ಪುಟ್ಟಪರ್ತಿ: ಶ್ರೀ ಸತ್ಯಸಾಯಿ ಬಾಬಾ (Sri Sathya Sai Baba) ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಟಿ ಐಶ್ವರ್ಯಾ ರೈ (Aishwarya Rai) ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲಿ ಅವರು ಜಾತಿ, ಧರ್ಮ ಮತ್ತು ಪ್ರೀತಿಯ ಕುರಿತು ಪ್ರಬಲ ಭಾಷಣ ಮಾಡಿದ್ದಾರೆ. ಅದಕ್ಕೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು ಬಹಳ ವಿಶೇಷವಾಗಿತ್ತು
ಪ್ರಧಾನಿ ಮೋದಿ ಅವರ ಪಾದ ಮುಟ್ಟಿದ ಐಶ್ವರ್ಯಾ ರೈ
ಬುಧವಾರ, ಐಶ್ವರ್ಯಾ ರೈ ಅವರು ಶ್ರೀ ಸತ್ಯ ಸಾಯಿಬಾಬಾ ಅವರ ಶತಮಾನೋತ್ಸವ ಆಚರಣೆಯಲ್ಲಿ ಪ್ರಮುಖ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ ಭಾಗವಹಿಸಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಹಾಜರಿದ್ದರು. ಪ್ರಧಾನಿ ಮೋದಿಯವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಕ್ಕಾಗಿ ಐಶ್ವರ್ಯಾ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಹೃದಯಸ್ಪರ್ಶಿ ಭಾಷಣ ಮಾಡಿದರು.
PM Modi: ಮೋದಿ ಕೈಯಲ್ಲಿರುವ ಸ್ವದೇಶಿ ವಾಚ್ ಬೆಲೆ ಎಷ್ಟು ಗೊತ್ತೇ?
ಇರುವುದು ಒಂದೇ ಜಾತಿ, ಅದು ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಅದು ಹೃದಯದ ಭಾಷೆ ಮತ್ತು ಇರುವುದು ಒಂದೇ ದೇವರು ಅವನು ಸರ್ವವ್ಯಾಪಿ ಎಂದು ತಮ್ಮ ಭಾಷಣದಲ್ಲಿ ಐಶ್ವರ್ಯ ರೈ ಹೇಳಿದರು.
ಇಲ್ಲಿದೆ ಭಾಷಣ ವಿಡಿಯೊ:
ಪ್ರಧಾನಿ ಮೋದಿ ಅವರಿಗೆ ವಿಶೇಷ ಸಂದೇಶ ರವಾನಿಸಿದ ಐಶ್ವರ್ಯಾ, ಇಂದು ನಮ್ಮೊಂದಿಗೆ ಇದ್ದಕ್ಕಾಗಿ ಮತ್ತು ಈ ವಿಶೇಷ ಸಂದರ್ಭವನ್ನು ಗೌರವಿಸಿದ್ದಕ್ಕಾಗಿ ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ನಮ್ಮನ್ನು ರೋಮಾಂಚನಗೊಳಿಸಲು ನಿಮ್ಮ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ಪ್ರಧಾನಿಯವರ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಪಾವಿತ್ರ್ಯ ಮತ್ತು ಸ್ಫೂರ್ತಿಯನ್ನು ನೀಡುತ್ತದೆ. ನಿಜವಾದ ನಾಯಕತ್ವವೇ ಸೇವೆ ಮತ್ತು ಮನುಷ್ಯನಿಗೆ ಮಾಡುವ ಸೇವೆಯೇ ದೇವರ ಸೇವೆ ಎಂಬ ಸ್ವಾಮಿಯವರ ಸಂದೇಶವನ್ನು ನಮಗೆ ನೆನಪಿಸುತ್ತದೆ ಎಂದು ಅವರು ಹೇಳಿದರು. ಭಾಷಣ ಮುಗಿಸಿದ ನಂತರ ನಟಿಯು ಪ್ರಧಾನಿ ಮೋದಿಯವರ ಬಳಿಗೆ ನಡೆದು ಬಂದು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.
ಐಶ್ವರ್ಯಾ ರೈ ಅವರ ಈ ನಡೆ ಅವರ ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಸಂತಸ ತಂದಿದೆ. ಅನೇಕರು ಐಶ್ವರ್ಯಾ ಅವರ ವಿನಯತೆಯನ್ನು ಶ್ಲಾಘಿಸಿದ್ದಾರೆ. ಐಶ್ವರ್ಯಾ ರೈ, ಸತ್ಯಸಾಯಿ ಬಾಬಾ ಅವರ ಒಂದು ಜಾತಿ, ಒಂದು ಧರ್ಮ, ಒಂದು ದೇವರು ಎಂಬ ಸಂದೇಶವನ್ನು ಪ್ರತಿಧ್ವನಿಸುತ್ತಿರುವುದು ಪ್ರಾಮಾಣಿಕವಾಗಿ ಈ ಯುಗದ ಅತ್ಯಂತ ಪ್ರಭಾವಶಾಲಿ ಭಾಷಣಗಳಲ್ಲಿ ಒಂದಾಗಿದೆ. ಘನತೆ, ಸ್ಪಷ್ಟತೆ ಮತ್ತು ಬುದ್ಧಿವಂತಿಕೆ - ಎಲ್ಲವೂ ಒಂದೇ ಚೌಕಟ್ಟಿನಲ್ಲಿ ಕಾಣಿಸಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಐಶ್ವರ್ಯಾ ರೈ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿದ್ದಾರೆ: ಕೆಲವು ಕ್ಷಣಗಳಿಗೆ ಹ್ಯಾಶ್‌ಟ್ಯಾಗ್‌ಗಳು ಅಗತ್ಯವಿಲ್ಲ ಎಂದು ಹಂಚಿಕೊಂಡಿದ್ದಾರೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಉತ್ತಮ ಸಂಸ್ಕಾರವಂತೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಗೌರವದಿಂದ ಮುಟ್ಟುವ ಮೂಲಕ ಅವರು ಕೇವಲ ಸೌಂದರ್ಯವನ್ನು ಮಾತ್ರವಲ್ಲದೆ, ಮೌಲ್ಯಗಳು, ವಿನಯತೆ ಮತ್ತು ಗೌರವದಲ್ಲಿ ಬೇರೂರಿರುವ ನಿಜವಾದ ಸುಂದರ ಪಾತ್ರವನ್ನು ಹೊಂದಿದ್ದಾರೆಂದು ತೋರಿಸುತ್ತದೆ. ಅವರು ಇಂದು ಮತ್ತೊಮ್ಮೆ ಒಂದು ಶತಕೋಟಿ ಹೃದಯಗಳನ್ನು ಗೆದ್ದಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.