ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Padayatra reached 6th day: ಗಡಿನಾಡು ಬಳ್ಳಾರಿಗೆ ಕಾಲಿಟ್ಟ ವಿಜಯೇಂದ್ರ ದುಂದುಬಿ

ವಿಜಯೇಂದ್ರ ತಮ್ಮ 6ನೇ ದಿನದ ಪಾದಯಾತ್ರೆಯ ದಿನಚರಿಯನ್ನು ಕುರಿಗಾಯಿಗಳ ಜೊತೆಗೆ ಸಂವಾದ ಮಾಡುವ ಮೂಲಕ ಆರಂಭಿಸಿದರು. ಬೆಳಗ್ಗೆ 7 ಗಂಟೆಗೆ ನೇರವಾಗಿ ಗಂಗಾವತಿ ತಾಲೂಕು ಮರಳಿ ಗ್ರಾಮದ ಬಳಿ ನೆಲೆಸಿದ್ದ ಸಂಚಾರಿ ಕುರಿಗಾಯಿಗಳ ಟೆಂಟ್‌ಗೆ ಭೇಟಿ ನೀಡಿ, ಸಂವಾದ ನಡೆಸಿ, ಸಮಸ್ಯೆ ಆಲಿಸಿ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.

ಶರಣಬಸವ ಹುಲಿಹೈದರ, ಕೊಪ್ಪಳ

ಕನಕಗಿರಿಯ ಜಂಗಮರ ಕಲ್ಗುಡಿಯಿಂದ ಆರಂಭ, 18 ಕಿಮೀ ನಡಿಗೆ, ತುಂಗಭದ್ರಾ ನದಿ ದಾಟಿ ಬಳ್ಳಾರಿ

ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ಕೈಗೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ 6ನೇ ದಿನ ಪೂರೈಸಿದ್ದು, ಬಳ್ಳಾರಿ ಗಡಿ ತಲುಪಿತು. ಭಾನುವಾರ ಸಂಜೆವರೆಗೆ ಕೊಪ್ಪಳ ಜಿಲ್ಲೆಯಲ್ಲೇ ಮುಂದುವರಿದ ಪಾದಯಾತ್ರೆ, ಬರೋಬ್ಬರಿ 18 ಕಿ.ಮೀ ಕ್ರಮಿಸಿ ಸಂಜೆ ವೇಳೆಗೆ ತುಂಗಭದ್ರಾ ನದಿ ದಾಟುವ ಮೂಲಕ ಬಳ್ಳಾರಿಯನ್ನು ಮುಟ್ಟಿತು. ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಂಗಮರ ಕಲ್ಗುಡಿ ಗ್ರಾಮದಿಂದ ಆರಂಭವಾದ 6ನೇ ದಿನದ ಪಾದಯಾತ್ರೆ, ಇಡೀ ದಿನ ಗಂಗಾವತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುವರಿಯಿತು.

ಸಂಜೆ ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದಲ್ಲಿ ಸಮಾರೋಪಗೊಂಡಿತು. ಪಾದಯಾತ್ರೆ ಆರಂಭಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಬಿಡದಿ ಉಪನಗರ ನಿರ್ಮಾಣ ಮತ್ತು ಕನಕಪುರ ವಿಮಾನ ನಿಲ್ದಾಣ ನಿರ್ಮಾಣವೇ ಸಿಎಂ ಡಿಕೆಶಿ ಜೀವನದ ಬಹುದೊಡ್ಡ ಆಸೆ ಎಂದು ಕಾಣುತ್ತಿದೆ. ಈ ಎರಡೂ ಯೋಜನೆ ಪೂರ್ಣಗೊಂಡರೆ, ಮುಂದೆ ಮುಖ್ಯಮಂತ್ರಿ ಆಗಿದ್ದರೂ, ಇಲ್ಲದಿದ್ದರೂ ಪರವಾಗಿಲ್ಲ ಎಂಬ ಲೆಕ್ಕಾಚಾರದಲ್ಲಿರುವಂತಿದೆ ಎಂದು ವ್ಯಂಗ್ಯವಾಡಿದರು.

ವಿಜಯೇಂದ್ರ ತಮ್ಮ 6ನೇ ದಿನದ ಪಾದಯಾತ್ರೆಯ ದಿನಚರಿಯನ್ನು ಕುರಿಗಾಯಿಗಳ ಜೊತೆಗೆ ಸಂವಾದ ಮಾಡುವ ಮೂಲಕ ಆರಂಭಿಸಿದರು. ಬೆಳಗ್ಗೆ 7 ಗಂಟೆಗೆ ನೇರವಾಗಿ ಗಂಗಾವತಿ ತಾಲೂಕು ಮರಳಿ ಗ್ರಾಮದ ಬಳಿ ನೆಲೆಸಿದ್ದ ಸಂಚಾರಿ ಕುರಿಗಾಯಿಗಳ ಟೆಂಟ್‌ಗೆ ಭೇಟಿ ನೀಡಿ, ಸಂವಾದ ನಡೆಸಿ, ಸಮಸ್ಯೆ ಆಲಿಸಿ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Padayatra reached 5th Day: ಬಿರು ಬಿಸಿಲಲ್ಲೂ ಬಿಜೆಪಿ ಜಾಥಾ, ಶಿಕ್ಷಕರ ದಿನಾಚರಣೆಯಲ್ಲಿ ಬಿವೈವಿ ಭಾಗಿ: ಪಾದಯಾತ್ರೆ ಮಧ್ಯೆ ರೈತರ ಜತೆ ಸಂವಾದ

ಬೈಕಲ್ಲಿ ಪ್ರವೇಶ: ಕುರಿಗಾಯಿಗಳ ಜೊತೆ ಸಂವಾದ ಮುಗಿಸಿ ಹೋಟೆಲ್‌ಗೆ ವಾಪಾಸ್ ಆದ ಬಿ.ವೈ.ವಿಜಯೇಂದ್ರ, ಉಪಾಹಾರದ ನಂತರ ಜಂಗಮರ ಕಲ್ಗುಡಿಯಿಂದ 6ನೇ ದಿನದ ಪಾದಯಾತ್ರೆ ಆರಂಭಿಸಿದರು. ಈ ಮೊದಲು ಜಂಗಮರ ಕಲ್ಗುಡಿವರೆಗೆ ಬೈಕ್ ಮೂಲಕ ಪ್ರವೇಶ ಕೊಟ್ಟು, ಗಮನ ಸೆಳೆದರು.

ಗಂಗಾವತಿ ಮತ್ತು ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಯುವ ಮೋರ್ಚಾ ಕಾರ್ಯ ಕರ್ತರು, ವಿಜಯೇಂದ್ರ ಬೈಕ್ ರ‍್ಯಾಲಿಗೆ ಸಾಥ್ ನೀಡಿದರು. ಪಾದಯಾತ್ರೆಗೆ 6ನೇ ದಿನವೂ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಕನಕಗಿರಿ ವಿಧಾನಸಭೆ ಕ್ಷೇತ್ರದಿಂದ ಹೊರಟ ಪಾದಯಾತ್ರೆ ಕೇವಲ 3 ಕಿಮೀ ಕ್ರಮಿಸುವ ಮೂಲಕ ಗಂಗಾವತಿ ವಿಧಾನಸಭೆ ಕ್ಷೇತ್ರದ ಕೇಂದ್ರ ಸ್ಥಾನ ಗಂಗಾವತಿಗೆ ಪ್ರವೇಶ ಪಡೆಯಿತು. ಗಂಗಾವತಿ ಕ್ಷೇತ್ರದ ವಿದ್ಯಾನಗರ ಗ್ರಾಮದಲ್ಲಿ ಹಾಗೂ ಗಂಗಾವತಿಯ ಮಹಾರಾಣಾ ಪ್ರತಾಪ ಸಿಂಗ್ ವೃತ್ತದಲ್ಲಿ ವಿಜಯೇಂದ್ರಗೆ ಜೆಸಿಬಿ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಿಸ ಲಾಯಿತು. ಜೊತೆಗೆ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.

ಸಾವಿರಾರು ಬಿಜೆಪಿ ಕಾರ್ಯಕರ್ತರು, ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆ ಉದ್ದಕ್ಕೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ರಾಜ್ಯ ಕಾಂಗ್ರೆಸ್ ಸರಕಾರ, ಸಿಎಂ ಡಿ.ಕೆ.ಶಿವಕುಮಾರ್, ಸ್ಥಳೀಯ ಸಚಿವರು, ಶಾಸಕರ ವಿರುದ್ಧ ಘೋಷಣೆ ಮೊಳಗಿದವು.

ರಾಜ್ಯದ ನಾನಾ ಭಾಗದಿಂದ ಬಂದಿದ್ದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪಾದಯಾತ್ರೆ ಉದ್ದಕ್ಕೂ ಸೇರಿಕೊಂಡು ಬೆಂಬಲ ವ್ಯಕ್ತಪಡಿಸಿದರು. ಪಾದಯಾತ್ರೆಯಲ್ಲಿ ಭಾರಿ ಜನದಟ್ಟಣೆ ಕಂಡು ಬಂತು. ಯಾತ್ರೆ ಆರಂಭಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಪಾದಯಾತ್ರೆ ಆರಂಭಿಸಿದ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ಕರ್ನಾಟಕದ ಕಡೆ ಬರುತ್ತಿದ್ದಾರೆ. ನಾವು ಪಾದಯಾತ್ರೆ ಆರಂಭಿಸದಿದ್ದರೆ ಉತ್ತರ ಕರ್ನಾಟಕ ಕಡೆ ಮುಖ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು.

ಬಿಡದಿ ಉಪನಗರ ನಿರ್ಮಾಣ ಮತ್ತು ಕನಕಪುರ ವಿಮಾನ ನಿಲ್ದಾಣ ನಿರ್ಮಾಣವೇ ಡಿಕೆಶಿ ಜೀವನದ ಬಹುದೊಡ್ಡ ಆಸೆ ಎಂದು ಕಾಣುತ್ತಿದೆ. ಈ ಎರಡೂ ಯೋಜನೆ ಪೂರ್ಣಗೊಂಡರೆ, ಮುಂದೆ ಮುಖ್ಯಮಂತ್ರಿ ಆಗಿದ್ದರೂ, ಇಲ್ಲದಿದ್ದರೂ ಪರವಾಗಿಲ್ಲ ಎಂಬ ಲೆಕ್ಕಾಚಾರದಲ್ಲಿರುವಂತಿದೆ ಎಂದು ವ್ಯಂಗ್ಯವಾಡಿದರು. ಬಿ.ನಾಗೇಂದ್ರಗೆ ಕ್ಲೀನ್‌ಚಿಟ್ ಸಿಕ್ಕಿದ್ದರಿಂದ ಮತ್ತೆ ಮಂತ್ರಿ ಮಾಡಲಾಗಿತ್ತು ಎಂಬ ಸಚಿವ ಯು.ಟಿ. ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಗೇಂದ್ರಗೆ ಕ್ಲೀನ್‌ಚಿಟ್ ಸಿಗುವ ಮೊದಲು 187 ಕೋಟಿ ರು. ಹಣ ವಾಪಸ್ ತಂದು ಕೊಡಲಿ. ನಾವು ಸಾಕಷ್ಟು ಕ್ಲೀನ್‌ಚಿಟ್ ನೋಡಿದ್ದೇವೆ.

ಹಿಂದಿನ ಸರಕಾರದಲ್ಲಿ ಎಸಿಬಿ ರಚನೆ ಮಾಡಿಕೊಂಡು ಹೇಗೆ ಕ್ಲೀನ್‌ಚಿಟ್ ಪಡೆದುಕೊಂಡರು ಎಂಬುದನ್ನೂ ನೋಡಿದ್ದೇವೆ. ಆದ್ದರಿಂದ ಕ್ಲೀನ್‌ಚಿಟ್ ಎಂಬ ಮಾತುಗಳನ್ನು ಜನರು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಜನಾರ್ದನ ರೆಡ್ಡಿ, ಎಂಎಲ್‌ಸಿ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ರಾಜುಗೌಡ, ಹಾಲಪ್ಪ ಆಚಾರ, ಎಂಎಲ್‌ಸಿಗಳಾದ ಎನ್.ರವಿಕುಮಾರ, ಹೇಮಲತಾ ನಾಯಕ ಇದ್ದರು

ಏನೇನಾಯ್ತು?

ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಂಗಮರ ಕಲ್ಗುಡಿ ಗ್ರಾಮದಿಂದ ಭಾನುವಾರ ಯಾತ್ರೆ ಆರಂಭ

ಇಡೀ ದಿನ ಗಂಗಾವತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ನಡಿಗೆ, ಹಲವೆಡೆ ಸಂವಾದ

ಬೆಳಗ್ಗೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಸಂಚಾರಿ ಕುರಿಗಾಹಿಗಳ ಟೆಂಟ್‌ಗೆ ಭೇಟಿ, ಚರ್ಚೆ

ಸಂಚಾರಿ ಕುರಿಗಾಹಿಗಳ ಸಮಸ್ಯೆಯನ್ನು ವಿಧಾನಸೌಧದಲ್ಲಿ ಚರ್ಚಿಸುವುದಾಗಿ ಆಶ್ವಾಸನೆ

ಗಂಗಾವತಿಯ ಮಹಾರಾಣಾ ಪ್ರತಾಪ ಸಿಂಗ್ ವೃತ್ತದಲ್ಲಿ ಬೃಹತ್ ಹಾರದೊಂದಿಗೆ ಸ್ವಾಗತ

500 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿ

ಯಾತ್ರೆ ಸಂಜೆ ಹೊತ್ತಿಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣಕ್ಕೆ ಪ್ರವೇಶ, 6ನೇ ದಿನದ ನಡಿಗೆ ಮುಕ್ತಾಯ

image

ಕುರಿ ಕಾಯುವ ಸಮುದಾಯದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಕುರಿಗಳಿಗೆ ಉಚಿತ ಔಷಧ ಸಿಗುತ್ತಿಲ್ಲ. ಬಡವರ ಪರವಾಗಿ ಸಿಎಂ ಏನು ಮಾಡಿದ್ದಾರೆ? ಜನರಿಗೆ ಇದು ಉತ್ತಮ ಸರ್ಕಾರ ಎಂಬ ಭಾವನೆ ಮೂಡಿದರೆ ಮಾತ್ರ ನಿಮ್ಮನ್ನು ಪ್ರಜಾಸೇವಕ ಎಂದು ಕರೆಯುತ್ತಾರೆ. ಬಣ್ಣಬಣ್ಣದ ಮಾತನಾಡಿ, ಸೂಟು-ಬೂಟು ಧರಿಸಿ, ಹೆಲಿಕಾಪ್ಟರ್‌ನಲ್ಲಿ ಓಡಾಡಿದರೆ ಪ್ರಜಾಸೇವಕ ಆಗುವುದಿಲ್ಲ.

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ