ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Dharmendra: ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಧರ್ಮೇಂದ್ರ- ನಟನೆ ಜೊತೆಗೆ ರಾಜಕೀಯದಲ್ಲೂ ಛಾಪು ಮೂಡಿಸಿದ್ದ ನಟ!

Dharmendra in Politics: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಭಿಮಾನಿಗಳಿಂದ ಸಹಾನುಭೂತಿ ಮತ್ತು ಶುಭಾಶಯಗಳನ್ನು ಸ್ವೀಕರಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಐಕಾನಿಕ್ ಪಾತ್ರಗಳಿಗೆ ಖ್ಯಾತಿ ಪಡೆದಿರುವ ಧರ್ಮೇಂದ್ರ ಅವರ ರಾಜಕೀಯ ಜೀವನದಲ್ಲೂ ಕೂಡ ಒಂದು ಚಿಕ್ಕ ಅಧ್ಯಾಯವಿತ್ತು. ಈ ಬಗ್ಗೆ ಇಲ್ಲಿದೆ ವಿವರ.

ನಟ ಧರ್ಮೇಂದ್ರ(ಸಂಗ್ರಹ ಚಿತ್ರ)

ಮುಂಬೈ: ಹಿರಿಯ ನಟ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸಂಸದ ಧರ್ಮೇಂದ್ರ (Dharmendra) ಅವರನ್ನು ಮುಂಬೈನ (Mumbai) ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇನ್ನೂ ನಿಗಾದಲ್ಲಿ ಇರಿಸಲಾಗಿದೆ. ಉಸಿರಾಟದ ತೊಂದರೆಯಿಂದಾಗಿ 89 ವರ್ಷದ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ (ನವೆಂಬರ್ 10) ಬೆಳಿಗ್ಗ ವ್ಯಾಪಕವಾಗಿ ಹರಡಿದ ಅವರ ಸಾವಿನ ವದಂತಿಗಳಿಗೆ ಅವರ ಪುತ್ರಿ ಇಶಾ ಡಿಯೋಲ್ (Isha Diol) ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.

ಇಶಾ ಡಿಯೋಲ್ ತನ್ನ ತಂದೆಯ ಸಾವಿನ ವದಂತಿಗಳಿಗೆ ಸಿಟ್ಟಾಗಿದ್ದಾರೆ. ಮಾಧ್ಯಮಗಳು ಅತಿರೇಕದಲ್ಲಿದ್ದು, ಸುಳ್ಳು ಸುದ್ದಿಗಳನ್ನು ಹರಡುತ್ತಿರುವಂತೆ ತೋರುತ್ತಿದೆ. ನನ್ನ ತಂದೆ ಸ್ಥಿರರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಗೌಪ್ಯತೆಯನ್ನು ನೀಡುವಂತೆ ನಾವು ಎಲ್ಲರಿಗೂ ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು ಎಂದು ಇಶಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Dharmendra: ಧರ್ಮ ಮೀರಿದ ಪ್ರೇಮವಿವಾಹ! ಡ್ರೀಮ್ ಗರ್ಲ್ ಮೇಲೆ ಲವ್; ಧರ್ಮೇಂದ್ರ - ಹೇಮಾ ಮಾಲಿನಿ ಕ್ಯೂಟ್‌ ಪ್ರೇಮ ಕಥೆ ಇದು

ಚಲನಚಿತ್ರೋದ್ಯಮ ಮತ್ತು ರಾಜಕೀಯ ವಲಯದ ಗಣ್ಯರು ಧರ್ಮೇಂದ್ರ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಗುರುದಾಸ್ಪುರದ ಬಿಜೆಪಿ ಸಂಸದರಾಗಿದ್ದ ಅವರ ಸಂಕ್ಷಿಪ್ತ ರಾಜಕೀಯ ಜೀವನದ ಒಂದು ನೋಟ ಇಲ್ಲಿದೆ:

2004 ರಲ್ಲಿ ಭಾರತ ಶೈನಿಂಗ್ ಅಭಿಯಾನದ ಸಮಯದಲ್ಲಿ ಧರ್ಮೇಂದ್ರ ಅವರು ಬಿಜೆಪಿಗೆ ಪ್ರವೇಶಿಸುವ ಮೂಲಕ ಅವರ ರಾಜಕೀಯ ಪ್ರವೇಶವಾಯಿತು. ಎಲ್.ಕೆ. ಅಡ್ವಾಣಿ ಸೇರಿದಂತೆ ಹಿರಿಯ ನಾಯಕರಿಂದ ಪ್ರೋತ್ಸಾಹಿಸಲ್ಪಟ್ಟ ಅವರನ್ನು ರಾಜಸ್ಥಾನದ ಬಿಕಾನೇರ್‌ನಿಂದ ಕಣಕ್ಕಿಳಿಸಿದರು. ಅವರ ಅಪಾರ ಜನಪ್ರಿಯತೆಯ ಆಧಾರದ ಮೇಲೆ, ಅವರು 14ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೇಶ್ವರ ಲಾಲ್ ದುಡಿ ಅವರನ್ನು ಸುಮಾರು 60,000 ಮತಗಳಿಂದ ಸೋಲಿಸಿ ಸಂಸತ್ ಸದಸ್ಯರಾದರು.

ಚುನಾವಣೆಯ ಸಮಯದಲ್ಲಿ, ಧರ್ಮೇಂದ್ರ ಅವರು ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಮೂಲಭೂತ ಶಿಷ್ಟಾಚಾರವನ್ನು ಕಲಿಸಲು ಶಾಶ್ವತವಾಗಿ ಸರ್ವಾಧಿಕಾರಿಯಾಗಿ ಆಯ್ಕೆಯಾಗಬೇಕು ಎಂದು ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಚುನಾಯಿತರಾಗಿ ಆಯ್ಕೆಯಾದ ನಂತರ, ಸಂಸತ್‍ ಅಧಿವೇಶನಕ್ಕೆ ಅಷ್ಟಾಗಿ ಹೋಗುತ್ತಿರಲಿಲ್ಲ. ಕೆಲವೇ ಕೆಲವು ಅಧಿವೇಶನಗಳಿಗಷ್ಟೇ ಹಾಜರಾಗಿದ್ದರು. ಅವರು ತಮ್ಮ ಚಲನಚಿತ್ರ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಮತ್ತು ತಮ್ಮ ತೋಟದ ಮನೆಯಲ್ಲಿ ಸಮಯ ಕಳೆಯಲು ಆದ್ಯತೆ ನೀಡಿದ್ದರು.

ಟೀಕೆಗಳ ಹೊರತಾಗಿಯೂ, ನಟ ಧರ್ಮೇಂದ್ರ ಪರ ಬೆಂಬಲಿಗರು ಅವರು ಬಿಕಾನೆರ್‌ನ ಅಭಿವೃದ್ಧಿಗಾಗಿ ಮನ್ನಣೆ ಪಡೆಯದೆ ಸದ್ದಿಲ್ಲದೆ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡರು. 2009ರ ಸುಮಾರಿಗೆ ಧರ್ಮೇಂದ್ರ ಮರುಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದರು.

ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಧರ್ಮೇಂದ್ರ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದರು. ಅವರ ಮಗ ಮತ್ತು ನಟ ಸನ್ನಿ ಡಿಯೋಲ್ ಸಂದರ್ಶನವೊಂದರಲ್ಲಿ ತಮ್ಮ ತಂದೆಗೆ ರಾಜಕೀಯ ಇಷ್ಟವಾಗಲಿಲ್ಲ, ಅದರ ಆಂತರಿಕ ಕೆಲಸಗಳಿಂದ ಆಗಾಗ ನಿರಾಶೆಗೊಳ್ಳುತ್ತಿದ್ದರು ಎಂದು ಹೇಳಿದರು. ಧರ್ಮೇಂದ್ರ ಸ್ವತಃ ಒಮ್ಮೆ, ನಾನು ಕೆಲಸ ಮಾಡುತ್ತಿದ್ದೆ, ಬೇರೆಯವರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದರು. ಬಹುಶಃ ಆ ಸ್ಥಾನ ನನಗೆ ಅಲ್ಲದಿರಬಹುದು ಎಂದಿದ್ದರು.

ಇದನ್ನೂ ಓದಿ: Actor Dharmendra: ಮೊದಲ ಪತ್ನಿ ಪ್ರಕಾಶ್ ಕೌರ್ ಜತೆ ನಟ ಧರ್ಮೇಂದ್ರ ವಾಸ; ಮಗ ಬಾಬ್ಬಿ ಡಿಯೋಲ್ ಸ್ಪಷ್ಟನೆ

ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದರೂ, ರಾಜಕೀಯ ವಲಯದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. 2019 ರಲ್ಲಿ, ಅವರು ಗುರುದಾಸ್ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ತಮ್ಮ ಮಗ ಸನ್ನಿ ಡಿಯೋಲ್ ಪರವಾಗಿ ಪ್ರಚಾರ ಮಾಡಿದರು. ನಾನು ರಾಜಕಾರಣಿಯಲ್ಲದ ಕಾರಣ ರಾಜಕೀಯ ಭಾಷಣಗಳನ್ನು ನೀಡಲು ಇಲ್ಲಿಗೆ ಬಂದಿಲ್ಲ. ನಾನು ದೇಶಭಕ್ತ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ತಿಳಿಯಲು ಬಂದಿರುವುದಾಗಿ ಪ್ರಚಾರದ ಸಮಯದಲ್ಲಿ ಹೇಳಿದ್ದರು. ಭಾಷಣ ಮಾಡುವುದಕ್ಕಿಂತ ಜನರನ್ನು ಭೇಟಿಯಾಗಲು ಇಷ್ಟಪಡುವುದಾಗಿ ಅವರು ಸ್ಪಷ್ಟಪಡಿಸಿದರು.

ರಾಜಕಾರಣಿಗಿಂತ ಹೆಚ್ಚಾಗಿ ಕಲಾವಿದ ಎಂದು ಗುರುತಿಸಿಕೊಂಡರೂ, ಧರ್ಮೇಂದ್ರ ರಾಷ್ಟ್ರೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದರು. 2021 ರಲ್ಲಿ ರೈತರ ಪ್ರತಿಭಟನೆಯ ಸಮಯದಲ್ಲಿ, ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ರೈತರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಧರ್ಮೇಂದ್ರ ಅವರು ಇಕ್ಕಿಸ್‍ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದು ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.