ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Movie: ಕಾಂತಾರ ಚಾಪ್ಟರ್ 1 ಶೂಟಿಂಗ್‌ ವೇಳೆ ಸರಣಿ ಅವಘಡ- ನಿರ್ಮಾಪಕ ಹೇಳಿದೇನು?

ರಿಷಭ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯಲ್ಲಿ ಕಾಂತಾರ ಚಾಪ್ಟರ್ 1 ಸಿದ್ಧವಾಗುತ್ತಿದೆ. ಚಿತ್ರೀಕರಣ ಮಾಡಲು ಬರೋಬ್ಬರಿ 2ವರ್ಷವನ್ನು ಚಿತ್ರತಂಡ ತೆಗೆದು ಕೊಂಡಿತ್ತು. ಈ ಮಧ್ಯೆ ಚಿತ್ರತಂಡದಲ್ಲಿ ಅನೇಕ ಅವಘಡ, ಆಘಾತಕಾರಿ ಸನ್ನಿವೇಶ , ಸಾವು ನೋವು ಕೂಡ ಉಂಟಾಗಿದ್ದು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು.ಈ ಮೂಲಕ ಕಾಂತಾರ ಸೆಟ್ ಗೆ ಏನೊ ಶಾಪವಿದೆ ಎಂಬ ವದಂತಿಗಳು ಕೂಡ ಸೋಶಿ ಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕಾಂತಾರ ಸಿನಿಮಾ ನಿರ್ಮಾಪಕ ಚಲುವೇಗೌಡ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಕಾಂತಾರ ಶೂಟಿಂಗ್‌ ವೇಳೆ ಸರಣಿ ಅವಘಡ-ನಿರ್ಮಾಪಕ ಹೇಳಿದೇನು?

Profile Pushpa Kumari Aug 12, 2025 3:34 PM

ನವದೆಹಲಿ: ರಿಷಭ್ ಶೆಟ್ಟಿ, ಸಪ್ತಮಿ ಗೌಡ ಅಭಿನಯದ ಕಾಂತಾರ (Kantara Chapter 1) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸಕ್ಸಸ್ ನೀಡಿ, 400 ಕೋಟಿಗೂ ಅಧಿಕ ಮೊತ್ತ ಗಳಿಕೆ ಮಾಡಿತ್ತು. ಈ ಮೂಲಕ ಕಾಂತಾರ ಮುಂದಿನ ಭಾಗ ತೆರೆ ಕಾಣಬೇಕು ಎಂಬ ಬೇಡಿಕೆಯನ್ನು ಕೂಡ ಅಭಿಮಾನಿಗಳು ಇಟ್ಟಿದ್ದರು. ಅಂತೆಯೇ ರಿಷಭ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯಲ್ಲಿ ಕಾಂತಾರ ಚಾಪ್ಟರ್ 1 ಸಿದ್ಧವಾಗುತ್ತಿದೆ. ಚಿತ್ರೀಕರಣ ಮಾಡಲು ಬರೋಬ್ಬರಿ 2ವರ್ಷವನ್ನು ಚಿತ್ರತಂಡ ತೆಗೆದುಕೊಂಡಿತ್ತು. ಈ ಮಧ್ಯೆ ಚಿತ್ರತಂಡದಲ್ಲಿ ಅನೇಕ ಅವಘಡ, ಆಘಾತಕಾರಿ ಸನ್ನಿವೇಶ, ಸಾವು ನೋವು ಕೂಡ ಉಂಟಾಗಿದ್ದು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು.ಈ ಮೂಲಕ ಕಾಂತಾರ ಸೆಟ್‌ಗೆ ಏನೋ ಶಾಪವಿದೆ ಎಂಬ ವದಂತಿಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಕಾಂತಾರ ಸಿನಿಮಾ ನಿರ್ಮಾಪಕ ಚಲುವೇಗೌಡ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಮೂಲಕ ಕಾಂತಾರ ಚಾಪ್ಟರ್ 1 ಕುರಿತಾದ ಅನೇಕ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಕಾಂತಾರ ಸೆಟ್ ನಲ್ಲಿ ನಡೆದ ಅವಘಡದ ಬಗ್ಗೆ ನಿರ್ಮಾಪಕ ಚಲುವೇ ಗೌಡ ಅವರು ಮಾತನಾಡಿ, ಅನೇಕ ಘಟನೆ ಸೆಟ್‌ನಲ್ಲಿ ನಡೆದರೂ ಅದಕ್ಕೆ ಯಾವುದೇ ಭೂತ ಪ್ರೇತ ಕಾರಣವಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಸಿನಿಮಾ ತುಂಬಾ ದೊಡ್ಡ ದಾಗಿದ್ದರಿಂದ ಸಾಕಷ್ಟು ಟೆಕ್ನಿ ಕಲ್ ಟೀಂ ವರ್ಕ್ ಬೇಕಿತ್ತು. ಕೆಲವರಿಗೆ ಆರೋಗ್ಯ ಸಮಸ್ಯೆ ಇತ್ತು ಇನ್ನು ಕೆಲವರು ಮುಂಜಾಗ್ರತಾ ಕ್ರಮ ವಹಿಸದಿರುವುದು ಅವಘಡಕ್ಕೆ ಕಾರಣವಾಗಿದೆ. ಸೆಟ್‌ನಲ್ಲಿ ನಡೆದ ಬೆಂಕಿಯ ಘಟನೆಯನ್ನು ಹೊರತುಪಡಿಸಿ, ಉಳಿದೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿಲ್ಲ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.



ಬಳಿಕ ಮಾತನಾಡಿದ್ದ ಅವರು, ಈ ಯೋಜನೆಯನ್ನು ಪ್ರಾರಂಭಿಸುವ ಮೊದಲು ನಮ್ಮ ತಂಡವು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಕೂಡ ಪಡೆದಿದೆ. ನಮಗೆಲ್ಲ ದೇವರ ಬಗ್ಗೆ ಭಯ ಭಕ್ತಿ ಎಲ್ಲವೂ ಇರುವ ಕಾರಣ ಪ್ರತಿದಿನ ನಾವು ಪೂಜೆ ಮಾಡುತ್ತೇವೆ ಏನೆ ಕೆಲಸ ಮಾಡುವ ಮೊದಲು ದೇವರ ಆಶೀರ್ವಾದವನ್ನು ಪಡೆಯುತ್ತೇವೆ.‌ ಕಾಂತಾರ ಚಾಪ್ಟರ್ 1 ಗೂ ಮೊದಲೇ ನಾವು ಪಂಜುರ್ಲಿ ದೈವಸ್ಥಾನಕ್ಕೆ ತೆರಳಿ ಅನುಮತಿ ಪಡೆದಿದ್ದೇವೆ. ಈ ಮೂಲಕ ನೀವು ಇದನ್ನು ಮಾಡಿ; ಕೆಲವು ಅಡೆತಡೆಗಳು ಇರುತ್ತವೆ, ಆದರೆ ಅಂತಿಮವಾಗಿ ಅದು ಯಶಸ್ವಿಯಾಗುತ್ತದೆ ಎಂದು ದೈವವೇ ಅಭಯವನ್ನು ಕೂಡ ನೀಡಿದೆ ಎಂದು ಅವರು ಹೇಳಿದ್ದಾರೆ.

ಚಿತ್ರದ ಬಹುಪಾಲು ಭಾಗವನ್ನು ಕರಾವಳಿ ಕರ್ನಾಟಕದ ಕಾಡುಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ 80% ಭಾಗವನ್ನುಇದೇ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲವೂ ನಗರಗಳಿಂದ ದೂರವಿದ್ದ ಕಾರಣ ಚಿತ್ರೀಕರಣ ತುಂಬಾ ಕಷ್ಟಕರವಾಗಿತ್ತು. ಇಲ್ಲಿನ ಅನಿರೀಕ್ಷಿತ ಹವಾಮಾನದಿಂದ ನಾವು ಸಮಯ ವ್ಯರ್ಥ ಮಾಡಲಿಲ್ಲ. ಆ ಮಳೆಯಲ್ಲಿ ಕೂಡ ಕೆಲವು ಆಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇವೆ ಎಂದು ನಿರ್ಮಾಪಕ ಚಲುವೇ ಗೌಡ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Coolie Movie: ರಜನಿಕಾಂತ್‌ ಅಭಿನಯದ ʼಕೂಲಿʼ ಚಿತ್ರ ನೋಡಲು ಸುಳ್ಳು ಸಿಕ್‌ ಲೀವ್‌ ಹಾಕಬೇಕಿಲ್ಲ; ಕಂಪೆನಿಯೇ ರಜೆ ಜತೆ ಟಿಕೆಟ್ ಕೂಡ ನೀಡುತ್ತಿದೆ!

ಸರಣಿ ಅಪಘಾತ

ಕಾಂತಾರ ಚಾಪ್ಟರ್ 1 ಘೋಷಣೆಯಾದ ನಂತರ ನವೆಂಬರ್ 2024 ರಲ್ಲಿ ಕೊಲ್ಲೂರು ಬಳಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಯಿತು, ಆದರೆ ಯಾವುದೇ ಗಾಯಗಳು ಆಗಲಿಲ್ಲ. ಜನವರಿ 2025 ರಲ್ಲಿ ದೊಡ್ಡ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸುವಾಗ ಬೆಂಕಿ ಕಾಣಿಸಿಕೊಂಡಿತು; ಇಲ್ಲಿಯೂ ಗಂಭೀರ ಗಾಯಗಳು ಸಂಭವಿಸಿಲ್ಲ.ಏಪ್ರಿಲ್ 2025 ರಲ್ಲಿ ಚಿತ್ರೀಕರಣ ಇಲ್ಲದಿದ್ದರು ಸಿಬ್ಬಂದಿಯೊಬ್ಬರು ಮುಳುಗಿ ಸಾವನ್ನಪ್ಪಿದರು.

2025ರ ಜೂನ್‌ನಲ್ಲಿ, ಚಿತ್ರೀಕರಣದ ಸಮಯದಲ್ಲಿ ರಿಷಬ್ ಶೆಟ್ಟಿ ಮತ್ತು ಇತರ ಪಾತ್ರವರ್ಗದ ಸದಸ್ಯರು ಇದ್ದ ದೋಣಿ ಮಗುಚಿ ಬಿದ್ದು ಕ್ಯಾಮೆರಾಗಳು ಸೇರಿದಂತೆ ಇತರ ಚಿತ್ರೀಕರಣದ ಉಪ ಕರಣಗಳು ನೀರಿನಲ್ಲಿ ಮುಳುಗಿಹೋಗಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೀಗೆಲ್ಲ ಇದ್ದರೂ ಕಾಂತಾರ ಚಾಪ್ಟರ್ 1 ಚಿತ್ರೀಕರಣ ಜುಲೈ 2025 ರಲ್ಲಿ ಮುಕ್ತಾಯಗೊಂಡಿದೆ. ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಜಯರಾಮ್, ರಾಕೇಶ್ ಪೂಜಾರಿ ಮತ್ತು ರುಕ್ಮಿಣಿ ವಸಂತ್ ಕೂಡ ಇದೇ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 2 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದ್ದು ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.