PM Modi: ಮೋದಿ ಕೈಯಲ್ಲಿರುವ ಸ್ವದೇಶಿ ವಾಚ್ ಬೆಲೆ ಎಷ್ಟು ಗೊತ್ತೇ?
ದುಬಾರಿ ವಸ್ತುಗಳ ಬಳಕೆ ಪ್ರಧಾನಿ ನರೇಂದ್ರ ಮೋದಿಗೆ ಹೊಸತೇನಲ್ಲ. ಆದರೆ ಈ ಬಾರಿ ಎಲ್ಲರ ಗಮನ ಸೆಳೆದಿರುವ ಅವರ ಕೈಗಡಿಯಾರ ದುಬಾರಿ ಮಾತ್ರವಲ್ಲ ಸ್ವದೇಶಿ ಕೂಡ ಹೌದು. ಈ ಗಡಿಯಾರದ ವಿಶೇಷತೆ ಎಂದರೆ ಇದರ ಡಯಲ್ ಮೇಲೆ 1947ರ ಒಂದು ರೂಪಾಯಿ ನಾಣ್ಯದ ಗುರುತು ಇದೆ. ಈ ವಾಚ್ ಬೆಲೆ ಬರೋಬ್ಬರಿ 60,000 ರೂ. ಎನ್ನಲಾಗಿದೆ. ಹಾಗಾದರೆ ಈ ವಾಚ್ ಯಾವುದು, ಇದರ ಇನ್ನಷ್ಟು ವಿಶೇಷತೆಗಳು ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ: ಐಷಾರಾಮಿ ವಸ್ತುಗಳ ಬಳಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಹೆಚ್ಚು ಆಸಕ್ತಿ ಹೊಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಅವರ ಉಡುಗೆ ತೊಡುಗೆಗಳು ಎಲ್ಲರ ಗಮನ ಸೆಳೆಯುತ್ತಿರುತ್ತದೆ. ಇದೀಗ ಅವರು ಕೈಯಲ್ಲಿ ಧರಿಸಿರುವ ವಾಚ್ (Roman Baagh watch) ಎಲ್ಲರ ಗಮನ ಸೆಳೆದಿದೆ. 1947ರ ಒಂದು ರೂಪಾಯಿ ನಾಣ್ಯದ ಡಯಲ್ ಹೊಂದಿರುವ 60,000 ರೂ. ಮೌಲ್ಯದ ರೋಮನ್ ಬಾಗ್ ಕೈಗಡಿಯಾರವನ್ನು ಪ್ರಧಾನಿ ಮೋದಿ (PM Modi Luxury Watch) ಧರಿಸಿದ್ದಾರೆ. ಇದರ ಇನ್ನೊಂದು ವಿಶೇಷತೆ ಎಂದರೆ ಇದು ಭಾರತದ ಪರಂಪರೆ ಮತ್ತು ಮೇಕ್ ಇನ್ ಇಂಡಿಯಾದ ಪ್ರತೀಕವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರೋಮನ್ ಬಾಗ್ ಕೈಗಡಿಯಾರವನ್ನು ಧರಿಸಿದ್ದು, ಇದರಲ್ಲಿ 1947ರ ಒಂದು ರೂಪಾಯಿ ನಾಣ್ಯದ ಡಯಲ್ ಮಧ್ಯೆ ನಡೆಯುವ ಹುಲಿಯ ಚಿಹ್ನೆಯನ್ನು ಒಳಗೊಂಡಿದೆ.
ಇದನ್ನೂ ಓದಿ: Bengaluru–Tumakuru Metro: ತುಮಕೂರಿಗೆ ಮೆಟ್ರೋ ವಿಸ್ತರಣೆಯಿಂದ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಆಗಲಿದೆ: ಸಚಿವ ಪರಮೇಶ್ವರ್
43 ಎಂಎಂ ಸ್ಟೇನ್‌ಲೆಸ್ ಸ್ಟೀಲ್ ಕೈಗಡಿಯಾರ ಇದಾಗಿದ್ದು, ಇದು ಜಪಾನಿನ ಮಿಯೋಟಾ ಚಳುವಳಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಭಾರತದ ಪರಂಪರೆ, ಕರಕುಶಲತೆ ಮತ್ತು ಮೇಕ್ ಇನ್ ಇಂಡಿಯಾದ ಪ್ರತೀಕವಾಗಿರುವ ಈ ಕೈಗಡಿಯಾರದ ಬೆಲೆ ಬರೋಬ್ಬರಿ 55,000 ದಿಂದ 60,000 ರೂ. ಆಗಿದೆ. ಜೈಪುರ ವಾಚ್ ಕಂಪೆನಿ ತಯಾರಿಸಿರುವ ಈ ಕೈಗಡಿಯಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧರಿಸಿದ್ದರು.
ನಾಣ್ಯದ ಗುರುತನ್ನು ಒಳಗೊಂಡಿರುವ ಈ ವಾಚ್ ಸ್ವಾತಂತ್ರ್ಯ ಭಾರತದ ಹೆಜ್ಜೆಯ ಗುರುತಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಅವರು ಪ್ರೋತ್ಸಾಹಿಸುವ ಮೇಕ್ ಇನ್ ಇಂಡಿಯಾ ದೃಷ್ಟಿಕೋನದ ಪ್ರತಿಧ್ವನಿಯಾಗಿದೆ.
ಈ ವಾಚ್ ಅನ್ನು 316ಎಲ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ರಚಿಸಲಾಗಿದೆ. ಇದು 43ಎಂಎಂ ಕೇಸ್ ದಪ್ಪವನ್ನು ಹೊಂದಿದೆ. ಜಪಾನೀಸ್ ಮಿಯೋಟಾದ ಸ್ವಯಂಚಾಲಿತ ಡಯಲ್ ಅನ್ನು ಹೊಂದಿದ್ದು ಉತ್ತಮ ಗುಣಮಟ್ಟದ ವಾಚ್ ಎಂದೇ ಹೆಸರುವಾಸಿಯಾಗಿದೆ. ಇದರಲ್ಲಿರುವ ಪಾರದರ್ಶಕ ಕೇಸ್ ಬ್ಯಾಕ್, ನೀಲಮಣಿ ಹರಳುಗಳು, ಸ್ಕ್ರಾಚ್ ಹಾಗೂ 5 ಎಟಿಎಂ ನೀರಿನ ಪ್ರತಿರೋಧವನ್ನು ಕೂಡ ಇದು ಹೊಂದಿದೆ.
ಇದರ ಬೆಲೆ ಸರಿಸುಮಾರು 55,000 ರೂ, ಬಬ್ಬ 60,000 ರೂ. ವರೆಗೆ ಇದೆ. ಇದರಲ್ಲಿರುವ ಸಾಂಸ್ಕೃತಿಕ, ಐಷಾರಾಮಿ, ಐತಿಹಾಸಿಕ ಅಂಶಗಳು ಗಡಿಯಾರ ಪ್ರಿಯರನ್ನು ಮೋಡಿ ಮಾಡುತ್ತದೆ.
ಇದನ್ನೂ ಓದಿ: Viral Video: ಫ್ಲೈ ಓವರ್‌ನಿಂದ ಹಾರಿದ ಕಾರು- ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ತಯಾರಾಗಿದ್ದು ಎಲ್ಲಿ?
ಜೈಪುರದ ಪ್ರಸಿದ್ಧ ವಾಚ್ ಕಂಪೆನಿಯನ್ನು ಗೌರವ್ ಮೆಹ್ತಾ ಸ್ಥಾಪಿಸಿದ್ದರು. ಈ ಕಂಪೆನಿಯು ವಿಶಿಷ್ಟ ಭಾರತೀಯ ಸ್ಮರಣಿಕೆಗಳು, ನಾಣ್ಯಗಳು, ಅಂಚೆಚೀಟಿಗಳು, ಸಾಂಪ್ರದಾಯಿಕ ಲಕ್ಷಣವಿರುವ ಐಷಾರಾಮಿ ಕೈಗಡಿಯಾರಗಳನ್ನು ತಯಾರಿಸುವಲ್ಲಿ ಪ್ರಸಿದ್ದಿ ಪಡೆದಿದೆ. ಇಲ್ಲಿ ತಯಾರಾದ ವಾಚ್ ಗಳು ಜಾಗತಿಕ ಮಟ್ಟದಲ್ಲೂ ಹೆಸರುವಾಸಿಯಾಗಿದೆ.