ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ
ದೇಶದ ಹಲವಾರು ವಿರಳ ಹಾಗೂ ನಶಿಸಿ ಹೋಗುತ್ತಿರುವಂತಹ ಪುರಾತನ ಕಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿ ವಿಶ್ವದೆಲ್ಲೆಡೆ ಅದನ್ನ ಪಸರಿಸೋ ಕಾರ್ಯಗಳನ್ನ ಮಾಡ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಪರೇಡ್ ಗೆ ಇಂತಹ ವಿರಳ ಕಲೆಗಾರರನ್ನ ಕರೆಸಿ ಅವರಿಗೆ ಗೌರವ ನೀಡೋ ಕಾರ್ಯಕ್ರಮಗಳನ್ನ ಮಾಡ್ತಿದೆ. ಅದರಂತೆ ಈ ವರ್ಷದ ಸ್ವಾತಂತ್ರ್ಯೋ ತ್ಸವದಲ್ಲಿ ಪಾಲ್ಗೊಳ್ಳೋಕೆ ರಾಜ್ಯದ 5 ಕಲಾವಿದರನ್ನ ಕೇಂದ್ರ ಸರ್ಕಾರ ಗುರುತಿಸಿದೆ.


ವಿನುತಾ ಹೆಗಡೆ ಶಿರಸಿ
ಬಾಲಮಂಗಳದಲ್ಲಿನ ಕಥೆಯಂತೆ ಹಾರುವ ಜಮಖಾನೆಯಲ್ಲಿ ಇವರು ದೆಹಲಿಗೆ ಹಾರುತ್ತಿಲ್ಲ...
ಹಸೆ ಚಿತ್ತಾರದ ಮೂಲಕ ದೆಹಲಿಗೆ ಹೋಗುತ್ತಿದ್ದಾರೆ.
ಸನಾತನ ವಿಶೇಷ ಕಲೆಗಳ ಪೋಷಿಸಿಕೊಂಡಿರುವ ನಮ್ಮ ದೇಶದಲ್ಲಿ ಇಂದಿಗೂ ಅದು ಅಳಿಯದೇ ಉಳಿದುಕೊಂಡಿದೆ. ನಮ್ಮ ದೇಶದ ವಿಶಿಷ್ಟ ಹಾಗೂ ವಿಭಿನ್ನ ಕಲೆಗಳ ತವರೂರು. ಪುರಾತನ ಸಂಸ್ಕೃತಿಯ ಕಲೆಗಳ ತಾಣ. ರಾಜ್ಯ ಕೂಡ ಇಂತಹುದೇ ಹಲವಾರು ಕಲೆಗಳನ್ನ ದೇಶಕ್ಕೆ ಕೊಡುಗೆ ಯಾಗಿ ನೀಡುತ್ತಿದೆ. ಆದ್ರೆ ಇಂತಹ ಕಲೆಗಳ ಗುರುತಿಸುವಿಕೆ ತುಂಬಾ ಮುಖ್ಯ. ಅಂತಹ ಪ್ರಯತ್ನ ಭಾರತ ಸರ್ಕಾರದಿಂದ ಈಗ ಕೆಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಇದೀಗ ಆ ಸಾಲಿಗೆ ಜಿಲ್ಲೆಯ ಹೆಮ್ಮೆಯ ಕಲೆ ಹಸೆ ಚಿತ್ತಾರ ಕೂಡ ಸೇರ್ಪಡೆಗೊಂಡಿದೆ.
ಕಳೆದ ವರ್ಷ ಮುಂಡಗೋಡಿನ ಲಕ್ಷ್ಮೀ ಆಯ್ಕೆಯಾಗಿದ್ದರು. ಇವರೂ ಸಹ ಸ್ವ ಸಹಾಯ ಸಂಘದಲ್ಲಿ ಸಾಕಷ್ಟು ಸಾಧನೆ ಮಾಡಿದವರಾಗಿದ್ದು, ಅನೇಕ ಮಹಿಳೆಯರಿಗೆ ಉದ್ಯೋಗ ಒದಗಿಸಿ ಕೊಡುವು ದರಲ್ಲಿ ಯಶಸ್ವಿಯಾಗಿದ್ದರು.

ಇದೀಗ ಜಿಲ್ಲೆಯ ಹೆಮ್ಮೆಯ ಕಲೆಗೆ ಒಲಿದು ಬಂದ ವಿಶಿಷ್ಟ ಗೌರವ ಇದಾಗಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಸ್ವತಿ ನಾಯ್ಕ ದಂಪತಿ ಇದಕ್ಕೆ ಆಯ್ಕೆಯಾಗಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ನಡೆಯೋ ಸ್ವಾತಂತ್ರ್ಯೋತ್ಸವಕ್ಕೆ ಜಿಲ್ಲೆಯ ಕಲಾವಿದೆಗೆ ರಾಷ್ಟ್ರಪತಿ ಭವನದ ಆಮಂತ್ರಣ ಬಂದು ತಲುಪಿದೆ. ರಾಜ್ಯದ 5 ಜನರಲ್ಲಿ ಇವರೂ ಒಬ್ಬರಾಗಿದ್ದಾರೆ.
ದೇಶದ ಹಲವಾರು ವಿರಳ ಹಾಗೂ ನಶಿಸಿ ಹೋಗುತ್ತಿರುವಂತಹ ಪುರಾತನ ಕಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿ ವಿಶ್ವದೆಲ್ಲೆಡೆ ಅದನ್ನ ಪಸರಿಸೋ ಕಾರ್ಯಗಳನ್ನ ಮಾಡ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಪರೇಡ್ ಗೆ ಇಂತಹ ವಿರಳ ಕಲೆಗಾರರನ್ನ ಕರೆಸಿ ಅವರಿಗೆ ಗೌರವ ನೀಡೋ ಕಾರ್ಯಕ್ರಮಗಳನ್ನ ಮಾಡ್ತಿದೆ. ಅದರಂತೆ ಈ ವರ್ಷದ ಸ್ವಾತಂತ್ರ್ಯೋ ತ್ಸವದಲ್ಲಿ ಪಾಲ್ಗೊಳ್ಳೋಕೆ ರಾಜ್ಯದ 5 ಕಲಾವಿದರನ್ನ ಕೇಂದ್ರ ಸರ್ಕಾರ ಗುರುತಿಸಿದೆ. ಅದರಲ್ಲಿ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಸವಂತೆಯ ಸರಸ್ವತಿ ನಾಯ್ಕ ಕೂಡ ಒಬ್ಬರು. ರಾಜ್ಯದಲ್ಲೇ ವಿರಳ ಕಲೆಯಾದ ಹಸೆ ಚಿತ್ತಾರ ಅನ್ನೋ ಕಲೆ ಮೂಲಕ ಇವರು ಗುರುತಿಸಲ್ಪಟ್ಟಿದ್ದಾರೆ. ರಾಷ್ಟ್ರಪತಿ ಭವನದಿಂದ ಅಂಚೆ ಇಲಾಖೆ ಮೂಲಕ ಆಮಂತ್ರಣ ಖುದ್ದು ಇವರ ಮನೆಬಾಗಿಲಿಗೆ ತಲುಪಿದೆ. ಇವರು ಈ ಕಲೆಯನ್ನ ತಮ್ಮ ಪತಿಯ ಮೂಲಕ ಕಲಿತಿದ್ದು, ಕಲೆಯಲ್ಲಿ ಪರಿಣಿತಿ ಹೊಂದಿದ್ದಾರೆ. ರಾಜ್ಯದ ಅಷ್ಟೇ ಅಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಈ ದಂಪತಿಯ ಹಸೆ ಚಿತ್ತಾರ ಕಲೆ ಮೂಡಲ್ಪಟ್ಟಿದೆ. ರಾಷ್ಟ್ರಪತಿ ಭವನದ ಈ ಆಮಂತ್ರಣ ಕಲಾವಿದೆಯ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದ್ದು, ಆಗಸ್ಟ್ 12ಕ್ಕೆ ದಂಪತಿ ನವದೆಹಲಿಗೆ ತೆರಳಿ ಪ್ರಧಾನಿಗಳನ್ನ ಭೇಟಿಯಾಗಿ ನಂತರ ಸ್ವಾತಂತ್ರ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Sirsi News: ಶಿರಸಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಹಸೆ ಚಿತ್ತಾರ ಅಂದ್ರೇನು? ಇದರ ವಿಶೇಷವೇನು? ಈ ಹಸೆ ಚಿತ್ತಾರ ಕಲೆ ಪುರಾತನ ಸಂಸ್ಕೃತಿಯ ಮೂಲ ಕಲೆಯಾಗಿದ್ದು, ಮದುವೆ ಸಮಾರಂಭಗಳಲ್ಲಿ ಮುಖ್ಯವಾಗಿ ಈ ಕಲೆಯ ಮೂಲಕ ಹಸೆ ಬಿಡಿಸಲಾಗುತ್ತೆ. ಇದಲ್ಲದೇ ಹಲವಾರು ಹೊಸ ಮನೆಗಳಲ್ಲಿ ವಿರಳ ಹಸೆ ಚಿತ್ತಾರ ಕಲೆ ಬಿಡಿಸ ಲಾಗುತ್ತೆ. ಇದು ನೈಸರ್ಗಿಕ ಹಾಗೂ ಆರೋಗ್ಯಕರ ಕಲೆ ಕೂಡ. ಕೇವಲ 4 ಬಣ್ಣಗಳನ್ನು ಮಾತ್ರ ಈ ಕಲೆಯಲ್ಲಿ ಬಳಸಲಾಗುತ್ತೆ. ಬಿಳಿ, ಕೆಂಪು, ಕಪ್ಪು ಹಾಗೂ ಹಳದಿ ಬಣ್ಣಗಳನ್ನು ನೈಸರ್ಗಿಕವಾಗಿ ತಯಾರಿಸಿ ಕಲೆಯನ್ನ ಮೂಡಿಸಲಾಗುತ್ತೆ.
ಬಿಳಿ ಬಣ್ಣಕ್ಕೆ ಶೇಡಿ, ಕೆಂಪು ಬಣ್ಣಕ್ಕೆ ಕೆಮ್ಮಣ್ಣು, ಕಪ್ಪು ಬಣ್ಣಕ್ಕೆ ಮಸಿ ಕಾಯಿಯ ಬಣ್ಣ ಹಾಗೂ ಹಳದಿ ಬಣ್ಣಕ್ಕೆ ವಿಶಿಷ್ಟವಾದ ಒಂದು ಕಾಯಿಯ ಬಣ್ಣ ಉಪಯೋಗಿಸೋ ಮೂಲಕ ನಾರಿನ ಬಳ್ಳಿಯನ್ನೇ ಬ್ರಶ್ ಆಗಿ ಮಾಡಿ ಕಲೆಯನ್ನ ಬಿಡಿಸಲಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಹಾಗೂ ಸೌಂದರ್ಯದ ದೃಷ್ಟಿಯಿಂದ ಈ ಕಲೆ ಮಹತ್ವ ಪಡೆದಿದೆ. ಈ ಕಲೆಗೆ ಈ ದಂಪತಿಗಳಿಗೆ ಹಲವಾರು ಅವಾರ್ಡ್ ಗಳೂ ಕೂಡ ಸಿಕ್ಕಿದ್ದು, ಕಲೆಯನ್ನ ದೇಶದ ವಿವಿಧ ಭಾಗಗಳಲ್ಲಿ ಪಸರಿಸೋ ಮೂಲಕ ಈ ಕಲೆಯನ್ನ ಉಳಿಸೋ ಪ್ರಯತ್ನ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ರಾಜ್ಯದ ಕೇವಲ 5 ಕಲಾವಿದರಲ್ಲಿ ಜಿಲ್ಲೆಯ ಕಲಾವಿದೆ ಕೂಡ ಈ ಗೌರವಕ್ಕೆ ಪಾತ್ರ ರಾಗಿದ್ದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಇಂತಹ ವಿರಳ ಕಲೆಗಳು ದೇಶ, ವಿದೇಶಗಳಲ್ಲೂ ಪಸರಿಸೋ ಮೂಲಕ ಹೆಮ್ಮೆಯ ಕಲೆಯನ್ನು ಉಳಿಸೋ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಈ ಮೂಲಕ ಕಲೆ, ಕಲಾ ವಿದರನ್ನು ಗುರುತಿಸೋ ಕೆಲಸವಾಗಬೇಕಿದೆ ಎನ್ನುತ್ತಾರೆ ಕಲಾವಿದೆ ಸರಸ್ವತಿ ನಾಯ್ಕ.