ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿಂದೂ ಮಹಾಸಭಾ ಗಣೇಶ ಶಕ್ತಿ ಅಪಾರ !

ಇವತ್ತಿಗೂ ಈ ಗಣೇಶ ಉತ್ಸವದ ವೈಭವ ಮತ್ತು ಸಂಭ್ರಮ ಒಂದಿಷ್ಟೂ ಖದರ್ ಕಳೆದುಕೊಂಡಿಲ್ಲ. ಇಡೀ ನಗರದಲ್ಲಿ ನೂರಾರು ಕಡೆ ಮಿನಿ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಹಿಂದೂ ಮಹಾಸಭಾ ಗಣಪತಿಯ ಶಕ್ತಿಯದ್ದೇ ಒಂದು ತೂಕವಾದರೆ, ಇತರೆ ಗಣಪತಿ ಗಳೆಲ್ಲವೂ ಸೇರಿ ಒಂದು ತೂಕ. ಅಷ್ಟರಮಟ್ಟಿಗೆ ಇದು ಅದ್ದೂರಿ ಮತ್ತು ಜನಾಕರ್ಷಕ ಉತ್ಸವ.

ರೇಣುಕಾರಾಧ್ಯ, ಶಿವಮೊಗ್ಗ

ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ

ಈ ಬಾರಿ ಹನ್ನೊಂದು ದಿನಗಳ ಕಾಲ ಉತ್ಸವ

ನಗರದ 600 ಕಡೆ ಸಿಸಿ ಕ್ಯಾಮೆರಾಗಳು

ಗಣಪತಿ ವಿಸರ್ಜನೆಗೆ ಈಗಾಗಲೇ 25 ಸ್ಥಳ

ಇಡೀ ರಾಜ್ಯದಲ್ಲಿಯೇ ಶಿವಮೊಗ್ಗ ಮಹಾನಗರದ ಗಾಂಧಿ ಬಜಾರ್‌ನಲ್ಲಿ ಪ್ರತಿಷ್ಠಾಪಿಸುವ ‘ಹಿಂದೂ ಮಹಾಸಭಾ ಗಣಪತಿ’ ಎಂದರೆ ಒಂದು ಕಾಲಕ್ಕೆ ರೋಮಾಂಚನದ ಸುದ್ದಿ. ಹಾಗೇ ಸಂಭ್ರಮದ ಜತೆ ಒಂದು ರೀತಿ ಆತಂಕದ ಕಾರ್ಮೋಡ ಕವಿಯುತ್ತಿತ್ತು ಕೂಡ. ಹೀಗಾಗಿಯೇ ಇಲ್ಲಿ ಪ್ರತಿ ವರ್ಷ ಗಣೇಶೋತ್ಸವಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾರೀ ಕಟ್ಟೆಚ್ಚರ ವಹಿಸಲಾಗುತ್ತದೆ. ಇಡೀ ಪೊಲೀಸ್ ಇಲಾಖೆ ಒಂದು ತಿಂಗಳು ಪೂರ್ತಿ ಹೈ ಅಲರ್ಟ್ ಆಗಿ ಕಣ್ಗಾವಲು ನಗರದ ಮೂಲೆ ಮೂಲೆಗಳ ಮೇಲೆ ನೆಟ್ಟಿರುತ್ತದೆ..!

ಇವತ್ತಿಗೂ ಈ ಗಣೇಶ ಉತ್ಸವದ ವೈಭವ ಮತ್ತು ಸಂಭ್ರಮ ಒಂದಿಷ್ಟೂ ಖದರ್ ಕಳೆದುಕೊಂಡಿಲ್ಲ. ಇಡೀ ನಗರದಲ್ಲಿ ನೂರಾರು ಕಡೆ ಮಿನಿ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಹಿಂದೂ ಮಹಾಸಭಾ ಗಣಪತಿಯ ಶಕ್ತಿಯದ್ದೇ ಒಂದು ತೂಕವಾದರೆ, ಇತರೆ ಗಣಪತಿ ಗಳೆಲ್ಲವೂ ಸೇರಿ ಒಂದು ತೂಕ. ಅಷ್ಟರಮಟ್ಟಿಗೆ ಇದು ಅದ್ದೂರಿ ಮತ್ತು ಜನಾಕರ್ಷಕ ಉತ್ಸವ.

ಪೊಲೀಸರಿಗೆ ತಲೆ ಬಿಸಿ

ರಾಜ್ಯದ ಎಲ್ಲೆಡೆ ಸಂಭ್ರಮದಿಂದ ಗಣೇಶ ಹಬ್ಬಗಳನ್ನು ಮಾಡಿದರೆ ಶಿವಮೊಗ್ಗ ನಗರದ ಹಾಗೂ ಕೆಲವು ತಾಲೂಕುಗಳಲ್ಲಿ ಭಯಭಕ್ತಿಯಿಂದ ಆಚರಣೆ ಮಾಡಬೇಕಾದ ಪರಿಸ್ಥಿತಿಯೂ ಇದೆ. ಪೊಲೀಸರಿಗಂತೂ ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಆರಂಭವಾದರೆ ಮೈಯೆಲ್ಲಾ ಕಣ್ಣಾಗಿರಬೇಕಾದ ಪರಿಸ್ಥಿತಿ. ಗಣಪನ ಆಗಮನದ ಭಾದ್ರಪದ ಮಾಸದ ೩೦ ದಿನಗಳ ಕಾಲ ಇಡೀ ಪರಿಸ್ಥಿತಿಯನ್ನು ಕಟ್ಟೆಚ್ಚರದಿಂದ ಕಾಯಬೇಕಾದ ಅನಿವಾರ್ಯತೆ ಪೊಲೀಸರದು.

ಇದನ್ನೂ ಓದಿ: Vishweshwar Bhat Column: ಸೀಟ್‌ ಬೆಲ್ಟ್‌ ಏಕೆ ಕಟ್ಟಿಕೊಳ್ಳಬೇಕು ?

ಹಲವು ನಿಷೇಧಗಳ ಆದೇಶ

ಈ ಕಾರಣದಿಂದ ಎಲ್ಲೆಂದರಲ್ಲಿ ಬ್ಯಾನರ್ ಅಳವಡಿಸಿ ನಗರದ ಸೌಂದರ್ಯ ಹಾಳು ಮಾಡದಂತೆ ಹಾಗೂ ಪಾಲಿಕೆಯ ಅನುಮತಿ ಪಡೆಯದೇ ಫ್ಲೆಕ್ಸ್ ಅಳವಡಿಸಬಾರದು ಎಂಬ ನಿಯಮ ಜಾರಿಗೆ ತರಲಾಗಿದೆ. ವಿಸರ್ಜನಾ ಮೆರವಣಿಗೆಯಲ್ಲಿ ಬೈಕ್ ರ‍್ಯಾಲಿ ನಡೆಸದಂತೆ, ಡಿ.ಜೆ.ಧ್ವನಿವರ್ಧಕಗಳನ್ನು ಬಳಸಿ ಮೆರವಣಿಗೆ ಮಾಡದಂತೆ, ಹಸಿರು ಪಟಾಕಿಗಳನ್ನೇ ಬಳಸುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ.

ಗಣಪತಿ ವಿಸರ್ಜನೆಗೆ ನೀರಿಗಿಳಿಯುವವರು ಈಜು ಬಲ್ಲವರಾಗಿದ್ದು, ಮೂರ್ನಾಲ್ಕು ಜನಕ್ಕಿಂತ ಹೆಚ್ಚಿನ ಸಂಖ್ಯೆಯ ಜನ ನೀರಿಗೆ ಇಳಿಯಬಾರದು. ಅಲ್ಲದೇ ಲೈವ್ ಜಾಕೆಟ್ ಕಡ್ಡಾಯವಾಗಿ ಧರಿಸಿರಬೇಕು ಎಂದು ಪೊಲೀಸರು ನಿಯಮಗಳನ್ನು ರೂಪಿಸಿದ್ದಾರೆ.

ಜಾಲತಾಣಗಳತ್ತ ಕಣ್ಣು

ಜಲಮೂಲಗಳು ಮತ್ತು ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಥರ್ಮೋ ಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ‌ ಯಾರಿಸಲ್ಪಟ್ಟ ಗಣೇಶನ ಮೂರ್ತಿಗಳನ್ನು ಪೂಜೆಗೆ ಬಳಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡದಂತೆ ಹಾಗೂ ಶಾಂತಿ ಸಂಯಮದಿಂದ ವರ್ತಿಸುವಂತೆ ಈಗಾಗಲೇ ಜಿಲ್ಲಾಡಳಿತ ಸಲಹೆ ನೀಡಿದೆ.

ಗಡಿ ಭಾಗಕ್ಕೆ ಚೆಕ್ ಪೋಸ್ಟ್

ಗಣೇಶನ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಅಸಹ್ಯಕರವಾಗಿ ಕುಣಿದು ವರ್ತಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ನೆರೆಯ ಜಿಲ್ಲೆಗಳಿಂದ ಆಗಮಿಸುವ ಸಾರ್ವಜನಿಕರ ಮೇಲೆ ವಿಶೇಷ ಗಮನ ಹರಿಸಲಾಗುವುದು. ಅದಕ್ಕಾಗಿ ನಗರದ ಹೊರವಲಯದಲ್ಲಿಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ಸಂದೇಶ ಪಾಸ್ ಮಾಡಿದ್ದಾರೆ.

ಸಾರ್ವಜನಿಕರು ಮೆರವಣಿಗೆಯಲ್ಲಿ ತಾಳ್ಮೆ ಕಳೆದುಕೊಳ್ಳದೇ ಸೌಹಾರ್ದಯುತವಾಗಿ ವರ್ತಿಸಬೇಕು. ತಪ್ಪು ಹೆಜ್ಜೆ ಇಟ್ಟಲ್ಲಿ ಕ್ರಮ ಅನಿವಾರ್ಯವಾಗಲಿದೆ. ಮುಖಂಡರು ವಾತಾವರಣ ತಿಳಿಗೊಳಿಸಲು ಯತ್ನಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್ ನೆರವು ಪಡೆಯುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

600 ಸಿಸಿ ಕ್ಯಾಮೆರಾಗಳು

ಗಣಪತಿ ವಿಸರ್ಜನೆಗೆ ಈಗಾಗಲೇ 25 ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೆ ಇನ್ನಷ್ಟು ಸ್ಥಳಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಅಗತ್ಯ ಇದ್ದ ಕಡೆ ಕ್ರೇನ್ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ನಗರದೆಲ್ಲೆಡೆ 20ಕಿ. ಮೀ. ವ್ಯಾಪ್ತಿಯಲ್ಲಿ ಬ್ಯಾರಿಕೆಡ್ ನಿರ್ಮಾಣ, 600 ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ. ಅಲ್ಲದೇ ಡ್ರೋಣ್ ಬಳಸಿಕೊಳ್ಳಲಾಗುತ್ತಿದೆ.

ಮುಳುಗು ತಜ್ಞರ ತಂಡ

ಗಣಪತಿ ವಿಸರ್ಜನೆ ವೇಳೆ ಮುಳುಗು ತಜ್ಞರ ಸಹಕಾರ ಪಡೆಯಲಾಗಿದೆ. ಗಣಪತಿ ವಿಸರ್ಜನೆ ಸ್ಥಳಗಳಲ್ಲಿ ವಿದ್ಯುದ್ದೀಪ, ತೆಪ್ಪದ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ನಗರದೆಲ್ಲೆಡೆ ಮೂಲ ಭೂತ ಸೌಕರ್ಯ ಒದಗಿಸಲು ವಿಶೇಷ ಗಮನಹರಿಸಲಾಗಿದೆ. ಅದಕ್ಕಾಗಿ ವಾರ್ಡ್ವಾರು ಸಂಪರ್ಕಿಸ ಬೇಕಾದ ವ್ಯಕ್ತಿಗಳ ಮೊಬೈಲ್ ನಂಬರ್ ಪ್ರಚುರಪಡಿಸಲಾಗುವುದು.

ಅತಿ ದೊಡ್ಡ ಗಣಪತಿ ಉತ್ಸವ

ಶಿವಮೊಗ್ಗದ ಅತಿ ದೊಡ್ಡ ಗಣಪತಿ ಉತ್ಸವ ಇದಾಗಿದ್ದು, ಈ ಬಾರಿ ೧೧ ದಿನಗಳ ಕಾಲ ಗಣಪತಿ ಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದೀಗ ಸಮಿತಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ೧೧ ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಗಣಪತಿಯ ಪ್ರತಿಷ್ಠಾಪನೆಯು ಆಗಸ್ಟ್ ೨೭ರಂದು ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ನೆರವೇರಿದೆ.

ಗಣೇಶೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ೭ ಗಂಟೆಗೆ ಸಂಗೀತ , ನೃತ್ಯ, ನಾಟಕ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂತಿಮವಾಗಿ ಸೆಪ್ಟೆಂಬರ್ ೬ರ ಶನಿವಾರ ಬೆಳಗ್ಗೆ ೯.೩೦ಕ್ಕೆ ಶ್ರೀವರಸಿದ್ಧಿ ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಮತ್ತು ಅದ್ದೂರಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.