ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನಗರ ಹೊರವಲಯದ ಗುಣಿಯಿಂದ ಮೇಲೇಳದ ಗುರುಭವನ : ಕೋಟಿ ಹಣ ಗುಳುಂ

ನಗರ ಹೊರವಲಯ ಮಹಾವೀರ್ ಜೈನ್ ಆಸ್ಪತ್ರೆ ಸಮೀಪವಿರುವ ಬೃಹತ್ ಗುಣಿಯನ್ನು ಸಮತಟ್ಟು ಮಾಡಿ ನಿರ್ಮಿಸಲು ಹೊರಟಿರುವ ಜಿಲ್ಲಾ ಗುರುಭವನದ ಕಾಮಗಾರಿ ೨೦೨೧-೨೨ರಿಂದ ಗುಣಿಯನ್ನು ಬಿಟ್ಟು ಮೇಲೇಳಲೇಯಿಲ್ಲ. ನಿರ್ಮಾಣಕ್ಕಾಗಿ ಇಟ್ಟಿದ್ದ ಎರಡೂವರೆ ಕೋಟಿ ಹಣ ಕರಗಿಸಿ ನೆಲಮಾಳಿಗೆ ಯಷ್ಟೇ ನಿರ್ಮಾಣ ಮಾಡಲಾಗಿದೆ.

ನಗರ ಹೊರವಲಯದ ಗುಣಿಯಿಂದ ಮೇಲೇಳದ ಗುರುಭವನ

ಅಪೂರ್ಣಗೊಂಡ ಕಾಮಗಾರಿಯ ಚಿತ್ರ

Ashok Nayak Ashok Nayak Aug 4, 2025 8:05 PM

ಅನುದಾನದ ಕೊರತೆ, ರಾಜಕೀಯದ ಸುಳಿ, ಸಂಘಟನೆಗಳ ದೌರ್ಬಲ್ಯದಿಂದ ಮೂಲೆಗುಂಪು

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ನಗರ ಹೊರವಲಯ ಮಹಾವೀರ್ ಜೈನ್ ಆಸ್ಪತ್ರೆ ಸಮೀಪವಿರುವ ಬೃಹತ್ ಗುಣಿಯನ್ನು ಸಮತಟ್ಟು ಮಾಡಿ ನಿರ್ಮಿಸಲು ಹೊರಟಿರುವ ಜಿಲ್ಲಾ ಗುರುಭವನದ ಕಾಮಗಾರಿ ೨೦೨೧-೨೨ರಿಂದ ಗುಣಿಯನ್ನು ಬಿಟ್ಟು ಮೇಲೇಳಲೇಯಿಲ್ಲ. ನಿರ್ಮಾಣಕ್ಕಾಗಿ ಇಟ್ಟಿದ್ದ ಎರಡೂವರೆ ಕೋಟಿ ಹಣ ಕರಗಿಸಿ ನೆಲಮಾಳಿಗೆಯಷ್ಟೇ ನಿರ್ಮಾಣ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಸಭಾಭವನ ನಿರ್ಮಾಣಕ್ಕೆ ಹಣಕಾಸಿನ ಮುಗ್ಗಟ್ಟು ಶುರುವಾಗಿ ಕಾಮಗಾರಿ ಸ್ಥಗಿತವಾಗಿದ್ದು ಕಬ್ಬಿಣ ಇಟ್ಟಲ್ಲೇ ತುಕ್ಕು ಹಿಡಿದಿದೆ.

ಏನಿದು ಗುರುಭವನದ ಕಥೆ?
೨೦೨೦-೨೧ರಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಸಾರ್ವಜಿನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಿರ್ಮಿಸಲು ಹೊರಟಿರುವ ಜಿಲ್ಲಾ ಮಟ್ಟದ ಶಿಕ್ಷಕರ ಗುರುಭವನದ ಅಂದಾಜು ಮೊತ್ತ ೫ ಕೋಟಿ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ೨೦೨೧ರಲ್ಲಿ ನಗರ ಹೊರವಲಯ ಕೈಗಾ ರಿಕಾ ಪ್ರದೇಶದಲ್ಲಿ ಪ್ರಧಾನಮಂತ್ರಿ ಖನಿಜ ಕಲ್ಯಾಣ ಯೋಜನೆಯಲ್ಲಿ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣದ ಜವಾಬ್ದಾರಿ ನೀಡಲಾಯಿತು.

ಇದನ್ನೂ ಓದಿ: Chikkaballapur News: ಜಾನಪದ ಕಲಾಪ್ರಕಾರಗಳನ್ನು ಬದ್ಧತೆಯಿಂದ ಕಲಿತರೆ ಬದುಕು ಹಸನು : ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್

ಅಲ್ಲಿಂದ ಈವರೆಗೆ ಕೇವಲ ನೆಲಮಹಡಿಯ ಒಳಾವರಣ ಪೂರ್ಣಗೊಳಿಸಿ ಮೊದಲ ಮಹಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಸಭಾಂಗಣಕ್ಕೆ ಅರ್ಧಂಬರ್ಧ ಕಾಲಂಗಳನ್ನು ಹಾಕಿದ್ದಾರೆ. ಇಷ್ಟಕ್ಕೆ ೨ ಕೋಟಿ ೫೦ ಲಕ್ಷ ಖರ್ಚು ಮಾಡಲಾಗಿದೆ. ಉಳಿದ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಸ್ಥಗಿತವಾಗಿ ೩ ವರ್ಷಗಳೇ ಕಳೆದಿವೆ. ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರಣ ಗುರುಭವನದ ಕನಸು ಹಳ್ಳ ಹಿಡಿದಿರುವುದು ಶಿಕ್ಷಕ ವರ್ಗದ ಬೇಸರಕ್ಕೆ ಕಾರಣವಾಗಿದೆ.

ಅನುದಾನದ ಕಥೆಯ ವ್ಯಥೆ
ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಗುರುಭವನ ಬೇಕೆಂಬ ಕೂಗಿಗೆ ೬ ದಶಕಗಳ ಇತಿಹಾಸವಿದೆ. ನಗರದ ಡಿಡಿಪಿಐ ಕಛೇರಿ ಆವರಣದಲ್ಲಿ ೨೦೦೨-೦೩ ರಲ್ಲಿ ಗುರುಭವನ ನಿರ್ಮಿಸಲು ಪ್ರಾರಂಭಿಸಿದ ಕಸರತ್ತು, ಹೊರವಲಯದ ಜಡಲತಿಮ್ಮನಹಳ್ಳಿ ಸರ್ವೆ ನಂ.೩೦ರಲ್ಲಿ ೨೦ ಕುಂಟೆ ಜಾಗ ಮಂಜೂರು ಮಾಡಿಸಿಕೊಂಡು ೨೦೨೧ರಲ್ಲಿ ಕಾಮಗಾರಿ ಪ್ರಾರಂಭವಾಗುವ ತನಕ ಬಂದು ನಿಂತಿದೆ.

bord sutta kale

ಅಂದ ಹಾಗೆ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸರ್ಕಾರಿ ಶಿಕ್ಷಕರ ಸಂಖ್ಯೆ 8000, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ಶಿಕ್ಷಕರ ಸಂಖ್ಯೆ 7000 ಸೇರಿದರೆ ಒಟ್ಟು ೧೫೦೦೦ ಶಿಕ್ಷಕರಿದ್ದಾರೆ. ಈವರೆಗೆ ಸೆಪ್ಟೆಂಬರ್ ೦೫ರ ಶಿಕ್ಷಕರ ದಿನಾಚರಣೆಯನ್ನು ಅವರಿವರ ಆಸರೆಯಲ್ಲಿ ಪರಾವಂಲಂಬಿಗಳಾಗಿಯೇ ಆಚರಿಸುತ್ತಾ ಬಂದಿದ್ದಾರೆ.

ಎಣಿಸಿದಂತೆ ನಿಗದಿತ ಅವಧಿಯಲ್ಲಿ ಗುರುಭವನದ ಕಾಮಗಾರಿ ಮುಗಿದಿದ್ದರೆ ೨೦೨೫ರ ಶಿಕ್ಷಕರ ದಿನಾಚರಣೆಯನ್ನು ಸ್ವಂತ ಕಟ್ಟಡದಲ್ಲಿಯೇ ಆಚರಿಸಬಹುದಿತ್ತು. ಆದರೆ ಅನುದಾನದ ಕೊರತೆ, ಶಿಕ್ಷಕರ ಸಂಘದಲ್ಲಿನ ರಾಜಕೀಯ, ಜನಪ್ರತಿನಿಧಿಗಳ ಚದುರಂಗದಾಟ ಎಲ್ಲವೂ ಕೂಡಿ ಗುರುಭವನ ಗುಣಿಯಲ್ಲಿಯೇ ಇರುವಂತಾಗಿದೆ.

ಅಭಯ ಈಡೇರಿತೇ??
೨೦೨೧ರಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ನೀಲನಕ್ಷೆ  ತಯಾರಿಸಿ ಐದು ಕೋಟಿ ಅಂದಾಜಿಸ ಲಾಗಿತ್ತು. ಇದರಲ್ಲಿ ಜಿಲ್ಲಾ ಗಣಿ ನಿಧಿಯಿಂದ ೨ ಕೋಟಿ, ಶಿಕ್ಷಕರ ಕಲ್ಯಾಣ ನಿಧಿಯಿಂದ ೧ ಕೋಟಿ, ಉಳಿದ ೨ ಕೋಟಿಯನ್ನು ಜನಪ್ರತಿನಿಧಿಗಳ ವಂತಿಗೆಯಿAದ ಪಡೆಯಲು ಯೋಜಿಸಲಾಗಿತ್ತು. ಬದಲಾದ ರಾಜಕೀಯದಲ್ಲಿ ಅಂದಿನ ಸಚಿವ ಡಾ.ಕೆ.ಸುಧಾಕರ್ ನೀಡಿದ ಭರವಸೆಯನ್ನು ನೆಚ್ಚಿ ಕೊಂಡ ಶಿಕ್ಷಕವರ್ಗ ಇನ್ನೇನು ಗುರುಭವನದ ಕಾಮಗಾರಿ ಮುಗಿದೇ ಹೋಯಿತು ಎಂದು ಹಿರಿಹಿರಿ ಹಿಗ್ಗಿದ್ದರು. ಈ ಹಿಗ್ಗಿಗೆ ೩ ವರ್ಷ ಕಳೆದಿದೆ ಆದರೆ ಜಿಲ್ಲಾ ಗಣಿ ನಿಧಿಯಿಂದ ಬಿಡುಗಡೆಯಾದ ೨ ಕೋಟಿ ಮತ್ತು ಶಿಕ್ಷಕರ ಕಲ್ಯಾಣ ನಿಧಿಯಿಂದ ೫೦ಲಕ್ಷ ಬಿಡುಗಡೆಯಾದಂತೆ ಖರ್ಚೂ ಆಗಿದೆ. ಗುರುಭವನ ಮಾತ್ರ ನಿಂತಲ್ಲೇ ನಿಂತು ಅಸ್ಥಿಪಂಜರದAತೆ ಮೂಕವೇಧನೆ ಅನುಭವಿಸುತ್ತಿದೆ.

bhagyanagara (1)

ಸದ್ಯ ಗುರುಭವನದ ಕಾಮಗಾರಿ ಪೂರ್ಣಗೊಳ್ಳಲು ೨.೫೦ ಲಕ್ಷ ಅನುದಾನದ ಅಗತ್ಯವಿದ್ದು, ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ೫೦ ಲಕ್ಷ ಮಾತ್ರವೇ ಉಳಿದಿದೆ.ಇಷ್ಟನ್ನು ಬಿಟ್ಟರೆ ನಯಾಪೈಸೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಂಘದ ಬಳಿಯಿಲ್ಲ.ಇಷ್ಟು ಬೃಹತ್ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳೇ ಕೊಡಬೇಕಿದೆ.ಇದು ಸಾಧ್ಯವಾದಲ್ಲಿ ಮಾತ್ರ ಶಿಕ್ಷಕರ ದಿನಾಚರಣೆಯನ್ನು ಯಾರ ಹಂಗಿಲ್ಲದೇ ಸ್ವತಂತ್ರವಾಗಿ ನಡೆಸಲು ಅನುಕೂಲ ಆಗುವುದಲ್ಲದೆ, ಶಿಕ್ಷಕರಿಗೆ ಸಂಬAಧಿಸಿದ ವಿವಿಧ ಕಾರ್ಯಾಗಾರಗಳು,ಶಿಬಿರ,ಸಂವಾದ, ಸಭೆ ಸಮಾರಂಭ ಸೇರಿ ಎಲ್ಲಾ ಶೈಕ್ಷಣಿಕ ಚಟವಟಕೆಗಳನ್ನು ಒಂದೇ ಸೂರಿನಲ್ಲಿ ನಡೆಸಲು ಅವಕಾಶವಾಗಲಿದೆ.

ಗುರುದಕ್ಷಿಣೆ ಕೊಡುವರೆ?
ಶಾಸಕ ಪ್ರದೀಪ್ ಈಶ್ವರ್ ನಾನು ನಂಬಿರುವ ಎರಡು ದೇಗುಲಗಳೆಂದರೆ ಒಂದು ಸರಕಾರಿ ಶಾಲೆಗಳು, ಮತ್ತೊಂದು ಸರಕಾರಿ ಆಸ್ಪತ್ರೆಗಳು ಎನ್ನುತ್ತಾರೆ.ಇದು ನಿಜವೇ ಆಗಿದ್ದಲ್ಲಿ ಕಳೆದ ಮೂರು ವರ್ಷ ಗಳಿಂದ ನೆನೆಗುದಿಗೆ ಬಿದ್ದಿರುವ ಗುರುಭವನದ ಕಾಮಗಾರಿಗೆ ಮರುಚಾಲನೆ ನೀಡಬೇಕು. ಅದಕ್ಕೆ ಬೇಕಿರುವ ಅನುದಾನವನ್ನು ಕೂಡ ಒದಗಿಸಲು ಮುಂದಾಗಬೇಕು. ಆಗ ಮಾತ್ರವೇ ತಮ್ಮ ಮಾತಿಗೆ ಬೆಲೆಯಿರಲಿದೆ ಎನ್ನುವುದು ಶಿಕ್ಷಕ ವರ್ಗದ ಮಾತಾಗಿದೆ.

ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಲ್ಲಿ ಸಾಕಷ್ಟು ಅಪೂರ್ಣ ವಾದ ಕೆಲಸಗಳು ಪೂರ್ಣಗೊಂಡಿವೆ.ಅವರು ಮನಸ್ಸು ಮಾಡಿದರೆ ಹಿಡಿದ ಕೆಲಸ ಮಾಡುವವರಿಗೆ ಬಿಡುವುದೇ ಇಲ್ಲ.ಹೀಗಾಗಿ ಕನ್ನಡ ಭವನದಂತೆ ಗುರುಭವನಕ್ಕೂ ಮುಕ್ತಿ ಕಾಣಿಸುವರೇ? ಕಾದು ನೋಡಬೇಕಿದೆ.

*
ಜಿಲ್ಲಾಕೇಂದ್ರದಲ್ಲಿ ಸುಸಜ್ಜಿತವಾದ ಗುರುಭವನ ಬೇಕೆಂಬುದು ೬ ದಶಕಕ್ಕೂ ಮೀರಿದ ಶಿಕ್ಷಕರ ಕನಸಾಗಿದೆ.ಸಂಸದ ಸುಧಾಕರ್ ಅವರು ಸಚಿವರಾಗಿದ್ದಾಗ ಹೆದ್ದಾರಿ ಸಮೀಪ ೨೦ಕುಂಟೆ ಜಾಗವನ್ನು ಗುರುಭವನಕ್ಕೆ ಒದಗಿಸಿದ್ದಾರೆ.ಇದರಲ್ಲಿಯೇ ೫ಕೋಟಿ ಅಂದಾಜು ವೆಚ್ಚದಲ್ಲಿ ಗುರುಭವನ ನಿರ್ಮಾಣ ಕಾಮಗಾರಿ ನಡೆದು ನೆಲಮಹಡಿ ಪೂರ್ಣಗೊಂಡಿದೆ.ಮೊದಲ ಮಹಡಿಯಲ್ಲಿ ಸಭಾಭವನ ಸೇರಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ೨ಕೋಟಿ ಅನುದಾನದ ಅಗತ್ಯವಿದ್ದು ಶಾಸಕರು, ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.ಇದಾದಲ್ಲಿ ಜಿಲ್ಲಾಕೇಂದ್ರದಲ್ಲಿ ಸುಸಜ್ಜಿತವಾದ ಗುರುಭವನ ನಿರ್ಮಾಣವಾಗಿ ದಶಕಗಳ ಕನಸು ನನಸಾಗಲಿದೆ.
ನಾರಾಯಣಸ್ವಾಮಿ, ಅಧ್ಯಕ್ಷರು, ಪ್ರಾಥಮಿಕಶಾಲಾ ಶಿಕ್ಷಕರ ಸಂಘ
ಹಾಗೂ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಚಿಕ್ಕಬಳ್ಳಾಪುರ.