ದಿಢೀರ್ ಅಂತ ಮುಕ್ತಾಯಗೊಂಡ 'ಯಜಮಾನ' ಧಾರಾವಾಹಿ; ʻಝಾನ್ಸಿʼ ಪಾತ್ರಧಾರಿ ಮಧುಶ್ರೀ ಭೈರಪ್ಪ ಬೇಸರಕ್ಕೆ ಕಾರಣವೇನು?
Yajamana Kannada Serial: ಯಜಮಾನ ಧಾರಾವಾಹಿ ದಿಢೀರನೆ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ನಿರ್ಧಾರದಿಂದ ವೀಕ್ಷಕರು ಮಾತ್ರವಲ್ಲದೆ ಸೀರಿಯಲ್ ತಂಡ ಕೂಡ ಬೇಸರಗೊಂಡಿದೆ. ಧಾರಾವಾಹಿಯಲ್ಲಿ 'ಝಾನ್ಸಿ' ಪಾತ್ರದ ಮೂಲಕ ಮನೆಮಾತಾಗಿದ್ದ ಮಧುಶ್ರೀ ಭೈರಪ್ಪ ಅವರು ವಿಶ್ವವಾಣಿ ಟಿವಿ ಜೊತೆ ಧಾರಾವಾಹಿ ನಿಂತಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
-
ಕಲರ್ಸ್ ಕನ್ನಡ ವಾಹಿನಿಯಲ್ಲಿ ಫೇಮಸ್ ಆಗಿದ್ದ ಯಜಮಾನ ಧಾರಾವಾಹಿ ದಿಢೀರ್ ಅಂತ ಸ್ಟಾಪ್ ಆಗಿದೆ. 300ಕ್ಕೂ ಅಧಿಕ ಸಂಚಿಕೆಗಳ ಪ್ರಸಾರವಾಗಿದ್ದ ಈ ಸೀರಿಯಲ್‌ಗೆ ದೊಡ್ಡ ವೀಕ್ಷಕ ವರ್ಗವೇ ಇತ್ತು. ಆದರೆ ಇದೀಗ ಧಾರಾವಾಹಿ ನಿಂತಿರುವುದು ವೀಕ್ಷಕರಿಗೆ ಅಚ್ಚರಿ ನೀಡಿದೆ. ಜೊತೆಗೆ ಯಜಮಾನ ಧಾರಾವಾಹಿಯಲ್ಲಿ ಝಾನ್ಸಿ ಪಾತ್ರ ಮಾಡುತ್ತಿದ್ದ ನಟಿ ಮಧುಶ್ರೀ ಭೈರಪ್ಪ ಕೂಡ ಈ ಬಗ್ಗೆ ಅಚ್ಚರಿ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಧಾರಾವಾಹಿ ನಿಂತಿದ್ದೇಕೆ?
ವಿಶ್ವವಾಣಿ ಟಿವಿ ಜೊತೆಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರುವ ಮಧುಶ್ರೀ ಭೈರಪ್ಪ ಅವರು ಯಜಮಾನ ಸೀರಿಯಲ್ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಧಾರಾವಾಹಿ ನಿಂತಿದ್ದಕ್ಕೆ ನನಗೆ ತುಂಬಾ ಬೇಜಾರಾಗಿದೆ. ನನ್ನ ಮೊದಲ ಧಾರಾವಾಹಿಯಲ್ಲೇ ನನಗೆ ದಿ ಬೆಸ್ಟ್ ಎನ್ನುವಂತಹ ಪಾತ್ರ ಸಿಕ್ಕಿತ್ತು. ಝಾನ್ಸಿ ಪಾತ್ರ ತುಂಬಾ ಇಷ್ಟವಾಗಿತ್ತು. ಮುಂದೆ ನಾನು ಬೇರೆ ಯಾವ ಪಾತ್ರ ಮಾಡಿದರೂ, ಇಷ್ಟೊಂದು ಖುಷಿ ಸಿಗುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಸೀರಿಯಲ್ ಮುಗಿಯುತ್ತೆ ಎಂಬುದಕ್ಕಿಂತ ಝಾನ್ಸಿ ಪಾತ್ರ ಎಂಡ್ ಆಗುತ್ತಿದೆ ಎಂಬ ಬೇಜಾರು ನನಗೆ ಜಾಸ್ತಿ ಇದೆ" ಎಂದು ಹೇಳಿಕೊಂಡಿದ್ದಾರೆ.
'ಯಜಮಾನ' ಧಾರಾವಾಹಿಗೆ ಎಂಟ್ರಿ ಕೊಟ್ಟ ನಟಿ ಯಮುನಾ ಶ್ರೀನಿಧಿ; ಯಾವ ಪಾತ್ರ ಮಾಡ್ತಿದ್ದಾರೆ ಗೊತ್ತಾ?
ಯಜಮಾನ ಮುಗಿದಿದ್ದಕ್ಕೆ ವೀಕ್ಷಕರಿಗೆ ಬೇಸರವಾಗಿದೆ
"ಸಾಮಾನ್ಯವಾಗಿ ಒಂದು ಧಾರಾವಾಹಿ ಮುಗಿದರೆ, ಅಂತೂ ಇದು ಮುಗಿತಪ್ಪ ಎಂದು ಹೇಳುವವರೇ ಜಾಸ್ತಿ. ಆದರೆ ನಮ್ಮ ಸೀರಿಯಲ್ ಮುಗಿಯಿತು ಎಂದು ವೀಕ್ಷಕರೇ ಬೇಜಾರಾಗಿದ್ದಾರೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ, ನಾನು ಕೂಡ ನಿರೀಕ್ಷೆ ಮಾಡಿರಲಿಲ್ಲ. ಯಾಕೆ ಈ ಧಾರಾವಾಹಿಯನ್ನು ನಿಲ್ಲಿಸಲಾಯಿತು ಎಂದು ನಮಗಿನ್ನೂ ಸರಿಯಾದ ಕಾರಣ ಗೊತ್ತಾಗಿಲ್ಲ. ನನ್ನ ಪಾತ್ರ ಚೆನ್ನಾಗಿ ಬರಬೇಕು, ನಾನು ಚೆನ್ನಾಗಿ ಕಾಣಬೇಕು ಅಂತ ಪ್ರತಿದಿನ ಕೂಡ ಶ್ರಮ ಹಾಕಿದ್ದೀನಿ. ನನ್ನ ಕೆಲಸಕ್ಕೆ ಕೊಡಬೇಕಾದ ನ್ಯಾಯವನ್ನು ಒದಗಿಸಿದ್ದೇನೆ. ನನ್ನ ಪಾತ್ರಕ್ಕಾಗಿ ನಾನು ಯಾರ ಮೇಲೆಯೂ ಡಿಪೆಂಡ್ ಆಗಿರಲಿಲ್ಲ" ಎಂಬುದು ಮಧುಶ್ರೀ ಅಭಿಪ್ರಾಯ.
Ramachari- Yajamana serial: ಯಜಮಾನ -ರಾಮಾಚಾರಿ ಸೀರಿಯಲ್ ಮಹಾಸಂಗಮದಲ್ಲಿ ಬಿಗ್ ಟ್ವಿಸ್ಟ್!
ಮಧುಶ್ರೀಗೆ ದುಬಾರಿ ಸಂಭಾವನೇ ಸಿಗುತ್ತಿತ್ತಾ?
"ನಾನು ದುಬಾರಿ ಸಂಭಾವನೆಯನ್ನು ಪಡೆದಿಲ್ಲ. ನನ್ನ ಕೆಲಸಕ್ಕೆ ನಾನು 200% ಶ್ರಮ ಹಾಕಿದ್ದೇನೆ. ಬೇರೆ ನಟಿಯರಿಗೆಲ್ಲಾ ಖರ್ಚು ಇರೋದಿಲ್ಲ ಅಂತ ನಾನು ಹೇಳೋದಿಲ್ಲ. ಎಲ್ಲಾ ಕಲಾವಿದರಿಗೂ ಖರ್ಚು ಇರುತ್ತದೆ. ನಾನು ನನ್ನ ಪಾತ್ರಕ್ಕಾಗಿ ತುಂಬಾ ಡೆಡಿಕೇಟೆಡ್ ಆಗಿದ್ದೆ. ಶುರುವಿನಲ್ಲೇ ಕ್ಯಾರೆಕ್ಟರ್‌ಗಾಗಿ ನಾನು 4 ಲಕ್ಷ ರೂ. ಖರ್ಚು ಮಾಡಿದ್ದೇನೆ" ಎಂದು ಮಧುಶ್ರೀ ಭೈರಪ್ಪ ಹೇಳಿದ್ದಾರೆ.
ಮಧುಶ್ರೀ ಭೈರಪ್ಪ ಅವರ ಸಂದರ್ಶನ
"ಈಗ ನನಗೇ ಯಾರಾದರೂ ಸಮಾಧಾನ ಮಾಡೋರು ಬೇಕಾಗಿದ್ದಾರೆ. ನಿಜಕ್ಕೂ ನಾನಿನ್ನೂ ಶಾಕ್‌ನಲ್ಲೇ ಇದ್ದೇನೆ. ನಮ್ಮ ಧಾರಾವಾಹಿ ಮುಗಿಯುತ್ತದೆ ಎಂದು ಈಚೆಗೆ ವದಂತಿಗಳು ಕೇಳಿಬಂದಿದ್ದವು. ಬಿಗ್ ಬಾಸ್ ಟೈಮ್‌ನಲ್ಲೇ ನಮ್ಮ ಸೀರಿಯಲ್ ಮುಗಿಯುತ್ತೆ ಅಂತಿದ್ರು. ಕಲರ್ಸ್ ಕನ್ನಡದಲ್ಲಿ ಪ್ರತಿ ವರ್ಷ 3-4 ಸೀರಿಯಲ್ ಮುಕ್ತಾಯ ಆಗುತ್ತಳೇ ಇರುತ್ತದೆ. ಸಾಮಾನ್ಯವಾಗಿ ಒಂದು ಧಾರಾವಾಹಿ ಮುಗಿಯಬೇಕಾದರೆ, ಮೂರು ತಿಂಗಳ ಮೊದಲೇ ಆ ತಂಡಕ್ಕೆ ಮಾಹಿತಿ ನೀಡುತ್ತಾರಂತೆ. ಆದರೆ, ನಮಗೆ ಮಾಹಿತಿ ನೀಡಿರಲಿಲ್ಲ, ಧಾರಾವಾಹಿ ಮುಗಿಯೋಕೆ ಇನ್ನೆರಡು ದಿನಗಳು ಇರುವಾಗಷ್ಟೇ ನಮಗೆ ಇದು ಮುಕ್ತಾಯ ಆಗುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು" ಎಂದು ಮಧುಶ್ರೀ ಭೈರಪ್ಪ ಹೇಳಿದ್ದಾರೆ.