ಕೆ.ಜೆ.ಲೋಕೇಶ್ ಬಾಬು ಮೈಸೂರು
ಮೈಸೂರು ಜಿಲ್ಲೆ ಸಾರಥ್ಯದ ಯೋಗ
ಮಾಜಿ ಸಿಎಂ ಸಿದ್ದರಾಮಯ್ಯ ನಂತರ ರಾಜಕೀಯ ಉತ್ತರಾಧಿಕಾರಿ ಸ್ಥಾನ ಭದ್ರ
ಮೈಸೂರು ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಉರುಳಿಸಿದ ಪಗಡೆ ಹೊಸದೊಂದು ನಾಯಕತ್ವಕ್ಕೆ ನಾಂದಿ ಹಾಡಿದೆ. ಈವರಗೆ ಹಳೇ ತಲೆಗಳೇ ಕಾಣಿಸಿಕೊಳ್ಳುತ್ತಿದ್ದ ಮೈಸೂರಿನ ರಾಜಕೀಯ ಪಡಸಾಲೆಯಲ್ಲಿ ಹೊಸಮುಖಗಳಿಗೆ ಆದ್ಯತೆ ನೀಡುವ ಮೂಲಕ ರಾಜಕೀಯದ ಮಗ್ಗಲು ಬದಲಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರಯತ್ನ ಸಫಲವಾಗಿದೆ.
ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿ ಕೊಂಡೇ ಉರುಳಿಸಿದ ಪಗಡೆ ಆಟದಲ್ಲಿ ಯಶ ಕಂಡಿರುವ ಸಿದ್ದರಾಮಯ್ಯ, ಮೈಸೂರಿನಲ್ಲಿ ತಮ್ಮ ಮಗನಿಗೆ ರಾಜಕೀಯದ ಭದ್ರ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಪಟ್ಟದ ಸನಿಹಕ್ಕೆ ತಂದು ಕೂರಿಸಿದ್ದಾರೆ.
ಅದರ ಮೊದಲ ಅಂಶವಾಗಿ ಸಿದ್ದರಾಮಯ್ಯ ಅವರು ಮಗ ಯತೀಂದ್ರ ಅವರ ರಾಜಕೀಯ ಭವಿಷ್ಯ ವನ್ನು ಮತ್ತಷ್ಟು ಉಜ್ವಲಗೊಳಿಸಲು ಮುಂದಾಗಿದ್ದು, ಅದರ ಫಲವಾಗಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಡಾ.ಯತೀಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರ ರಾಜಕೀಯ ಪಟ್ಟುಗಳನ್ನು ತೀರಾ ಹತ್ತಿರದಿಂದ ಬಲ್ಲ ಮಾಜಿ ಸಿಎಂ ಸಿದ್ದರಾಮಯ್ಯ, ತಾವಿರುವ ಹೊತ್ತಿನಲ್ಲೇ ಮಗನಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮುಂದಾಗಿರುವುದು ಅಕ್ಷರಶಃ ಸ್ಪಷ್ಟವಾಗಿದೆ.
ಇದನ್ನೂ ಓದಿ: Yathindra Siddaramaiah: ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ; ಸುಳಿವು ನೀಡಿದ ಯತೀಂದ್ರ
ಮೈಸೂರು ಭಾಗದಲ್ಲಿ ಡಾ.ಮಹಾದೇವಪ್ಪ ಅವರಂತಹ ಹಿರಿಯರಿದ್ದರೂ ಅವರನ್ನು ಬದಿಗೆ ಸರಿಸಿ ಯತೀಂದ್ರಗೆ ಅವಕಾಶ ಕಲ್ಪಿಸಿರುವುದು ಮೈಸೂರಿನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತುಸು ಅಸಮಾಧಾನ ಮೂಡಿಸಿದೆಯಾದರೂ, ಯಾರೂ ಬಾಯಿ ಬಿಡಲೊಲ್ಲರು. ಏಕೆಂದರೆ, ಮೈಸೂರಿನ ರಾಜಕಾರಣವೇ ಹಾಗೆ, ಒಂದು ಬಗೆಯ ಗುಪ್ತಗಾಮಿನಿ ಇದ್ದ ಹಾಗೆ. ಸಿದ್ದರಾಮಯ್ಯ ಅವರ ರಾಜಕೀಯ ನಡೆ ಅನುಕರಿಸಿದ್ದ ರಾಕೇಶ್ ಅವರ ಅಕಾಲಿಕ ಮರಣದ ನಂತರ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಡಾ.ಯತೀಂದ್ರ ಇಂದು ಸಚಿವರಾಗುವವರೆಗೆ ಬೆಳೆದು ನಿಂತಿದ್ದಾರೆ.
ವೃತ್ತಿಯಲ್ಲಿ ವೈದ್ಯನಾಗಿದ್ದ ಅವರು ಇಂದು ಸಕ್ರಿಯ ರಾಜಕಾರಣಿ ಎನಿಸಿಕೊಂಡಿದ್ದಾರೆ. ತಂದೆ ಸಿದ್ದರಾಮಯ್ಯ ರಾಜಕೀಯದಲ್ಲಿ ಸಕ್ರಿಯವಾಗಿ, ಹಲವು ಅಧಿಕಾರ ಅನುಭವಿಸಿ ಉತ್ತುಂಗ ದಲ್ಲಿದ್ದರೂ ವೈದ್ಯನಾಗಿ ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಡಾ.ಯತೀಂದ್ರ, ರಾಕೇಶ್ ಇರುವವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಅಪರೂಪ.
2016ರಲ್ಲಿ ರಾಕೇಶ್ ವಿದೇಶದಲ್ಲಿ ಪ್ರವಾಸದಲ್ಲಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ನಂತರ ರಾಜಕೀಯಕ್ಕೆ ಧುಮುಕಿದ ಯತೀಂದ್ರ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿ ಕೊಂಡರು. ನಂತರ ನಡೆದ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿ ದರು. ವರುಣ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದ ಅವರು, ಪ್ರಸ್ತುತ ವಿಧಾನಪರಿಷತ್ಸ ದಸ್ಯರಾಗಿದ್ದಾರೆ.
ಸಿದ್ದರಾಮಯ್ಯ ಅವರು 2008ರಲ್ಲಿ ಬಿಜೆಪಿಯ ಎಲ್.ರೇವಣ್ಣಸಿದ್ದಯ್ಯ ಹಾಗೂ ೨೦೧೩ರಲ್ಲಿ ಬಿ.ಎಸ್. ಯಡಿಯೂರಪ್ಪ ಆಪ್ತ, ಕೆಜೆಪಿಯ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಸೋಲಿಸಿದ್ದರು. ಆಗ ಬಿಜೆಪಿಯಿಂದ ಎಸ್.ಡಿ.ಮಹೇಂದ್ರ ಕಣದಲ್ಲಿದ್ದರು.
2018ರ ಚುನಾವಣೆಯಲ್ಲಿ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟು ಕೊಟ್ಟು ಚಾಮುಂಡೇ ಶ್ವರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಗೆಲುವು ಸಿಗಲಿಲ್ಲ. ಬಾದಾಮಿ ಜನರು ಸಿದ್ದರಾಮಯ್ಯ ಅವರ ಕೈಹಿಡಿದರು.
2018ರಲ್ಲಿ ಡಾ.ಯತೀಂದ್ರ ಅವರು ಮೊದಲ ಪ್ರಯತ್ನದಲ್ಲೇ ಬಿಜೆಪಿಯ ತೋಟದಪ್ಪ ಬಸವರಾಜು ಅವರನ್ನು ಸೋಲಿಸಿದ್ದರು. 2023ರ ಚುನಾವಣೆಯಲ್ಲಿ ಯತೀಂದ್ರ ಅವರು ತಂದೆಗೆ ಕ್ಷೇತ್ರ ಬಿಟ್ಟು ಕೊಟ್ಟು, ಅವರ ಪರವಾಗಿ ಪ್ರಚಾರ ಮಾಡಿದರು. ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿ 2ನೇ ಬಾರಿಗೆ ಮುಖ್ಯಮಂತ್ರಿಯೂ ಆದರು.
ಮಗ ಕ್ಷೇತ್ರದಲ್ಲಿ ಸಂಚರಿಸಲು ಅನುಕೂಲ ಆಗಲೆಂದು, ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸದಸ್ಯರನ್ನಾಗಿಸಿ ಅವರಿಗೆ ಅಧಿಕಾರ ಸಿಗುವಂತೆ ನೋಡಿಕೊಂಡಿದ್ದರು. ಬಳಿಕ, ಯತೀಂದ್ರ ಅವರನ್ನು ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಮೇಲ್ಮನೆಗೆ (ವಿಧಾನ ಪರಿಷತ್) ಕಳುಹಿಸುವಲ್ಲಿ ಯಶಸ್ವಿಯೂ ಆದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇದೀಗ
ಸಚಿವರಾಗಿದ್ದಾರೆ.
2018ರಲ್ಲೇ ವರುಣಾದಿಂದ ಶಾಸಕರಾಗಿ ಗೆಲುವು
2018ರಲ್ಲಿ ಡಾ.ಯತೀಂದ್ರ ಅವರು ಮೊದಲ ಪ್ರಯತ್ನದಲ್ಲೇ ಬಿಜೆಪಿಯ ತೋಟದಪ್ಪ ಬಸವರಾಜು ಅವರನ್ನು ಸೋಲಿಸಿದ್ದರು. 2023ರ ಚುನಾವಣೆಯಲ್ಲಿ ಯತೀಂದ್ರ ಅವರು ತಂದೆಗೆ ಕ್ಷೇತ್ರ ಬಿಟ್ಟು ಕೊಟ್ಟು, ಅವರ ಪರವಾಗಿ ಪ್ರಚಾರ ಮಾಡಿದರು. ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿ 2ನೇ ಬಾರಿಗೆ ಮುಖ್ಯಮಂತ್ರಿಯೂ ಆದರು. ಮಗ ಕ್ಷೇತ್ರದಲ್ಲಿ ಸಂಚರಿಸಲು ಅನುಕೂಲ ಆಗಲೆಂದು, ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸದಸ್ಯರನ್ನಾಗಿಸಿ ಅವರಿಗೆ ಅಧಿಕಾರ ಸಿಗುವಂತೆ ನೋಡಿಕೊಂಡಿದ್ದರು.