ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

QR code for water bill payment: ಪುರಸಭೆಯ ನೀರಿನ ಕರ ಪಾವತಿಗೆ ಕ್ಯೂಆರ್‌ ಕೋಡ್

ಫೆ.1ರಿಂದ ಗ್ರಾಹಕರಿಗೆ ಕ್ಯೂಆರ್‌ಕೋಡ್ ಸೌಲಭ್ಯವನ್ನು ಒದಗಿಸಿದ್ದು, ಈಗಾಗಲೇ ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ, ಅಷ್ಟೇ ಅಲ್ಲದೇ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಸ್ವತಃ ತಾವೇ ಮನೆ ಮನೆಗೆ ತೆರಳಿ ಕ್ಯೂಆರ್‌ಕೋಡ್ ಸೌಲಭ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಪುರಸಭೆಯ ನೀರಿನ ಕರ ಪಾವತಿಗೆ ಕ್ಯೂಆರ್‌ ಕೋಡ್

-

Ashok Nayak
Ashok Nayak Feb 8, 2026 9:14 AM

ಮಂಜು ಕಲಾಲ

ಬಸವನಬಾಗೇವಾಡಿ ಕ್ಷಣದಲ್ಲೇ ನೀರಿನ ತೆರಿಗೆ ಪಾವತಿ

ಶಹಬ್ಬಾಷ್ ಎಂದ ಪಟ್ಟಣದ ಜನತೆ

ವಿಜಯಪುರ/ಬಸವನಬಾಗೇವಾಡಿ: ನೀರಿನ ಕರ ಪಾವತಿಸುವ ಗ್ರಾಹಕರಿಗೆ ಪುರಸಭೆಯಿಂದ ಕ್ಯೂಆರ್‌ಕೋಡ್ ಸೌಲಭ್ಯವನ್ನು ಒದಗಿಸುವ ಮೂಲಕ ನೀರಿನ ಪಾವತಿಯನ್ನು ಸರಳಗೊಳಿಸಿದೆ.

ಹೌದು !

ಗ್ರಾಹಕರು ನೀರಿನ ಕರ ಪಾವತಿಸಬೇಕಾದರೆ ಪುರಸಭೆಯಿಂದ ಚಲನ್ ಪಡೆದು ಗ್ರಾಮೀಣ ಬ್ಯಾಂಕ್‌ಗೆ ಹೋಗಿ ನೀರಿನ ಕರ ಪಾವತಿಸುತ್ತಿದ್ದರು. ನಂತರ ಬ್ಯಾಂಕಿನಿಂದ ಪಡೆದ ಒಂದು ಚಲನನ್ನು ಪುರಸಭೆ ಸಿಬ್ಬಂದಿಗೆ ಕೊಟ್ಟಾಗ ನೀರಿನ ಕರ ಕಡಿತ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರು ನೀರಿನ ಕರ ಪಾವತಿಸಲು ಹರ ಸಾಹಸ ಪಡುವಂತಾಗಿತ್ತು ಅಲ್ಲದೇ ನೀರಿನ ಕರ ಪಾವತಿಸಬೇಕಾದರೆ ದಿನ ಪೂರ್ತಿ ಸಮಯ ವ್ಯರ್ಥವಾಗುತ್ತಿತ್ತು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದರು ಸದ್ಯ ಪುರಸಭೆಯಿಂದ ಕ್ಯೊಆರ್‌ಕೋಡ್ ಸೌಲಭ್ಯ ಒದಗಿಸಲಾಗಿದ್ದು ಕ್ಷಣದಲ್ಲೇ ನೀರಿನ ಕರ ಪಾವತಿಸ ಬಹುದಾಗಿದೆ.

ಇದನ್ನೂ ಓದಿ: Vijayapura News: ವಿಜಯಪುರ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ: ಎಂ.ಬಿ. ಪಾಟೀಲ್‌

ಫೆ.1ರಿಂದ ಗ್ರಾಹಕರಿಗೆ ಕ್ಯೂಆರ್‌ಕೋಡ್ ಸೌಲಭ್ಯವನ್ನು ಒದಗಿಸಿದ್ದು, ಈಗಾಗಲೇ ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ, ಅಷ್ಟೇ ಅಲ್ಲದೇ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಸ್ವತಃ ತಾವೇ ಮನೆ ಮನೆಗೆ ತೆರಳಿ ಕ್ಯೂಆರ್‌ಕೋಡ್ ಸೌಲಭ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

Screenshot_12

ನಲ್ಲಿ ಮೀಟರ್‌ಬಿಲ್ ಕೊಡುವ ಸಂದರ್ಭದಲ್ಲಿ ಗ್ರಾಹಕರು ಕ್ಯೂಆರ್‌ಕೋಡ್ ಸಹಾಯದಿಂದ ಕ್ಷಣದಲ್ಲೇ ಬಿಲ್ ಪಾವತಿಸಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಂದಿನ ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿರುವ ಅಧಿಕಾರಿ ಗಳ ಕಾರ್ಯಕ್ಕೆ ಪಟ್ಟಣದ ಜನತೆ ಶಾಬಾಷ್ ಎನ್ನುತ್ತಿದ್ದಾರೆ.

*

ಕ್ಯೂಆರ್‌ಕೊಡ್ ಸೌಲಭ್ಯದಿಂದ 40% ಜನರು ಕ್ಯೂಆರ್‌ಕೊಡ್ ಮೂಲಕವೇ ನೀರಿನ ಕರ ಪಾವತಿಸುತ್ತಿದ್ದಾರೆ, ಈಗಾಗಲೇ ಈ ಕುರಿತು ಮುಖ್ಯಧಿಕಾರಿಗಳು ಸೇರಿದಂತೆ ಕಂದಾಯ ನಿರೀಕ್ಷಕರು ಮನೆ ಮನೆಗೆ ತೆರಳಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಅಲ್ಲದೆ ಪುರಸಭೆಯ ವಾಹನದಲ್ಲಿ ಮೈಕ್ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ, ಈ ಸೌಲಭ್ಯದಿಂದ ಸಾರ್ವಜಕರ ಸಮಯ ಉಳಿಯುವು ದರೊಂದಿಗೆ ಪುರಸಭೆಯ ಆದಾಯ ಹೆಚ್ಚಲಿದೆ.

-ಶಬ್ಬಿರ್ ರೇವೂರಕರ, ಕಂದಾಯ ನಿರೀಕ್ಷಕ

ನೀರಿನ ಕರ ಪಾವತಿ ಅನುಕೂಲಕ್ಕಾಗಿ ಫೆ.1ರಿಂದ ಕ್ಯೂಆರ್‌ಕೋಡ್ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಪುರಸಭೆಗೆ ಹಾಗೂ ಬ್ಯಾಂಕ್‌ಗೆ ಆಲೆಯುವುದು ತಪ್ಪಲಿದೆ ಅಲ್ಲದೇ ಕ್ಯೊ ಆರ್‌ಕೋಡ್ ಸೌಲಭ್ಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪ್ರತಿ ದಿನ ಅಂದಾಜು 70 ಸಾವಿರಕ್ಕೂ ಅಽಕ ಕರ ವಸೂಲಿಯಾಗುತ್ತಿದೆ, ಇನ್ನೂ ಇದು ಡೈನಾಮಿಕ್ ಕ್ಯೂಆರ್‌ಕೋಡ್ ಇರುವುದರಿಂದ ಇದರಲ್ಲಿ ಯಾವುದೇ ರೀತಿಯ ವಂಚನೆ ಮೋಸ ಆಗುವುದಿಲ್ಲ, ಪಟ್ಟಣದ ಜನತೆ ಇದರ ಸದುಪಯೋಗವನ್ನು

ಪಡೆದುಕೊಳ್ಳಬೇಕು.

-ವಿದ್ಯಾಧರ ಕಲಾದಗಿ, ಪುರಸಭೆ ಮುಖ್ಯಾಧಿಕಾರಿ