ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮರೆಯಾದ ಸರಿ-ತಪ್ಪುಗಳ ವ್ಯತ್ಯಾಸ !

ಮನುಷ್ಯನ ವರ್ತನೆಯಲ್ಲಿ ಇಂತಹ ತೀವ್ರ ದಲಾವಣೆ ಉಂಟಾಗಲು ಕೇವಲ ಒಂದು ಕಾರಣ ವಿರುವುದಿಲ್ಲ, ಬದಲಾಗಿ ಹಲವು ಅಂಶಗಳ ಸಂಮಿಲನವಿರುತ್ತದೆ. ಯಲ್ಲಾಪುರದ ಪ್ರಕರಣದಲ್ಲಿ ಕಂಡಂತೆ, "ನನಗೆ ಸಿಗದ ವ್ಯಕ್ತಿ ಬೇರೆಯವರಿಗೂ ಸಿಗಬಾರದು" ಎಂಬ ಸ್ವಾರ್ಥ ಮತ್ತು ಅತಿಕ್ರಮಣ ಮನೋಭಾವ ಕೊಲೆಗೆ ಪ್ರೇರೇಪಿಸುತ್ತದೆ.

ವಿನುತಾ ಹೆಗಡೆ ಶಿರಸಿ

ಸಿನಿಮಾ, ಸಾಮಾಜಿಕ ಜಾಲತಾಣಗಳಲ್ಲಿ ಹಿಂಸೆಯ ವೈಭವೀಕರಣದಿಂದ ಜನರ ಮನಸ್ಸಿನ ಮೇಲೆ ಪ್ರಭಾವ

ನಾವಿಂದು ಎಂತ ಸಮಾಜದ ಮಧ್ಯೆ ಇದ್ದೇವೆ ಎಂದು ಯೋಚಿಸಿದರೆ ಭಯವಾಗುತ್ತಿದೆ. ಮನೆಯಿಂದಾಚೆ ಕೆಲಸಕ್ಕೆ ಹೋದರೆ ವಾಪಸ್ಸು ಬಂದಮೇಲಷ್ಟೇ ಖಚಿತ ಎಂಬಂತಾಗಿದೆ. ಕೊಲೆ ಮಾಡುವಂತ ಕಠೋರ ಮನಸ್ಥಿತಿಯ ಗಂಡಸರಿಗೆ ಏನನ್ನಬೇಕು.

ಮನುಷ್ಯನ ವರ್ತನೆಯಲ್ಲಿ ಇಂತಹ ತೀವ್ರ ದಲಾವಣೆ ಉಂಟಾಗಲು ಕೇವಲ ಒಂದು ಕಾರಣವಿರುವುದಿಲ್ಲ, ಬದಲಾಗಿ ಹಲವು ಅಂಶಗಳ ಸಂಮಿಲನವಿರುತ್ತದೆ. ಯಲ್ಲಾಪುರದ ಪ್ರಕರಣದಲ್ಲಿ ಕಂಡಂತೆ, "ನನಗೆ ಸಿಗದ ವ್ಯಕ್ತಿ ಬೇರೆಯವರಿಗೂ ಸಿಗಬಾರದು" ಎಂಬ ಸ್ವಾರ್ಥ ಮತ್ತು ಅತಿಕ್ರಮಣ ಮನೋಭಾವ ಕೊಲೆಗೆ ಪ್ರೇರೇಪಿಸುತ್ತದೆ.

ಇದನ್ನು ಪ್ರೀತಿಯೆಂದು ತಪ್ಪಾಗಿ ಭಾವಿಸುವ ಯುವಜನತೆ, ತಿರಸ್ಕಾರವನ್ನು ಸಹಿಸಿ ಕೊಳ್ಳುವ ಮಾನಸಿಕ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Dark Circles: ಕಣ್ಣಿನ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆಮದ್ದು

ನೈತಿಕ ಮೌಲ್ಯಗಳ ಕುಸಿತ: ಸಮಾಜದಲ್ಲಿ ಸರಿ-ತಪ್ಪುಗಳ ನಡುವಿನ ವ್ಯತ್ಯಾಸ ಮರೆಯಾಗುತ್ತಿದೆ. ಸಿನಿಮಾಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಿಂಸೆಯನ್ನು ವೈಭವೀಕರಿಸುವುದು ಜನರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತಿದೆ.

ಸಹನೆ ಮತ್ತು ತಾಳ್ಮೆಯ ಕೊರತೆ: ಕ್ಷಣಿಕ ಆವೇಶದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನವನ್ನೇ ಬಲಿ ಪಡೆಯುತ್ತವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಸಣ್ಣ ವಿರೋಧವನ್ನೂ ಸಹಿಸಿಕೊಳ್ಳದಷ್ಟು ಅಸಹನೆ ಯನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಮಾದಕ ದ್ರವ್ಯಗಳ ಪ್ರಭಾವ: ಉತ್ತರ ಕನ್ನಡದ ಗಡಿ ಭಾಗಗಳಲ್ಲಿ ಮತ್ತು ಪ್ರವಾಸಿ ತಾಣಗಳಲ್ಲಿ ಮಾದಕ ದ್ರವ್ಯಗಳ ಬಳಕೆ ಹೆಚ್ಚುತ್ತಿರುವುದು ಯುವಜನತೆಯ ವಿವೇಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತಿದೆ.

ಈ ಪರಿಸ್ಥಿತಿಗೆ ಪರಿಹಾರಗಳೇನು?: ಸಮಾಜದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಕೇವಲ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಇದಕ್ಕೆ ಬಹುಮುಖಿ ಪ್ರಯತ್ನಗಳ ಅಗತ್ಯವಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ "ಲಿಂಗ ಸಮಾನತೆ" ಮತ್ತು "ತಿರಸ್ಕಾರವನ್ನು ಗೌರವಯುತವಾಗಿ ಸ್ವೀಕರಿಸುವುದು" ಹೇಗೆ ಎಂಬುದನ್ನು ಕಲಿಸಬೇಕು. ಪ್ರೀತಿ ಎಂದರೆ ಒತ್ತುವರಿ ಮಾಡುವುದಲ್ಲ ಎಂಬ ಅರಿವು ಮೂಡಿಸಬೇಕು.

ಮಾನಸಿಕ ಆರೋಗ್ಯ ಆಪ್ತಸಮಾಲೋಚನೆ: ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಆಪ್ತಸಮಾಲೋಚನಾ ಕೇಂದ್ರಗಳು ಇರಬೇಕು. ಮಾನಸಿಕ ಒತ್ತಡ ಅಥವಾ ಆವೇಶದಲ್ಲಿರುವ ವ್ಯಕ್ತಿಗಳು ಮಾರ್ಗ ದರ್ಶನ ಪಡೆಯುವಂತಾಗಬೇಕು.

ಕಟ್ಟುನಿಟ್ಟಾದ ಕಾನೂನು ಕ್ರಮ: ಅಪರಾಧ ಮಾಡಿದವರಿಗೆ ಶೀಘ್ರವಾಗಿ ಶಿಕ್ಷೆಯಾಗು ವಂತಿರಬೇಕು. ಕಾನೂನಿನ ಭಯವಿದ್ದಾಗ ಮಾತ್ರ ಇಂತಹ ಕೃತ್ಯಗಳು ಕಡಿಮೆಯಾಗುತ್ತವೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸುವುದು ಅನಿವಾರ್ಯ.

ಧರ್ಮ,ಜಾತಿ ಅಥವಾ ವೈಯಕ್ತಿಕ ಕಾರಣಗಳಿಗಾಗಿ ದ್ವೇಷ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಸಮಾಜದ ಹಿರಿಯರು ಮತ್ತು ಧಾರ್ಮಿಕ ಮುಖಂಡರು ಯುವಜನತೆಯನ್ನು ಶಾಂತಿಯ ಹಾದಿಯಲ್ಲಿ ಮುನ್ನಡೆಸಲು ಪ್ರೇರೇಪಿಸಬೇಕು.

ಶಾಂತಿಯುತ ಬದುಕು ನಮ್ಮೆಲ್ಲರ ಹಕ್ಕು. ಕೇವಲ ಆವೇಶಕ್ಕೆ ಬಲಿಯಾಗಿ ಇನ್ನೊಬ್ಬರ ಜೀವನ ಮತ್ತು ತನ್ನ ಜೀವನವನ್ನೂ ನಾಶಪಡಿಸಿಕೊಳ್ಳುವ ಈ ಮನೋಸ್ಥಿತಿಯನ್ನು ಕಿತ್ತೆಸೆಯಬೇಕಿದೆ. ಉತ್ತರ ಕನ್ನಡದ ಸಂಸ್ಕೃತಿಯೇ ಸೌಹಾರ್ದತೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮೆ--ಲ್ಲರ ಮೇಲಿದೆ.ಕಾರವಾರದ ನಗರ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಒಬ್ಬನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಹತ್ಯೆ ಪ್ರಕರಣ ಸುದ್ದಿಯಾಗಿತ್ತು.

ಹಳೆಯ ವೈಷಮ್ಯ ಮತ್ತು ಗ್ಯಾಂಗ್ಗಳ ನಡುವಿನ ಜಗಳ ಈ ಕೊಲೆಗೆ ಪ್ರಮುಖ ಕಾರಣ ವಾಗಿತ್ತು. ನಗರ ಪ್ರದೇಶದಲ್ಲಿ ನಡೆದ ಈ ದಾಳಿಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಕಾರವಾರ ತಾಲೂಕಿನ ಕದ್ರಾ ಭಾಗದಲ್ಲಿ ಪತಿಯೇ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದ ಘಟನೆ ನಡೆದಿತ್ತು.ಕೌಟುಂಬಿಕ ಕಲಹ ಮತ್ತು ಸಂಶಯ ಈ ಹತ್ಯೆಗೆ ಮೂಲ ಕಾರಣವಾಗಿತ್ತು.

ಮನೆಯಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿ ಈ ದುಂತ ಸಂಭವಿಸಿತ್ತು. ಶಿರಸಿಯ ಗ್ರಾಮೀಣ ಭಾಗದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿಯ ಕೊಲೆಯಾಗಿತ್ತು. ಆಸ್ತಿ ಹಂಚಿಕೆ ವಿಚಾರದಲ್ಲಿ ಸಂಬಂಧಿಕರ ನಡುವೆ ದೀರ್ಘಕಾಲದಿಂದ ಇದ್ದ ಜಗಳವು ಹತ್ಯೆಯಲ್ಲಿ ಅಂತ್ಯಗೊಂಡಿತ್ತು.

ವೈಯಕ್ತಿಕ ದ್ವೇಷ: ಜಿಲ್ಲೆಯಲ್ಲಿ ನಡೆಯುವ ಬಹುತೇಕ ಕೊಲೆಗಳು ಪ್ರೇಮ ವೈಫಲ್ಯ, ಅಕ್ರಮ ಸಂಬಂಧ ಅಥವಾ ಆಸ್ತಿ ವಿವಾದದಂತಹ ವೈಯಕ್ತಿಕ ಕಾರಣಗಳಿಂದಲೇ ಸಂಭವಿಸುತ್ತಿವೆ.

ಕೋಮು ಉದ್ವಿಗ್ನತೆ: ಯಲ್ಲಾಪುರದ ಪ್ರಕರಣದಲ್ಲಿ ಆರೋಪಿ ಮತ್ತು ಬಲಿಪಶು ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಇದು ಸಾಮಾಜಿಕವಾಗಿ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಇಂತಹ ಘಟನೆಗಳನ್ನು ತಡೆಯಲು ರಾತ್ರಿ ಗಸ್ತು ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸುವುದನ್ನು ಹೆಚ್ಚಿಸಿದೆ.

ಜಿಲ್ಲೆಯಲ್ಲಿ ನಡೆದ ಹತ್ಯೆಗಳು

ಯಲ್ಲಾಪುರದ ಕಲ್ಲಮ-- ನಗರದ ರಂಜಿತಾ ಎಂಬಾಕೆಯನ್ನು ರಫೀಕ್ ಎಂಬಾತ ನಡುರಸ್ತೆ ಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿ ರಫೀಕ್ ಆಕೆಯನ್ನು ಪ್ರೀತಿಸುವಂತೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಿದ್ದನು. ಆಕೆ ನಿರಾಕರಿಸಿದಾಗ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆಯ ನಂತರ ಆರೋಪಿಯೂ ಸಹ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.