ಹೂವಪ್ಪ ಐ ಹೆಚ್.
ಮೊಟ್ಟೆ ವಿದೇಶಕ್ಕೆ ರವಾನೆ
ಚಿಲ್ಲರೆ ದರ 6.50 ಇದ್ದ ಬೆಲೆ ಈಗ 7.50 -8 ರು. ಗೆ ಮಾರಾಟ
*ದುಬೈ ಆಪ್ರಿಕ ಶ್ರೀಲಂಕಾ ಹಾಗೂ ಓಮನ್ ದೇಶಗಳಿಗೆ ದಿನಕ್ಕೆ ಅಂದಾಜು 50 60 ಲಕ್ಷ ಮೊಟ್ಟೆ ರಫ್ತು ಆಗುತ್ತಿದೆ.
ಮೊಟ್ಟೆ ಬೆಲೆ ಭಾರೀ ಏರಿಕೆ
ಬೆಂಗಳೂರು: ಮೊದಲೇ ತರಕಾರಿ ಬೆಲೆ ಹೆಚ್ಚಾಗಿದ್ದು,ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ. ಮೀನು ಮಟನ್ ಚಿಕನ್ ಗಿಂತ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆ ಇದೀಗ ಬಡವರು ದುಬಾರಿ ಮೊಟ್ಟೆ ಖರೀದಿಸಿ ತಿನ್ನುವುದು ಕಷ್ಟವಾಗಿ ಬಿಟ್ಟಿದೆ.
ಉತ್ಪಾದನೆಯಲ್ಲಿ ಶೇ,10 ರಷ್ಟು ಕಡಿಮೆಯಾಗಿರುವ ಕಾರಣ ಮತ್ತು ದುಬೈ ಏಪ್ರಿಕ ಶ್ರೀಲಂಕಾ ಹಾಗೂ ಓಮನ್ ದೇಶಗಳಿಗೆ ದಿನಕ್ಕೆ ಅಂದಾಜು 50 60 ಲಕ್ಷ ಮೊಟ್ಟೆ ರಫ್ತುಗು ತ್ತಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಸದ್ಯ ತರಕಾರಿ ಬೆಲೆಯೂ ಹೆಚ್ಚಳವಾಗುತ್ತಿದ್ದು, ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ.
ಸಾಮಾನ್ಯ ಜನರಿಗೆ ಎಂದು ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆಯೊಂದೆ. ಹೆಚ್ಚು ಎಂದರೆ ಮೊಟ್ಟೆ ಬೆಲೆ 6 ರಿಂದ 6.50 ರೂ ಇರುತ್ತೆ. ಈ ಕಾರಣ ದಿಂದಲೇ ನೂರಾರು ರೂಪಾಯಿ ಕೊಟ್ಟು ಮಾಂಸ ಖರೀದಿ ಮಾಡುವ ಬದಲು ಹಲವರು ಮೊಟ್ಟೆ ಖರೀದಿ ಮಾಡುತ್ತಾರೆ.
ಇದನ್ನೂ ಓದಿ: Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ?
ಆದರೆ ಈಗ ಸಾಮಾನ್ಯರ ಖರೀದಿ ಮಾಡಲು ಕಷ್ಟವಾಗುವ ಮೊತ್ತಕ್ಕೆ ಬೆಲೆ ಏರಿಕೆ ಆಗ್ತಿದೆ. ಕಳೆದ ಎರಡು ವಾರದ ಹಿಂದೆ ಎನ್ ಇ ಸಿಸಿ ಸಗಟು ಬೆಲೆ 100 ಕ್ಕೆ 575 ರು. ಇದ್ದ ಬೆಲೆ ಇದೀಗ 675 ರೂ. ಆಗಿದೆ 12 ಕ್ಕೆ 70 ರು ಇದ್ದ ಬೆಲೆ 84 ರು. ಗೆ ಏರಿಕೆಯಾಗಿದೆ. ಚಿಲ್ಲಿರೆ ದರದಲ್ಲಿ 1 ಮೊಟ್ಟೆಗೆ 7 ರು ಗಡಿ ದಾಟುತ್ತಿದ್ದು, 7.50 ರು. ನಿಂದ 8 ರು. ವರೆಗೆ ಮಾರಾಟ ವಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರಿಗೆ ಬಿಗ್ ಶಾಕ್ ಎದುರಾಗುತ್ತಿದೆ.
ಕಾರ್ತಿಕ ಮಾಸದಲ್ಲಿ ಬೆಳೆ ಕುಸಿತ: ಸಾಮಾನ್ಯವಾಗಿ ಕಾರ್ತಿಕ ಮಾಸದ ಸಂದರ್ಭದಲ್ಲಿ ಕೋಳಿ ಮೀನು, ಮೊಟ್ಟೆ ಬೆಲೆ ಕಡಿಮೆ ಇರುತ್ತದೆ ಆದರೆ ಪ್ರಸಕ್ತ ವರ್ಷ ಇವುಗಳ ಬೆಲೆ ಗಗನವನ್ನು ಮುಟ್ಟುತ್ತಿದೆ.
ಏಕೆಂದರೆ ಈ ಸಮಯದಲ್ಲಿ ಹಲವರು ಮಾಂಸ ಸೇರಿದಂತೆ ಮೊಟ್ಟೆಯನ್ನು ಸೇವಿಸೋ ದಿಲ್ಲ ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮೊಟ್ಟೆ ಬೆಲೆ ಕಡಿಮೆಯಾಗುತ್ತದೆ. ಈ ತಿಂಗಳಿ ನಲ್ಲಿ ತರಕಾರಿ ಬೆಲೆ ಏರಿಕೆಯೊಂದಿಗೆ ಮೊಟ್ಟೆ ಬೆಲೆಯೂ ಹೆಚ್ಚಳವಾಗುತ್ತಿದೆ. ಇನ್ನೂ ಸಾಲು ಸಾಲು ಹಬ್ಬಗಳು ಮುಗಿದಿದ್ದರೊ ತರಕಾರಿ ಬೆಲೆ ಏರಿಕೆಯಾಗಿವೆ ಎಂದು ಮಾರು ಕಟ್ಟೆ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಮತ್ತೆ ಏರಿಕೆಯಾಗುತ್ತಾ ಮೊಟ್ಟೆ ಬೆಲೆ:
ಕೆಲವೇ ದಿನಗಳಲ್ಲು ಹೊಸವರ್ಷ, ಕ್ರಿಸ್ಮಸ್ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಕೇಕ್‌ಗಳನ್ನು ಹೆಚ್ಚು ಬಳಕೆಗೆ ಬರುವ ಹಿನ್ನೆಲೆ ಮೊಟ್ಟೆ ಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗ ಬಹುದು ಎನ್ನಲಾಗಿದೆ.
ಮೊಟ್ಟೆ ಬೇಡಿಕೆ ಕಾರಣ: ಅಂಗನವಾಡಿ, ಶಾಳೆಗಳಿಗೆ ಮೊಟ್ಟೆ ಬಳಕೆ, ಈ ತಿಂಗಳಲ್ಲಿ ಮದುವೆ ಸೀಸನ್ ಆರಂಭವಾಗುವುದರಿಂದ ಬೇಡಿಕೆ ನಿರೀಕ್ಷೆಯಿದೆ. ಇನ್ನು ಚಳಿಗಾಲದಲ್ಲಿ ಯುವಕರು, ಮಹಿಳೆಯರು, ಮಕ್ಕಳು ಬೇಡಿಕೆ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. ಅದೇ ಕಾರಣದಿಂದ ಮೊಟ್ಟೆ ಬೆಲೆ ಸಾಮಾನ್ಯಕ್ಕಿಂತಲೂ ಏರಿಕೆ ಕಂಡಿದೆ ಎಂದು ಮೊಟ್ಟೆ ಮಾರಾಟಗಾರಾದ ತ್ರಿಲೋಕ್ ಹೇಳುತ್ತಾರೆ ಆದರೆ ಪ್ರತೀದಿನ ಒಂದೊಂದು ಮೊಟ್ಟೆ ತಿನ್ನುತ್ತಿದ್ದವರು ಇದೀಗ ಬೆಲೆ ಏರಿಕೆಯಿಂದ ಹಿಂದೆ ಮುಂದೆ ನೋಡುವಂತಾಗಿದೆ.
ಬೆಲೆ ಏರಿಕೆಗೆ ಕಾರಣ: ಫಾರಂ ಕೋಳಿಗಳಿಗೆ ಆಹಾರವಾಗಿ ಮೆಕ್ಕೆ ಜೋಳಗಳನ್ನು ನೀಡಲಾಗುತ್ತದೆ ಆದ್ರೆ ಇದೀಗ ಜೋಳದ ದರ ಬಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ವಿದೇಸಕ್ಕೆ ಹೆಚ್ಚು ರಫ್ತುಗುತ್ತಿದೆ. ಈ ಪರಿಣಾಮ ಕೋಳಿ ಆಹಾರದಲ್ಲೂ ಭಾರೀ ಏರಿಕೆಯಾಗಿದೆ. ಇದರಿಂದ ಅದೆಷ್ಟೋ ಫಾರ್ಮ್‌ಗಳು ಸಹ ನಷ್ಟದಿಂದ ಮುಚ್ಚಿವೆ ಎಂದು ವರದಿಯಾಗಿದೆ. ಇದೇ ಕಾರಣದಿಂದ ಇಂದು ಮೊಟ್ಟೆ ಉತ್ಪಾದನಾ ಪ್ರಮಾಣ ಇಳಿಕೆ ಯಾಗಿದ್ದು, ಪೂರೈಕೆಯಲ್ಲೂ ವಿಳಂಬವಾಗುತ್ತಿದೆ. ಅದೇ ಕಾರಣದಿಂದಲೂ ಮೊಟ್ಟೆ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.
ಇಳಿಕೆಯಾಗುತ್ತಾ ಮೊಟ್ಟೆ ಬೆಲೆ?
ಭಾರತದಲ್ಲಿ ಒಟ್ಟು ಮೊಟ್ಟೆ ಉತ್ಪಾದನೆಯಲ್ಲಿ ತಮಿಳುನಾದಿನಿಂದ ಶೇ.20% ರಷ್ಟು ಅಂದರೆ ದಿನಕ್ಕೆ 40 ಲಕ್ಷ ಮೊಟ್ಟೆ ಪೂರೈಕೆ ಮಾಡುತ್ತಿದ್ದು, ಪ್ರತಿದನ ಎರಡೂವರೆ ಕೋಟಿ ಗೂ ಹೆಚ್ಚು ಮೊಟ್ಟೆಗಳನ್ನು ಉತ್ಪಾದಿಸುತ್ತದೆ.ಕರ್ನಾಟಕದಲ್ಲಿ ಇದರಲ್ಲಿ 3 ಕೋಟಿ ಬೇಡಿಕೆ ಇದೆ ಎನ್ನಲಾಗಿದೆ.
ಆಂಧ್ರಪ್ರದೇಶ, ಕೇರಳ ಮಹಾರಾಷ್ಟ್ರಕ್ಕೆ ದಿನಾಂಪ್ರತಿ 40 ಲಕ್ಷ ರವನೆಯಗುತ್ತದೆ ಎನ್ನುತ್ತಾರೆ ಸಗಟು ಮೊಟ್ಟೆ ಪೂರೈಕೆದಾರ ರೆಡ್ಡಿ. ಇನ್ನು ಮುಂಬರುವ ತಿಂಗಳುಗಳಲ್ಲಿ ಉತ್ಪಾದನಾ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆ ಬೆಲೆಯಲ್ಲಿ ಕುಸಿತವಾಗ ಬಹುದು ಎಂದು ತಜ್ಞರು ಹೇಳಿದ್ದಾರೆ.
*
ಮೊಟ್ಟೆ ಬೆಲೆ ಬಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಗ್ರಾಹಕರು ಖರೀದಿ ಕಡಿಮೆ ಮಾಡುತ್ತಿದ್ದಾರೆ 12 ಮೊಟ್ಟೆ ಖರೀದಿಸುವ ಗ್ರಾಹಕರು 6 ಮೊಟ್ಟೆ ಸಾಕು ಎನ್ನುತ್ತಿದ್ದಾರೆ ಅದ್ರಲ್ಲೂ ಬಡ ಗ್ರಾಕರು ಮೊಟ್ಟೆ ಬೆಲೆ ಕೇಳಿ ಮೌನಕ್ಕೆ ಜಾರುತ್ತಾರೆ ಹೀಗಾಗಿ ವ್ಯಾಪಾರ ಕಡಿಮೆಯಾಗಿದೆ.
ಎನ್ನುತ್ತಾರೆ ಚಿಲ್ಲರೆ ಮೊಟ್ಟೆ ವ್ಯಾಪಾರಿ ತ್ರಿಲೋಕ್. ಬೆಂಗಳೂರು,
ವಿದೇಶಕ್ಕೆ ಮೊಟ್ಟೆ ರಫ್ತು ಆಗುತ್ತಿದೆ, ಉತ್ಪಾದನೆ ಕಡಿಮೆಯಾಗಿದೆ, ಜತೆಗೆ ಉತ್ತರಭಾರತದಲ್ಲಿ ಚಳಿ ಜಾಸ್ತಿ ಇರುವುದರಿಂದ ಮೊಟ್ಟೆಗೆ ಬೇಡಿಕೆ ಹೆಚ್ಚಿದೆ. ಕೇರಳ ಅಂಧ್ರಪ್ರದೇಶಕ್ಕೂ ಬೇಡಿಕೆ ಇದೆ ಇವೆಲ್ಲ ಕಾರಣಕ್ಕೆ ಮೊಟ್ಟೆ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಸಗಟು ಮೊಟ್ಟೆ ಪೂರೈಕೆ ದಾರರು.