Dharmendra: ಧರ್ಮ ಮೀರಿದ ಪ್ರೇಮವಿವಾಹ! ಡ್ರೀಮ್ ಗರ್ಲ್ ಮೇಲೆ ಲವ್; ಧರ್ಮೇಂದ್ರ - ಹೇಮಾ ಮಾಲಿನಿ ಕ್ಯೂಟ್ ಪ್ರೇಮ ಕಥೆ ಇದು
ನವೆಂಬರ್ 1, 2025 ರಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ನಟನನ್ನು ದಾಖಲಿಸಲಾಯಿತು. ಧರ್ಮೇಂದ್ರ (Dharmendra) ಅವರನ್ನು ವೆಂಟಿಲೇಟರ್‌ನಲ್ಲಿದ್ದಾರೆ ಎಂಬ ವದಂತಿಗಳ ನಡುವೆ, ಹೇಮಾ ಮಾಲಿನಿ ಒಂದು ಅಪ್‌ಡೇಟ್ ಹಂಚಿಕೊಂಡರು.ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಆಶಿಸುತ್ತಿದ್ದೇವೆ ಎಂದು ಹಂಚಿಕೊಂಡರು. ಧರ್ಮೇಂದ್ರ ಅವರನ್ನು ದಾಖಲಿಸಲಾಗಿದ್ದ (Hospital) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಹೊರಗೆ ನಟಿ ಕಾಣಿಸಿಕೊಂಡರು. ಇದೀಗ ಈ ಕ್ಯೂಟ್ ಜೋಡಿಯ ಲವ್ ಸ್ಟೋರಿ ವೈರಲ್ ಆಗ್ತಿದೆ.
Dharmendra Hema Malini -
ವರದಿಗಳ ಪ್ರಕಾರ ಧರ್ಮೇಂದ್ರ (Dharmendra) ಅವರ ಸ್ಥಿತಿ ಗಂಭೀರವಾಗಿದ್ದು, ಕುಟುಂಬ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯದ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಸಂಖ್ಯಾತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಧರ್ಮೇಂದ್ರ ವೆಂಟಿಲೇಟರ್‌ನಲ್ಲಿದ್ದಾರೆ ಎಂಬ ವರದಿಗಳ ನಂತರ, ಅವರ ಪತ್ನಿ ಹೇಮಾ ಮಾಲಿನಿ (Hema Malini) ಅವರು ಈ ಬಗ್ಗೆ ಒಂದು ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ನವೆಂಬರ್ 1, 2025 ರಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ನಟನನ್ನು ದಾಖಲಿಸಲಾಯಿತು. ಧರ್ಮೇಂದ್ರ ಅವರನ್ನು ವೆಂಟಿಲೇಟರ್‌ನಲ್ಲಿದ್ದಾರೆ ಎಂಬ ವದಂತಿಗಳ ನಡುವೆ, ಹೇಮಾ ಮಾಲಿನಿ ಒಂದು ಅಪ್‌ಡೇಟ್ ಹಂಚಿಕೊಂಡರು.ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಆಶಿಸುತ್ತಿದ್ದೇವೆ ಎಂದು ಹಂಚಿಕೊಂಡರು. ಧರ್ಮೇಂದ್ರ ಅವರನ್ನು ದಾಖಲಿಸಲಾಗಿದ್ದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಹೊರಗೆ ನಟಿ ಕಾಣಿಸಿಕೊಂಡರು. ಇದೀಗ ಈ ಕ್ಯೂಟ್ ಜೋಡಿಯ ಲವ್ ಸ್ಟೋರಿ ವೈರಲ್ ಆಗ್ತಿದೆ.
ಇದನ್ನೂ ಓದಿ: Bigg Boss Kannada 12: ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ! ಧ್ರುವಂತ್‌ಗೆ ಚಳಿ ಬಿಡಿಸಿದ್ರು ರಾಶಿಕಾ, ಕಾವ್ಯ
ಧರ್ಮೇಂದ್ರ ಮತ್ತು ಹೇಮಾ ಮಾಲಿನಿಯ ಪ್ರೇಮಕಥೆ!
1980 ರಲ್ಲಿ ನಟಿ ಹೇಮಾ ಮಾಲಿನಿ (Hema Malini) ಅವರನ್ನ ಎರಡನೇ ವಿವಾಹವಾದಾಗ ಧರ್ಮೇಂದ್ರ ಅವರಿಗೆ ಅದಾಗಲೇ ಮೊದಲನೇ ಹೆಂಡತಿ ಪ್ರಕಾಶ್ ಕೌರ್ (Prakash Kaur) ಜೊತೆಗೆ ಮದುವೆಯಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದ ವಿಷಯ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು.
ಧರ್ಮೇಂದ್ರ ಮತ್ತು ಹೇಮಾ ಮಾಲಿನಿಯ ಪ್ರೇಮಕಥೆಯು 1970 ರ ದಶಕದಲ್ಲಿ ತುಮ್ ಹಸೀನ್ ಮೈ ಜವಾನ್ ಚಿತ್ರದಲ್ಲಿ ಕೆಲಸ ಮಾಡುವಾಗ ಪ್ರಾರಂಭವಾಯಿತು. ಈ ಜೋಡಿ ಹಲವಾರು ಹಿಟ್ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿತ್ತು, ಮತ್ತು ಧರ್ಮೇಂದ್ರ ಮದುವೆಯಾಗಿ ಮಕ್ಕಳಿದ್ದರೂ ಹೇಮಾ ಮಾಲಿನಿಯವರನ್ನು ತುಂಬಾ ಪ್ರೀತಿಸುತ್ತಿದ್ದರೂ, ಹೇಮಾ ಮಾಲಿನಿ ಅವರಿಂದ ದೂರವಿದ್ದರು.
ಮೊದಲ ಪತ್ನಿ ವಿಚ್ಛೇದನ
ಧರ್ಮೇಂದ್ರ ತನ್ನ ಮೊದಲ ಪತ್ನಿ ಪ್ರಕಾಶ್‌ಗೆ ವಿಚ್ಛೇದನ ನೀಡಲು ಸಾಧ್ಯವಾಗದ ಕಾರಣ, ಹೇಮಾ ಮಾಲಿನಿಯೊಂದಿಗಿನ ತನ್ನ ಎರಡನೇ ಮದುವೆಯನ್ನು ಕಾನೂನುಬದ್ಧಗೊಳಿಸಲು ಇಸ್ಲಾಂಗೆ ಮತಾಂತರಗೊಂಡರು. ಈ ಜೋಡಿ 1980 ರಲ್ಲಿ ನಿಕಾಹ್‌ನಲ್ಲಿ ಸದ್ದಿಲ್ಲದೆ ವಿವಾಹವಾದರು, ನಂತರ ಹೇಮಾ ಮಾಲಿನಿಯ ಸಂಪ್ರದಾಯವನ್ನು ಗೌರವಿಸಲು ಅಯ್ಯಂಗಾರ್ ಶೈಲಿಯ ವಿವಾಹವಾಯಿತು.
ಹೇಮಾ ಮಾಲಿನಿ ಅವರು ತಮ್ಮ ‘ಬಿಯಾಂಡ್ ದಿ ಡ್ರೀಮ್ ಗರ್ಲ್’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ, ಧರ್ಮೇಂದ್ರ ಅವರ ಮೊದಲ ಪತ್ನಿಯೊಂದಿಗಿನ ತಮ್ಮ ಸಮೀಕರಣದ ಬಗ್ಗೆ ಹೇಮಾ ಮಾತನಾಡಿದ್ದಾರೆ ಮತ್ತು ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಬಾರದು ಅಂತಲೂ ಸಹ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ವಿಶೇಷ ಅಧಿಕಾರ ಬಳಸಿದ ಸುಧಿ, ಕಣ್ಣೀರಿಡುತ್ತಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಚಂದ್ರಪ್ರಭ
ಬಾಲಿವುಡ್‌ನಲ್ಲಿ ಸಕ್ರಿಯ
1960ರಿಂದಲೂ ಧರ್ಮೇಂದ್ರ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಅವರನ್ನು ಅಭಿಮಾನಿಗಳು ಗುರುತಿಸುತ್ತಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ನಟಿಸಿ ಅನೇಕ ಬಗೆಯ ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ.