ಅವರ ದೊಡ್ಡ ಕನಸಾಗಿತ್ತು.

ಇದನ್ನೂ ಓದಿ:Kalaburagi Breaking: ಕಪನೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‌ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಸಂಗ್ರಹ: ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ

ಸರಕಾರದ ನೆರವಿಗಾಗಿ ಕಾಯದೆ, ಈ ಭಾಗದ ಅಗತ್ಯಗಳಿಗೆ ತಕ್ಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಕಾರ್ಯಕ್ಕೆ ಅವರು ಮುಂದಾದರು. ಉದ್ಯೋ ಗಾವಕಾಶಗಳಿಗೆ ಪೂರಕವಾದ ಪಠ್ಯಕ್ರಮ ಹಾಗೂ ಹೊಸ ಕೋರ್ಸ್ಗಳ ಅಗತ್ಯವನ್ನು ಮನಗಂಡು 2017ರಲ್ಲಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ ದರು. ಇಂದು ಅದು ಕಲ್ಯಾಣ ಕರ್ನಾಟಕದ ಯುವ ಜನರ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.

ಅನ್ನದಾಸೋಹದಿಂದ ಜ್ಞಾನದಾಸೋಹ: ಶರಣಬಸವೇಶ್ವರ ಸಂಸ್ಥಾನದ ದಾಸೋಹ ಪರಂಪರೆ ಶತಮಾನಗಳ ಇತಿಹಾಸ ಹೊಂದಿದೆ. ಹಸಿದವರಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿ ರುವವರ ಕೈ ಹಿಡಿಯುವುದು ಈ ಪರಂಪರೆಯ ಜೀವಾಳ. ಡಾ. ಅಪ್ಪ ಅವರು ಅದನ್ನು ಇನ್ನಷ್ಟು ವಿಸ್ತರಿಸಿದರು. ಕೋವಿಡ್ ಸಂಕಷ್ಟದ ಸಂದ ರ್ಭದಲ್ಲಿ ಲಾಕ್ ಡೌನ್ನಿಂದ ಜೀವನಾಧಾರ ಕಳೆದುಕೊಂಡ ದಿನಗೂಲಿ ಕಾರ್ಮಿ ಕರು, ನಿರ್ಗತಿಕರು ಸೇರಿದಂತೆ ಸಾವಿರಾರು ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಲಾಯಿತು.

ದಾಸೋಹ ಎಂದರೆ ಕೇವಲ ಊಟವಲ್ಲ; ಒಬ್ಬರ ನೋವನ್ನು ಮತ್ತೊಬ್ಬರು ತಮ್ಮ ನೋವೆಂದು ಭಾವಿ ಸುವ ಮಾನವೀಯತೆ ಎಂಬುದನ್ನು ಅವರು ತೋರಿಸಿದರು. ಕಲ್ಯಾಣ ಕರ್ನಾಟಕದ ಶಿಕ್ಷಣದ ಶಿಲ್ಪಿ: ಡಾ. ಶರಣ ಬಸವಪ್ಪ ಅಪ್ಪ ಅವರ ಬದುಕನ್ನು ಕೇವಲ ಒಬ್ಬ ಪೀಠಾಧಿಪತಿಯ ಬದುಕು ಎಂದು ನೋಡಲಾಗದು. ಅದು ಒಂದು ಪ್ರದೇಶದ ಶೈಕ್ಷಣಿಕ ಪುನರುತ್ಥಾನದ ಕಥೆ. ಅವರು ಕಟ್ಟಿದ್ದು ಕಟ್ಟಡಗಳಲ್ಲ; ಭವಿಷ್ಯ. ಅವರು ನೀಡಿದ್ದು ಕೇವಲ ಅನ್ನವಲ್ಲ; ಆತ್ಮವಿಶ್ವಾಸ. ಅವರು ಬಿತ್ತಿದ್ದು ಕೇವಲ ಶಿಕ್ಷಣವಲ್ಲ; ಸಮಾನ ಅವಕಾಶದ ಕನಸು. ಹೀಗಾಗಿ ಅವರ ಅಗಲಿಕೆ ಒಂದು ವ್ಯಕ್ತಿಯ ಅಗಲಿಕೆಯಲ್ಲ -ಕಲ್ಯಾಣ ಕರ್ನಾಟಕದ ಜ್ಞಾನಪರಂಪರೆಯ ಒಂದು ಮಹತ್ವದ ಅಧ್ಯಾಯದ ವಿರಾಮ. ಆದರೆ ಅವರು ಹಚ್ಚಿದ ಜ್ಞಾನದ ಜ್ಯೋತಿ ಎಂದಿಗೂ ಆರದು.

ಹೆಣ್ಣುಮಕ್ಕಳಿಗೆ ತೆರೆದ ಜ್ಞಾನದ ಬಾಗಿಲು ಮಹಿಳಾ ಶಿಕ್ಷಣದ ವಿಚಾರದಲ್ಲಿ ಡಾ. ಅಪ್ಪ ಅವರ ದೂರದೃಷ್ಟಿ ವಿಶಿಷ್ಟವಾ ಗಿತ್ತು. ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆ, ಕಾಲೇಜು ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಿದರು. ವಿದ್ಯಾರ್ಥಿನಿ ಯರಿಗೆ ಶುಲ್ಕ ರಿಯಾಯಿತಿ ಸೇರಿದಂತೆ ಹಲವು ಸೌಲ ಭ್ಯಗಳನ್ನು ಕಲ್ಪಿಸಿದರು. ಬಾಲಕಿಯರಿಗಾಗಿ ವಿಶೇಷ ಎಂಜಿನಿಯರಿಂಗ್ ಕಾಲೇಜು ಆರಂಭಿಸುವ ಮೂಲಕ ತಾಂತ್ರಿಕ ಶಿಕ್ಷಣದಲ್ಲೂ ಮಹಿಳೆಯ ರಿಗೆ ಹೊಸ ದಾರಿ ತೆರೆದರು. ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿನಿಯರ ಹೆಚ್ಚಿನ ಸಂಖ್ಯೆಯೇ ಈ ಚಿಂತನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಬಸವ ತತ್ವಗಳಿಗೆ ಬದುಕಿನ ಭಾಷ್ಯ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀ ಯತೆಯ ಬಸವ ತತ್ವಗಳನ್ನು ಡಾ. ಅಪ್ಪ ಅವರು ತಮ-- ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಬಸವಣ್ಣ ನವರ ಚಿಂತನೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದರು. ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಬಸವಣ್ಣನವರ ಅಶ್ವಾರೂಢ ಪ್ರತಿಮೆ ಸ್ಥಾಪನೆಗೆ ನೀಡಿದ ಕೊಡುಗೆ ಅವರ ಬಸವಭಕ್ತಿಯ ಪ್ರತೀಕವಾಗಿದೆ.