Karishma Sharma: ಚಲಿಸುತ್ತಿದ್ದ ರೈಲಿನಿಂದ ಜಿಗಿದ ಖ್ಯಾತ ನಟಿ- ಗಂಭೀರ ಗಾಯ
Karishma Sharma: ನಟಿ ಕರಿಷ್ಮಾ ಶರ್ಮಾ ಅವರು ಮುಂಬೈನಲ್ಲಿ ಚಲಿಸುವ ಲೋಕಲ್ ರೈಲಿನಿಂದ ಹಾರಿ ಗಂಭೀರ ಗಾಯ ಗೊಂಡಿದ್ದಾರೆ. ಸದ್ಯ ನಟಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯಕೀಯ ತಪಾಸಣೆ ಕೂಡ ಮಾಡಲಾಗಿದೆ. ಈ ಮೂಲಕ ರೈಲಿನಿಂದ ಬಿದ್ದು ಗಾಯವಾಗಿದ್ದ ಬಗ್ಗೆ ನಟಿ ಕರಿಷ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

-

ನವದೆಹಲಿ: ರಾಗಿಣಿ ಎಂಎಂಎಸ್ ರಿಟರ್ನ್ಸ್' , 'ಪ್ಯಾರ್ ಕಾ ಪಂಚನಾಮ' ಚಿತ್ರಗಳ ಮೂಲಕ ಖ್ಯಾತಿ ಪಡೆದ ನಟಿ ಕರಿಷ್ಮಾ ಶರ್ಮಾ (Karishma Sharma) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನೋಡಲು ಸ್ಟೈಲಿಶ್ ಹಾಗೂ ಗ್ಲಾಮರಸ್ ಆಗಿರುವ ಇವರು ಸೋಶಿಯಲ್ ಮಿಡಿಯಾ ದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದಾರೆ. ಹೀಗಾಗಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಕೂಡ ಖ್ಯಾತಿ ಪಡೆದಿದ್ದಾರೆ. ಸದ್ಯಬಾಲಿವುಡ್‌ನ ಯುವ ನಟಿ ಕರಿಷ್ಮಾ ಶರ್ಮಾ ರೈಲಿನಿಂದ ಹಾರುವ ದುಸ್ಸಾಹಸಕ್ಕೆ ಕೈ ಹಾಕಿದ್ದು ದೊಡ್ಡ ಎಡವಟ್ಟನ್ನು ಮಾಡಿಕೊಂಡಿದ್ದಾರೆ.
ನಟಿ ಕರಿಷ್ಮಾ ಶರ್ಮಾ ಅವರು ಮುಂಬೈನಲ್ಲಿ ಚಲಿಸುವ ಲೋಕಲ್ ರೈಲಿನಿಂದ ಹಾರಿ ಗಂಭೀರ ಗಾಯಗೊಂಡಿದ್ದಾರೆ.ಸದ್ಯ ನಟಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯಕೀಯ ತಪಾಸಣೆ ಕೂಡ ಮಾಡಲಾಗಿದೆ. ಈ ಮೂಲಕ ರೈಲಿನಿಂದ ಬಿದ್ದು ಗಾಯವಾಗಿದ್ದ ಬಗ್ಗೆ ನಟಿ ಕರಿಷ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ನಟಿ ಕರಿಷ್ಮಾ ಶರ್ಮಾ ಮುಂಬೈನ ಚರ್ಚ್‌ಗೇಟ್‌ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು ಚಲಿಸುವ ರೈಲಿನಿಂದ ಹಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ಸ್ವತಃ ಕರಿಷ್ಮಾ ಶರ್ಮಾ ಅವರೆ ತಮ್ಮ ಸೋಶಿಯಲ್ ಮಿಡಿಯಾದ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಹೇಗಾಯಿತು? ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬಿತ್ಯಾದಿ ಮಾಹಿತಿಯನ್ನು ನಟಿ ಕರಿಷ್ಮಾ ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಶೂಟಿಂಗ್ ನ ಕೆಲಸವಿದ್ದ ಕಾರಣ ಮುಂಬೈ ನ ಚರ್ಚ್‌ಗೇಟ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆನು. ನಾನು ಸೀರೆ ಧರಿಸಿದ್ದು ರೈಲು ಹತ್ತಲು ಬಹಳ ಕಷ್ಟವಾಗಿತ್ತು. ನಾನು ರೈಲು ಹತ್ತಿದ ಬಳಿಕ ಹಿಂತಿ ರುಗಿ ನೋಡಿದಾಗ ನನ್ನ ಸ್ನೇಹಿತರು ರೈಲು ಹತ್ತದೆ ಇರುವುದು ತಿಳಿಯಿತು. ಹೀಗಾಗಿ ನಾನು ಭಯದಿಂದ ರೈಲಿನಿಂದ ಹಾರಿದೆ. ಪರಿಣಾಮ ಗಂಭೀರ ಗಾಯಗಳಾಗಿದ್ದು ಬೆನ್ನು ಹಾಗೂ ತಲೆಗೂ ಸಾಕಷ್ಟು ಪೆಟ್ಟಾಗಿದೆ ಮೈ ತುಂಬಾ ಗಾಯಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
ಬಳಿಕ ತನ್ನ ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ನಟಿ ಕರಿಷ್ಮಾ ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದ್ದ ಕಾರಣ ವೈದ್ಯಕೀಯ ಸಲಹೆಯಂತೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ತಲೆ ಭಾಗ ಊತಗೊಂಡಿದೆ. ಬಿದ್ದ ನೋವು ಕೂಡ ಜಾಸ್ತಿಯೇ ಇದೆ. ಹಾಗಿದ್ದರೂ ಧೈರ್ಯದಿಂದ ಇದ್ದೇನೆ. ನಾನು ಆದಷ್ಟು ಬೇಗ ಚೇತರಿಸಿಕೊಳ್ಳುವ ಭರವಸೆ ಇದೆ ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಕರಿಷ್ಮಾ ಶರ್ಮಾ ರೈಲಿನಿಂದ ಜಿಗಿಯುತ್ತಿದ್ದಂತೆ ಆಕೆಯ ಆಪ್ತರು ಹಾಗೂ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರು ಆರೋಗ್ಯವನ್ನು ವಿಚಾರಿ ಸಿದ್ದಾರೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೊ ಕೂಡ ವೈರಲ್ ಆಗಿದೆ. ಈ ಮೂಲಕ ಖ್ಯಾತ ನಟಿ ಸಣ್ಣ ಬೇಜವಾಬ್ದಾರಿತನದಿಂದ ಪ್ರಾಣಕ್ಕೆ ಕುತ್ತುಬರುವ ಮಟ್ಟಕ್ಕೆ ತಲುಪಿದ್ದು ಮಾತ್ರ ವಿಪರ್ಯಾಸ ಎನ್ನಬಹುದು. ನಟಿ ಕರಿಷ್ಮಾ ಶರ್ಮಾ ಹಿಂದಿ ಕಿರಿತೆರೆಯ 'ಪವಿತ್ರಾ ರಿಶ್ತಾ' ಎಂಬ ಜನಪ್ರಿಯಾ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು ಬಳಿಕ ಬಾಲಿವುಡ್ ಸಿನಿಮಾದಲ್ಲಿಯೂ ಅವಕಾಶ ಪಡೆದು ರಾಗಿಣಿ ಎಂಎಂಎಸ್', 'ಉಜಡಾ ಚಮನ್', 'ಹಮ್', 'ಪ್ಯಾರ್ ಕಾ ಪಂಚನಾಮ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.