Tumkur News: ಚಿದಾನಂದ್ ಎಂ.ಗೌಡ ಅವರು ಹೈಟೆಕ್ ಶಾಲೆ ನಿರ್ಮಿಸುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ; ಗೋವಿಂದ ಎಂ.ಕಾರಜೋಳ
ಗೋಪಿಕುಂಟೆ ಗ್ರಾಮದಲ್ಲಿ ವಿಧಾನಪರಿಷತ್ ಶಾಸಕರಾದ ಚಿದಾನಂದ್ ಎಂ.ಗೌಡ ಅವರ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ 40 ಲಕ್ಷ ರೂ. ಹಾಗೂ ಗೋಪಿಕುಂಟೆ ಈರಣ್ಣ ಮೇಷ್ಟ್ರುರವರ ಸ್ಮರಣಾರ್ಥ ಗೌರವ ಪೂರ್ವಕವಾಗಿ ವೈಯಕ್ತಿಕ ೬೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೂತನ ಹೈಟೆಕ್ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ಘಾ ಟಿಸಿ ಮಾತನಾಡಿದರು
ಶಿರಾ: ಎಲ್ಲಾ ರಾಜಕಾರಣಿಗಳೂ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ರೇಸಾರ್ಟ್ಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಆಚರಿಸುತ್ತಾರೆ. ಆದರೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿಯಿಂದ ತಮ್ಮ ಹುಟ್ಟು ಹಬ್ಬದಂದು ಸರಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿದ ಅದನ್ನು ಉದ್ಘಾಟಿಸುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ. ಈ ರಾಜ್ಯ ಕಂಡ ಅಪರೂಪದ ರಾಜಕಾರಣಿ ಚಿದಾನಂದ್ ಗೌಡ ಅವರು ಎಂದು ಸಂಸದರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಹೇಳಿದರು.
ಇದನ್ನೂ ಓದಿ: Tumkur News: ತುಮಕೂರಲ್ಲಿ ಆಯಿಲ್ ಟ್ಯಾಂಕ್ ಸ್ಫೋಟವಾಗಿ ಇಬ್ಬರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ
ಅವರು ತಾಲೂಕಿನ ಹುಲಿಕುಂಟೆ ಹೋಬಳಿ, ಗೋಪಿಕುಂಟೆ ಗ್ರಾಮದಲ್ಲಿ ವಿಧಾನಪರಿಷತ್ ಶಾಸಕರಾದ ಚಿದಾನಂದ್ ಎಂ.ಗೌಡ ಅವರ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ 40 ಲಕ್ಷ ರೂ. ಹಾಗೂ ಗೋಪಿಕುಂಟೆ ಈರಣ್ಣ ಮೇಷ್ಟ್ರುರವರ ಸ್ಮರಣಾರ್ಥ ಗೌರವ ಪೂರ್ವಕವಾಗಿ ವೈಯಕ್ತಿಕ ೬೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೂತನ ಹೈಟೆಕ್ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ದರು. ಚಿದಾನಂದ್ ಎಂ.ಗೌಡ ಅವರು ತಾನು ಗಳಿಸಿದ್ದನ್ನು ತನಗೆ ಬೇಕಾದಷ್ಟು ಬಳಸಿಕೊಂಡು ಉಳಿದದ್ದನ್ನು ಸಮಾಜ ಸೇವೆಗೆ ವ್ಯಯಿಸುತ್ತಿದ್ದಾರೆ. ಅವರು ನೂರಾರು ವರ್ಷಗಳು ಆರೋಗ್ಯವಂತ ರಾಗಿ ಬದುಕಲಿ, ನೂರಾರು ಶಾಲೆಗಳನ್ನು ಸ್ಥಾಪಿಸಲಿ ಎಂದರು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳು ಹಾಗೂ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಮಾತನಾಡಿ ವಿಧಾನಪರಿಷತ್ ಶಾಸಕ ಚಿದಾನಂದ್ ಅವರ ಕೆಲಸ ಮೆಚ್ಚುವಂತದ್ದು ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದಿರುವ ಇಂತಹ ಸಂದರ್ಭದಲ್ಲಿ ಸರಕಾರಿ ಶಾಲೆಗಳನ್ನು ಪುನರ್ ನಿರ್ಮಾಣ ಮಾಡಿ ಮರು ಹುಟ್ಟು ನೀಡುತ್ತಿರುವುದು ಶ್ಲಾಘನೀಯ ಕೆಲಸ. ರಾಜಕಾರಣಿಗಳು ಯಾವುದೇ ಪಕ್ಷದವರಾಗಲಿ ಒಳ್ಳೆಯ ಕೆಲಸಗಳನ್ನು ಮಾಡಿದಾಗ ನಾವು ಶ್ಲಾಘಿಸಬೇಕು. ಇದುವರೆಗೂ ಯಾವ ಶಾಸಕರೂ ಪ್ರಾಮಾಣಿಕವಾಗಿ ಶಾಲಾ ಕಟ್ಟಡ ಕಟ್ಟುವ ಕೆಲಸ ಮಾಡಿಲ್ಲ. ಚಿದಾನಂದ್ ಎಂ.ಗೌಡ ಅವರಂತೆ ರಾಜ್ಯದ ಎಲ್ಲಾ ರಾಜಕಾರಣಿಗಳು ಶಾಲೆಗಳನ್ನು ಕಟ್ಟುವ ಕಾರ್ಯ ಮಾಡಲಿ, ಇದರಿಂದ ಬದಲಾವಣೆ ತರಲು ಸಾಧ್ಯವಾಗುತ್ತದೆ. ಇದು ಮಾದರಿ ಯಾಗಲಿ ಎಂದರು.
ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಚಿದಾನಂದ್ ಎಂ ಗೌಡ ಅವರು ಮಹಾತ್ಮ ಗಾಂಧಿ ಹಾಗೂ ಪ್ರಧಾನಮಂತ್ರಿ ನರೇಂದ್ರವಾಮೋದಿಯವರ ಕನಸು ಗ್ರಾಮಗಳು ಅಭಿವೃದ್ಧಿಯಾಗಬೇಕು ಎಂಬುದು ಅವರ ಆಶಯದಂತೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಶಾಲೆಗಳು ಅಭಿವೃದ್ಧಿಯಾಗಬೇಕು, ಈ ನಿಟ್ಟಿನಲ್ಲಿ ನಾನು ಪ್ರತಿ ವರ್ಷ ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆದು ಅದನ್ನು ಪುನರ್ ನಿರ್ಮಿಸುವ ಕಾರ್ಯ ಮಾಡುತ್ತಿದ್ದೇನೆ. ನಮ್ಮ ಮಗ ವಿದ್ಯಾವಂತನಾಗಬೇಕು ಎಂದು ನಮ್ಮ ತಾಯಿ ಅವರು ಗೋಪಿಕುಂಟೆಗೆ ಕಳುಹಿಸಿದರು.
ಗೋಪಿಕುಂಟೆಯಲ್ಲಿ ಈರಣ್ಣ ಮೆಸ್ಟುç ನನಗೆ ಉತ್ತಮ ವಿದ್ಯಾಭ್ಯಾಸ ನೀಡಿ ಮಗನಂತೆ ಸಾಕಿದರು. ಅದರಿಂದಲೇ ನಾನು ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು. ಅವರ ಸೇವೆಯೇ ನನಗೆ ಪ್ರೇರಣೆ ಯಾಗಿದೆ. ಪ್ರೆಸಿಡೆನ್ಸಿ ಶಾಲೆ ಶಿರಾ ದಿಕ್ಕನ್ನೆ ಬದಲಾಯಿಸಿದೆ. ನಾನು ಇದುವರೆಗೂ ಸುಮಾರು 1000 ಬಡ ಮಕ್ಕಳಿಗೆ ಉಚಿತ ನೀಡಿದ್ದೇನೆ. ಅದಕ್ಕೆ ಸುಮಾರು 20 ಕೋಟಿ ಇಲ್ಲಿಯವರೆಗೆ ಖರ್ಚಾಗಿದೆ. ಇದರಿಂದ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ಅರಿತು ಶಾಲೆ ಗಳನ್ನೇ ಪುನರ್ ನಿರ್ಮಾಣ ಮಾಡಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಸಿಗುವಂತಾಗಲಿ ಎಂದು ಶಾಲೆಗಳನ್ನು ನಿರ್ಮಿಸುತ್ತಿದ್ದಾನೆ.
ಇಂದು ಉದ್ಘಾಟಿಸಿರುವ ಗೋಪಿಕುಂಟೆಯಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ ಪ್ರಾರಂಭಿಸುತ್ತೇನೆ. ಅಗತ್ಯವಿದ್ದರೆ ನಮ್ಮ ಟ್ರಸ್ಟ್ ಕಡೆಯಿಂದ ಶಿಕ್ಷಕರನ್ನು ಕಳಿಸುತ್ತೇನೆ. ಅದಕ್ಕಾಗಿ ನಾನು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇನೆ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದರು.
ಕಾರ್ಯಕ್ರಮದಲ್ಲಿ ಸುಮಾರು ೩೦ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರ್ ಸೈಕಲ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್, ತಹಶೀಲ್ದಾರ್ ಸಚ್ಚಿದಾನಂದ ಕುಚನೂರ, ತಾ.ಪಂ. ಇಓ. ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ಬಿ.ಆರ್.ಸಿ. ರಂಗಪ್ಪ, ಗ್ರಾ.ಪಂ. ಅಧ್ಯಕ್ಷೆ ಗೀತಾ ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜು, ಮಾಜಿ ತಾ ಪಂ ಜಿ ಎನ್ ಅಧ್ಯಕ್ಷ ಜಿ.ಎನ್.ಮೂರ್ತಿ, ಮಾಜಿ ನಗರಸಭಾ ಸದಸ್ಯ ಸಂತೆಪೇಟೆ ನಟರಾಜ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ಅಧ್ಯಕ್ಷ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಮೂರ್ತಿ ಯಂಜಲ ಗೆರೆ, ಓಬಿಸಿ ಘಟಕದ ಅಧ್ಯಕ್ಷ ಮಾಗೋಡು ಪ್ರತಾಪ್, ಕೊಟ್ಟಿ ರಂಗನಾಥ್, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ ಪಾಂಡುರAಗಯ್ಯ, ಪ್ರೌ.ಶಾ.ಸ ಶಿಕ್ಷಕರ ಸಂಘದ ಅಧ್ಯಕ್ಷ ಅ ಮು ತಿಪ್ಪೆಸ್ವಾಮಿ, ಅಂಗವಿಕಲರ ತಾಲೂಕು ಸಂಯೋಜಕ ಚಿತ್ತಯ್ಯ, ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ ರಾಜು. ಬಿ.ಆರ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಚ್.ಕುಮಾರ್ ಮಾಸ್ಟರ್, ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ತಾ.ಪಂ. ಸಹಾಯಕ ನಿರ್ದೇಶಕ ಕನಕಪ್ಪ, ಶಾಲೆ ಯ ಮುಖ್ಯ ಶಿಕ್ಷಕಿ ನಾಗವ್ವ ದನದ, ಗ್ರಾ ಪಂ ಸದಸ್ಯ ಶಿವಲಿಂಗಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ರಾಮಚಂದ್ರಪ್ಪ, ಶಿಕ್ಷಕಿ ಗೀತಾ, ಮುಖಂಡರಾದ ಹನುಮಂತನಾಯ್ಕ, ಪದ್ಮ ಮಂಜುನಾಥ್, ನಾಗರತ್ನಮ್ಮ, ಈ ಸಿ ಓ ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.
*
ನಾಡೋಜ ಬರಗೂರು ರಾಮಂದ್ರಪ್ಪ ಮಾತನಾಡಿ ವಿಧಾನಪರಿಷತ್ ಶಾಸಕ ಚಿದಾನಂದ್ ಗೌಡ ಅವರು ಗೋಪಿಕುಂಟೆಯಲ್ಲಿ ನೂತನವಾಗಿ ಕಟ್ಟಿರುವ ಶಾಲಾ ಕಟ್ಟಡ ಅವರಿಗೆ ಶಿಕ್ಷಣೆ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಚಿದಾನಂದ್ ಗೌಡ ಅವರು ಸಾಂಸ್ಕತಿಕ, ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ. ದೇಶದಲ್ಲಿ ಶಿಕ್ಷಣ ಕ್ಷೇತ್ರವನ್ನು ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ನಿರ್ಲಕ್ಷಿಸಿವೆ. ಅನುದಾನ ಸರಿಯಾಗಿ ಸಿಗುತ್ತಿಲ್ಲ. ಸರಕಾರಿ ಶಾಲೆ ಅಭಿವೃದ್ಧಿ ಆದರೆ ಹಳ್ಳಿಗಳ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ. ಶಿಕ್ಷಣ ಪದ್ಧತಿಯಲ್ಲಿಯೇ ಅಸಮಾನತೆ ಇದೆ. ಯಾರು ಶಿಕ್ಷಣವನ್ನು ಮೊದಲ ಅಧ್ಯತೆಯಲ್ಲಿ ನೋಡುತ್ತಿಲ್ಲ.ಖಾಯಂ ಅಧ್ಯಾಪಕರನ್ನು ನೇಮಿಸುತ್ತಿಲ್ಲ. ಆದ್ದರಿಂದ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಶಿಕ್ಷಣ ಕ್ಷೇತ್ರವನ್ನು ಗ್ಯಾರಂಟಿ ಪಟ್ಟಿಗೆ ಸೇರಿಸಿ. ಒಳ್ಳೆ ಕಟ್ಟಡ ನಿರ್ಮಿಸಿ, ಒಳ್ಳೆ ವಾತಾವರಣ ಕಲ್ಪಿಸಿ ಎಂದರು.
ಗೋವಿಂದ ಕಾರಜೋಳ ಸಂಸದರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು