ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amitabh Bachchan: 90 ಕೋಟಿ ರೂ. ಸಾಲ... 55 ಕೇಸ್‌ಗಳು... ಅಮಿತಾಬ್‌ ಬಚ್ಚನ್‌ ಅಂದು ಎದುರಿಸಿದ ಸಂಕಷ್ಟ ಎಂತಹದ್ದು ಗೊತ್ತಾ?

Amitabh Bachchan financial crisis: ಎಲ್ಲಾ ನಟರಂತೆಯೇ ಬಡತನದಲ್ಲೇ ಬೆಳೆದು ಸಾಮಾನ್ಯ ನಟ ನಂತೆಯೇ ತಮ್ಮ ಸಿನಿ ಜೀವನ ಪಯಣ ಆರಂಭ ಮಾಡಿದ ಅಮಿತಾಭ್ ಇಂದು ಯಶಸ್ಸಿನ ನಟ ಎನಿಸಿಕೊಂಡಿದ್ದಾರೆ. ಆದರೆ ಇಷ್ಟೆಲ್ಲಾ ಹಿಟ್ ಸಿನಿಮಾ ನೀಡಿದ ಅಮಿತಾಬ್ ಕೂಡ ಆರ್ಥಿಕ ಸಂಕಷ್ಟವನ್ನು ಬಹಳಷ್ಟು ಎದುರಿಸಿದ್ದರು ಎಂದು ಹಿರಿಯ ನಿರ್ದೇಶಕ ಟಿನ್ನು ಆನಂದ್ ಅವರು ಬಹಿರಂಗ ಪಡಿಸಿದ್ದಾರೆ.

ಅಮಿತಾಬ್ ಆರ್ಥಿಕ ಸಂಕಷ್ಟ ಎದುರಿಸಿದ ಬಗ್ಗೆ ಖ್ಯಾತ ನಿರ್ದೇಶಕ ಹೇಳಿದ್ದೇನು?

Amitabh Bachchan -

Profile Pushpa Kumari Sep 21, 2025 4:41 PM

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟರಲ್ಲಿ ನಟ ಅಮಿತಾಬ್ ಬಚ್ಷನ್ (Amitabh Bachchan) ಕೂಡ ಒಬ್ಬರು.‌ 'ಶೋಲೆ', 'ಪಿಕು' 'ಜಂಜೀರ್' ನಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಅಮಿ ತಾಬ್ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಎಲ್ಲ ನಟರಂತೆಯೇ ಬಡತನದಲ್ಲೇ ಬೆಳೆದು ಸಾಮಾನ್ಯ ನಟನಂತೆಯೇ ತಮ್ಮ ಸಿನಿ ಜೀವನ ಪಯಣ ಆರಂಭ ಮಾಡಿದ ಅಮಿತಾಭ್ ಇಂದು ಯಶಸ್ಸಿನ ನಟ ಎನಿಸಿಕೊಂಡಿದ್ದಾರೆ. ಆದರೆ ಇಷ್ಟೆಲ್ಲಾ ಹಿಟ್ ಸಿನಿಮಾ ನೀಡಿದ ಅಮಿತಾಬ್ ಕೂಡ ಆರ್ಥಿಕ ಸಂಕ ಷ್ಟವನ್ನು ಬಹಳಷ್ಟು ಎದುರಿಸಿದ್ದರು ಎಂದು ಹಿರಿಯ ನಿರ್ದೇಶಕ ಟಿನ್ನು ಆನಂದ್ (Tinnu Anand) ಅವರು ಬಹಿರಂಗ ಪಡಿಸಿದ್ದಾರೆ.

'ಸಾಥ್ ಹಿಂದುಸ್ತಾನಿ' ಎನ್ನುವ ಚಿತ್ರದಲ್ಲಿ ಅಮಿತಾಬ್ ಮೊದಲ ಬಾರಿಗೆ ತೆರೆಹಂಚಿಕೊಂಡಿದ್ದರು.‌ 1969 ರಲ್ಲಿ ಬಿಡುಗಡೆ ಆದ ಈ ಚಿತ್ರದಲ್ಲಿ ಮೊದಲ ಬಾರಿಗೆ ಬಚ್ಚನ್ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿ ಕೊಂಡಿದ್ದರು. ಏಳು ಮಂದಿ ನಾಯಕರು ಈ ಚಿತ್ರದಲ್ಲಿ ನಟಿಸಿದ್ದು ಅದರಲ್ಲಿ ಅಮಿತಾಬ್ ಬಚ್ಚನ್ ಕೂಡ ಒಬ್ಬರಾಗಿದ್ದರು. ಮೊದಲ ಚಿತ್ರದಲ್ಲಿಯೇ 'ಅತ್ಯುತ್ತಮ ಹೊಸ ನಟ ರಾಷ್ಟ್ರೀಯ ಪ್ರಶಸ್ತಿ' ಯನ್ನು ಬಚ್ಚನ್ ಗಳಿಸಿದ್ದರು. ಆದರೆ 1990ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭ ಮಾಡಿದ್ದರು. ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ABCL) ಎನ್ನುವ ನಿರ್ಮಾಣ ಸಂಸ್ಥೆ ಆರಂಭ ಮಾಡಿದ್ದು ಈ ಸಂಸ್ಥೆ ಆರ್ಥಿಕ ‌ನಷ್ಟ ಉಂಟಾಗಿ ಅಮಿತಾಬ್ ಅನುಭವಿಸಿದ ಸಂಕಷ್ಟಗಳ ಬಗ್ಗೆ ಹಿರಿಯ ನಿರ್ದೇಶಕ ಟಿನ್ನು ಆನಂದ್ ಅವರು ಮಾತನಾಡಿದ್ದಾರೆ. ಅದೇ ರೀತಿ 1998ರ 'ಮೇಜರ್ ಸಾಬ್' ಚಿತ್ರದ ನಿರ್ದೇಶಕರಾದ ಆನಂದ್, ಆ ಕಷ್ಟದ ದಿನಗಳ ಕಹಿ ಅನುಭವಗಳನ್ನು ಸಂದರ್ಶನ ವೊಂದರಲ್ಲಿ ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಬಹು ದೊಡ್ಡ ಕನಸು ಇಟ್ಟುಕೊಂಡು ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಆರಂಭ ಮಾಡಿದ್ದರು. ಆದರೆ ಈ ಸಂಸ್ಥೆಯು ಹಣಕಾಸಿನ ನಿರ್ವಹಣೆಯ ವೈಫ ಲ್ಯದಿಂದಾಗಿ ನಷ್ಟ ಉಂಟಾಗಿತ್ತು.‌ ಇದರಿಂದ ಅಮಿತಾಬ್ ಬಚ್ಚನ್ ವೈಯಕ್ತಿಕವಾಗಿ ಸುಮಾರು 90 ಕೋಟಿಗಳಷ್ಟು ಹಣದ ಸಾಲವನ್ನು ತೀರಿಸಬೇಕಿತ್ತು. ಇಷ್ಟೇ ಅಲ್ಲದೆ ಆ ಸಮಯದಲ್ಲಿ ಅವರ ವಿರುದ್ಧ 55ಕ್ಕೂ ಹೆಚ್ಚು ಕಾನೂನು ಪ್ರಕರಣಗಳು ದಾಖಲಾಗಿದ್ದವು. ಸಾಲ ನೀಡಿದವರು ಪ್ರತಿದಿನ ಮನೆ ಬಾಗಿಲಿಗೆ ಬಂದು ಹಣಕ್ಕಾಗಿ ಒತ್ತಾಯಿಸಿ ಸರಿಯಾಗಿ ಬೈಯುತ್ತಿದ್ದರು. ಇದು ಅವರಿಗೆ ತೀವ್ರ ಮಾನಸಿಕ ಹಿಂಸೆ ಮತ್ತು ಅವಮಾನ ಕೂಡ ಉಂಟು ಮಾಡಿತ್ತು ಎಂದು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ:Idli Kadai Dhanush Movie: ಧನುಷ್ ನಟನೆಯ ಇಡ್ಲಿ ಕಡೈ ಸಿನಿಮಾಗೆ ಶುಭ ಕೋರಿದ ನಟ ರಿಷಭ್ ಶೆಟ್ಟಿ!

ಅಮಿತಾಬ್ ಬಚ್ಚನ್ ಅವರ ಆರ್ಥಿಕ ಸಮಸ್ಯೆಗಳು 'ಮೇಜರ್ ಸಾಬ್' ಚಿತ್ರದ ಮೇಲೆ ಕೂಡ ಬಹಳಷ್ಟು ಪರಿಣಾಮ ಬಿದ್ದಿತ್ತು. "ನಾನು ಆ ಚಿತ್ರವನ್ನು ಅಮಿತಾಬ್ ಬಚ್ಚನ್ ಅವರಿಗಾಗಿಯೇ ನಿರ್ದೇಶನ ಮಾಡಿದ್ದೆ.. ಆದರೆ ನಿರ್ಮಾಪಕರ ಬಳಿ ಹಣವಿಲ್ಲದೆ, ಚಿತ್ರದ ಸಿಬ್ಬಂದಿಗಳಿಗೆ ಸರಿಯಾಗಿ ದುಡಿದ ಸಂಬಳ ನೀಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಪ್ರತಿದಿನವೂ ಮುಷ್ಕರ ನಡೆ‌ಯುತ್ತಿದ್ದವು" ಎಂದು ಆನಂದ್ ನೆನಪಿಸಿಕೊಂಡಿದ್ದಾರೆ. ಈ ಪರಿಸ್ಥಿತಿ ಎಷ್ಟು ನೋವು ತಂದಿತ್ತು ಎಂದರೆ 'ಮೇಜರ್ ಸಾಬ್' ನಂತರ ಮತ್ತೆ ನಿರ್ದೇಶನ ಮಾಡುವುದಿಲ್ಲ ಎಂದು ನಿರ್ಧರಿಸಿದೆ" ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಕಷ್ಟಗಳ ನಡುವೆಯೂ, ಅಮಿತಾಬ್ ಬಚ್ಚನ್ ಖ್ಯಾತ ನಟ ಎನಿಸಿಕೊಂಡಿದ್ದು ಅವರು ತಮ್ಮ ವೃತ್ತಿಜೀವನವನ್ನು ಮತ್ತೆ ಪುನ ರಾರಂಭಿಸಿದರು. ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಮತ್ತೆ ಜನರ ಹೃದಯ ಗೆದ್ದರು. ಇದು ಅವರನ್ನು ಆರ್ಥಿಕ ಸಂಕಷ್ಟಗಳಿಂದ ಹೊರಗೆ ಬರಲು ಸಹಾಯ ಮಾಡಿತು. ಇಂದು ಅವರು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ.