ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mahakutumba: ಗೋಳಿಕೈ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ

ಒಬ್ಬ ವ್ಯಕ್ತಿಗೆ ಮರಿ ಮಗ ಹುಟ್ಟಿ, ಆ ಮಗುವಿಗೆ ನಾಮಕರಣವಾದ ನಂತರ ಈ ಆಚರಣೆ ನಡೆಯುತ್ತದೆ. ಅಂದರೆ, ಒಬ್ಬ ವ್ಯಕ್ತಿ ತನ್ನ ಮಗನ ಮಗನನ್ನು ನೋಡಿದಾಗ ಇದು ನಡೆಯುತ್ತದೆ. ಸಾಮಾನ್ಯವಾಗಿ 90 ರಿಂದ 100 ವರ್ಷಗಳ ಸುದೀರ್ಘ ಆಯುಷ್ಯವನ್ನು ಹೊಂದಿದವರಿಗೆ ಈ ಗೌರವ ಸಲ್ಲಿಕೆಯಾಗುತ್ತದೆ.

ಗೋಳಿಕೈ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ

-

Ashok Nayak
Ashok Nayak Jan 25, 2026 2:18 PM

ವಿನುತಾ ಹೆಗಡೆ, ಶಿರಸಿ

ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿ 225 ಸದಸ್ಯರ ವಂಶವೃಕ್ಷದ ʼಮಹಾಕುಟುಂಬʼ

ಕನಕಾಭಿಷೇಕ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಅಪರೂಪದ ಧಾರ್ಮಿಕ ವಿಧಿಯಾಗಿದೆ. ಇದನ್ನು ಸಾಮಾನ್ಯವಾಗಿ ಸುವರ್ಣಾಭಿಷೇಕ ಎಂದೂ ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಂಶಸ್ಥರನ್ನು (ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು) ನೋಡಿದಾಗ ಅಥವಾ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ಈ ಸಂಭ್ರಮವನ್ನು ಆಚರಿಸಲಾಗುತ್ತದೆ.

ನಾಲ್ಕನೇ ತಲೆಮಾರಿನ ದರ್ಶನ

ಒಬ್ಬ ವ್ಯಕ್ತಿಗೆ ಮರಿ ಮಗ ಹುಟ್ಟಿ, ಆ ಮಗುವಿಗೆ ನಾಮಕರಣವಾದ ನಂತರ ಈ ಆಚರಣೆ ನಡೆಯುತ್ತದೆ. ಅಂದರೆ, ಒಬ್ಬ ವ್ಯಕ್ತಿ ತನ್ನ ಮಗನ ಮಗನನ್ನು ನೋಡಿದಾಗ ಇದು ನಡೆಯುತ್ತದೆ. ಸಾಮಾನ್ಯವಾಗಿ 90 ರಿಂದ 100 ವರ್ಷಗಳ ಸುದೀರ್ಘ ಆಯುಷ್ಯವನ್ನು ಹೊಂದಿದವರಿಗೆ ಈ ಗೌರವ ಸಲ್ಲಿಕೆಯಾಗುತ್ತದೆ.

ವಂಶದ ಅಭಿವೃದ್ಧಿ

ಒಬ್ಬ ವ್ಯಕ್ತಿಯು ತನ್ನ ವಂಶದ ನಾಲ್ಕು ತಲೆಮಾರುಗಳನ್ನು ನೋಡುವುದು ಪೂರ್ವಜರ ಆಶೀರ್ವಾದ ಮತ್ತು ಪುಣ್ಯದ ಫಲ ಎಂದು ನಂಬಲಾಗಿದೆ.

ಧನ್ಯತಾ ಭಾವ

ಇದು ಜೀವನದ ಪೂರ್ಣತೆಯನ್ನು ಸೂಚಿಸುತ್ತದೆ. ಸಂಸಾರ ಸಾಗರದಲ್ಲಿ ತನ್ನ ಜವಾಬ್ದಾರಿ ಗಳನ್ನೆಲ್ಲ ಮುಗಿಸಿ, ಸುಖ- ಸಂತೋಷದಿಂದ ಕಾಲ ಕಳೆಯುತ್ತಿರುವ ಹಿರಿಯರಿಗೆ ಸಲ್ಲಿಸುವ ಗೌರವವಿದು.

ಇದನ್ನೂ ಓದಿ: Voice of Uttara Kannada, 'Lokadhvani': ಉತ್ತರ ಕನ್ನಡದ ಧ್ವನಿ ʼಲೋಕಧ್ವನಿʼ

ಆರೋಗ್ಯದ ಸಂಕೇತ

ಇಷ್ಟು ದೀರ್ಘಕಾಲ ಆರೋಗ್ಯವಾಗಿ ಬದುಕುವುದು ಶಿಸ್ತಿನ ಜೀವನಕ್ಕೆ ಸಾಕ್ಷಿಯಾಗಿರುತ್ತದೆ.

ವಿಧಿವಿಧಾನ ಹೇಗಿರುತ್ತದೆ?: ಹಿರಿಯ ದಂಪತಿಗಳನ್ನು ಪೀಠದ ಮೇಲೆ ಕುಳ್ಳಿರಿಸಿ, ವೇದಘೋಷಗಳ ನಡುವೆ ಚಿನ್ನದ ನಾಣ್ಯಗಳಿಂದ ಅಥವಾ ಚಿನ್ನದ ನೀರನ್ನು (ಚಿನ್ನದ ನಾಣ್ಯ ಸ್ಪರ್ಶಿಸಿದ ನೀರು) ಅವರ ತಲೆಯ ಮೇಲೆ ಅಭಿಷೇಕ ಮಾಡಲಾಗುತ್ತದೆ.

ದಾನ ಧರ್ಮ

ಈ ಸಂದರ್ಭದಲ್ಲಿ ಬಡವರಿಗೆ ಮತ್ತು ಬ್ರಾಹ್ಮಣರಿಗೆ ಅನ್ನ ದಾನ ಹಾಗೂ ವಸ್ತ್ರ ದಾನ ಮಾಡುವುದು ವಾಡಿಕೆ.

ಆಶೀರ್ವಾದ

ಕುಟುಂಬದ ಎಲ್ಲಾ ಕಿರಿಯ ಸದಸ್ಯರು ಹಿರಿಯರ ಪಾದಪೂಜೆ ಮಾಡಿ ಆಶೀರ್ವಾದ ಪಡೆ ಯುತ್ತಾರೆ. ಕನಕಾಭಿಷೇಕ ಕೇವಲ ಒಂದು ಆಚರಣೆಯಲ್ಲ, ಅದು ಹಿರಿಯರ ಮೇಲಿರುವ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಸುಂದರ ಕ್ಷಣ. ಇಂಥ ಒಂದು ಅಪರೂಪದ ಕ್ಷಣ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ‘ಗೋಳಿಕೈ ‘ ಎಂಬ ಪುಟ್ಟ ಗ್ರಾಮದಲ್ಲಿ ನಾಳೆ ಅಂದರೆ ಜ.26ರ ಸೋಮವಾರ ನಡೆಯಲಿದೆ.

Screenshot_12  ಋ

ಬಡತನದಿಂದ ಬೆಳಕಿನತ್ತ

ಶಿವರಾಮ ಹೆಗಡೆಯವರ ಬದುಕು ಸುಖ ಸೌಕರ್ಯಗಳಿಂದ ಆರಂಭವಾಗಲಿಲ್ಲ. ಹುಟ್ಟಿ ನಿಂದಲೇ ಬಡತನವನ್ನು ಕಂಡು ಬೆಳೆದ ಅವರು, ತಮ್ಮ ಮಕ್ಕಳು ಅದೇ ಹಾದಿ ಹಿಡಿಯ ಬಾರದೆಂಬ ದೃಢಸಂಕಲ್ಪವನ್ನು ಜೀವನದ ಧ್ಯೇಯವನ್ನಾಗಿಸಿಕೊಂಡರು. ಶ್ರಮ, ಶಿಸ್ತು ಮತ್ತು ಸತ್ಯನಿಷ್ಠೆಯನ್ನೇ ಬಲವಾಗಿ ಹಿಡಿದುಕೊಂಡು, ಉತ್ತಮ ಕೃಷಿಕರಾಗುವುದರ ಜೊತೆಗೆ, ಮಕ್ಕಳಿಗೆ ಒಳ್ಳೆಯ ತಂದೆಯಾಗಿಯೂ ಅವರು ಬೆಳೆದರು.

“ನಾಲ್ಕು ಜನ ಹೌದು ಅನ್ನುವಂತೆ ಬದುಕಬೇಕು" ಎಂಬ ಮೌಲ್ಯವನ್ನು ತಮ್ಮ ನಡೆನುಡಿ ಯಲ್ಲಿ ತೋರಿಸಿದ ದಿವಂಗತ ಶಿವರಾಮ ಹೆಗಡೆ ಮತ್ತು ಗಣಪಮ್ಮ, ಮಕ್ಕಳನ್ನೆಲ್ಲಾ ಸಮಾಜಕ್ಕೆ ಉಪಯುಕ್ತರಾಗುವಂತೆ ಸಜ್ಜುಗೊಳಿಸಿದರು. ಅವರ ಬದುಕಿನ ಫಲವೇ ಇಂದು ಅವರ ವಂಶದ ಸಂತತಿಯು ಸಾಧನೆಗಳಾಗಿ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಬೆಳಗುತ್ತಿದೆ.

ವಿದ್ಯಾರ್ಜನೆಗಾಗಿ ಕಷ್ಟ ನಷ್ಟಗಳನ್ನು ಅನುಭವಿಸಿ ಸಾಧನೆಯ ಶಿಖರ ಏರಿದವರಲ್ಲಿ ದಿವಂಗತ ಕೆ.ಎಸ್.ಹೆಗಡೆ ಮೊದಲಿಗರು. ಸಾಗರದಲ್ಲಿ ಹಿರಿಯ ನ್ಯಾಯವಾದಿಗಳಾಗಿ ಸಮಾಜದಲ್ಲಿ ಗಳಿಸಿದ ಗೌರವ ಅವರಿಗೆ ಸಲ್ಲುತ್ತದೆ. ಉಳಿದ ಸಹೋದರರಿಗೆ ಅವರು ಆದರ್ಶಪ್ರಾಯರು. ಸ್ವಪ್ರಯತ್ನದ ಮೂಲಕ ಮುಂದೆ ಬಂದವರಲ್ಲಿ ಎರಡನೆಯವರು ಸುಬ್ರಾಯ.

ಕಾಶೀನಾಥರ ಮಾರ್ಗದರ್ಶನದಲ್ಲಿ ದಾವಣಗೆರೆಗೆ ಬಂದು, ವ್ಯಾಪಾರ ವೃತ್ತಿಯಲ್ಲಿ ಸಾಧನೆ ಮಾಡಿದವರು ಮೋಹನ. ಮೋಹನನ ಆಶ್ರಯದಿಂದಲೇ ವಿಠಲನೂ ಕೂಡ ಸ್ವಾವಲಂಬಿ ಯಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.

ಮೊಮ್ಮಕ್ಕಳ ಇನ್ನೊಂದು ಶಿಖರ

ಈ ಕುಟುಂಬದ ಮೊಮ್ಮಕ್ಕಳ ಸಾಧನೆಗಳು ಮತ್ತೊಂದು ಅಧ್ಯಾಯವೇ ಸರಿ. ಕುಟುಂಬದಲ್ಲಿ ಮೊದಲ ಚಿನ್ನದ ಪದಕ ಗಳಿಸಿದ ಕೀರ್ತಿ ಕಾಶೀನಾಥರ ಮಗಳು ಶ್ರೀಲಕ್ಷ್ಮಿ ಅವರಿಗೆ ಸಲ್ಲುತ್ತದೆ. ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕ ಪಡೆದ ಅವಳ ಪತಿ ವಿಷ್ಣು ಸಭಾಹಿತರು, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾ ಧೀಶರಾಗಿದ್ದರು ಎನ್ನುವುದು ಕುಟುಂಬದ ಹೆಮ್ಮೆಯ ಸಂಗತಿ. ಹಿರಿಯ ಮಗ ಮಂಜು ನಾಥನ ಮಗ ಅರುಣ, ಚಿಕ್ಕ ವಯಸ್ಸಿನಲ್ಲಿಯೇ ಹೆಸರು ಮಾಡಿದ ನ್ಯಾಯವಾದಿ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಮೊಮ್ಮಗಳು ಮೇಘಾ ಸುಬ್ರಾಯನ ಮಗಳು ಬೆಂಗಳೂರು ವಿಶ್ವವಿದ್ಯಾಲಯದ ಅಂತಿಮ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ನಾಲ್ಕು ಚಿನ್ನದ ಪದಕ ಪಡೆದರು. ಕುಟುಂಬದ ಹಲವರು ಪ್ರಸಿದ್ಧಿ ಪಡೆದಿರುವುದು, ಸಾಧನೆ ಮಾಡಿರುವುದು ಗಣಪಮ್ಮ ಮತ್ತು ಶಿವರಾಮ ಹೆಗಡೆಯವರ ಬದುಕಿನ ಸಾರ್ಥಕತೆಯ ಜೀವಂತ ಸಾಕ್ಷಿ.

ದಂಪತಿಗೆ ಒಂದು ಡಜನ್ ಮಕ್ಕಳು !

ದಿವಂಗತ ಗೋಳಿಕೈ ಶಿವರಾಮ ಹೆಗಡೆ ಮತ್ತು ದಿವಂಗತ ಗಣಪಮ್ಮ ದಂಪತಿಗೆ 12 ಮಕ್ಕಳು. ಮಂಜುನಾಥ, ಕಾಶೀನಾಥ, ಗಣಪತಿ, ಅಣ್ಣಪ್ಪ, ರಾಮಚಂದ್ರ, ಸುಬ್ರಾಯ, ಶಿವಾನಂದ, ಸರ್ವೇಶ್ವರಿ, ಗುರುನಾಥ, ಮೋಹನ, ವಿಠ್ಠಲ, ಸವಿತಾ. ಗಂಡು ಮಕ್ಕಳು, ಮೊಮ್ಮಕ್ಕಳು ಸೇರಿ 75ಕ್ಕೂ ಹೆಚ್ಚು ಜನರ ಕುಟುಂಬ. ಗಂಡು ಮಕ್ಕಳು, ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದರೆ 225ಕ್ಕೂ ಹೆಚ್ಚು ಜನ.

ನಾಲ್ಕು ಜನ ಹೌದು ಅನ್ನುವಂತೆ ಬದುಕಬೇಕು

“ನಾಲ್ಕು ಜನ ಹೌದು ಅನ್ನುವಂತೆ ಬದುಕಬೇಕು" ಎಂಬ ಮೌಲ್ಯವನ್ನು ತಮ್ಮ ನಡೆನುಡಿ ಯಲ್ಲಿ ತೋರಿಸಿದ ದಿವಂಗತ ಶಿವರಾಮ ಹೆಗಡೆ ಮತ್ತು ಗಣಪಮ್ಮ, ಮಕ್ಕಳನ್ನೆಲ್ಲಾ ಸಮಾಜಕ್ಕೆ ಉಪಯುಕ್ತರಾಗುವಂತೆ ಸಜ್ಜುಗೊಳಿಸಿದರು. ಅವರ ಬದುಕಿನ ಫಲವೇ ಇಂದು ಅವರ ವಂಶದ ಸಂತತಿಯು ಪ್ರಜ್ವಲಿಸುವ ಸಾಧನೆಗಳ ದೀಪಗಳಾಗಿ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಬೆಳಗುತ್ತಿದೆ.

ಗಣಪತಿ ಹೆಗಡೆಯವರಿಗೆ 91ರ ಹರೆಯ..!

ಒಟ್ಟು 12 ಜನ ಮಕ್ಕಳಲ್ಲಿ ಮೂರನೇಯವರಾದ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ ಸೋಮವಾರ ನಡೆಯಲಿದೆ. ಅವರ ಪ್ರಾಥಮಿಕ ಶಿಕ್ಷಣ ಕ್ಯಾದಗಿ ಸಮೀಪದ ಐನಕೈನಲ್ಲಿ. ಆರಂಭದಿಂದಲೂ ದುಡಿಮೆಣಿಕೃಷಿಯೇ ಜೀವನ. ಎರಡು ವರ್ಷ ಸಾಗರದ ಕಾಸ್ಪಾಡಿ ಯಲ್ಲಿ, ನಂತರ ಅತ್ತಿಕೊಪ್ಪದಲ್ಲಿ 15ಕ್ಕೂ ಹೆಚ್ಚು ವರ್ಷಗಳ ಕಾಲ ತೋಟ - ಕೃಷಿ ಕಾಯಕ. ತದ ನಂತರ ಗೋಳಿಕೈನಲ್ಲಿ ನೆಲೆಸಿದ್ದಾರೆ. ಇವರಿಗೀಗ 91ರ ಹರೆಯ..